ಚಿಕ್ಕಬಳ್ಳಾಪುರ: ಬಿಜೆಪಿ ಪಕ್ಷದ ಮೂವರು ಪ್ರಭಾವಿ ನಾಯಕರನ್ನು ಕೊಲ್ಲಲು ಯೋಜನೆ ಸಿದ್ಧಗೊಂಡಿದ್ದಂತಹ ಸತ್ಯ ಇದೀಗ ಬಯಲಾಗಿದೆ. ಟೆಲಿಗ್ರಾಂ ಗ್ರೂಪ್ ನಲ್ಲಿ ಇದರ ಕುರಿತು ಚರ್ಚೆ ನಡೆಸಲಾಗಿತ್ತು ಎನ್ನುವ ಮಾಹಿತಿ ಲಭಿಸಿದೆ. ಹಾಗಾದರೆ ಆ ಮೂವರು ನಾಯಕರು ಯಾರು ಎನ್ನುವ ಕುತೂಹಲ ಮತ್ತು ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಆದರೆ, ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮೊದಲೇ ಶಂಕಿತ ಉಗ್ರನೊಬ್ಬ ಪೊಲೀಸರ ಕೈಗೆ ಸಿಲುಕಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಭಯೋತ್ಪಾದನಾ ಚಟುವಟಿಕೆಗೆ ಸಂಬಂಧಿಸಿದಂತೆ ಸಂಚು ರೂಪಿಸಿದ ಬಾಪೂಜಿನಗರದ ನಿವಾಸಿ ಶಬ್ಬೀರ್ ಎನ್ನುವವನನ್ನು ಪೊಲೀಸರು ಬಂಧಿಸಿದ್ದಾರೆ. ಮಾಹಿತಿಯ ಪ್ರಕಾರ ಟೆಲಿಗ್ರಾಂ ನಲ್ಲಿ ಭಯೋತ್ಪಾದಕರ ಗುಂಪನ್ನು ರಚಿಸಿ, ಅದರಲ್ಲಿ ವಿಧ್ವಂಸಕ ಕೃತ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿ ಪಕ್ಷದ ಮೂವರು ನಾಯಕರನ್ನು ಮುಗಿಸುವ ಕುರಿತು ಅದರಲ್ಲಿಯೇ ಮಾತುಕತೆ ನಡೆಸಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಮುಸ್ಲಿಂ ವಿರೋಧಿಗಳನ್ನು ಮುಗಿಸಬೇಕು ಎಂದು ಚರ್ಚಿಸಿದ ಉಗ್ರರು ಬಸವಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ ಮತ್ತು ಪ್ರತಾಪ್ ಸಿಂಹ ಸೇರಿದಂತೆ ಹಲವರನ್ನು ಕೊಲೆಗೈಯ್ಯುವ ಹುನ್ನಾರ ನಡೆಸಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಶಬ್ಬೀರ್ ಹೊಸಕೋಟೆಯ ಇಬ್ಬರನ್ನು ಮತ್ತು ಹಾಸನದ ಒಬ್ಬರನ್ನು ತಮ್ಮ ಗುಂಪಿಗೆ ಸೇರಿಸಿದ್ದು, ಇನ್ನು ನಾಲ್ಕು ಜನರನ್ನು ಸೇರಿಸಬೇಕೆಂದು ಆಲೋಚಿಸಿದ್ದನು ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ. ಬಂಧಿತ ಶಬ್ಬೀರ್ ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಈ ಗುಂಪಿಗೆ ಸೇರ್ಪಡೆಗೊಂಡಿದ್ದು, ಪಿಯುಸಿಯಲ್ಲಿ ಫೇಲ್ ಆಗಿದ್ದು, ಗಾಂಜಾ ಸೇವನೆ ಕೂಡ ಮಾಡುತ್ತಿದ್ದ. ಈತನಿಗೆ ಗುಂಪಿನ ಅಡ್ಮಿನ್ ಆರು ತಿಂಗಳ ಕಾಲ ಗನ್ ತರಬೇತಿ ಕೊಡಿಸುವುದಾಗಿ ತಿಳಿಸಿದ್ದನು ಎನ್ನಲಾಗಿದೆ. ಅಲ್ಲದೆ ಶ್ರೀಮಂತ ವ್ಯಕ್ತಿಗಳನ್ನು ಅಪಹರಣ ಮಾಡಿ, ಹಣವನ್ನು ಹೊಂದಿಸಿ ಭಯೋತ್ಪಾದನಾ ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಧರಿಸಿದ್ದರು. ಇದೀಗ ಶಬ್ಬೀರ್ ವಿರುದ್ಧ ಬಿಎನ್ಎಸ್ 113ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಗುಂಪಿನಲ್ಲಿರುವ ಸದಸ್ಯರಿಗಾಗಿ ಪೊಲೀಸರು ದೇಶದ ಮೂಲೆ ಮೂಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ತೃತೀಯ ಲಿಂಗಿಗಳಿಂದ ಕಿರುಕುಳ; 112ಕ್ಕೆ ಕರೆ:
– ಹಣ ವಸೂಲಿ, ಕಿರಿಕಿರಿ ಮಾಡಿದ್ರೆ ಬರ್ತಾರೆ ಪೊಲೀಸರು!
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಭಾಗದಲ್ಲೂ ತೃತೀಯ ಲಿಂಗಿಗಳ ಕಿರುಕುಳ ಹೆಚ್ಚಳವಾಗಿದ್ದು, ಕಾನೂನುಬಾಹಿರ ಚಟುವಟಿಕೆ, ಹಣಕ್ಕಾಗಿ ಬೆದರಿಕೆ ಹಾಕುವುದು, ಸಾವಿರಾರು ರೂಪಾಯಿಗಳಷ್ಟು ಹಣವನ್ನು ವಸೂಲಿ ಮಾಡುವುದು ನಿರಂತರವಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ತೃತೀಯ ಲಿಂಗಿಗಳ ಕಿರುಕುಳದಿಂದ ಮುಕ್ತಿ ದೊರಕಿಸಲು ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯು ಖಡಕ್ ಮಾರ್ಗಸೂಚಿಯನ್ನು ಹೊರಡಿಸಿದೆ.
ಟ್ರಾಫಿಕ್ ಸಿಗ್ನಲ್ ಗಳು, ಮಾರುಕಟ್ಟೆಗಳು, ಸಮಾರಂಭಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಲವಂತವಾಗಿ ಹಣ ವಸೂಲಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಒಂದು ವೇಳೆ ತೃತೀಯ ಲಿಂಗಿಗಳು ಇದಕ್ಕೂ ಮೀರಿ ಹಣಕ್ಕಾಗಿ ಬಲವಂತಪಡಿಸಿದ್ದಲ್ಲಿ ಅಥವಾ ಬೆದರಿಕೆ ಹಾಕಿದ್ದಲ್ಲಿ ತಕ್ಷಣ ಪೊಲೀಸರು ಕ್ರಮವನ್ನು ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಠಾಣೆಗಳಿಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ. ಹಾಗೆಯೇ ತೃತಿಯ ಲಿಂಗಿಗಳಿಂದ ಕಿರುಕುಳಕ್ಕೆ ಒಳಗಾದವರು ತಕ್ಷಣ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಈ ಮೂಲಕ ಸೂಚಿಸಲಾಗಿದೆ.
ಪೋನ್ಪೇ ಮೂಲಕ ಲಂಚ: ಚೆಕ್ ಮಾಡಿದ ಲೋಕಾಯುಕ್ತರು!
– ಸರ್ಕಾರಿ ನೌಕರರ ಡಿಜಿಟಲ್ ಬ್ಯಾಂಕಿಂಗ್ ಕೂಡ ಪರಿಶೀಲನೆ
ಬೆಳಗಾವಿ:ಹೆಚ್ಚಿನ ಸಂಬಳ ಹಿನ್ನೆಲೆ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಉಪಲೋಕಾಯುಕ್ತರು ಒಂದು ಲಕ್ಷಕ್ಕಿಂತ ಹಣ ಹೇಗೆ ಬಂತು ಎಂದು ಫೋನ್ಪೇ ಚೆಕ್ ಮಾಡಿದ ಘಟನೆ ಚಿಕ್ಕೋಡಿ ಪಟ್ಟಣದಲ್ಲಿರುವ ಪುರಸಭೆ ಕಾರ್ಯಾಲಯದಲ್ಲಿ ನಡೆದಿದೆ.
ನನ್ನ ಮಗಳು ಹಣ ಹಾಕಿದ್ದು ಎಂದ ಅಧಿಕಾರಿ. ಇನ್ನೊಬ್ಬ ಅಧಿಕಾರಿ 1 ಲಕ್ಷಕ್ಕಿಂತ ಹಣ ಇನ್ಕಮಿಂಗ್. ಅಧಿಕಾರಿಗಳ ವಿರುದ್ಧ ಕೆಂಡಾಮಂಡಳಾದ ಉಪಲೋಕಾಯುಕ್ತ ವೀರಪ್ಪ ಎರಡು ವರ್ಷದ ಎಲ್ಲ ಅಧಿಕಾರಿಗಳ ವೇತನದ ಮಾಹಿತಿ ನೀಡಲು ಸೂಚಿಸಿದ್ದಾರೆ.
ರಾಜ್ಯದಲ್ಲಿ ಲಂಚ, ಭ್ರಷ್ಟಾಚಾರ ಹೆಚ್ಚಿದ್ದು ಈ ನಿಟ್ಟಿನಲ್ಲಿ ಲೋಕಾಯುಕ್ತರ ನಡೆಗೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗಿದೆ.







