ತೆಲಗು ಚಿತ್ರ ರಂಗದಲ್ಲಿ ಮಿಂಚುತ್ತಿರುವ ನಭಾ ನಟೇಶ್
ಶೃಂಗೇರಿ ಮೂಲದ ನಟಿ ಈಗ ಫುಲ್ ಫೇಮಸ್
ವಜ್ರಕಾಯ’ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಎಂಟ್ರಿ
ಕನ್ನಡದ ಖ್ಯಾತ ನಟಿ, ಮಲೆನಾಡು ಮೂಲದ ನಭಾ ನಟೇಶ್ ಇದೀಗ ತೆಲಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಈಕೆ ಮಲೆನಾಡ ಶೃಂಗೇರಿ ಮೂಲದ ನಟಿ.11 ಡಿಸೆಂಬರ್ 1995ರಲ್ಲಿ ಜನಿಸಿದ ನಭಾ ನಟೇಶ್ ತಂದೆ ನಟೇಶ್ ಚಕ್ರವರ್ತಿ, ತಾಯಿ ಭಾಗ್ಯ ಲಕ್ಷ್ಮಿ. ಇವರ ವಿದ್ಯಾಭ್ಯಾಸವೆಲ್ಲ ಶೃಂಗೇರಿಯಲ್ಲಿ ಜರುಗಿತು. ಉಡುಪಿಯ ಎನ್ ಎಂ ಎಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಿಂದ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ವಿದ್ಯಾಭ್ಯಾಸದ ಬಳಿಕ ಪ್ರಕಾಶ್ ಬೆಳವಾಡಿ ಅವರ ಗರಡಿಗೆ ಸೇರಿದ ನಭಾ ನಟೇಶ್ ಅವರ ನಿರ್ದೇಶನದ ನಾಟಕಗಳಲ್ಲಿ ಅಭಿನಯಿಸುವುದರ ಜೊತೆಗೆ ಮಾಡೆಲಿಂಗ್ ಅನ್ನು ಆರಂಭಿಸಿದರು.
ಭರತ ನಾಟ್ಯದಲ್ಲಿ ತರಬೇತಿ ಪಡೆದ ಇವರು ಶಾಲಾ ಕಾಲೇಜುಗಳ ನೃತ್ಯ ಸ್ಪರ್ಧೆಗಳಿಗೆ ನೃತ್ಯ ಸಂಯೋಜನೆಯನ್ನೂ ಸಹ ಮಾಡಿದ್ದರು. ಅಭಿನಯ ತರಂಗದ ಮೂಲಕ ನಟನಾ ಕ್ಷೇತ್ರಕ್ಕೆ ಸಂಬಂಧಿಸಿದ ತರಬೇತಿಗಳನ್ನು ಪಡೆದುಕೊಂಡರು. 2015ರಲ್ಲಿ ತಮ್ಮ ಹತ್ತೊಂಭತ್ತನೇ ವಯಸ್ಸಿಗೆ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ ನಭಾ ನಟೇಶ್ ಮೊದಲ ಚಿತ್ರಕ್ಕೇ ಕರುನಾಡ ಚಕ್ರವರ್ತಿ ಡಾ. ಶಿವರಾಜಕುಮಾರ್ ಅವರಿಗೆ ‘ವಜ್ರಕಾಯ’ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ಅದೃಷ್ಟದ ಬಾಗಿಲನ್ನು ತೆರೆದರು.ಶಿವರಾಜಕುಮಾರ್ ಎದುರಿಗೇ ಪ್ರಥಮ ಚಿತ್ರದಲ್ಲೇ ಉತ್ತಮ ಅಭಿನಯ ನೀಡಿದ ನಭಾ ನಟೇಶ್ ಜನರ ಅಷ್ಟೇ ಅಲ್ಲದೆ ವಿರ್ಮಶಕರ ಮೆಚ್ಚುಗೆಗೂ ಪಾತ್ರರಾದರು.
2018ರಲ್ಲಿ ತೆಲಗು ಚಿತ್ರ ರಂಗಕ್ಕೆ ಎಂಟ್ರಿ
2018ರಲ್ಲಿ ‘ನಾನು ದೋಚುಕುಂಡುವತೆ’ ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ಇವರು ಅಲ್ಲಿಯೂ ಜನರ ಮನಸೂರೆಗೊಂಡರು. 2020ರಲ್ಲಿ ಕೊಂಚ ವಿಫಲರಾದರೂ ಮುಂದೆ ಪುನಃ ಯಶಸ್ಸಿನತ್ತ ಹೆಜ್ಜೆ ಹಾಕಿದರು. ನಭಾ ನಟೇಶ್ ಅವರ ಸಹೋದರ ನಹೂಷ್ ಚಕ್ರವರ್ತಿ ಕೂಡ ಕನ್ನಡ ಚಿತ್ರರಂಗವನ್ನು ಪ್ರವೇಶಿಸುವ ತಯಾರಿಯಲ್ಲಿದ್ದಾರೆ.
ಅತ್ಯುತ್ತಮ ನಟನೆಗೆ ಹಲವು ಪ್ರಶಸ್ತಿ
ನಭಾ ನಟೇಶ್ ಸುಮಾರು ಹನ್ನೊಂದು ಚಿತ್ರಗಳಲ್ಲಿ ಅಭಿನಯಿಸಿದ್ದು 2016ರಲ್ಲಿ ಇವರ ಮೊದಲ ಚಿತ್ರ ವಜ್ರಕಾಯಕ್ಕೆ 63ನೇ ಫಿಲ್ಮ್ ಫೇರ್ ದಕ್ಷಿಣ ಭಾರತದ ಅತ್ಯುತ್ತಮ ನಟಿ ಪ್ರಶಸ್ತಿ, 2019ರಲ್ಲಿ ತೆಲುಗಿನ ‘ನಾನು ದೋಚುಕುಂಡುವತೆ’ ಚಿತ್ರಕ್ಕಾಗಿ ಎಂಟನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಆರಂಭಿಕ ಮಹಿಳೆ ಅತ್ಯುತ್ತಮ ನಟಿ ಪ್ರಶಸ್ತಿ, 2021ರಲ್ಲಿ ತೆಲುಗಿನಲ್ಲಿ ಸೋಲೋ ಬ್ರಾತ್ರುಕೆ ಸೋ ಬೆಟರ್ ಚಿತ್ರಕ್ಕಾಗಿ ಒಂಭತ್ತನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ತೆಲಗಲ್ಲಿ ಇಸ್ಮಾರ್ಟ್ ಶಂಕರ್ ಎಂಬ ಸಿನಿಮಾ ಒಳ್ಳೆ ಖ್ಯಾತಿ ತಂದು ಕೊಟ್ಟಿದೆ. ಈಗಾಗಲೇ ಹಲವು ಪ್ರಾಜೆಕ್ಟ್ ಅಲ್ಲಿ ನಭಾ ಕೆಲಸ ಮಾಡುತ್ತಿದ್ದಾರೆ.








