ಕಣತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಸನ ಹೆಚ್ ಡಿ ಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ನೇತೃತ್ವದಲ್ಲಿ 12 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಆಲೂರು : ತಾಲ್ಲೂಕಿನ ಪಾಳ್ಯ ಹೋಬಳಿಯ ಕಣತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಸನ ಹೆಚ್ ಡಿ ಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ನೇತೃತ್ವದಲ್ಲಿ 12 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕಣತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷದ ಆಡಳಿತ ಮಂಡಳಿಗೆ ಹಾಸನ ಹೆಚ್ ಡಿ ಸಿಸಿ ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳಿ ಜಗದೀಶ್ ಬೆಂಬಲಿತ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಯಶವಂತ್
ಕಾರ್ಜುವಳ್ಳಿ ಸಾಮಾನ್ಯ ಕ್ಷೇತ್ರದಿಂದ,ಕಿರಣ್ ಕುಮಾರ್ ಯಳಗನಹಳ್ಳಿ ಸಾಮಾನ್ಯ ಕ್ಷೇತ್ರದಿಂದ,ಕೆ.ಆರ್. ಜಗತ್ ಕುಮಾರ್ ಕಣತೂರು ಸಾಮಾನ್ಯ ಕ್ಷೇತ್ರದಿಂದ,ಕೆ.ಡಿ.ನಿಂಗರಾಜು ಕಲ್ಲಹಳ್ಳಿ ಸಾಮಾನ್ಯ ಕ್ಷೇತ್ರದಿಂದ,ಗಿರೀಶ್ ಹೆಚ್.ಎಸ್.ಕಾಮತಿ ಸಾಮಾನ್ಯ ಕ್ಷೇತ್ರದಿಂದ,ಆರ್. ಮೇಲೇಗೌಡ ಲಕ್ಷ್ಮೀಪುರ ಹಿಂದುಳಿದ ವರ್ಗ(ಎ),ಕೆ. ಎಸ್.ರುದ್ರೇಶ್ ಕಾರ್ಜುವಳ್ಳಿ ಹಿಂದುಳಿದ ವರ್ಗ(ಬಿ),ಸವಿತಾ ಬಾವಸವಳ್ಳಿ ಮಹಿಳಾ ಕ್ಷೇತ್ರದಿಂದ,ಮಮತಾ ಇಮ್ಮಟಿಪುರ ಮಹಿಳಾ ಕ್ಷೇತ್ರದಿಂದ,ರಾಜಯ್ಯ ಯಳಗನಹಳ್ಳಿ ಪರಿಶಿಷ್ಟ ಜಾತಿ,ಸುರೇಶ್ ಕೊಡಗಿಹಳ್ಳಿ ಸಾಲಗಾರರಲ್ಲದ ಕ್ಷೇತ್ರದಿಂದ,ಎಸ್.ಎಸ್. ಮಲ್ಲಿಕಾರ್ಜುನ ಯಳಗನಹಳ್ಳಿ ಆಯ್ಕೆಯಾಗಿದ್ದಾರೆ
ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದ ಕಬ್ಬಿನಹಳ್ಳಿ ಜಗದೀಶ್ ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ ಪ್ರತಿಫಲವಾಗಿ ಸಂಘದ ವ್ಯಾಪ್ತಿಗೆ ಬರುವ ಗ್ರಾಮಗಳ ಮುಖಂಡರ ಮತ್ತು ಬೆಂಬಲಿಗರ ಸಹಕಾರದಿಂದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ನನಗೆ ಗೌರವ ಹೆಚ್ಚಿಸಿದ್ದೀರಿ ಎಂದ ಜಗದೀಶ್ ಸಹಕಾರ ಸಂಘದಲ್ಲಿ ರಾಜಕೀಯ ಬಳಸದೆ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನಿರ್ದೇಶಕರಿಗೆ ಸಲಹೆ ನೀಡಿದರು.
ಚುನಾವಣೆಯಲ್ಲಿ ಆಯ್ಕೆಯಾದ ನೂತನ ನಿರ್ದೇಶಕರನ್ನು ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.







