ಅಂಗಡಿಗಳಲ್ಲಿ ಆಯುಧ ಪೂಜೆ ರಂಗು..!
– ಅಂಗಡಿಗಳಿಗೆ ಅಲಂಕಾರ, ವಿಶೇಷ ಪೂಜೆ
– ಕೆ. ಇ. ಬಿ ಸೇರಿ ಸರ್ಕಾರಿ ಕಚೇರಿಗಳಲ್ಲಿ ವಾಹನ ಪೂಜೆ
– ಹಳ್ಳಿ ಹಳ್ಳಿಯಲ್ಲೂ ಆಯುಧ ಪೂಜೆ ಸಡಗರ
NAMMUR EXPRESS NEWS
ತೀರ್ಥಹಳ್ಳಿ ತಾಲೂಕಿನ ತೀರ್ಥಹಳ್ಳಿ ಪಟ್ಟಣ ಹಾಗೂ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಅಂಗಡಿಗಳಲ್ಲಿ ವಿಶೇಷ ಪೂಜೆ ಮಾಡಿ ಸಿಬ್ಬಂದಿ ಎಲ್ಲಾ ಸಿಹಿ ಹಂಚಿಕೊಂಡರು.
ತೀರ್ಥಹಳ್ಳಿ ಪಟ್ಟಣದ ಕೊಪ್ಪ ಸರ್ಕಲ್ ಗುರು ವರ್ಕ್ಸ್ ಶಾಪ್, ಸೀಬಿನಕೆರೆ ಹೊಸ ಕೋರ್ಟ್ ಸಮೀಪ ಅಚ್ಚೂರ್ ಆಗ್ರೋ, ವಿನಾಯಕ ರೈಸ್ ಮಿಲ್ ಸೇರಿ ಅಂಗಡಿಗಳಲ್ಲಿ ಪೂಜೆ ಮಾಡಲಾಯಿತು. ಎಲ್ಲೆಡೆ ಸಂಭ್ರಮದ ಆಯುಧ ಪೂಜೆ ಕಂಡು ಬಂದಿತು.
ಪೊಲೀಸ್ ಠಾಣೆ, ಸರ್ಕಾರಿ ಕಚೇರಿಯಲ್ಲಿ ಆಯುಧ ಪೂಜೆ
ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ರಂಜಿತ್ ಅವರ ನೇತೃತ್ವದಲ್ಲಿ ವಾಹನ ಪೂಜೆ ಮಾಡಲಾಯಿತು. ಪೊಲೀಸ್ ಇಲಾಖೆ ವತಿಯಿಂದ ಇನ್ಸ್ಪೆಕ್ಟರ್ ಇಮ್ರಾನ್ ಬೇಗ್ ನೇತೃತ್ವದಲ್ಲಿ ತೀರ್ಥಹಳ್ಳಿ ರಥ ಬೀದಿ ಠಾಣೆಯಲ್ಲಿ ಆಯುಧ ಪೂಜೆ ಮಾಡಲಾಯಿತು. ಎಲ್ಲಾ ಸಿಬ್ಬಂದಿ ಇದ್ದರು.
ಕೆ. ಇ. ಬಿಯಲ್ಲಿ ವಿದ್ಯುತ್ ಉಪಕರಣಗಳಿಗೆಪೂಜೆ
ತೀರ್ಥಹಳ್ಳಿ ಮೆಸ್ಕಾಂ ಇಲಾಖೆಯಲ್ಲಿ ಸೊಪ್ಪುಗುಡ್ಡೆ ಕಚೇರಿ ಮತ್ತು ಬೆಟ್ಟಮಕ್ಕಿ, ಬೆಜ್ಜವಳ್ಳಿ, ಕಮ್ಮರಡಿ, ಕೋಣಂದೂರು ಸೇರಿ ಎಲ್ಲಾಕಚೇರಿಯಲ್ಲಿ ವಿದ್ಯುತ್ ಉಪಕರಣಗಳಿಗೆ ಪೂಜೆ ಮಾಡಲಾಯಿತು.








