ರಾಜಧಾನಿಯಲ್ಲಿ ತೀರ್ಥಹಳ್ಳಿ ಅಂಟಿಗೆ ಪಿಂಟಿಗೆ ರಂಗು!
– ತೀರ್ಥಹಳ್ಳಿ ಮಹಿಳಾ ಒಕ್ಕಲಿಗ ಸಂಘದ ಸದಸ್ಯರ ಕಲಾ ಸೇವೆ
– ಅಂಟಿಗೆ ಪಿಂಟಿಗೆ ಹೊಗಳಿದ ಅವಧೂತ ವಿನಯ ಗುರೂಜಿ
NAMMUR EXPRESS NEWS
ತೀರ್ಥಹಳ್ಳಿ: ಬೆಂಗಳೂರಿನ ಅಡಿಕೆನಾಡು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ 9ನೇ ಸರ್ವ ಸದಸ್ಯರ ವಾರ್ಷಿಕ ಸಭೆ ಹಾಗೂ ಮಲೆನಾಡ ಮುತ್ತುಗಳು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿಯ ಅಂಟಿಗೆ ಪಿಂಟಿಗೆ ಗಮನ ಸೆಳೆಯಿತು.
ಅವಧೂತ ವಿನಯ ಗುರೂಜಿ ದಿವ್ಯ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲೆನಾಡು ಭಾಗದ ಸುಮಾರು 1500 ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು. ಈ ಕಾರ್ಯಕ್ರಮ ಉದ್ಘಾಟನೆಯನ್ನು ಅಂಟಿಗೆ ಪಿಂಟಿಗೆ ಮೂಲಕ ಉದ್ಘಾಟನೆ ಮಾಡಲಾಯಿತು. ತೀರ್ಥಹಳ್ಳಿ ಮಹಿಳಾ ಒಕ್ಕಲಿಗ ಸಂಘದ ಶಕುಂತಲಾ ರಮೇಶ್, ಪ್ರೇಮಾ ತಿಮ್ಮಪ್ಪ, ಸೀತಮ್ಮ ರತ್ನಾಕರ್, ವಿನುತಾ ಅಣ್ಣಪ್ಪ, ಪ್ರೇಮಾ ಕುಮಾರ್, ರಂಜಿತಾ ಇತರರು ಇದ್ದರು.
ವಿನಯ್ ಗುರೂಜಿ ಮಾತನಾಡಿ, ಮಲೆನಾಡ ಕಲೆ ಬೆಂಗಳೂರಲ್ಲಿ ಪ್ರದರ್ಶನ ಮಾಡಿರುವ ತೀರ್ಥಹಳ್ಳಿ ಮಹಿಳಾ ಕಲಾವಿದರ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಮೋಜಿ ಗೌಡರು ವಿಧಾನಪರಿಷತ್ ಸದಸ್ಯರು, ಸಿರಿಬೈಲ್ ಧರ್ಮೇಶ್, ನಿರ್ದೇಶಕರು ರಾಜ್ಯ ಒಕ್ಕಲಿಗರ ಸಂಘ,, ನಿರ್ದೇಶಕರಾದ ಎಂ ಆರ್ ಜಯೇಶ, ಹೆಚ್. ಸಿ. ನಾಗರಾಜ್, ಜೆ.ಡಿ.ಕುಮಾರಸ್ವಾಮಿ, ಬಿ.ಬಿ. ರತ್ನಾಕರ್, ಎನ್.ಎ.ಪ್ರಭಾಕರ್, ಕೆ.ಎಸ್. ಪುಟ್ಟಪ್ಪಗೌಡ, ಹೆಚ್.ಎಲ್. ಅಶೋಕ್, ಯು.ಆರ್. ಶಮಿತ ಮಲ್ನಾಡ್, ಕೆ.ಎಸ್. ಶ್ವೇತಶ್ರೀ ವಿಜಯ್, ಡಿ.ಕೆ.ಕೃಷ್ಣಮೂರ್ತಿ, ಎಲ್. ದಾಸಪ್ಪ, ಎಸ್.ಕಾಳಿದಾಸ್, ರಮ್ಯಾ ಎಸ್. ನಾಯಕ್ ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕೊಳಿಗೆ ನಾಗರಾಜ್, ಪುರುಷೋತ್ತಮ ಗೌಡ, ಕರವೇ ನಾಗರಾಜ್, ನಂಟೂರು ಸುಬ್ಬಯ್ಯ ಸೇರಿ ಮಲೆನಾಡ ಗಣ್ಯರು ಹಾಜರಿದ್ದರು. ಪಿ. ಇ. ಎಸ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಪೂಜಾ ತೀರ್ಥಹಳ್ಳಿ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿನಯ್ ಗುರೂಜಿ ಸೇರಿ ಪೂಜಾ ಅವರಿಗೆ ಗೌರವಿಸಿದರು.








