ಬೆಂಗಳೂರು: ಮೈಕ್ರೋಸಾಫ್ಟ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಆಘಾತವೊಂದನ್ನು ನೀಡಿದ್ದು, ತನ್ನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ, ಅಮೆರಿಕ, ಬ್ರಿಟನ್ ಮತ್ತು ಕೆನಡಾದಲ್ಲಿ ಸುಮಾರು 60.000 ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿರ್ಗಮನ ಯೋಜನೆಯನ್ನು ಪ್ರಕಟಿಸಿದೆ.
ಕೃತಕ ಬುದ್ಧಿಮತ್ತೆ ಮೇಲೆ ಮೈಕ್ರೋಸಾಫ್ಟ್ ಬಿಲಿಯನ್ ಡಾಲರ್ ಗಳಷ್ಟು ಬೃಹತ್ ಪ್ರಮಾಣದ ಹೂಡಿಕೆಯನ್ನು ಮಾಡುತ್ತಿದ್ದು, ವೆಚ್ಚ ನಿರ್ವಹಣೆ ಮತ್ತು ಉದ್ಯೋಗಿಗಳನ್ನು ಮರುಹಂಚಿಕೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾದ ಆಮಿ ಕೋಲ್ಮನ್ ಅವರು ಈಮೇಲ್ ಮೂಲಕ ತಿಳಿಸಿದ್ದಾರೆ.
ಕಂಪನಿಯಿಂದ ಹೊರಬರಲು ತೀರ್ಮಾನಿಸುವ ಉದ್ಯೋಗಿಗಳಿಗೆ ಭವಿಷ್ಯದಲ್ಲಿ ಸಮಸ್ಯೆ ಎದುರಾಗದಿರಲೆಂದು ಆರ್ಥಿಕ ನೆರವು ಹಾಗೂ ವೃತ್ತಿಜೀವನದ ಮುಂದಿನ ಹಂತಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಮಾರ್ಗದರ್ಶನವನ್ನು ನೀಡಲಾಗುವುದು ಎನ್ನುವ ಭರವಸೆಯನ್ನು ನೀಡಿದ್ದಾರೆ.
ಮಾಹಿತಿಯ ಪ್ರಕಾರ ಭಾರತದಲ್ಲಿ ಮೈಕ್ರೋಸಾಫ್ಟ್ ಸುಮಾರು 23.000 ಉದ್ಯೋಗಿಗಳನ್ನು ಹೊಂದಿದ್ದು, ಅದರಲ್ಲಿ ಅನರ್ಹರು ಎಷ್ಟು ಜನರಿದ್ದಾರೆ ಎನ್ನುವ ಕುರಿತು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಜೊತೆಗೆ ಜಾಗತಿಕವಾಗಿ ಸುಮಾರು 60.000 ಜನ ಉದ್ಯೋಗಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ತಿಳಿಸಲಾಗಿದೆ. ಭಾರತದಲ್ಲಿನ ಅರ್ಹ ಉದ್ಯೋಗಿಗಳು ಸ್ವಯಂಪ್ರೇರಿತರಾಗಿ ಉದ್ಯೋಗದಿಂದ ನಿರ್ಗಮಿಸುವ ಪ್ರಸ್ತಾಪವನ್ನು ಒಪ್ಪಿಕೊಳ್ಳಬೇಕೇ ಅಥವಾ ಇಲ್ಲವೇ ಎನ್ನುವುದರ ಕುರಿತು ಎಚ್ಚರಿಸಲು ಡಿಸೆಂಬರ್ 1ರ ಮಂಗಳವಾರದವರೆಗೆ ಕಾಲಾವಕಾಶವನ್ನು ನೀಡಲಾಗಿದೆ.







