Author: NammurEXP

ತೀರ್ಥಹಳ್ಳಿ ಪಟ್ಟಣದಲ್ಲಿ 2ನೇ ಡಿಸಿಸಿ ಬ್ಯಾಂಕ್ ಶಾಖೆ ಶುರು – ಎಪಿಎಂಸಿಯಲ್ಲಿ ಬ್ಯಾಂಕ್ ಶಾಖೆ ಲೋಕಾರ್ಪಣೆ – ಸಹಕಾರ, ರಾಜಕೀಯ ನಾಯಕರ ಉಪಸ್ಥಿತಿ – ಮಂಜುನಾಥ ಗೌಡ, ವಿಜಯದೇವ್ ಅವರ ವಿಶೇಷ ಆಸಕ್ತಿ ಫಲ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ 36ನೇ ಶಾಖೆಯನ್ನು ಫೆಬ್ರವರಿ 5ರ ಗುರುವಾರದಂದು ತೀರ್ಥಹಳ್ಳಿಯ ಎಪಿಎಂಸಿ ಪ್ರಾಂಗಣದಲ್ಲಿ ಲೋಕಾರ್ಪಣೆಗೊಳಿಸಲಾಯಿತು ಉದ್ಘಾಟನಾ ಸಮಾರಂಭದಲ್ಲಿ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ ಗೌಡ, ಶಾಸಕ ಆರಗ ಜ್ಞಾನೇಂದ್ರ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವಿಜಯದೇವ್, ಪರಮೇಶ್, ಡಿಸಿಸಿ ಬ್ಯಾಂಕ್ ಎಂಡಿ ರಾಜೇಂದ್ರ ರೆಡ್ಡಿ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಪ್ರಮುಖರಾದ ಮಹಾಬಲೇಶ್ವರ್ ಹೆಗಡೆ, ಪ್ರಭಾಕರ್ ಹೆಗ್ಡೆ, ಸುಷ್ಮಾ ಸಂಜಯ್, ಅಜಿತ್, ರೇವತಿ ಅನಂತಮೂರ್ತಿ, ಶಿವಮೊಗ್ಗ, ತೀರ್ಥಹಳ್ಳಿ ಡಿಸಿಸಿ ಬ್ಯಾಂಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಡಿಸಿಸಿ ಬ್ಯಾಂಕ್ ವತಿಯಿಂದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಗೌರವಿಸಲಾಯಿತು. ಸಾಲೂರು, ಕಸಬಾ,…

Read More

ಕರಾವಳಿ ಟಾಪ್ ನ್ಯೂಸ್ • ಉಡುಪಿ: ನಡುರಸ್ತೆಯಲ್ಲಿ ಪಟಾಕಿ ಸಿಡಿಸಿ ಹುಚ್ಚಾಟ • ಮಂಗಳೂರು: ಎರಡು ತಿಂಗಳಿನಿಂದ ನಾಪತ್ತೆಯಾಗಿರುವ ವ್ಯಕ್ತಿ • ಪುತ್ತೂರು: ಮಾನಹಾನಿ ಮತ್ತು ಬೆದರಿಕೆ; ಪ್ರತಿಭಾ ಕುಳಾಯಿಗೆ ನೋಟಿಸ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಉಡುಪಿ: ನಡುರಸ್ತೆಯಲ್ಲಿ ಪಟಾಕಿ ಸಿಡಿಸಿ ಹುಚ್ಚಾಟ ಉಡುಪಿ: ಕೇರಳದಿಂದ ಪ್ರವಾಸಕ್ಕೆಂದು ಎರಡು ಬಸ್ ಗಳಲ್ಲಿ ಬಂದಿದ್ದ ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸಿದ ಘಟನೆ, ಹೆಜಮಾಡಿ ಟೋಲ್ ಗೇಟ್ ಬಳಿ ನಡೆದಿದೆ. ನಡುರಸ್ತೆಯಲ್ಲಿ ಕುಣಿದು, ಪಟಾಕಿ ಸಿಡಿಸಿ ಬೇಕಾಬಿಟ್ಟಿಯಾಗಿ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. • ಮಂಗಳೂರು: ಎರಡು ತಿಂಗಳಿನಿಂದ ನಾಪತ್ತೆಯಾಗಿರುವ ವ್ಯಕ್ತಿ ಮಂಗಳೂರು: ಸುರೇಶ್ ಎನ್ನುವ ವ್ಯಕ್ತಿಯು ಕಳೆದೆರಡು ತಿಂಗಳ ಹಿಂದೆ ಮನೆಯಿಂದ ತೆರಳಿದ್ದು, ಮರಳಿ ಬಾರದೆ ನಾಪತ್ತೆಯಾಗಿರುವ ಘಟನೆ, ಕೋಡಿಕಲ್ ನಲ್ಲಿ ನಡೆದಿದೆ. ನವೆಂಬರ್ 25ರಂದು ಬೆಳಿಗ್ಗೆ 9.30 ರ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದ ಸುರೇಶ್, ನವೆಂಬರ್…

Read More

ಅಡಿಕೆ ಕಥೆ ಮುಗಿಯಿತಾ..?..ಮುಂದೇನು..? – ಭಾರತದಲ್ಲಿ ಪಾನ್ ಮಸಾಲಾ ಬ್ಯಾನ್‌ ಸಾಧ್ಯತೆ – ಇತ್ತ ಅಡಿಕೆಗೆ ರೋಗ ಹಿನ್ನೆಲೆ ಅಡಿಕೆ ಮರಗಳ ಸಾವು ಮಲೆನಾಡು/ ಕರಾವಳಿ: ವಿಶ್ವ ಅರೋಗ್ಯ ಸಂಸ್ಥೆ ಇತ್ತೀಚಿನ ಅಧ್ಯಯನದ ಪ್ರಕಾರ ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಕಣಗಳು ಪತ್ತೆಯಾದ ಕಾರಣ ಅಡಿಕೆ ನಿಷೇಧ ಮಾಡುವ ಬಗ್ಗೆ ಅನುಮಾನ ಹೆಚ್ಚಿದೆ. ಇದರಿಂದ ಬೆಳಗಾರರ ಬದುಕು ತೂಗುಕತ್ತಿಯಲ್ಲಿ ನಿಂತಿದೆ. ಅಧ್ಯಯನವಾಗಿ ನಿಷೇಧ ಹೇರದೆ ಇದ್ದರೆ ರೈತರು ಸೇಫ್. ಇಲ್ಲವಾದಲ್ಲಿ ರೈತರ ಬದುಕು ಬೀದಿಗೆ ಬೀಳಲಿದೆ. ಈ ಬಗ್ಗೆ ಅಡಿಕೆ ಸಂಶೋಧನಾ ಕೇಂದ್ರಗಳು, ಜನ ನಾಯಕರು ಗಮನಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ 10 ವರ್ಷದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಿಕೆ ಮರ ಸಂಪೂರ್ಣ ಹೋಗುತ್ತಿದೆ. ಇನ್ನು ಮರ ಇದ್ದರು ಫಸಲು ಇಲ್ಲವಾಗಿದೆ. ಎಲೆಚುಕ್ಕಿ, ಹಳದಿ, ಕೊಳೆ ರೋಗಕ್ಕೆ ತುತ್ತಾಗಿ ರೈತರು ಲಕ್ಷ ಲಕ್ಷ ಹಣ ಸಾಲ ಮಾಡಿ ಅಡಿಕೆ ತೋಟ ಮಾಡಿದ್ದು ಈಗ ಪ್ರಯೋಜನಕ್ಕೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕೃಷಿ ದೇಶದ…

Read More

•ತೀರ್ಥಹಳ್ಳಿ: ಪಿಯು ಕಾಲೇಜುಗಳ ಉಪನ್ಯಾಸಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಎಸ್.ಎಂ.ಜಗದೀಶ್, ಕಾರ್ಯಾಧ್ಯಕ್ಷರಾಗಿ ಶ್ರೀಧರಮೂರ್ತಿ ಎಂ.ಎನ್, ಕಾರ್ಯದರ್ಶಿಗಳಾಗಿ ಸುಬ್ರಮಣ್ಯ ಕೆ.ಟಿ, ಖಜಾಂಚಿಯಾಗಿ ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಪ್ರವೀಣ್ ಡಿ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಸಭೆಯು ಕಳೆದ ಕೆಲವು ದಿನಗಳ ಹಿಂದೆ ಸಂಘದ ಅಧ್ಯಕ್ಷರಾದ ಯೋಗೀಶ್.ಎಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೈ.ಎಂ.ಸುಧಾ, ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಫ್.ಕುಟ್ರಿ, ಬಡ್ತಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರಾದ ಘನಶಾಮ್, ಉಪನ್ಯಾಸಕರಾದ ಹಾಲಪ್ಪ ಮತ್ತು ದಿನಕರ್ ಅವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಉಪನ್ಯಾಸಕರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ನೂತನ ಅಧ್ಯಕ್ಷರಾಗಿ ತೀರ್ಥಹಳ್ಳಿಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಸ್.ಎಂ.ಜಗದೀಶ್, ಕಾರ್ಯಾಧ್ಯಕ್ಷರಾಗಿ ಬಸವಾನಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀಧರಮೂರ್ತಿ ಎಂ.ಎನ್, ಕಾರ್ಯದರ್ಶಿಗಳಾಗಿ ಆರಗ ಪದವಿ ಪೂರ್ವ ಕಾಲೇಜಿನ…

Read More

ಟಾಪ್ ನ್ಯೂಸ್ ಶಿವಮೊಗ್ಗ ಜಿಲ್ಲೆ ಐಷಾರಾಮಿ ಕಾರು ವೇಗಕ್ಕೆ ಮಹಿಳೆ ಬಲಿ! – ಮೇಗರವಳ್ಳಿಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಬಿಎಂಡಬ್ಲ್ಯೂ ಕಾರು – ಸಾಗರ: ಕಾಗೋಡು ತಿಮ್ಮಪ್ಪ ಕುಸಿದು ಬಿದ್ದು ಅಸ್ವಸ್ಥ: ಚೇತರಿಕೆ – ತೀರ್ಥಹಳ್ಳಿ: ಅನಾಥಾಶ್ರಮದ ಹೆಸರಿನಲ್ಲಿ ಕಳ್ಳತನ..!? – ಭದ್ರಾವತಿ: ತಹಶೀಲ್ದಾರ್ ವಿರುದ್ಧ ಡೇಟ್ ನೋಟ್ ಬರೆದು ನದಿಗೆ ಹಾರಿದ ಸಿಬ್ಬಂದಿ!? – ಶಿವಮೊಗ್ಗ: ಜ್ಯೋತಿಷಿ ಜತೆ ಲವ್: ಓರ್ವನ ಕೊಲೆ ಮಾಡಿದ ಜೋಡಿ ಹಕ್ಕಿ!? ತೀರ್ಥಹಳ್ಳಿ: ಆಗುಂಬೆಯಿಂದ ಶಿವಮೊಗ್ಗ ರಸ್ತೆ ಇದೀಗ ಸಾವಿನ ರಸ್ತೆಯಾಗಿ ಪರಿಣಮಿಸುತ್ತಿದೆ. ಈಗಾಗಲೇ ಒಂದು ತಿಂಗಳಲ್ಲಿ 5ಕ್ಕೂ ಹೆಚ್ಚು ಮಂದಿ ಬಲಿ ಆಗಿದ್ದಾರೆ. ಇದೀಗ ರಸ್ತೆ ಬದಿ ನಿಂತಿದ್ದ ಕಾರಿಗೆ ಬಿಎಂಡಬ್ಲ್ಯೂಕಾರು ಡಿಕ್ಕಿಯಾದ ಪರಿಣಾಮ ಕಾರಿನೊಳಗಿದ್ದ ಮಹಿಳೆ ಮೃತಪಟ್ಟ ಘಟನೆ ಮೇಗರವಳ್ಳಿಯಲ್ಲಿ ನಡೆದಿದೆ. ಮೇಗರವಳ್ಳಿಯ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ಅರ್ಚಕರಾದ ಅಶೋಕ ಜೋಗಿ ಮತ್ತು ಅವರ ಪತ್ನಿ ಮಲ್ಲಿಕಾ ಅಶೋಕ್ ಜೋಗಿ ಮಂಗಳವಾರ ಬೆಳಿಗ್ಗೆ ತೀವ್ರವಾಗಿ ಗಾಯಗೊಂಡಿದ್ದರು. ಇಬ್ಬರನ್ನು ಮಣಿಪಾಲ ಆಸ್ಪತ್ರೆಗೆ…

Read More

ವಿಶ್ವ ಕ್ಯಾನ್ಸರ್ ದಿನ ಜಾಗೃತಿ ವಿಶೇಷ ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಹೆಚ್ಚಾಗುತ್ತಿದೆ..! – ಗರ್ಭಕಂಠದ ಕ್ಯಾನ್ಸರ್ ಗೆ ಕಾರಣಗಳೇನು… ಚಿಕಿತ್ಸೆ ಏನು? – ಮಹಿಳೆಯರು ಜಾಗೃತಿ ಮಾಡಬೇಕಾದ್ದು ಏನು? ವಿಶೇಷ ಲೇಖನ:ಡಾ. ನಿವೇದಿತಾ ಹೆಗಡೆ ಸ್ತ್ರೀ ರೋಗ, ಪ್ರಸೂತಿ ತಜ್ಞರು ಪ್ರತಿ ವರ್ಷ ಫೆಬ್ರವರಿ 4ರಂದು ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಒಂದೊಂದು ಧ್ಯೇಯ ವಾಕ್ಯವನ್ನು ಇಟ್ಟುಕೊಂಡು, ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿರುತ್ತದೆ. ಅದೇ ರೀತಿ ಈ ವರ್ಷದ ಧ್ಯೇಯ ವಾಕ್ಯವು united by unique ಎನ್ನುವುದಾಗಿದೆ.‌ ಕ್ಯಾನ್ಸರ್ ರೋಗಿಗಳಿಗೆ ವೈಯಕ್ತಿಕಗೊಳಿಸಿದ ಮತ್ತು ರೋಗಿ ಕೇಂದ್ರಿತ ಆರೈಕೆಯನ್ನು ನೀಡಬೇಕೆಂಬುದು ಈ ಧ್ಯೇಯ ವಾಕ್ಯದ ಉದ್ದೇಶವಾಗಿದೆ. ಕ್ಯಾನ್ಸರ್ ಬಗೆಗೆ ಜನರಲ್ಲಿ ಭಯ ಮತ್ತು ಅಪನಂಬಿಕೆಯೇ ಹೆಚ್ಚಾಗಿ ಕಂಡುಬರುತ್ತಿದೆ. ಇನ್ನು ಮಹಿಳೆಯರಿಗೆ ಸಂಬಂಧಿಸಿದಂತೆ ಸ್ತನದ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಎರಡು ಸಮಸ್ಯೆಗಳು ಕ್ಯಾನ್ಸರ್ ಆಗಿ ಪರಿವರ್ತನೆಗೊಳ್ಳುವ ಮೊದಲೇ ಅದನ್ನು…

Read More

ಕರಾವಳಿ ಟಾಪ್ ನ್ಯೂಸ್ •ಪುತ್ತೂರು: ಮೇಜು, ಕುರ್ಚಿ, ವಾಹನಗಳನ್ನು ಕಚ್ಚಿ ನಾಯಿ ಸಾವು • ಕುಂದಾಪುರ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು • ಬಂಟ್ವಾಳ: ಮನೆಗೆ ತಗುಲಿದ ಬೆಂಕಿ; ಲಕ್ಷಾಂತರ ರೂಪಾಯಿ ಹಾನಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಪುತ್ತೂರು: ಮೇಜು, ಕುರ್ಚಿ, ವಾಹನಗಳನ್ನು ಕಚ್ಚಿ ನಾಯಿ ಸಾವು ಪುತ್ತೂರು: ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿ ಮತ್ತು ಹುಚ್ಚು ನಾಯಿಗಳ ಹಾವಳಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿಯೇ ಅವು ಎಲ್ಲೆಂದರಲ್ಲಿ ಸಾವನ್ನಪ್ಪುವ ಘಟನೆ ನಡೆಯುತ್ತಿರುವುದು ಸ್ಥಳೀಯರಿಗೆ ಮತ್ತಷ್ಟು ತಲೆ ನೋವಾಗಿ ಪರಿಣಮಿಸಿದೆ. ಬೀದಿ ನಾಯಿ ಮತ್ತು ಹುಚ್ಚು ನಾಯಿಗಳ ಕಡಿತದಿಂದ ಹಲವರು ಗಾಯಗೊಂಡ ವರದಿಗಳು ಸಾಕಷ್ಟು ಕೇಳಿಬರುತ್ತಿರುವ ಬೆನ್ನಲ್ಲೇ ಹೊಸ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಳೆದೆರಡು ದಿನಗಳ ಹಿಂದೆ ನೆ.ಮೂಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ಹುಚ್ಚುನಾಯಿಯೊಂದು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ಕಚ್ಚಿ ಬಳಿಕ ಜೀಪಿಗೆ ಕಚ್ಚಿದೆ. ಅಲ್ಲಿಂದ ತೆರಳಿದ ನಾಯಿಯು ಅಂಗಡಿಯೊಂದರೊಳಗೆ ನುಗ್ಗಿ ಅಲ್ಲಿದ್ದ ಮೇಜು, ಕುರ್ಚಿ ಕಚ್ಚಿದ ನಂತರ ಸ್ಥಳದಲ್ಲೇ ಸಾವನ್ನಪ್ಪಿದ…

Read More

ಮಳೆ ಬಿಡುತ್ತಲೇ ಮರಳು ಮಾಫಿಯಾ ಎಂಟ್ರಿ! – ಹಳ್ಳ, ನದಿ ಬಗೆಯಲು ಶುರು ಮಾಡಿದ ಮರಳು ಕಳ್ಳರು – ಗಣಿ, ಕಂದಾಯ, ಪೊಲೀಸ್, ಅರಣ್ಯ ಇಲಾಖೆ ನಿದ್ರೆಯಲ್ಲಿ.. ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿ, ಹೊಸನಗರ, ಕೊಪ್ಪ ತಾಲೂಕು ಸೇರಿ ಮಲೆನಾಡಲ್ಲಿ ಮರಳು ಮಾಫಿಯಾ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಹಳ್ಳ, ನದಿ ಪಾತ್ರಗಳಲ್ಲಿ ಮರಳು ಬಗೆಯಲು ಪರಿಸರ ನಾಶ ಮಾಡಲಾಗುತ್ತಿದೆ. ಜಲಚರ, ಪ್ರಾಣಿ ಪಕ್ಷಿ ಸಂಕುಲ ಅವನತಿಯತ್ತ ಸಾಗುತ್ತಿದೆ. ತುಂಗಾ, ಮಾಲತಿ, ಕುಶಾವತಿ ನದಿಗಳ ಒಡಲನ್ನು ಪ್ರತಿದಿನ ಅಗೆಯಲಾಗುತ್ತಿದೆ. ಅಲ್ಲದೆ ಹಳ್ಳಗಳನ್ನು ಈ ಮರಳು ಕಳ್ಳರು ಬಿಡುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಮಾಲತಿ ನದಿ ತೀರದ ಬಗ್ಗೋಡಿಗೆ, ಆಂದೀನಿ, ಕುಂದಾ, ಅರೆಹಳ್ಳಿ, ಮಳಲೂರು, ಹೆರಬೈಲು, ಜಾವಗಲ್, ಚಂಗಾರು, ತುಂಗಾ ನದಿ ತೀರದ ಹುಣಸವಳ್ಳಿ, ತೀರ್ಥಮತ್ತೂರು, ಬಸವಾನಿ, ಮಹಿಷಿ, ದಬ್ಬಣಗದ್ದೆ, ಹೊಳೆಕೊಪ್ಪ, ಕುಶಾವತಿ ನದಿ, ಗೋಪಿನಾಥ ಹಳ್ಳದ ತೀರದ ಆರಗ, ಹಿರೇಸರ, ತುಡಾನ್ ಕಲ್, ಶಿರುಪತಿ, ನೆರಟೂರು ಮುಂತಾದ…

Read More

ಇನ್ನು ಮುಂದೆ ಟ್ರಾಫಿಕ್ ನಿಯಮ ಇನ್ನಷ್ಟು ಕಠಿಣ! – ಸಂಚಾರ ನಿಯಮ ಮರು ಉಲ್ಲಂಘಿಸುವ ಚಾಲಕರಿಗೆ ಭಾರೀ ದಂಡ – 5 ಬಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಲೈಸನ್ಸ್ ರದ್ದು – ಏನೇನು ಹೊಸ ನಿಯಮ..? ಯಾವಾಗ ಜಾರಿ…? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: ರಸ್ತೆ ಅಪಘಾತಗಳನ್ನು ನಿಯಂತ್ರಿಸಿ ಸಾರ್ವಜನಿಕರ ಜೀವ ರಕ್ಷಣೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ಮತ್ತು ಸಂಚಾರ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸಿದೆ. ಸಂಚಾರ ನಿಯಮಗಳನ್ನು ಮರುಮರು ಉಲ್ಲಂಘಿಸುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸ್ಪಷ್ಟಪಡಿಸಿದೆ. ಹೊಸ ನಿಯಮಗಳ ಪ್ರಕಾರ, ಒಂದು ವರ್ಷದ ಅವಧಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಚಾಲಕರ ಚಾಲನಾ ಪರವಾನಗಿಯನ್ನು ಅಮಾನತುಗೊಳಿಸುವ ವ್ಯವಸ್ಥೆ ಜಾರಿಯಾಗಲಿದೆ. ಇದರಿಂದ ಅಜಾಗರೂಕ ಚಾಲನೆ, ಅತಿವೇಗ, ಮದ್ಯಪಾನ ಮಾಡಿ ವಾಹನ ಚಾಲನೆ, ಹೆಲ್ಕೆಟ್ ಅಥವಾ ಸೀಟ್‌ಬೆಲ್ಟ್ ಧರಿಸದಿರುವಂತಹ ಅಪಾಯಕಾರಿ…

Read More