ಒಂಟಿ ಸಲಗ ಸಾವು
ವಿದ್ಯುತ್ ಶಾಕ್ನಿಂದ ಮೃತಪಟ್ಟಿರುವ ಶಂಕೆ
ಸಕಲೇಶಪುರ: ದೈತ್ಯಾಕಾರದ ಸಲಗವೊಂದು ಅನುಮಾನಾಸ್ಪದವಾಗಿ
ಮೃತಪಟ್ಟಿರುವ ಘಟನೆ ತಾಲೂಕಿನ ಸುಳ್ಳಕ್ಕಿ-ಶಾಂತಪುರ ಗ್ರಾಮದ ಬಳಿ ನಡೆದಿದೆ.
ರಸ್ತೆಯಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದು ಸಲಗ ಸಾವನ್ನಪ್ಪಿದ್ದು, ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ವಿದ್ಯುತ್ ಕಂಬದಿಂದ ಕೇವಲ ಎರಡು ಅಡಿ ದೂರದಲ್ಲಿ ಸಲಗ ಸಾವನ್ನಪ್ಪಿದೆ.
ಸಲಗನ ಸಾವು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ವಿದ್ಯುತ್ ಶಾಕ್, ಗುಂಡೇಟು ಅಥವಾ ವಾಹನ ಡಿಕ್ಕಿಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಬೆಳ್ಳಂಬೆಳಿಗ್ಗೆ ಎರಡೂ ದಂತಗಳಿರುವ ಕಾಡಾನೆ ಮೃತಪಟ್ಟಿರುವುದನ್ನು ನೋಡಲು ಜನರು ಮುಗಿಬಿದಿದ್ದರು.
ಯಾರದೋ ನಿರ್ಲಕ್ಷ್ಯಕ್ಕೆ ಅಂದಾಜು ೧೮-೨೦ ವರ್ಷದ ಒಂಟಿಸಲಗ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯ ಇಲಾಖೆ, ವಿದ್ಯುತ್ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೋಟದಿಂದ ರಸ್ತೆಗೆ ದಾಟುವಾಗ ಸೊಂಡಿಲಿಗೆ ವಿದ್ಯುತ್ ತಂತಿ ತಗುಲಿ ನಂತರ ಸ್ಥಳದಲ್ಲೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಆರ್ಎಫ್ಒ ಹೇಮಂತ್ ಮತ್ತು ಅಧಿಕಾರಿಗಳು ಭೇಟಿ ನೀದ್ದರು. ಸಾವಿರ ಸುದ್ದಿ ಕೇಳಿ ಮಹಿಳೆಯರು, ಮಕ್ಕಳು ಆಗಮಿಸಿ ಪೂಜೆ ಸಲ್ಲಿಸಿದರು.








