ತೀರ್ಥಹಳ್ಳಿ ಪಟ್ಟಣದಲ್ಲಿ ಹೈವೇ ಕೆಲಸ ಶುರು!
– ತೀರ್ಥಹಳ್ಳಿ ಕೊಪ್ಪ ಸರ್ಕಸ್ ಇಂದ ಶಿವಮೊಗ್ಗವರೆಗೆ ಡಬಲ್ ರಸ್ತೆ
– ತಲೆ ಎತ್ತಲಿವೆ ನೂತನ ಕಟ್ಟಡಗಳು: ಪಟ್ಟಣಕ್ಕೆ ಹೊಸ ರಂಗು!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಕೊಪ್ಪ ವೃತ್ತದಿಂದ ಮಂಡಗದ್ದೆ, ನೆಲ್ಲಿಸರದ ಕ್ಯಾಂಪ್ ವರೆಗೆ ಇರುವ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ, ಉನ್ನತೀಕರಣ ಮತ್ತು ಚತುಷ್ಪಥ ನಿರ್ಮಾಣ ಕಾಮಗಾರಿ ಇದೀಗ ಶುರುವಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಜಾಗ ತೆರವು ಕೆಲಸ ಸಂಪೂರ್ಣ ಆಗಿದೆ. ಹಳೆ ಕಟ್ಟಡಗಳು ನೆಲ ಸಮವಾಗಿ ಹೊಸ ಕಟ್ಟಡಗಳು ನಿರ್ಮಾಣ ಆಗುತ್ತಿವೆ. ರಸ್ತೆಯ ಕಾಮಗಾರಿಯ ಟೆಂಡರ್ ಅನ್ನು ಚಿಕ್ಕಮಗಳೂರಿನ ಪ್ರಸಿದ್ಧ ನಿರ್ಮಾಣ ಸಂಸ್ಥೆಯಾದ ಎಸ್ಎಲ್ ವಿ ಅರ್ಥ್ ಮೂವರ್ಸ್ ಪಡೆದುಕೊಂಡಿದೆ. ಈಗಾಗಲೇ ಮಾರ್ಗದ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಂಡಿರುವ ಸ್ವತ್ತಿನ ಮಾಲೀಕರಿಗೆ ಸುಮಾರು 70 ಕೋಟಿ ರೂಪಾಯಿ ಪರಿಹಾರವನ್ನು ಸಹ ನೀಡಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.
ಕೆಲವು ಕಡೆ ಸಣ್ಣ ಪುಟ್ಟ ತಕರಾರು ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಹೊಸ ವರ್ಷಕ್ಕೆ ಹೆದ್ದಾರಿ ಒಂದು ಹಂತಕ್ಕೆ ಬರಲಿದೆ. ರಸ್ತೆ ಕಾಮಗಾರಿ ಗುತ್ತಿಗೆ ಒಪ್ಪಂದಗಳು 2023ರಲ್ಲೇ ಪೂರ್ಣಗೊಂಡಿದ್ದು, ಫಾರೆಸ್ಟ್ ಕ್ಲಿಯರೆನ್ಸ್ ಮತ್ತು ಕೆಲವು ಭಾಗಗಳಲ್ಲಿ ಮರಗಳ ತೆರವಿಗೆ ಅನುಮತಿ ಸಿಗದ ಹಿನ್ನೆಲೆಯಲ್ಲಿ ಕೆಲಸಗಳು ತಡವಾಗಿ ಆರಂಭವಾಗಿದೆ. ಕಳೆದ ತಿಂಗಳು ಎಲ್ಲಾ ಕ್ಲಿಯರೆನ್ಸ್ ಗಳು ಮುಗಿದ ಕಾರಣ ಗುತ್ತಿಗೆದಾರರು ಕಾಮಗಾರಿಯನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.
ತೀರ್ಥಹಳ್ಳಿಯಲ್ಲಿ ಮಾರ್ಚ್ 23ರ ಸೋಮವಾರದಂದು ಪೂರ್ಣ ಪ್ರಮಾಣದಲ್ಲಿ ಕೆಲಸಗಳು ಪ್ರಾರಂಭಗೊಳ್ಳಲಿದ್ದು, ಹೆದ್ದಾರಿ ಭೂಸ್ವಾಧೀನ ಪ್ರಾಧಿಕಾರ, ಹೆದ್ದಾರಿ ಇಲಾಖೆ, ಹೆದ್ದಾರಿಯ ಅಕ್ಕಪಕ್ಕದಲ್ಲಿ ಸ್ವತ್ತುಗಳಿರುವ ಮಾಲೀಕರಿಗೆ ಸ್ಥಳ ತೆರವುಗೊಳಿಸಲು ಅಂತಿಮ ಸೂಚನೆಗಳನ್ನು ನೀಡಲಾಗಿದೆ. ಹೀಗಾಗಿ ಪರಿಹಾರ ಮೊತ್ತವನ್ನು ಪಡೆದಿರುವ ಸ್ವತ್ತುಗಳ ಮಾಲೀಕರು ತಾಂತ್ರಿಕ ಕಾರಣ, ಕೌಟುಂಬಿಕ ವ್ಯಾಜ್ಯ, ಸರ್ಕಾರಿ ರಾಜ್ಯಗಳ ಹಿನ್ನೆಲೆಯಲ್ಲಿ ಪರಿಹಾರದ ಮೊತ್ತವನ್ನು ಪಡೆಯಲಾಗದವರೂ ಕೂಡ ತಮ್ಮ ಸ್ಥಳಗಳನ್ನು ತೆರೆವುಗೊಳಿಸಿ ಅಭಿವೃದ್ಧಿ ಕಾಮಗಾರಿಗೆ ಸಹಕಾರ ನೀಡಬೇಕೆಂದು ಇಲಾಖೆಯು ಮನವಿ ಮಾಡಿಕೊಂಡಿದೆ.
ತಲೆ ಎತ್ತಲಿವೆ ನೂತನ ಕಟ್ಟಡಗಳು: ಪಟ್ಟಣಕ್ಕೆ ಹೊಸ ರಂಗು!
ತೀರ್ಥಹಳ್ಳಿ ಕೊಪ್ಪ ಸರ್ಕಲ್ ಇಂದ ಕುಶಾವತಿವರೆಗೆ ಹಳೆಯ ಕಟ್ಟಡಗಳು ನೆಲ ಸಮ ಆಗಿವೆ. ಕೆಲವು ಪುನರ್ ನಿರ್ಮಾಣ ಆಗುತ್ತಿವೆ. ಜತೆಗೆ ಹೊಸ ಕಟ್ಟಡಗಳು ತಲೆ ಎತ್ತುತ್ತಿವೆ. ತೀರ್ಥಹಳ್ಳಿಗೆ ಹೊಸ ಕಳೆ ಬರಲಿದೆ. ಕೊಪ್ಪ ಸರ್ಕಲ್ ಅಲ್ಲಿ ಸಿಗ್ನಲ್ ಬರಲಿದೆ.








