ತೀರ್ಥಹಳ್ಳಿ: ಕಾಂತಾರ ಚಿತ್ರದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು, ಕನ್ನಡ ಚಿತ್ರರಂಗದ ಕೀರ್ತಿಯನ್ನು ವಿಶ್ವಾದ್ಯಂತ ಪಸರಿಸಿದ ಖ್ಯಾತ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಪತ್ನಿ ಹಾಗೂ ವಸ್ತ್ರ ವಿನ್ಯಾಸಕಿಯಾದ ಪ್ರಗತಿ ರಿಷಬ್ ಶೆಟ್ಟಿ ಅವರೊಂದಿಗೆ ತೀರ್ಥಹಳ್ಳಿಗೆ ಭೇಟಿ ನೀಡಿದ್ದು, ಇಲ್ಲಿನ ಪ್ರಸಿದ್ಧ ರೆಸ್ಟೋರೆಂಟ್ ದುರ್ಗಾ ಡೀಲಕ್ಸ್ ಹೊಟೇಲ್ ನಲ್ಲಿ ಭೋಜನ ಸೇವಿಸಿದರು. ಈ ಸಂದರ್ಭದಲ್ಲಿ ಹೊಟೇಲ್ ನ ಮಾಲೀಕರಾದ ಸಂದೀಪ್ ಶೆಟ್ಟಿ ಅವರು ದಂಪತಿಗಳಿಗೆ ಆದರದ ಸ್ವಾಗತವನ್ನು ಕೋರಿ, ಉಪಚರಿಸಿ, ಬೀಳ್ಕೊಟ್ಟಿದ್ದಾರೆ.
ತೀರ್ಥಹಳ್ಳಿ, ಹೊಸನಗರ ಭಾಗದ ಅನೇಕ ಕಲಾವಿದರು ರಿಷಬ್ ಶೆಟ್ಟಿ ಅವರ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಅಲ್ಲದೆ ರಿಷಬ್ ಪತ್ನಿ ಕೂಡ ತೀರ್ಥಹಳ್ಳಿ, ಹೊಸನಗರಕ್ಕೆ ಆತ್ಮೀಯರು. ಹೀಗಾಗಿ ತೀರ್ಥಹಳ್ಳಿಗೆ ಭೇಟಿದ್ದಾರೆ.







