ಸಿನಿಮಾ ಸ್ಟೈಲಲ್ಲೇ ಸಿಎಂ ಆದ ವಿಜಯ್!
– ಪ್ರಮಾಣ ವಚನ: ತಮಿಳುನಾಡಲ್ಲಿ ಹೊಸ ಯುಗ
– ಕೊಟ್ಟ ಭರವಸೆ ಈಡೇರಿಸುವುದೇ ದೊಡ್ಡ ಸವಾಲು
– ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಿಂಚಿದ ತ್ರಿಷಾ!
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ನಟ, ಟಿವಿಕೆ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಕೀಯ ‘ವಿಜಯ’ದ ಹಾದಿಯಲ್ಲಿರುವ ವಿಜಯ್ ಅವರು ನಟನಾಗಿದ್ದುಕೊಂಡು ಸಿನಿಮಾ ಬಿಟ್ಟು ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿ ಹೊಸ ಸಂಚಲನ ಉಂಟು ಮಾಡಿದೆ. ಗವರ್ನರ್ ವಿಜಯ್ ಅವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ವಿಜಯ್ ಜತೆ 9 ಮಂದಿ ಸಚಿವರಾಗಿ ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ವಿಜಯ್ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಅವರ ತಂದೆ ಹಾಗೂ ತಾಯಿ ಅವರು ಕೈಮುಗಿದುಕೊಂಡು ತಲ್ಲೀನರಾಗಿ ಮಗನ ನೋಡಿದ್ದಾರೆ. ಎಲ್ಲೆಲ್ಲೂ ಚಪ್ಪಾಳೆ, ಶಿಳ್ಳೆ, ಕುಣಿತ ಕಂಡು ಬಂದಿತ್ತು. ಇಡೀ ತಮಿಳುನಾಡಲ್ಲಿ ಹಬ್ಬದ ವಾತಾವರಣ ಕಂಡು ಬಂದಿತ್ತು. ಸೋಷಿಯಲ್ ಮೀಡಿಯಾದಲ್ಲಿ ಅವರ ಪ್ರಮಾಣ ವಚನ ಡೈಲಾಗ್ ರಾರಾಜಿಸುತ್ತಿದೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ನಟಿ, ಗೆಳತಿ ತ್ರಿಷಾ ಸಕತ್ ಮಿಂಚಿದ್ದಾರೆ.
ವಿಜಯ್ಗೆ ‘ಭರವಸೆ’ಗಳೇ ಸವಾಲು!?
ಚುನಾವಣೆ ಭರವಸೆ ಈಡೇರಿಸುವ ಸವಾಲು ವಿಜಯ್ ಮುಂದೆ ಇರಲಿದೆ. ಮನೆ ಯಜಮಾನಿಗೆ ಮಾಸಿಕ 2,500 ರೂ, ಪ್ರತಿ ಕುಟುಂಬಕ್ಕೆ ವಾರ್ಷಿಕ 6 ಉಚಿತ ಸಿಲಿಂಡರ್, ಬಡ ಹೆಣ್ಮಗಳ ಮದುವೆಗೆ 8 ಗ್ರಾಂ ಚಿನ್ನ, ರೇಷ್ಮೆ ಸೀರೆ, ಮಹಿಳಾ ಸಂಘಗಳಿಗೆ ₹5 ಲಕ್ಷ ಬಡ್ಡಿ ರಹಿತ ಸಾಲ, ಸಾರಿಗೆ ಬಸ್ಗಳಲ್ಲಿ ಸ್ತ್ರೀಯರಿಗೆ ಉಚಿತ ಪ್ರಯಾಣ, ನವಜಾತ ಶಿಶುಗೆ ಚಿನ್ನದ ಉಂಗುರ, ವೆಲ್ಕಮ್ ಕಿಟ್, ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಪ್ರತಿ ಮನೆಗೆ ಉಚಿತ ಕುಡಿಯುವ ನೀರು, ರೈತರ ಸಾಲ ಶೇಕಡಾ 50ರಷ್ಟು ಮನ್ನಾ, ನಿರುದ್ಯೋಗಿ ಪದವೀಧರರಿಗೆ ಧನಸಹಾಯ, 2 ಸಾವಿರದಿಂದ 4 ಸಾವಿರ ರೂ. ಸಹಾಯಧನ, 5 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ, ವೃದ್ಧರಿಗೆ, ವಿಶೇಷ ಚೇತನರಿಗೆ ಮಾಸಿಕ ₹3,000 ಪಿಂಚಣಿ, ಪ್ರತೀ ಕುಟುಂಬಕ್ಕೆ 25 ಲಕ್ಷ ರೂ. ಉಚಿತ ಆರೋಗ್ಯ ವಿಮೆ ಘೋಷಣೆ ಮಾಡಿದ್ದಾರೆ.
29 ವರ್ಷಕ್ಕೆ ಮೊದಲ ಬಾರಿಗೆ ಗೆದ್ದು ಸಚಿವೆಯಾದ ಕೀರ್ತಿನಾ!
29ನೇ ವಯಸ್ಸಿನಲ್ಲಿ ಎಸ್ ಕೀರ್ತನಾ, ಸಿ ಜೋಸೆಫ್ ವಿಜಯ್ ನೇತೃತ್ವದ ಮೊದಲ ಸಚಿವ ಸಂಪುಟದ ಅತ್ಯಂತ ಕಿರಿಯ ಸಚಿವೆಯಾಗಿ ಗುರುತಿಸಿಕೊಂಡಿದ್ದಾರೆ. ರಾಜಕೀಯ ತಂತ್ರಜ್ಞೆಯಾಗಿದ್ದ ಕೀರ್ತನಾ, ಈಗ ಮೊದಲ ಬಾರಿಗೆ ಎಂ. ಎಲ್. ಎ ಆಗಿ ಗೆದ್ದು ನೇರವಾಗಿ ಸಚಿವ ಸ್ಥಾನಕ್ಕೇರಿರುವುದು ತಮಿಳುನಾಡು ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.ವಿರುದುನಗರ ಜಿಲ್ಲೆಯ ಶಿವಕಾಶಿ ಕ್ಷೇತ್ರದಿಂದ ಸ್ಪರ್ಧಿಸಿದ ಕೀರ್ತನಾ, ಕಾಂಗ್ರೆಸ್ ಅಭ್ಯರ್ಥಿ ಅಶೋಕನ್ ಜಿ ಅವರನ್ನು 11,670 ಮತಗಳ ಅಂತರದಿಂದ ಸೋಲಿಸಿ ಇತಿಹಾಸ ನಿರ್ಮಿಸಿದರು. ಶಿವಕಾಶಿಯಿಂದ ಆಯ್ಕೆಯಾದ ಮೊದಲ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತಮಿಳು ನಾಡಲ್ಲಿ ಗೆದ್ದ ಮೂವರು ಕನ್ನಡಿಗರು!
ತಮಿಳುನಾಡಿನ ಚುನಾವಣೆಯಲ್ಲಿ ಮೂವರು ಕನ್ನಡಿಗರು ಆಯ್ಕೆ ಆಗಿದ್ದಾರೆ. ಥಳಿ ಕ್ಷೇತ್ರದಿಂದ ರಾಮಚಂದ್ರ, ವೇಪನಹಳ್ಳಿ ಇಂದ ಶ್ರೀನಿವಾಸ್, ಮೆಟ್ಟುಪಾಳ್ಯಂ ನಿಂದ ಸುನಿಲ್ ಆನಂದ್.ಮೂವರು ಕನ್ನಡಿಗರಿಗೆ ಅಭಿನಂದನೆಗಳು.








