ಮೇಕೇರಿ ಕ್ರಿಕೆಟ್ ಲೀಗ್ ಅದ್ದೂರಿ ಕ್ರಿಕೆಟ್ ಹಬ್ಬ!
– ಈಶ ಕ್ರಿಕೆಟರ್ಸ್, ಮೇಕೇರಿ-ಕೌರಿ ಇವರ ಆಯೋಜನೆ
• ಫ್ರೆಂಡ್ಸ್ ನಿಸರ್ಗ, ನೇಚರ್ ಕಿಂಗ್ಸ್, ರಾಮ ದೂತ, ಆರ್.ಆರ್ ಬ್ರದರ್ಸ್ ತಂಡಗಳಿಗೆ ಪ್ರಶಸ್ತಿಯ ಗರಿ
• ಗಣ್ಯರ ಉಪಸ್ಥಿತಿಯಲ್ಲಿ ಎಂಸಿಎಲ್ ಗೆ ವರ್ಣರಂಜಿತ ತೆರೆ
ಈಶ ಕ್ರಿಕೆಟರ್ಸ್, ಮೇಕೇರಿ-ಕೌರಿ ಇವರ ಆಶ್ರಯದಲ್ಲಿ ಮೇಕೇರಿ ಪ್ರೀಮಿಯರ್ ಲೀಗ್-2026 ಮೇ 2 ಮತ್ತು 3 ಅದ್ಧೂರಿಯಾಗಿ ನಡೆಯಿತು. ಕು.ಸಾನ್ವಿ ಜೋಯಿಸ್ ಯಡೂರು, ಅಂತರಾಷ್ಟ್ರೀಯ ಕರಾಟೆ ಪಟು ಹಾಗೂ ಎಂ.ಎಂ.ಗೌಡಪ್ಪ ಗೌಡ್ರ, ಆರಕ್ಷಕ ವೃತ್ತ ನಿರೀಕ್ಷಕರು, ಹೊಸನಗರ ಕ್ರೀಡಾಕೂಟ ಉದ್ಘಾಟಿಸಿದರು.
ಲೀಗ್ ನ ಪ್ರಥಮ ಬಹುಮಾನವನ್ನು ಸುಮಂತ್ ಮತ್ತು ಸುಜಿತ್, ಮೇಲಿನಬೈಸೆ ಮಾಲಿಕತ್ವದ ಫ್ರೆಂಡ್ಸ್ ನಿಸರ್ಗ, ದ್ವಿತೀಯ ಬಹುಮಾನವನ್ನು ರಾಜೇಶ್ ಹಿರಿಗೆ ಮತ್ತು ರಾಘವೇಂದ್ರ ಕಲಸುಳ್ಳಿ ಮಾಲಿಕತ್ವದ ನೇಚರ್ ಕಿಂಗ್ಸ್, ತೃತೀಯ ಸ್ಥಾನವನ್ನು ರಾಘವೇಂದ್ರ, ಸಂತೋಷ್ ಯಡೂರು ಮತ್ತು ವಿನಾಯಕ ಅವರ ರಾಮ ದೂತ, ನಾಲ್ಕನೇ ಸ್ಥಾನವನ್ನು ರಜಾಕ್ ಮತ್ತು ರಶೀದ್ ಯಡೂರು ಮಾಲಿಕತ್ವದ ಆರ್.ಆರ್ ಬ್ರದರ್ಸ್ ಚಾಚಿಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಅಂಕಿತ್ ಮೇಕೇರಿ ಅಧ್ಯಕ್ಷತೆ ವಹಿಸಿದ್ದರು.ಕ್ರಿಕೆಟ್ ಪಂದ್ಯಾವಳಿಯ ಪ್ರಾಯೋಜಕರಾದ ಹಾಲಗದ್ದೆ ಉಮೇಶ್, ವಾಟಗದ್ದೆ ದಿನೇಶ್, ಶೇಷಾದ್ರಿ ತಲಗೇರಿ, ಸತೀಶ್ ಹಿರೇಬೈಲ್, ಹೊಸಗದ್ದೆ ಮಂಜು ಹಾಗೂ ಹನ್ನೆರಡು ತಂಡಗಳ ಮಾಲಿಕರು, ಸನ್ಮಾನ ಸ್ವೀಕರಿಸಿದ ನಿಹಾಲ್, ಆದ್ಯ ತಲಗೇರಿ, ಅನುಜ್ಞಾ ಶೆಟ್ಟಿಕೊಪ್ಪ, ಶ್ರೀತ ಚಿಮ್ಮಗೋಡು ಉಪಸ್ಥಿತರಿದ್ದರು. ಕಿಶೋರ್ ಶೆಟ್ಟಿ ಮೇಲಿನಬೈಸೆ ನಿರೂಪಣೆ ನಡೆಸಿಕೊಟ್ಟರು. ಬಳಿಕ ತೀರ್ಥಹಳ್ಳಿ ರಮೇಶ್ ಮತ್ತು ತಂಡದವರಿಂದ ಸಂಗೀತ ರಸಸಂಜೆ ನಡೆಯಿತು.
ಸಹಕಾರಕ್ಕೆ ಅಂಕಿತ್ ಮೇಕೇರಿ ಅಭಿನಂದನೆ
ಎರಡು ದಿನದ ಕ್ರೀಡಾಕೂಟ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಪಂದ್ಯದಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ಶುಭಹಾರೈಕೆಗಳು. ಮುಂದಿನ ವರ್ಷಗಳಲ್ಲೂ ನಿಮ್ಮೆಲ್ಲರ ಸಹಕಾರ ಹೀಗೇ ಇರಲಿ
– ಅಂಕಿತ್ ಮೇಕೇರಿ








