ತೀರ್ಥಹಳ್ಳಿ: ಕಳ್ಳನೊಬ್ಬ ಒಂಟಿ ಮನೆಯನ್ನು ಟಾರ್ಗೆಟ್ ಮಾಡಿ ನೀರು ಕೇಳುವ ನೆಪದಲ್ಲಿ ಕಳ್ಳತನಕ್ಕೆ ಯತ್ನಿಸಿ ಜನರಿಂದ ಧರ್ಮದೇಟು ತಿಂದ ಘಟನೆ ಬುಧವಾರ ರಾತ್ರಿ ತೀರ್ಥಹಳ್ಳಿ ತಾಲೂಕು ನಾಲೂರು ಬಳಿ ನಡೆದಿದೆ. ಮದ್ಯ ಸೇವಿಸಿದ್ದು ಆತ ಮಾನಸಿಕ ಅಸ್ವಸ್ತ ಎಂದು ಹೇಳಲಾಗಿದೆ.
ಅಜ್ಜ ಅಜ್ಜಿ ಇದ್ದ ಮನೆಯ ಬಾಗಿಲು ಬಡಿದ ಹಿಂದಿ ಮಾತನಾಡುವ ವ್ಯಕ್ತಿ ಬಗ್ಗೆ ಸಂಶಯಗೊಂಡ ಅಜ್ಜ ಅಜ್ಜಿ ಕೂಗಿಕೊಂಡಿದ್ದಾರೆ. ಅಕ್ಕ ಪಕ್ಕದ ಗ್ರಾಮಸ್ಥರು ಕೂಡಲೇ ಧಾವಿಸಿ ಆತನ ಹಿಂದೆ ಬಿದ್ದಿದ್ದಾರೆ. ಸುಮಾರು 3 ಕಿಮಿ ಓಡಿದ ಆತ ಜನರ ಮೇಲೆ ಕಲ್ಲು ಹಾಗೂ ದೊಣ್ಣೆಯಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ನಾಲೂರು ಸೇತುವೆ ಬಳಿ ಜನರ ಕೈಗೆ ಸಿಕ್ಕಿದ್ದು ಧರ್ಮದೇಟು ತಿಂದಿದ್ದಾನೆ.
ಕಳ್ಳನನ್ನು ಸುಮಾರು 30 ಮಂದಿ ಸೇರಿ ಹಿಡಿದು ಪೊಲೀಸರಿಗೆ ಕರೆ ಮಾಡಿದರೂ ಬರಲಿಲ್ಲ. ಬಳಿಕ 3 ಗಂಟೆಗೆ ಬಂದು ಆತನ ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಅಜ್ಜ ಅಜ್ಜಿ ತಡ ರಾತ್ರಿ ದೂರು ನೀಡುವ ಸ್ಥಿತಿಯಲ್ಲಿ ಇರಲಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದು ಕೊಳ್ಳಬೇಕಿದೆ.
ಮಲೆನಾಡಲ್ಲಿ ಹೆಚ್ಚಿದ ಅನಾಮಿಕರ ಆಗಮನ: ಪೊಲೀಸರೇ ಅಲರ್ಟ್!
ಮಲೆನಾಡಲ್ಲಿ ಬೆಡ್ ಶೀಟ್, ಪ್ಲಾಸ್ಟಿಕ್ ಇತರೆ ವಸ್ತು ಮಾರಾಟಕ್ಕೆ ಪರ ಊರಿನವರ ಆಗಮನ ಹೆಚ್ಚಿದೆ. ನಕಲಿ ಐಡಿ ಕಾರ್ಡ್ ಬಳಸಲಾಗುತ್ತಿದೆ.
ಅಸ್ಸಾಂ, ಬಿಹಾರ ಸೇರಿದಂತೆ ಹೊರ ಭಾಗದ ಹಿಂದಿ ಮಾತನಾಡುವ ಜನರ ಬಗ್ಗೆ ಜಾಗೃತಿ ಇರಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ. ಅಡಿಕೆ ಕೊಯ್ಲು ಸಮಯ ಆದ್ದರಿಂದ ಈ ಬಗ್ಗೆ ಪೊಲೀಸ್ ಇಲಾಖೆ ಗಮನಿಸಬೇಕು ಎಂದು ಅಗ್ರಹಿಸಲಾಗಿದೆ.
ತೀರ್ಥಹಳ್ಳಿಯಲ್ಲಿ ಹೆಚ್ಚಾದ ಬೈಕ್, ಹೆಲ್ಮೆಟ್ ಕಳ್ಳತನ!
ತೀರ್ಥಹಳ್ಳಿಯಲ್ಲಿ ಬೈಕ್, ಹೆಲ್ಮೆಟ್ ಕಳ್ಳರ ಸಂಖ್ಯೆ ಹೆಚ್ಚಿದೆ. ತಿಂಗಳಿಗೆ ಒಂದಲ್ಲ ಒಂದು ಬೈಕ್, ಹೆಲ್ಮೆಟ್ ಕಳ್ಳತನ ಪ್ರಕರಣ ದಾಖಲಾಗುತ್ತಿದೆ.
ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಮುಂದೆ ನಡೆದಿರುವ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.







