ಸ್ಕೂಟಿ ಮೇಲೆ ಬಿದ್ದ ಕ್ರೇನ್ ಅಂಗನವಾಡಿ ಶಿಕ್ಷಕಿ ದಾರುಣ ಸಾವು
* ಸ್ಕೂಟಿಯಲ್ಲಿದ್ದ ಇನ್ನೊಬ್ಬ ಶಿಕ್ಷಕಿಗೆ ಗಂಭೀರ ಗಾಯ, ಹಾಸನ ಆಸ್ಪತ್ರೆಗೆ ಶಿಫ್ಟ್
* ಕ್ರೇನ್ ಚಾಲಕ ದಾವುಡ್ ಎಸ್ಕೇಪ್,ಪೊಲೀಸರು ಹಾಗೂ ಸ್ಥಳೀಯರಿಂದ ಹುಡುಕಾಟ
NAMMMUR EXPRESS NEWS
ಮೂಡಿಗೆರೆ: ರಸ್ತೆಯಲ್ಲಿ ಸ್ಕೂಟಿ ಚಲಾಯಿಸಿಕೊಂಡು ಹೋಗುವಾಗ ಕ್ರೇನ್ ಬ್ರೇಕ್ ಫೇಲ್ ಆಗಿ ನಿಯಂತ್ರಣ ತಪ್ಪಿ ಸ್ಕೂಟಿ ಮೇಲೆ ಬಿದ್ದಿದ್ದರ ಪರಿಣಾಮ ಚಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೂಡಿಗೆರೆ ಪಟ್ಟಣದ ಸಂತೆ ಮೈದಾನ ಬಳಿ ನಡೆದಿದೆ.
ಸ್ಕೂಟಿ ಚಲಾಯಿಸಿಕೊಂಡು ಬರುತ್ತಿದ್ದ ಅಂಗನವಾಡಿ ಶಿಕ್ಷಕಿಯಾದ ಸಂಪ್ರಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೋರ್ವ ಶಿಕ್ಷಕಿ ಸುಜಾತ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
ಅಂಗನವಾಡಿ ಶಿಕ್ಷಕಿಯರ ಕಾರ್ಯಕ್ರಮದ ಸಲುವಾಗಿ ತಯಾರಿ ಮುಗಿಸಿ ಬಟ್ಟೆ ಬದಲಾಯಿಸಿಕೊಂಡು ಬರಲು ಸಹೋದ್ಯೋಗಿ ತಿಳಿಸಿದ್ದಾರೆ. ಮನೆಗೆ ಬಂದು ವಾಪಾಸ್ ಕಾರ್ಯಕ್ರಮಕ್ಕೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಗಾಯಳು ಸುಜಾತ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನೆ ಬಳಿಕ ಕ್ರೇನ್ ಚಾಲಕ ದಾವುಡ್ ಸ್ಥಳದಿಂದ ಪರಾರಿಯಾಗಿದ್ದು ಪೊಲೀಸರು ಹಾಗೂ ಸ್ಥಳೀಯರು ಕ್ರೇನ್ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡಿಗೆರೆ ತಾಲೂಕಿನ ಹೆಸಗಲ್ ಮೂಲದ ಸಂಪ್ರೀತಾ ಇತ್ತೀಚೆಗಷ್ಟೇ ಹೊಸ ಮನೆ ನಿರ್ಮಿಸಿ ಅದರ ಗೃಹ ಪ್ರವೇಶ ಮಾಡಿದ್ದರು,ಆದರೆ ಇಂದು ತನ್ನದಲ್ಲದ ತಪ್ಪಿಗೆ ಸಂಪ್ರೀತಾ ಜೀವ ಕಳೆದುಕೊಂಡಿದ್ದಾರೆ.







