ಆಧುನಿಕತೆ ಗುಂಗಲ್ಲಿ ಹಿಂದಿನ ಮೌಲ್ಯಾದರ್ಶಗಳು ಕಣ್ಮರೆ
ವಿಶ್ರಾಂತಿ ಕುಲಪತಿ ಪ್ರೋ. ಹಿ.ಚಿ ಬೋರಲಿಂಗಯ್ಯ ಕಳವಳ | ಡಾ. ಹಂಪನಹಳ್ಳಿ ತಿಮ್ಮೇಗೌಡರ ೪ ಕೃತಿಗಳ ಲೋಕಾರ್ಪಣೆ
ಹಾಸನ: ಹಿಂದಿನ ಕಾಲದ ಮಹತ್ವದ ಮೌಲ್ಯಗಳು, ವಿಚಾರ ಧಾರೆಗಳನ್ನು ಹಿಂದಕ್ಕೆ ಸರಿಸುತ್ತಿರುವ ನಾವು ಆಧುನೀಕರಣ, ಜಾಗತೀಕರಣದ ಗುಂಗಲ್ಲಿ ಮುಳುಗುವುದು ಸರಿಯಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ವಿಶ್ರಾಂತಿ ಕುಲಪತಿ ಪ್ರೋ. ಹಿ.ಚಿ ಬೋರಲಿಂಗಯ್ಯ ಹೇಳಿದರು.
ನಗರದ ಗಂಧದ ಕೋಠಿ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ಜಾನಪದ ಮರಿಷತ್ತು ಹಾಗೂ ಮಹಿಳಾ ಕಾಲೇಜು ಸಹಯೋಗದಲ್ಲಿ ಏಪ್ಡಿಸಿದ್ದ ಸಮಾರಂಭದಲ್ಲಿ ಡಾ. ಹಂಪನಹಳ್ಳಿ ತಿಮ್ಮೇಗೌಡರು ರಚಿಸಿದ ದಾಸೋಕ್ಕಲಿಗರು, ದೇಶಿಯೊಳ್ ಚೆಲ್ವು, ಮರೆಯಾದ ಮಹನೀಯರು, ಗಾಂಧಿ ಮತ್ತು ಇತರ ಲೇಖನಗಳು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜಾಗತೀಕರಣ, ಆಧುನೀಕರಣ ಅಗತ್ಯವಿದ್ದರೂ ಗತ ಕಾಲದ ವಿಚಾರಧಾರೆಗಳು ಹಾಗೂ ಮೌಲ್ಯಗಳನ್ನು ಎಂದಿಗೂ ಮರೆಯಬಾರದು. ನಾವು ಏನನ್ನೇ ಸಾಧಿಸಿದರೂ ಅವುಗಳ ಪ್ರೇರಕ ಶಕ್ತಿಗಳಾಗಿ ಹಿಂದಿನವರು ಹಾಕಿಕೊಟ್ಟ ಹಾದಿಯನ್ನು ಬಿಡಲಾರದು. ಮೌಲ್ಯಗಳನ್ನು ಮರೆತರೆ ಜೀವನ ಸರಿದಾರಿಯಲ್ಲಿ ನಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಜಾನಪದ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಡಾ. ಹಂಪನಹಳ್ಳಿ ತಿಮ್ಮೇಗೌಡ ಅವರು ಅಧ್ಯಾಪಕರಾಗಿ ಅನೇಕ ವಿಷಯಗಳನ್ನು ತಮ್ಮ ಶಿಷ್ಯಂದಿರಿಗೆ ಹೇಳಿ ಕೊಟ್ಟಿದ್ದಾರೆ. ಜಾನಪದ ಪರಿಷತ್ತಿನ ಮೂಲಕ ಹತ್ತು ಹಲವು ಕಾರ್ಯಗಳನ್ನು ಮಾಡುತ್ತ ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ರಚಿಸಿದ ನಾಲ್ಕು ಕೃತಿಗಳು ಒಂದಕ್ಕಿAತ ಒಂದು ವಿಭಿನ್ನವಾಘಿದ್ದು ಅವುಗಳನ್ನು ಸಂತೋಷದಿAದ ಲೋಕಾರ್ಪಣೆ ಮಾಡಿದ್ದೇನೆ ಎಂದರು.
ಸದಕಾಲ ಚಿಂತನಾಮುಖಿಯಾಗಿ ಅತ್ಯುತ್ತಮವಾದ ಕೃತಿಯನ್ನು ಈ ನಾಡಿಗೆ ಕೊಡುತ್ತಾ ಬಂದಿರುವ ಡಾ.ತಿಮ್ಮೇಗೌಡರು ಸಮಾಜದಲ್ಲಿನ ಹಳೇ ಮೌಲ್ಯಗಳು, ಹಿಂದಿನವರ ವಿಚಾರಧಾರೆಗಳನ್ನು ಈಗಿನ ತಲೆಮಾರಿನವರಿಗೆ ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಗಾಂಧಿಯನ್ನು ಕೊಂದವರನ್ನು ಪೂಜಿಸಲು ಹೊರಟಿರುವ ನಾವು ಗಾಂಧಿ ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಗಾಂಧಿ ವಿಚಾರಧಾರೆಗಳನ್ನು ಕೆಲವರು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಿ.ಕೆ.ಮಂಜಯ್ಯ, ಹೇಮಗಂಗೋತ್ರಿ ಪ್ರಾಧ್ಯಾಪಕ ಡಾ.ಪುಟ್ಟಸ್ವಾಮಿ, ನಿವೃತ್ತ ಪ್ರಾಂಶುಪಾಲ ತಿರುಪತಿಹಳ್ಳಿ ಶಿವಶಂಕರಪ್ಪ, ಕೃತಿಕಾರ ಡಾ.ಹಂಪನಹಳ್ಳಿ ತಿಮ್ಮೇಗೌಡ, ಕರ್ನಾಟಕ ಜಾನಪದ ಪರಿಷತ್ತು ಗೌರವ ಸಲಹೆಗಾರ ಮೇಟಿಕೆರೆ ಹಿರಿಯಣ್ಣ, ಖಜಾಂಚಿ ಡಾ. ಐ.ಎಂ.ಮೋಹನ್, ಕಾರ್ಯದರ್ಶಿ ಬಿ.ಟಿ.ಮಾನವ, ಕಲಾವಿದ ಕುಮಾರ್ ಇತರರು ಭಾಗವಹಿಸಿದ್ದರು. ಆರಂಭದಲ್ಲಿ ವಿದ್ಯಾರ್ಥಿಗಳಾದ ಕೆ.ದೀಕ್ಷಿತ್ ಮತ್ತು ಸ್ಪಂದನಾ ಪ್ರಾರ್ಥಿಸಿದರು.







