ತೀರ್ಥಹಳ್ಳಿಯಲ್ಲಿ ದಸರಾ ಸಂಭ್ರಮದ ರಂಗು ಶುರು!
– ತೀರ್ಥಹಳ್ಳಿ ಕೊಪ್ಪ ಸರ್ಕಲ್ ನಲ್ಲಿ ಉಗ್ರ ನರಸಿಂಹನ ಅವತಾರ
– ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನ, ಮಾರಿಕಾಂಬಾ ದೇಗುಲದಲ್ಲಿ ಜನವೋ ಜನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ಸಂಭ್ರಮ ಶುರುವಾಗಿದೆ. ಒಂದು ಕಡೆ ರಾಮೇಶ್ವರ ದೇವಸ್ಥಾನದಲ್ಲಿ ದಸರಾ ಶುರುವಾಗಿದೆ. ಮಾರಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.
ಇನ್ನು ವಿಶೇಷ ಎಂಬಂತೆ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ ನಲ್ಲಿ ಉಗ್ರ ನರಸಿಂಹನ ಮಹಾದ್ವಾರ ನಿರ್ಮಾಣ ಆಗಿದೆ. “ಹಿರಣ್ಯಾಕ್ಷ ಸಂಹಾರಕ ಶ್ರೀ ನರಸಿಂಹ ಸ್ವಾಮಿ”ಯ ರೂಪದಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ. ಪಟ್ಟಣದ ಪ್ರಮುಖ ಯುವ ಮುಖಂಡರಲ್ಲರೂ ಸೇರಿ ಈ ಮಹಾದ್ವಾರವನ್ನು ನಿರ್ಮಾಣ ಮಾಡಿದ್ದಾರೆ. ಈ ದ್ವಾರ ಜನರ ಆಕರ್ಷಣೆ ಗೆ ಕಾರಣವಾಗಿದೆ.
ಕುಶಾವತಿ ಪಾರ್ಕ್ ಅಲ್ಲಿ ದಸರಾ ವಿಶೇಷ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದೆ. ವಿಶೇಷ ಮೆರವಣಿಗೆಗೆ ಈಗಾಗಲೇ ತಯಾರಿ ಆಗಿದೆ.








