ತೀರ್ಥಹಳ್ಳಿ: ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಆರ್. ಎಂ. ಮಂಜುನಾಥ್ ಗೌಡ ಅವರ ಅನುದಾನದಲ್ಲಿ ಈಗಾಗಲೇ ತೀರ್ಥಹಳ್ಳಿ ಸೇರಿ ಮಲೆನಾಡ ಅನೇಕ ಕಡೆ ಹೈಟೆಕ್ ಬಸ್ ನಿಲ್ದಾಣ ಉದ್ಘಾಟನೆಗೊಳ್ಳುತ್ತಿವೆ. ಇದೀಗ ಸ್ವಾತಂತ್ರ ಹಬ್ಬದ ದಿನ ನಿರ್ಮಾಣಗೊಂಡಿರುವ ನೂತನ ಬಸ್ ನಿಲ್ದಾಣಗಳ ಉದ್ಘಾಟನಾ ಕಾರ್ಯಕ್ರಮ ಆಗುಂಬೆ ವೃತ್ತ, ಮೇಳಿಗೆ, ಬಸವಾನಿಯಲ್ಲಿ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ತೀರ್ಥಹಳ್ಳಿ ಪಟ್ಟಣದ ಆಗುಂಬೆ ವೃತ್ತದಲ್ಲಿ ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣದಲ್ಲಿ ನಡೆಯಲಿದೆ. ಮಧ್ಯಾಹ್ನ 4 ಗಂಟೆಗೆ ಮೇಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಶ್ರೀ ಆಂಜನೇಯ ದೇವಸ್ಥಾನದ ಸಮೀಪ ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗುವುದು. ಸಂಜೆ 5 ಗಂಟೆಗೆ ಬಸವಾನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಂಭಾಗ ಹಾಗೂ ಬಸವಾನಿ ಕೃಷಿ ಪತ್ತಿನ ಸಹಕಾರ ಸಂಘದ ಸಮೀಪ ನಿರ್ಮಿಸಲಾಗಿರುವ ನೂತನ…
Author: NammurEXP
ಸಾಗರ: ಸಾಗರ ತಾಲೂಕು ಹೆಗ್ಗೋಡು ಬಳಿಯ ಅತ್ತಿಸರ ಗ್ರಾಮದಲ್ಲಿ ಕಡಜ ಹುಳುಗಳು ಕಡಿದು ಎಂಟು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮನೆಯ ಹಿಂದಿನ ಬಾಳೆಗಿಡದಲ್ಲಿದ್ದ ಕಡಜದ ಹುಳುವಿನ ಗೂಡಿನಿಂದಾಗಿ ವೆಂಕಟೇಶ್ ಹಾಗೂ ಅವರ ಮಗ ನಿಶ್ಚಿತ್ ಮೇಲೆ ಕಡಜ ಹುಳುಗಳು ದಾಳಿ ಮಾಡಿದ್ದವು. ಕುಟುಂಬದವರು ತಕ್ಷಣವೇ ಬಾಲಕ ಹಾಗೂ ತಂದೆಯನ್ನು ಹೆಗ್ಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆಲ್ದೂರಲ್ಲಿ ವಸತಿ ಶಾಲೆಯಲ್ಲೇ ನೇಣು ಬಿಗಿದುಕೊಂಡ ವಿದ್ಯಾರ್ಥಿ! ಆಲ್ದೂರು: 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಆಲ್ದೂರು-ಆವುತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ. ವಸತಿ ಶಾಲೆಯಲ್ಲಿ ನಿಶದ್ (14) ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ. ಚಿಕ್ಕಮಗಳೂರು ನಗರದ ಕಲ್ಯಾಣ ನಗರದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು ನೇಣು ಹಾಕಿಕೊಂಡಿದ್ದ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದೆ. ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.…
ಮಲೆನಾಡು/ ಕರಾವಳಿ: ಮಂಗಳೂರು-ಶೃಂಗೇರಿ- ಶಿವಮೊಗ್ಗ ನಡುವೆ ಪ್ರಸ್ತಾಪಗೊಂಡಿರುವ 332 ಕಿಲೋಮೀಟರ್ ಉದ್ದದ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸಲು ಸ್ಥಳ ಸಮೀಕ್ಷೆಗೆ ಕೇಂದ್ರ ರೈಲ್ವೆ ಸಚಿವಾಲಯವು ಅನುಮೋದನೆ ನೀಡಿದೆ. ಮಂಗಳೂರು ರೈಲ್ವೆ ಸಂಪರ್ಕ ಸಾಮರ್ಥ್ಯ ವೃದ್ಧಿಯ ಕುರಿತು ಲೋಕಸಭೆಯಲ್ಲಿ ಕೇಳಲಾಗಿರುವಂತಹ ಪ್ರಶ್ನೆಗೆ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಬುಧವಾರದಂದು ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಕುರಿತು ಮಾಹಿತಿ ಲಭಿಸಿದೆ. ಮಂಗಳೂರು ರೈಲ್ವೆ ಕಾರಿಡಾರ್ ಸಾಮರ್ಥ್ಯ ಹೆಚ್ಚಳ ಮತ್ತು ಪ್ರಸ್ತುತ ಯೋಜನೆಗಳು, ಅವುಗಳ ಸ್ಥಿತಿ, ವೆಚ್ಚ, ಭೌತಿಕ ಮತ್ತು ಆರ್ಥಿಕ ಪ್ರಗತಿ, ಪ್ರಯಾಣಿಕರ ದತ್ತಾಂಶ, ಕಾಮಗಾರಿ ಪೂರ್ಣಗೊಳಿಸುವ ಗುರಿ, ಭೂಸ್ವಾಧೀನ ಸಂಬಂಧಿತ ಅಡೆತಡೆಗಳು ಮತ್ತು ಯೋಜನೆಗಳಿಗೆ ಅನುಮೋದನೆ ನೀಡುವ ಹಾಗೂ ಮುಂದಿನ ಹಂತಗಳ ಕಾಮಗಾರಿಯ ಕುರಿತು ಸಂಸದರಾದ ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಪ್ರಶ್ನೆ ಸಂಖ್ಯೆ 358ರ ಅನ್ವಯ ವಿವರಣೆಯನ್ನು ಕೇಳಿದ್ದರು. ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವಾಲಯವು 18 ಪುಟಗಳ ಹೇಳಿಕೆಯನ್ನು ಸದನದ ಮುಂದೆ ಮಂಡಿಸಿದೆ ಎನ್ನಲಾಗಿದೆ.…
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಗುಟ್ಕಾ ಹಾಗೂ ನಿಕೋಟಿನ್ ಅಥವಾ ತಂಬಾಕು ಅಂಶ ಹೊಂದಿರುವ ಪಾನ್ ಮಸಾಲಾ ಉತ್ಪನ್ನಗಳ ಮೇಲಿನ ಒಂದು ವರ್ಷದ ನಿಷೇಧ ಆದೇಶ ಹಿಂಪಡೆದಿದೆ.. ಲಕ್ಷ ಲಕ್ಷ ಅಡಿಕೆ ಬೆಳೆಗಾರರ ಬದುಕು ಅಡಿಕೆ ಮೇಲೆ ನಿಂತಿದ್ದು ಏಕಾಏಕಿ ಈ ನಿಯಮ ಹಿಂಪಡೆಯಲು ಸಿಎಂ ಡಿಕೆ ಶಿವಕುಮಾರ್ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ಆದೇಶ ಹೊರ ಬಿದ್ದಿದೆ. ಕೆಲವೇ ದಿನಗಳ ಹಿಂದೆ ಹೊರಡಿಸಿದ್ದ ನಿಷೇಧ ಆದೇಶದಿಂದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ ಸೇರಿದಂತೆ ಅಡಿಕೆ ಬೆಳೆಗೆ ಅವಲಂಬಿತ ಪ್ರದೇಶಗಳ ರೈತರು ಆತಂಕಕ್ಕೆ ಒಳಗಾಗಿದ್ದರು. ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದೇಶವನ್ನು ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೀಗ ಲಕ್ಷ ಲಕ್ಷ ಕುಟುಂಬಗಳ ಬದುಕಿನ ಭದ್ರತೆಗಾಗಿ ಈ ಆದೇಶ ಮಾಡಲಾಗಿದೆ. ಸಿಎಂ ಭೇಟಿ ಮಾಡಿದ ಮಲೆನಾಡು ಭಾಗದ ನಿಯೋಗ ಗುರುವಾರ ಬಿಜೆಪಿ ಶಾಸಕ, ಅಡಿಕೆ ಮಹಾ ಮಂಡಲ ಅಧ್ಯಕ್ಷರಾದ ಆರಗ ಜ್ಞಾನೇಂದ್ರ…
ಬೆಂಗಳೂರು: ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ ಬ್ಯಾನ್ ಮಾಡಲಾಗಿದೆ. ರಾಜ್ಯ ಸರ್ಕಾರವು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮಹತ್ವವಾದ ನಿರ್ಣಯವೊಂದನ್ನು ಕೈಗೊಂಡಿದ್ದು ಸಂಬಂಧಿಸಿದಂತೆ ತಂಬಾಕು ಮತ್ತು ನಿಕೋಟಿನ್ ಯುಕ್ತ ಗುಟ್ಕಾ ಮತ್ತು ಪಾನ್ ಮಸಾಲಾದಂತಹ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ಒಂದು ವರ್ಷಗಳ ಕಾಲ ನಿಷೇಧಿಸುವಂತೆ ಆದೇಶವನ್ನು ಹೊರಡಿಸಿದೆ. ತಂಬಾಕು ಅಥವಾ ನಿಕೋಟಿನ್ ಅಂಶವನ್ನು ಪ್ರತ್ಯೇಕ ಪ್ಯಾಕೆಟ್ ಗಳಲ್ಲಿ ನೀಡಿ, ಗ್ರಾಹಕರು ಅದನ್ನು ಮತ್ತೊಂದು ಉತ್ಪನ್ನದೊಂದಿಗೆ ಸುಲಭವಾಗಿ ಮಿಶ್ರಣ ಮಾಡಿಕೊಂಡು, ಸೇವಿಸುವಂತೆ ಮಾರಾಟ ಮಾಡುವಂತಹ ಉತ್ಪನ್ನಗಳಿಗೂ ಕಡಿವಾಣ ಹಾಕಿದೆ. ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ-20೦6ರ ಸೆಕ್ಷನ್ 30(2)(ಎ) ಹಾಗೂ ಆಹಾರ ಭದ್ರತೆ ಮತ್ತು ಗುಣಮಟ್ಟ ನಿಯಮಾವಳಿ-2011ರ ನಿಯಮ 2.3.4ರ ಅಡಿಯಲ್ಲಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಿರುವ ಈ ನಿಷೇಧ, ಅಧಿಸೂಚನೆಯನ್ನು ಹೊರಡಿಸಿದ ದಿನದಿಂದಲೇ ಜಾರಿಗೆ ಬರಲಿದೆ. ಇದಕ್ಕೂ ಮೀರಿ ರಾಜ್ಯದಲ್ಲಿ ನಿಷೇಧಿತ…
ಚಿಕ್ಕಮಗಳೂರು: 300 ಅಡಿ ಪ್ರಪಾತಕ್ಕೆ ಉರುಳಿದ ಲಾರಿ ಚಿಕ್ಕಮಗಳೂರು: 10 ಚಕ್ರದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು, ಪ್ರಪಾತಕ್ಕೆ ಉರುಳಿ ಬಿದ್ದಿರುವ ಘಟನೆ ಕೆಎಂ ರಸ್ತೆಯ ಲಕ್ಯಾ ತಿರುವಿನಿಂದ ಗೇಟ್ ವೇ ಹೊಟೇಲ್ ನ ತಿರುವಿನ ನಡುವೆ ನಡೆದಿದೆ. ಕಡೂರು ನಿವಾಸಿಯಾದ ಇರ್ಫಾನ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಆಲ್ಟೋ ಕಾರಿನಲ್ಲಿ ಕಡೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ, ಲಾರಿಯೊಂದು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಕಾರಣದಿಂದಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಲಾರಿಯು ಕಾರಿನ ಬಲಭಾಗದ ಹಿಂಭಾಗಕ್ಕೆ ಬಿರುಸಾಗಿ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಲಾರಿಯೂ ಸಹ 300 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದೆ ಎನ್ನುವ ಮಾಹಿತಿ ಲಭಿಸಿದೆ. ಅದೃಷ್ಟವಶದಿಂದ ಕಾರಿನಲ್ಲಿದ್ದ ಇರ್ಫಾನ್, ಅವರ ತಾಯಿ, ಪತ್ನಿ ಮತ್ತು ಅಣ್ಣನ ಮಕ್ಕಳು ಹಾಗೂ ಲಾರಿಯ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಲಾರಿಗೆ ಬ್ರೇಕ್ ಫೇಲ್ ಆಗಿತ್ತು ಎನ್ನುವ ಮತ್ತೊಂದು ಮಾಹಿತಿ…
ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದನ್ನು ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯು ನೀಡಿದೆ. ದೇಶದ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿನ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು, ಒಟ್ಟು ಬಾಕಿ ಇರುವ 11.403 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು 1414 ಹುದ್ದೆಗಳು ಭರ್ತಿಯಾಗಲಿವೆ ಎನ್ನುವ ಮಾಹಿತಿ ಲಭಿಸಿದೆ. ಕರ್ನಾಟಕದಲ್ಲಿ ಬ್ಯಾಂಕ್ ವಾರು ಪ್ರಕಾರ ಬ್ಯಾಂಕ್ ಆಫ್ ಬರೋಡಾದಲ್ಲಿ 180 ಹುದ್ದೆಗಳು, ಬ್ಯಾಂಕ್ ಆಫ್ ಇಂಡಿಯಾದಲ್ಲಿ 40 ಹುದ್ದೆಗಳು, ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 17 ಹುದ್ದೆಗಳು, ಕೆನರಾ ಬ್ಯಾಂಕ್ ನಲ್ಲಿ 800 ಹುದ್ದೆಗಳು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 29 ಹುದ್ದೆಗಳು, ಇಂಡಿಯನ್ ಬ್ಯಾಂಕ್ ನಲ್ಲಿ 40 ಹುದ್ದೆಗಳು, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ನಲ್ಲಿ 61 ಹುದ್ದೆಗಳು, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 234 ಹುದ್ದೆಗಳು ಮತ್ತು ಪಂಜಾಬ್ ಆ್ಯಂಡ್…
ಮೂಡಬಿದರೆ: ವಿದ್ಯಾಕಾಶಿ ಮೂಡಬಿದಿರೆಯ ಆಳ್ವಾಸ್ ಕಾಲೇಜು ಕ್ಯಾಂಪಸ್ ಎರಡು ದಿನ ಸಾವಿರ ಸಾವಿರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಬೆಳಕು ನೀಡಿತು. ಆಳ್ವಾಸ್ ಪ್ರಗತಿ-2026ರಲ್ಲಿ 350ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದು, 20,000ಕ್ಕೂ ಅಧಿಕ ಉದ್ಯೋಗಾವಕಾಶ ನೀಡಿದವು. ಭೋರ್ಗರೆದು ಸುರಿವ ಮಳೆಯಲ್ಲೇ ಉದ್ಯೋಗಕ್ಕಾಗಿ ಸಾವಿರ ಸಾವಿರ ಯುವ ಜನರು ಕ್ಯೂ ಅಲ್ಲಿ ನಿಂತು ಸಂದರ್ಶನದಲ್ಲಿ ಭಾಗಿಯಾದರು. 20 ಸಾವಿರ ಯುವ ಜನರು ಭಾಗಿ! ದೇಶ ವಿದೇಶ ರಾಜ್ಯದ 350ಕ್ಕೂ ಹೆಚ್ಚು ವಿವಿಧ ಕ್ಷೇತ್ರದ ಕಂಪನಿಗಳು ಆಗಮಿಸಿದ್ದವು. 2 ದಿನಗಳ ಕಾಲ ಸುಮಾರು 20 ಸಾವಿರ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾದರು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗಾಗಿ ಕರಾವಳಿ ಭಾಗದಾದ್ಯಂತ ಉಚಿತ ಬಸ್ ಸೇವೆಯನ್ನು ಸಹ ಕಲ್ಪಿಸಲಾಗಿತ್ತು. ಹಾಗೆಯೇ ಕರ್ನಾಟಕದ ವಿವಿಧ ಭಾಗದಿಂದ ಬಂದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕೂಡ ನೀಡಲಾಗಿತ್ತು. 2000ಕ್ಕೂ ಹೆಚ್ಚು ಸ್ವಯಂ ಸೇವಕರು! ಆಳ್ವಾಸ್ ಸಂಸ್ಥೆ ಅಂದರೆ ಅಲ್ಲಿ ಶಿಸ್ತು. ಅಚ್ಚುಕಟ್ಟು.. ಸುಮಾರು 2000 ಮಂದಿ ಸ್ವಯಂ ಸೇವಕರು ಈ ಉದ್ಯೋಗ…
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿಯಲ್ಲಿ ಆಗಸ್ಟ್ 7 ಮತ್ತು 8ರಂದು ಆಳ್ವಾಸ್ ಪ್ರಗತಿ-2026 ಬೃಹತ್ ಉದ್ಯೋಗ ಮೇಳ ನಡೆಯಲಿದೆ. 350ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿದ್ದು, 24,298ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿವೆ. ಹೊಸಬರು ಹಾಗೂ ಅನುಭವಿಗಳಿಬ್ಬರೂ ಭಾಗವಹಿಸಬಹುದು. ಆಸಕ್ತ ಅಭ್ಯರ್ಥಿಗಳು ಮುಂಚಿತವಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ರಾಜ್ಯದ ಅತೀ ದೊಡ್ಡ ಉದ್ಯೋಗ ಮೇಳ ಇದಾಗಿದೆ. ಶಿಕ್ಷಣಕ್ಕೂ ಸೈ… ಉದ್ಯೋಗಕ್ಕೂ ಜೈ..! ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಆಳ್ವಾಸ್ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತಹ ಕಾರ್ಯಕ್ರಮಗಳನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿದೆ. ಇದರ ಜೊತೆಗೆ ಉದ್ಯೋಗ ಮೇಳಗಳನ್ನು ಸಹ ಆಯೋಜಿಸುವ ಮೂಲಕ, ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಲಭಿಸುವಂತೆ ಮಾಡುತ್ತಿದೆ. ಈ ಬಾರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉದ್ಯೋಗ ಮೇಳದ 16ನೇ ಆವೃತ್ತಿಯನ್ನು ಆಗಸ್ಟ್ 7ರ ಶುಕ್ರವಾರ ಮತ್ತು 8ರ ಶನಿವಾರದಂದು ಆಳ್ವಾಸ್ ನ ವಿದ್ಯಾಗಿರಿ ಆವರಣದಲ್ಲಿ ಆಯೋಜಿಸಲಾಗಿದೆ. ಯಾವ…
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಮತದಾರರಿಗೆ ದಾಖಲೆಗಳನ್ನು ಸಲ್ಲಿಸಲು ಅನುಕೂಲವಾಗಲೆಂದು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯ ಸಂದರ್ಭದಲ್ಲಿ, ಮನೆಮನೆಗೂ ಜಾತಿ ಪ್ರಮಾಣಪತ್ರವನ್ನು ತಲುಪಿಸುವ ಕುರಿತು ಸರ್ಕಾರವು ನಿರ್ಧಾರವನ್ನು ಕೈಗೊಂಡಿದೆ. ಹಿಂದಿನ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ ಮತದಾರರ ಹೆಸರು ಮತ್ತು ಸಂಬಂಧಪಟ್ಟ ಕುಟುಂಬದ ಸದಸ್ಯರ ವಿವರಗಳು ಲಭ್ಯವಾಗದಿದ್ದಲ್ಲಿ ಅಥವಾ ಈಗಾಗಲೇ ಡೇಟಾ ಬೇಸ್ ನಲ್ಲಿ ಇರುವ ಮಾಹಿತಿಗೆ ಹೋಲಿಕೆ ಕಂಡುಬಾರದಿದ್ದಲ್ಲಿ, ಮತದಾರರ ಅರ್ಹತೆಯನ್ನು ಸಾಬೀತುಪಡಿಸುವ ಸಲುವಾಗಿ ಚುನಾವಣಾ ಆಯೋಗವು 11 ದಾಖಲೆಗಳಲ್ಲಿ ಒಂದನ್ನು ಒದಗಿಸುವಂತೆ ಸೂಚನೆಯನ್ನು ನೀಡಿದೆ. ಅವುಗಳಲ್ಲಿ ಜಾತಿ ಪ್ರಮಾಣಪತ್ರ ಕೂಡ ಒಂದಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಜಾತಿ ಪ್ರಮಾಣಪತ್ರದೊಂದಿಗೆ ಸಾರ್ವಜನಿಕರಿಗೆ ಶಾಶ್ವತ ನಿವಾಸ ಪ್ರಮಾಣಪತ್ರಗಳನ್ನು ಕೂಡ ವಿತರಿಸುವಂತೆ ಸರ್ಕಾರವು ಕಂದಾಯ ಇಲಾಖೆಯ ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ. ಅವುಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಸರ್ಕಾರದ ದಾಖಲೆಯಲ್ಲಿರುವಂತಹ ಮೊಬೈಲ್ ಸಂಖ್ಯೆಗೆ ಲಿಂಕ್ ಅನ್ನು ಕಳುಹಿಸಿ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶವನ್ನು ಕೂಡ ಕಲ್ಪಿಸಲಾಗಿದೆ. ಕಂದಾಯ ಇಲಾಖೆಯ ಡಾಟಾ ಬೇಸ್…



