ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆ ಕೊರತೆ ಎದುರಾಗಿದ್ದು ಭರದ ಛಾಯೆ ಆವರಿಸಿದೆ. ಮಳೆಗಾಲದಲ್ಲೇ ಎದುರಾದ ಬಿಸಿಲ ಬೇಗೆ ಕಾರಣ ಮಳೆ ಕೊರತೆಯಿಂದ ನೀರು ಮೂಲ ಸಂಪೂರ್ಣ ಇಳಿಮುಖವಾಗಿದೆ.
ರೈತರಿಗೆ ಮಳೆ ಇಲ್ಲದೆ ಸಾಕಷ್ಟು ಸಂಕಷ್ಟ ಎದುರಾಗಿದ್ದು ಜೀವನ ಅಯೋಮಯವಾಗಿದೆ.
ಮಳೆಗಾಲದಲ್ಲಿ ಈಗ ಬೇಸಿಗೆಯ ಅನುಭವ. ಮಳೆಗಾಲ ಮುಗಿಯುವ ಮುನ್ನವೆ ಚಳಿಗಾಲ ಆರಂಭಕ್ಕೆ ಮೊದಲೇ ಬೇಸಿಗೆ ಎದುರಾಗಿದೆ. ಬರಗಾಲದಲ್ಲಿ ಕೆಂಡದಂತಹ ಬಿಸಿಲು ವಾತಾವರಣದ ಬಿಸಿ ಏರಿಸಿದೆ. ಸಾಮಾನ್ಯವಾಗಿ ಮಲೆನಾಡಿನಲ್ಲಿ ದೀಪಾವಳಿವರೆಗೆ ಜೋರು ಮಳೆ ಸುರಿಯುತ್ತದೆ. ದೀಪಾವಳಿ ಬಳಿಕ ಆರಂಭವಾಗುವ ಅಡಿಕೆ ಕೊಯ್ಲಿಗೂ ಅವಕಾಶ ನೀಡದೆ ಮಳೆ ಸುರಿದ ಉದಾಹರಣೆಗಳಿವೆ. ಹಳ್ಳ ಮತ್ತು ನದಿಗಳಲ್ಲಿ ಡಿಸೆಂಬರ್ ವರೆಗೆ ಅಧಿಕ ಹರಿವು ಇರುವುದರಿಂದ ನೀರಿನಮಟ್ಟ ಸ್ಥಿರವಾಗಿರುತ್ತದೆ. ಆದರೆ, ಈ ವರ್ಷ ಗಣೇಶ ಹಬ್ಬಕೂ ಮುನ್ನವೆ ಮಳೆ ಮಾಯವಾಗಿ ನೆಲ ಬಿರಿಯಲಾರಂಭಿಸಿದೆ. ಇನ್ನು ಕರಾವಳಿ, ಮಧ್ಯ ಕರ್ನಾಟಕದಲ್ಲೂ ಇದೆ ವಾತಾವರಣ ಇದೆ.
ರೈತರ ಬದುಕು ಬಿಸಿಲಲ್ಲಿ ಸುಟ್ಟು ಹೋಗುತ್ತಿದೆ…
ಮಳೆಯನ್ನೇ ನಂಬಿ ಭತ್ತ ನಾಟಿ ಮಾಡಿದವರ ಬದುಕು ಈಗ ಆತಂಕಕ್ಕೀಡಾಗಿದೆ. ಡಿಸೆಂಬರ್ನಲ್ಲಿ ಕಾಣುತ್ತಿದ್ದ ಪರಿಸ್ಥಿತಿ ಮೂರು ತಿಂಗಳು ಮೊದಲೇ ಸೆಪ್ಟೆಂಬರ್ ಮೊದಲ ವಾರವೇ ಕಾಣಿಸಿಕೊಂಡಿದೆ.
ಬೆಳೆ ಬೆಳೆದ ರೈತರು ಆಕಾಶದತ್ತ ನೋಡುವ ಪರಿಸ್ಥಿತಿ ಬಂದಿದೆ.
ಎಲ್ಲ ಬೆಳೆಗಳಿಗೂ ನೀರು ಬೇಕಾಗಿದೆ. ಇನ್ನೊಂದು ವಾರ ಮಳೆ ಬರದೆ ಹೋದಲ್ಲಿ ರೈತರು ಬೆಳೆಗಾಗಿ ಹಾಕಿದ ಶ್ರಮ, ಬಂಡವಾಳ ಎಲ್ಲವೂ ಕೂಡ ಸುಟ್ಟು ಹೋಗುತ್ತದೆ.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಶುರು: ವಿದ್ಯುತ್ ಕಟ್!
ರಾಜ್ಯದಲ್ಲಿ ಮಳೆ ಕೊರತೆ ನಡುವೆ ಇದೀಗ ವಿದ್ಯುತ್ ಲೋಡ್ ಶೆಡ್ಡಿಂಗ್ ಈಗ ತಲೆ ಬಿಸಿಗೆ ಕಾರಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆಯ ಕೊರತೆಯಿಂದಾಗಿ ರಾಜ್ಯಾದ್ಯಂತ ವಿದ್ಯುತ್ ಬಳಕೆ ಹೆಚ್ಚಾಗಿದ್ದು, ಈಗ ಸರ್ಕಾರ ಉಷ್ಣ ವಿದ್ಯುತ್ ಉತ್ಪಾದನೆ ಮೊರೆ ಹೋಗಿದೆ. ಸಮಸ್ಯೆ ಸರಿ ಹೋಗಲು 10 ರಿಂದ 15 ದಿನವಾಗಬಹುದು.ಹಾಗಾಗಿ ಬೆಳಗ್ಗೆ 10:00 AM to 4:00 PM ಸಮಯದಲ್ಲಿ 3 ಫೇಸ್ ವಿದ್ಯುತ್ ಪ್ರಸಾರ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದೆ.







