ಮಲೆನಾಡಿಗೆ ಬಂದಿದೆ ಚಡ್ಡಿ ಗ್ಯಾಂಗ್..!
– ಚಡ್ಡಿ ಗ್ಯಾಂಗ್ ಶಿವಮೊಗ್ಗ ಜಿಲ್ಲೆಗೆ ಎಂಟ್ರಿ
– ವೈದ್ಯರ ಮನೆಯಲ್ಲಿ ಕಳ್ಳತನ.. ಎಲ್ಲರೂ ಚಡ್ಡಿ ಹಾಕಿರ್ತಾರೆ!
– ಅಡಿಕೆ ಕೊಯ್ಲು ವೇಳೆ ಸಂಚು ಮಾಡ್ತಾರಾ?
NAMMUR EXPRESS NEWS
ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಅನೇಕ ರೀತಿ ದರೋಡೆಗಳು ನಡೆಯುತ್ತಾ ಇದೆ. ಅದರಲ್ಲೂ ಚಡ್ಡಿ ಗ್ಯಾಂಗ್ ಅನೇಕ ಕಡೆ ಸುದ್ದಿ ಮಾಡಿತ್ತು. ಇದೀಗ ಶಿವಮೊಗ್ಗ ನಗರಕ್ಕೆ ಈ ಚಡ್ಡಿ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಅನೇಕ ಮನೆಗಳಲ್ಲಿ ಕಳ್ಳತನ ಮಾಡಿದೆ. ಭಿಕ್ಷೆ ಬೇಡುವ ನೆಪದಲ್ಲಿ ಮನೆಗೆ ಬಂದು ಬಳಿಕ ಪ್ಲಾನ್ ಮಾಡಿ ಕಳ್ಳತನ ಮಾಡಲಾಗುತ್ತಿದೆ. ಸಾರ್ವಜನಿಕರು ಎಚ್ಚರದಿಂದ ಇರಬೇಕು ಅವರು ಮೊದಲೇ ಪ್ಲಾನ್ ಮಾಡಿಕೊಂಡು ಮನೆಗೆ ಬರುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಗ್ಗೆ ಸಮಯದಲ್ಲೂ ಕೂಡ ಭಿಕ್ಷುಕಿಯ ವೇಷದಲ್ಲಿ ಭಿಕ್ಷೆ ಬೇಡುವ ರೀತಿಯಲ್ಲಿ ಮಹಿಳೆ ಬರುತ್ತಾರೆ. ಆ ಮಹಿಳೆ ಬಂದ ಸಂದರ್ಭದಲ್ಲಿ ಕೆಲವೊಂದಿಷ್ಟು ಮಾಹಿತಿಯನ್ನು ತಿಳಿದುಕೊಂಡು ರಾತ್ರಿಯ ವೇಳೆ ಈ ಚಡ್ಡಿ ಗ್ಯಾಂಗ್ ಬಂದು ರಾತ್ರಿ ಸಮಯದಲ್ಲಿ ಹೇಗೆ ಕಳ್ಳತನ ಮಾಡಬೇಕು ಎಂದು ಪ್ಲಾನ್ ಮಾಡುತ್ತಾರೆ. ಗ್ಯಾಂಗ್ ರಾತ್ರಿ ಸಮಯದಲ್ಲಿ ಬರುವಾಗ ಅನೇಕ ರೀತಿಯ ಮಾರಕ ವಸ್ತುಗಳನ್ನು ಕೂಡ ತೆಗೆದುಕೊಂಡು ಬರುತ್ತಾರೆ. ಆದ್ದರಿಂದ ಸಾರ್ವಜನಿಕರು ಸಾಕಷ್ಟು ಎಚ್ಚರದಿಂದ ಇರಬೇಕು ಮನೆಯಿಂದ ಹೊರಗೆ ಹೋಗುವಾಗ ತುಂಬಾ ಎಚ್ಚರದಿಂದ ಇರಬೇಕು ಎಂಬ ಮೆಸೇಜ್ ಎಲ್ಲೆಡೆ ಓಡಾಡುತ್ತಿದೆ. ಶಿವಮೊಗ್ಗ ಪೊಲೀಸ್ ಇಲಾಖೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕಿದೆ.
ಅಡಿಕೆ ಕೊಯ್ಲು ವೇಳೆ ಸಂಚು ಮಾಡ್ತಾರಾ?
ಅಡಿಕೆ ಕೊಯ್ಲು ಶುರುವಾಗುತ್ತಿದೆ. ಈ ವೇಳೆ ಕಳ್ಳರು ಪ್ಲಾನ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಆಯಾ ತಾಲೂಕು ಪೊಲೀಸರು ತಾಲೂಕಿನ ಹೊರಗಿನ ಜನರ ಬಗ್ಗೆ ಮಾಹಿತಿ ಕಲೆ ಹಾಕಬೇಕಿದೆ. ಇಲ್ಲವಾದಲ್ಲಿ ಕಳ್ಳತನ ನಡೆದ ಮೇಲೆ ಕಳ್ಳರ ಹುಡುಕಿ ಪ್ರಯೋಜನ ಇಲ್ಲ ಎಂಬ ಮಾತು ಕೇಳಿ ಬಂದಿದೆ.







