ಎಚ್ಚರ ಎಚ್ಚರ ಹೆಚ್ಚಾಗ್ತಿದೆ ಕಾಡಾನೆಗಳ ಹಾವಳಿ!
– E. T. F ಕಂಟ್ರೋಲ್ ರೂಮ್, ಅರಣ್ಯ ಇಲಾಖೆ ಹಾಸನದಿಂದ ಪ್ರಕಟಣೆ!
– ಗ್ರಾಮಸ್ಥರೇ ಎಚ್ಚರಿಕೆ, ತುರ್ತು ಸಹಾಯವಾಣಿ ಬಿಡುಗಡೆ
NAMMUR EXPRESS NEWS
ಹಾಸನ: ಸಕಲೇಶಪುರ ತಾಲ್ಲೂಕಿನ ಮೈಲಹಳ್ಳಿ ಎಸ್ಟೇಟ್ ಹಾಗೂ ನಂದಿವನ ಎಸ್ಟೇಟ್ ಉದಯವರ, ರಾಮಚಂದ್ರ ಅವರ ತೋಟ ಇಬ್ಬಡಿ ಶಾಂತಪುರ, ಕಲ್ಲರಲ್ಲಿ ಗ್ರಾಮದ ಎಬಿಸಿ ಎಸ್ಟೇಟ್ ಸುತ್ತಮುತ್ತ ಕಾಡಾನೆಗಳು ಕಂಡುಬರುತ್ತಿದೆ.
ಹೆತ್ತೂರು, ಯಸಳೂರು, ಹೋಬಳಿಯ
ಮೊದಲಮಕ್ಕಿ ಬೆಟ್ಟಕುಮಾರಿ, ಎಡಕುಮಾರಿ ಗ್ರಾಮದ ರೈಲ್ವೆ ಟನಲ್ ರೋಡ್, ಕೆಳ ಹಾಡ್ಯ ಗ್ರಾಮದ ಲೋಕೇಶ್ ಅವರ ಕಾಡು ಮತ್ತು ರಮೇಶ ಅವರ ತೋಟ, ಮೆಕ್ಕಿರ ಮನೆ ಗ್ರಾಮದ ಹಳೆದಿಣ್ಣೆ ಫಾರೆಸ್ಟ್, ಬಾಣಗೇರಿ ಬೆಟ್ಟ, ಮೆಕ್ಕಿರ ಮನೆ ಗ್ರಾಮದ ಶೆಟ್ಟಿ ಕಾಡು ಮತ್ತು ಮಠದ ಕಾಡು, ಬೋರನಮನೆ ಕಡಚಲು, ದೊಡ್ಡಗದ್ದೆ ಹೊರಟಿ ಗ್ರಾಮದ ಸುತ್ತಮುತ್ತ ಕಾಡಾನೆಗಳದ್ದೇ ಹಾವಳಿ.
ಬೇಲೂರು ತಾಲ್ಲೂಕಿನ ಕಾನಳ್ಳಿ ಫಾರೆಸ್ಟ್ , ಜಾಕನಹಳ್ಳಿ ಎಸ್ಟೇಟ್ ಚಾಕನಹಳ್ಳಿ ಮತ್ತು ಶಿರಗೂರ, ಲತೀಫ್ ಅವರ ಕಾಡು ಬಕ್ಕರವಳ್ಳಿ ಸುತ್ತಮುತ್ತ, ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ ಬೈಸೂರು ಫಾರೆಸ್ಟ್ ಸುತ್ತಮುತ್ತ ಕಾಡಾನೆಗಳ ಸಂಚಾರ ಕಂಡುಬಂದಿರುತ್ತವೆ.
ಆದ್ದರಿಂದ ಈ ಜಿಲ್ಲೆಯಲ್ಲಿನ ಗ್ರಾಮಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕಾಗಿ E. T. F. ಕಂಟ್ರೋಲ್ ರೂಮ್, ಅರಣ್ಯ ಇಲಾಖೆ ಹಾಸನ ಈ ಮೂಲಕ ವಿನಂತಿಕೊಂಡಿದೆ. ಹಾಗೂ ಈ ಸಂದರ್ಭದಲ್ಲಿ ತುರ್ತು ಸಹಾಯವಾಣಿ 9480817460ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








