ಯುವ ದಸರಾ, ಮಹಿಳಾ ದಸರಾ ರಂಗು!
– ಕೆಸರು ಗದ್ದೆಯಲ್ಲಿ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ಗಿರಗಿಟ್ಲೆ
– ತೀರ್ಥಹಳ್ಳಿ ತಾಲ್ಲೂಕಿನ ಕಲಾವಿದರಿಂದ/ಕಲಾ ತಂಡಗಳಿಂದ ಅರ್ಜಿ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ರಂಗು ಜೋರಾಗಿದೆ. ಈ ಬಾರಿ ಯುವುದೇ ಪಕ್ಷ ಭೇದ ಇಲ್ಲದೆ ಸಮಾನವಾಗಿ ದಸರಾ ಆಯೋಜಕರ ಆಯ್ಕೆ ಆಗಿದೆ. ಇದೇ ಮೊದಲು ಎಂಬಂತೆ ಯುವದಸರ / ಮಹಿಳಾ ದಸರಾ ಆಯೋಜಿಸಲಾಗಿದೆ.
ಪುರುಷರಿಗೆ ಮತ್ತು ಮಹಿಳೆಯರಿಗೆ ಕೆಸರು ಗದ್ದೆಯಲ್ಲಿ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ಗಿರಗಿಟ್ಲೆ ಆಟವನ್ನು ಏರ್ಪಡಿಸಲಾಗಿದೆ, ಆಸಕ್ತರು 9+2 ಜನರ ತಂಡದ ಹೆಸರನ್ನು ಮೊದಲೆ ನೊಂದಾಯಿಸಬೇಕು, ಸೆಪ್ಟೆಂಬರ್ 28, ಭಾನುವಾರ, ಸ್ಥಳ ಕುರುವಳ್ಳಿ ಮಟನ್ ಶಾಪ್ ಎದುರಿನ ಗದ್ದೆಯಲ್ಲಿ ಕ್ರೀಡಾಕೂಟ ನಡೆಯಲಿದೆ.
ಹೆಸರು ನೊಂದಾಯಿಸಲು ಸಂಪರ್ಕಿಸಿ
ಮಹಿಳೆಯರು: ನಯನ ಶೆಟ್ಟಿ ಹಾಗೂ ಜ್ಯೋತಿ ದಿಲೀಪ್
ಪುರುಷರು: ಶಿವು ಹೊದಲ ಹಾಗೂ ಪ್ರೇಮ್ ಯಡೂರು, ಅಂಜೂರ ಕುಡುಮಲ್ಲಿಗೆ ಇವರಲ್ಲಿ ನೊಂದಾಯಿಸಲು ಕೋರಲಾಗಿದೆ.
ದಸರಾ ಉತ್ಸವ ಸಮಿತಿ: ಸಾಂಸ್ಕೃತಿಕ ಸಮಿತಿ
ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವರ ದಸರಾ ಉತ್ಸವವನ್ನು ಅತ್ಯಂತ ವೈಭವಯುತವಾಗಿ ನಡೆಸಲು ಸಮಿತಿಯು ತೀರ್ಮಾನಿಸಲಾಗಿದೆ. ಕುಶಾವತಿ ನೆಹರು ಪಾರ್ಕ್ ನಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ತೀರ್ಥಹಳ್ಳಿ ತಾಲ್ಲೂಕಿನ ಕಲಾವಿದರಿಂದ/ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಯಕ್ಷಗಾನ ಸೇರಿದಂತೆ ಮತ್ತಿತರ ನೃತ್ಯ ಕಲಾ ಪ್ರಕಾರದ ತಂಡಗಳು / ಕಲಾವಿದರು ಶ್ರೀಮತಿ ಆಶಾ ಡೇನಿಯಲ್ (9482009404), ಶ್ರೀ ಶಿವಕುಮಾರ್ ಟಿ. ಆರ್. (9663500592) ಇವರಲ್ಲಿ ಹೆಸರು ನೋಂದಾಯಿಸಬೇಕು. ಜಾನಪದ ಸಂಗೀತ, ಶಾಸ್ರ್ತೀಯ ಸಂಗೀತ, ಸುಗಮ ಸಂಗೀತ ಸೇರಿದಂತೆ ಗಾಯನ ಕಾರ್ಯಕ್ರಮ ನೀಡುವ ಕಲಾವಿದರು ಶ್ರೀ ಅಂಬುತೀರ್ಥ ರಾಘವೇಂದ್ರ (7676415042) ಇವರಲ್ಲಿ ಹೆಸರು ನೋಂದಾಯಿಸಬೇಕು. ಕಾರ್ಯಕ್ರಮ ನೀಡಲು ಆಸಕ್ತಿ ಹೊಂದಿದ ಕಲಾ ತಂಡ / ಕಲಾವಿದರು ತಮ್ಮ ಕಲಾಪ್ರಕಾರದ ವಿಡಿಯೋ ತುಣುಕು, ಕಲಾವಿದರ ಮಾಹಿತಿ ಹಾಗೂ ಕಲಾ ಪ್ರಕಾರದ ಮಾಹಿತಿಯನ್ನು ಕಡ್ಡಾಯವಾಗಿ ನೀಡತಕ್ಕದ್ದು. ಹೆಸರು ನೋಂದಾಯಿಸಲು ಕಡೇಯ ದಿನಾಂಕ 23.09.2025. ಕಲಾ ತಂಡಗಳ/ಕಲಾವಿದರ ಆಯ್ಕೆಯ ವಿವರಗಳನ್ನು ದಿನಾಂಕ 24.09.2025ರಂದು ತಿಳಿಸಲಾಗುವುದು. ಗೀತಾ ರಮೇಶ್ , ಜ್ಯೋತಿ ಮೋಹನ್, ಚೇತನ್. ಜಿ. ಇವರನ್ನು ಸಂಪರ್ಕಿಸಿ 8618893484.








