ನವದೆಹಲಿ: ನವದೆಹಲಿಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಇಂದ್ರಪ್ರಸ್ಥ ಚಾತುರ್ಮಾಸ ವ್ರತವನ್ನು ಕೈಗೊಂಡಿದ್ದು, ಅದರ ಸಮಾರೋಪವು ಮಂಗಳವಾರದಂದು ನೆರವೇರಿತು. ಈ ಹಿನ್ನೆಲೆಯಲ್ಲಿ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು 2೦31ರಲ್ಲಿ ನಡೆಯಲಿರುವ ಶ್ರೀವಿಶ್ವೇಶತೀರ್ಥ ಶ್ರೀಪಾದರ ಜನ್ಮಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಐದು ವರ್ಷಗಳ ಯೋಜನೆಯ ಲಾಂಛನವನ್ನು ಅನಾವರಣಗೊಳಿಸಿದರು. ಇದಕ್ಕೆ ಪ್ರತಿಯಾಗಿ ಶ್ರೀಗಳು ನರೇಂದ್ರ ಮೋದಿ ಅವರಿಗೆ ಕರ್ನಾಟಕದ ಪ್ರಧಾನ ಕಲೆಯಾದ ಯಕ್ಷಗಾನದ ರಾಜವೇಷದ ಕಿರೀಟವನ್ನು ತೊಡಿಸಿ ಗೌರವವನ್ನು ಅರ್ಪಿಸಿದರು. ಇದರೊಂದಿಗೆ ಶಾಲು, ಚಿನ್ನದ ಲೇಪನವುಳ್ಳ ಕಾಳಿಯ ಕೃಷ್ಣನ ವಿಗ್ರಹ, ಹಣ್ಣುಗಳು, ಮಂತ್ರಾಕ್ಷತೆಯನ್ನು, ಜೊತೆಗೆ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ವೇದವ್ಯಾಸ ಗುರುಕುಲದಲ್ಲಿ ಹಮ್ಮಿಕೊಂಡಿದ್ದ ಪೂರ್ಣ ನವಗ್ರಹ ಮತ್ತು ರಾಷ್ಟ್ರಸೂಕ್ತ ಹೋಮದ ಪ್ರಸಾದವನ್ನು ಅರ್ಪಿಸಿದರು.
ರಾಷ್ಟ್ರ ಪ್ರಶಸ್ತಿ ಪಡೆದ ಕರಾವಳಿ ಮೂವರು!
– ಉಡುಪಿಯ ಸುಮಂತ್ ಭಟ್, ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದ ಅತೀಶ್ ಎಸ್. ಶೆಟ್ಟಿ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದ ರೂಪಾಶ್ರೀ ವಾರ್ಕಡಿ
ಉಡುಪಿಯ ಸುಮಂತ್ ಭಟ್ ರಾಷ್ಟ್ರಪತಿಗಳಿಂದ ಕನ್ನಡ ವಿಭಾಗದ ಉತ್ತಮ ಸಿನಿಮಾಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. “ಮಿಥ್ಯ” ಸಿನಿಮಾದ ಈ ಸಾಧನೆ ಸುಮಂತ್ ಭಟ್ ಅವರಿಗೆ ಗೌರವ ತಂದು ಕೊಟ್ಟಿದೆ.
ರಕ್ಷಿತ್ ಶೆಟ್ಟಿ ಅವರ ʻಪರಂವಃ ಪಿಕ್ಚರ್ಸ್ʼ ನಿರ್ಮಿಸಿದ ‘ಮಿಥ್ಯ’ ಚಿತ್ರವು ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿತು. ಚಿತ್ರದ ನಿರ್ದೇಶಕ ಸುಮಂತ್ ಭಟ್ ಅವರು ರಾಷ್ಟ್ರಪತಿಗಳಿಂದ ಈ ಗೌರವವನ್ನ ಸ್ವೀಕರಿಸಿದರು. ಇದೇ ‘ಮಿಥ್ಯ’ ಸಿನಿಮಾದಲ್ಲಿನ ಮನೋಜ್ಞ ಅಭಿನಯಕ್ಕಾಗಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನ ಅತೀಶ್ ಎಸ್. ಶೆಟ್ಟಿ ಪಡೆದುಕೊಂಡರೆ, ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನ ರೂಪಾಶ್ರೀ ವಾರ್ಕಡಿ ಸ್ವೀಕರಿಸಿದರು.







