BREAKING NEWS
ಸ್ಪೀಕರ್ ಪೀಠಕ್ಕೆ ಅಗೌರವ – ಸದನದಿಂದ 18 ಬಿಜೆಪಿ ಶಾಸಕರ ಅಮಾನತು!!
* ಮುಸ್ಲಿಂ ಬಿಲ್ ವಿರೋಧಿಸಿ ಸದಸ್ಯರಿಂದ ಧರಣಿ
* ಅಮಾನತುಗೊಂಡ 18 ಶಾಸಕರ ಪಟ್ಟಿ ಇಲ್ಲಿದೆ
NAMMUR EXPRESS NEWS
ಬೆಂಗಳೂರು : ಭೋಜನ ವಿರಾಮದ ಬಳಿಕ ವಿಧಾನಸಭೆ ಕಲಾಪ ಪುನಾರಂಭವಾಯ್ತು ಆದ್ರೆ ಸದನದಲ್ಲಿ ಬಿಜೆಪಿ ಜೆಡಿಎಸ್ ಸದಸ್ಯರಿಂದ ಧರಣಿ ಮುಂದುವರೆಸಿದರು. ಹನಿಟ್ರ್ಯಾಪ್ ಪ್ರಕರಣ ವನ್ನು ಸಿಬಿಐಗೆ ವಹಿಸಬೇಕು ಮತ್ತು ಮುಸ್ಲಿಂ ಬಿಲ್ ವಿರೋಧಿಸಿ ಸದಸ್ಯರಿಂದ ಧರಣಿ ಮುಂದುವರೆಸಿದರು.
ಕೇಸರಿ ಹಾಗೂ ನೀಲಿ ಬಣ್ಣದ ಶಾಲು ಧರಿಸಿ ದಲಿತರಿಗೆ ಅನ್ಯಾಯ, ಅಂಬೇಡ್ಕರ್ ಗೆ ಅಪಮಾನ ಹಾಗೂ ದಲಿತ ಸಚಿವ ಕೆ ಎನ್ ರಾಜಣ್ಣಗೆ ಅನ್ಯಾಯ ಮಾಡಲಾಗ್ತಿದೆ ಎಂದು ನೀಲಿ ಬಣ್ಣದ ಶಾಲು ಧರಿಸಿ ಹೋರಾಟ ನಡೆಸಿದರು. ಇದೇ ವೇಳೆ ಸ್ಪೀಕರ್ ಯು.ಟಿ.ಖಾದರ್ ಈ ಸದನದ ಪಾವಿತ್ರ್ಯತೆ ಕಾಪಾಡಬೇಕು ನೀವು, ಯು.ಟಿ.ಖಾದರ್ ಗೆ ಅಪಮಾನ ಮಾಡಿ ಆದರೆ ಈ ಪೀಠಕ್ಕೆ ಅಪಮಾನ ನಾವು ಸಹಿಸಲ್ಲ, ಸ್ಪೀಕರ್ ಪೀಠದ ಮೇಲೆ ಕಾಗದ ಎಸೆದಿದ್ದಾರೆ ಇದನ್ನ ಯಾರೂ ಸಹಿಸುವುದಿಲ್ಲ.
ಇದು ಪೀಠಕ್ಕೆ ತೋರಿದ ಅಗೌರವ ಹೀಗಾಗಿ ಸದನದಿಂದ 18 ಬಿಜೆಪಿ ಶಾಸಕರನ್ನ 6 ತಿಂಗಳುಗಳ ಕಾಲ ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಘೋಷಿಸಿದರು.
1- ದೊಡ್ಡಣ್ಣ ಗೌಡ ಪಾಟೀಲ್
2- ಸಿ.ಕೆ ರಾಮಮೂರ್ತಿ
3- ಅಶ್ವತ್ಥ ನಾರಾಯಣ
4- ಎಸ್.ಆರ್ ವಿಶ್ವನಾಥ್
5 – ಭೈರತಿ ಬಸವರಾಜ
6- ಎಂ.ಆರ್ ಪಾಟೀಲ್
7- ಚನ್ನಬಸಪ್ಪ
8- ಬಿ. ಸುರೇಶ್ ಗೌಡ
9- ಉಮನಾಥ್ ಕೋಟ್ಯಾನ್
10- ಶರಣು ಸಲಗಾರ್
11- ಶೈಲೇಂದ್ರ ಬೆಲ್ದಾಳೆ
12- ಯಶಪಾಲ್ ಸುವರ್ಣ
13- ಹರೀಶ್ ಬಿ.ಪಿ
14- ಡಾ. ಭರತ್ ಶೆಟ್ಟಿ
15- ಮುನಿರತ್ನ
16- ಬಸವರಾಜ ಮತ್ತಿಮೋಡ್
17 -ಧೀರಜ್ ಮುನಿರಾಜು
18- ಡಾ. ಚಂದ್ರು ಲಮಾಣಿ
ಇವರೆಲ್ಲ 6 ತಿಂಗಳವರೆಗೆ ಸದನಕ್ಕೆ ಬರುವಂತಿಲ್ಲ ಎಂದು ಶಾಸಕರನ್ನ ಅಮಾನತು ಮಾಡಿದ ಸ್ಪೀಕರ್.







