ಭಾರತಕ್ಕೆ ಬೆಳ್ಳಿ ತಂದ ಕಾರ್ಕಳದ ಹುಡುಗ ಆಯುಶ್ ಶೆಟ್ಟಿ!
– ಸಿಎಂ ಸೇರಿ ಗಣ್ಯರಿಂದ ಅಭಿನಂದನೆಗಳ ಸುರಿಮಳೆ
– 61 ವರ್ಷಗಳ ಬಳಿಕ ಭಾರತಕ್ಕೆ ಬೆಳ್ಳಿ ಪದಕದ ಸಾಧನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ಕಾರ್ಕಳದ ಆಯುಶ್ ಶೆಟ್ಟಿಯವರು ಚೀನಾದ ನಿಂಗ್ಬೋದಲ್ಲಿ ನಡೆದ ಪಂದ್ಯಾಟದಲ್ಲಿ ವಿಶ್ವದ ನಂ.1 ಆಟಗಾರ ಕುನ್ಲಾವುತ್ ವಿಟಿಡ್ಸರ್ನ್ ಅವರನ್ನು ಭರ್ಜರಿಯಾಗಿ ಸೋಲಿಸಿ ಪೈನಲ್ ಪ್ರವೇಶಗೈದು 61 ವರ್ಷಗಳ ಬಳಿಕ ಭಾರತಕ್ಕೆ ಬೆಳ್ಳಿ ಪದಕ ಜಯಿಸಿದ ಸಾಧನೆಗೈದಿದ್ದಾರೆ. ಇದೀಗ ಎಲ್ಲೆಡೆ ಅವರಿಗೆ ಪ್ರಶಂಸೆ ವ್ಯಕ್ತವಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸೌಧದ ಕಚೇರಿಯಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ಕಾರ್ಕಳದ ಸಾಣೂರಿನ ಹೆಮ್ಮೆಯ ಕ್ರೀಡಾ ಪ್ರತಿಭೆ ಆಯುಶ್ ಶೆಟ್ಟಿ ಅವರಿಗೆ ಅಭಿನಂದಿಸಿ ಶಾಲು ಹಾಕಿ ಗೌರವಿಸಿದರು. ಮಾಜಿ ಸಚಿವರಾದ ವಿಜಯಕುಮಾರ್ ಸೊರಕೆ, ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ, ಯುವ ಮುಖಂಡ ಅಶ್ವಿತ್ ಜೈನ್, ಆಯುಶ್ ಶೆಟ್ಟಿಯವರ ತಂದೆ ರಾಮ ಪ್ರಕಾಶ್ ಶೆಟ್ಟಿ, ತಾಯಿ ಶ್ರೀಮತಿ ಶಾಲ್ಮಲಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.








