ಬೆಂಗಳೂರು: ಕಾಳು ಮೆಣಸಿನ ಆಗಮನವು ದೇಸೀಯ ಮಾರುಕಟ್ಟೆಯಲ್ಲಿ ಕಡಿಮೆಯಾಗಿದ್ದರೂ ಕೂಡ, ದೇಶದಲ್ಲಿ ಇದರ ಬೆಲೆ ಇತ್ತೀಚಿನ ದಿನಗಳಲ್ಲಿ ಇಳಿಮುಖವಾಗುತ್ತಿದೆ. ಕಡಿಮೆ ಪ್ರಮಾಣದಲ್ಲಿ ಕಾಳುಮೆಣಸು ಮಾರುಕಟ್ಟೆಗೆ ಬರುತ್ತಿದ್ದರೂ ಕೂಡ ದರದಲ್ಲಿ ಹೆಚ್ಚಳವಾಗದಿರುವುದು ಅಚ್ಚರಿಯನ್ನುಂಟು ಮಾಡಿದೆ.
ಮಾರುಕಟ್ಟೆಗೆ ಸರಕು ಕಡಿಮೆ ಪ್ರಮಾಣದಲ್ಲಿ ಲಭ್ಯವಿದ್ದಾಗ, ಅದರ ಬೆಲೆ ದುಪ್ಪಟ್ಟು ಏರಿಕೆಯಾಗುವುದು ಮಾರುಕಟ್ಟೆ ವಿಚಾರದಲ್ಲಿ ಸಹಜ ಸಂಗತಿ ಜೊತೆಗೆ ಹೊಸ ಬೆಳೆಯು ಮಾರುಕಟ್ಟೆಗೆ ಬರುವ ಸಮಯದಲ್ಲಿ ಪೂರೈಕೆ ಕಡಿಮೆಯಾಗಿದ್ದರೂ ಕೂಡ ವ್ಯಾಪಾರಿಗಳ ಬಳಿ ಈಗಾಗಲೇ ಇರುವ ದಾಸ್ತಾನು ಬೆಲೆಯ ಮೇಲೆ ತೀವ್ರ ರೀತಿಯ ಪರಿಣಾಮವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಆದರೆ ಕಾಳುಮೆಣಸಿನ ವಿಚಾರದಲ್ಲಿ ಅದು ಯಾವುದು ಸಾಧ್ಯವಾಗುವುದಿಲ್ಲ.
ಹಳೆಯ ದಾಸ್ತಾನು, ಆಮದು ಪರಿಸ್ಥಿತಿ, ದೇಸಿಯ ಬೇಡಿಕೆ ಮತ್ತು ರಫ್ತು ಬೇಡಿಕೆ ಕೂಡ ಬೆಲೆಯ ದಿಕ್ಕನ್ನು ನಿರ್ಧರಿಸುತ್ತದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ವರದಿಗಳಲ್ಲಿಯೂ ಕೂಡ ಕಾಳುಮೆಣಸಿನ ಪೂರೈಕೆ ಮತ್ತು ಬೇಡಿಕೆಯ ಸಮೀಕರಣವನ್ನು ಪ್ರಮುಖವಾಗಿ ಸೂಚಿಸಲಾಗುತ್ತಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಕಾಳುಮೆಣಸಿನ ಬೆಲೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ ಎನ್ನುವ ಮಾಹಿತಿ ಲಭಿಸಿದೆ.
ಕಳೆದ ವಾರ ಮಾರುಕಟ್ಟೆಯಲ್ಲಿ ದರ ಎಷ್ಟಿದೆ?
ಸೆಪ್ಟೆಂಬರ್ 24ರ ಎಪಿಎಂಸಿ ಮಾರುಕಟ್ಟೆಯ ಅನ್ವಯ ವಿವಿದೆಡೆ ವಿವಿಧ ಧಾರಣೆಗಳು ದಾಖಲಾಗಿವೆ. ಆದರೆ ಇವು ಮಾರುಕಟ್ಟೆವಾರು ಮಾದರಿ ಬೆಲೆಗಳು, ರೈತರಿಗೆ ಸಿಗುವ ಬೆಲೆಯ ಗುಣಮಟ್ಟ, ಗ್ರೇಡ್ ಮತ್ತು ವ್ಯಾಪಾರಿಯ ಖರೀದಿಯ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಿರುತ್ತದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 25ರಂದು ಕೇರಳದ ವರದಿಯ ಪ್ರಕಾರ ಎಪಿಎಂಸಿ ಮಾರುಕಟ್ಟೆಗಳಲ್ಲಿ ಕಾಳುಮೆಣಸಿನ ಸರಾಸರಿ ಬೆಲೆ 714 ಕೆಜಿ ಆಗಿತ್ತು. ಆದರೆ ಮಾರುಕಟ್ಟೆವಾರು ಬೆಲೆ 660 ರಿಂದ 850 ಕೆಜಿಗೆ ವ್ಯತ್ಯಾಸ ಕಂಡುಬಂದಿದೆ. ಪರಿಣಾಮವಾಗಿ ಭಾರತದಲ್ಲಿ ಕಾಳುಮೆಣಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಇರುವುದು ಕಂಡುಬರುತ್ತಿದ್ದು, ಈ ರೀತಿಯ ಪರಿಸ್ಥಿತಿ ಎದುರಾಗುವುದಕ್ಕೆ ಕಾರಣವೇನು ಎನ್ನುವುದು ನಿಖರವಾಗಿ ತಿಳಿದುಬಂದಿಲ್ಲ.
ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡುಬಂದಾಗ ತಕ್ಷಣವೇ ದೊಡ್ಡಮಟ್ಟದಲ್ಲಿ ಮಾರಾಟ ಮಾಡುವ ಬದಲಾಗಿ, ಮಾರುಕಟ್ಟೆ ಟ್ರೆಂಡ್ ನಂತಹ ಕೆಲವು ಅಂಶಗಳನ್ನು ಗಮನಿಸಿ ಮಾರಾಟಕ್ಕೆ ಮುಂದಾಗಬೇಕು. ಕೃಷಿಗೆ ಸಂಬಂಧಿಸಿದಂತಹ ಇತರೆ ಉತ್ಪನ್ನಗಳ ಮಾರಾಟದ ವಿಷಯದಲ್ಲಿಯೂ ಕೂಡ ಈ ಅಂಶಗಳನ್ನು ಗಮನಿಸಬೇಕು. ಅಷ್ಟೇ ಅಲ್ಲದೆ ಗುಣಮಟ್ಟದ ಕಾಳುಮೆಣಸಿಗೆ ಪ್ರತ್ಯೇಕವಾದ ಬೆಲೆ ಸಿಗುತ್ತದೆಯೇ, ಸ್ಥಳೀಯ ಮಾರುಕಟ್ಟೆಯಲ್ಲಿನ ಆಗಮನ ಹೇಗಿದೆ? ವ್ಯಾಪಾರಿಗಳ ಖರೀದಿಗೆ ಬೇಡಿಕೆ ಹೇಗಿದೆ ಮತ್ತು ಮುಂದಿನ ದಿನಗಳಲ್ಲಿ ಹೊಸ ಸರಕು ಎಷ್ಟು ಪ್ರಮಾಣದಲ್ಲಿ ಬರಲಿದೆ ಎನ್ನುವುದನ್ನು ಕೂಡ ಗಮನಿಸಬೇಕು ಎನ್ನುವಂತಹ ಸಲಹೆಯನ್ನು ಕೂಡ ಈ ಸಂದರ್ಭದಲ್ಲಿ ನೀಡಲಾಗಿದೆ.







