ಮಲೆನಾಡಲ್ಲಿ ಕಾಡು ಕೋಣ ಹಾವಳಿಗೆ ಬ್ರೇಕ್?! – ಕೊಪ್ಪದಲ್ಲಿ ಕಾಡುಕೋಣ ಸೆರೆ ಕಾರ್ಯಾಚರಣೆ ಆರಂಭ – ರಾಜ್ಯದಲ್ಲೇ ಮೊದಲು ಈ ಕಾರ್ಯಚರಣೆ: ಏನಿದು ಯೋಜನೆ? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಮೊದಲಿಗೆ ಕಾಡುಕೋಣಗಳನ್ನು ಹಿಡಿದು ಸ್ಥಳಾಂತರ ಮಾಡುವ ನಿರ್ಧಾರ ಕೈಗೊಂಡಿದೆ. ಇದು ರಾಜ್ಯದಲ್ಲೇ ಮೊದಲ ಪ್ರಯತ್ನ ಎನ್ನಲಾಗಿದೆ. ಗುರುವಾರದಿಂದಲೇ ಈ ಕಾರ್ಯಾಚರಣೆ ಕೊಪ್ಪ ವಿಭಾಗದಿಂದ ಪ್ರಾರಂಭಗೊಳ್ಳಲಿದೆ ಎನ್ನುವ ಮಾಹಿತಿ ಲಭಿಸಿದೆ. ಕಾಡಾನೆಯ ಜೊತೆಗೆ ಕಾಡುಕೋಣಗಳ ಹಾವಳಿಯಿಂದಾಗಿ ಕಳೆದ ಮೂರು ವರ್ಷಗಳಲ್ಲಿ ಆರು ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎನ್ನುವುದು ವರದಿಯಾಗಿದೆ. ಹೊರ ರಾಜ್ಯಗಳಿಗೆ ಹೋಗಿ ಅಧ್ಯಯನ! ಕಾಡು ಕೋಣ ಸಮಸ್ಯೆ ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆಯು ಕಾಡುಕೋಣಗಳ ಉಪಟಳವನ್ನು ತಡೆಯಲು ಇರುವಂತಹ ಸಾಧ್ಯತೆಗಳ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿ, ಇದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವೊಂದು ಮಧ್ಯಪ್ರದೇಶಕ್ಕೆ ತೆರಳಿ ಅಧ್ಯಯನ ನಡೆಸಿ ಹಿಂತಿರುಗಿತ್ತು. ಅಲ್ಲಿನ ಕನ್ಹಾ ಹುಲಿ…
Author: NammurEXP
ತೀರ್ಥಹಳ್ಳಿ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಮಂಜುನಾಥ್ – ಸರ್ಕಾರದಿಂದ ನೇಮಕ: ಈ ಮೊದಲು 5 ವರ್ಷ ತೀರ್ಥಹಳ್ಳಿಯಲ್ಲಿ ಸೇವೆ – ಪ್ರಭಾರ ಬಿಇಓ ಆಗಿದ್ದ ಗಿರಿರಾಜ್ ಅವರಿಂದ ಉತ್ತಮ ಸೇವೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಮಂಜುನಾಥ್ ಆರ್ ನೇಮಕಗೊಂಡಿದ್ದಾರೆ. ಈ ಮೊದಲು 5 ವರ್ಷ ತೀರ್ಥಹಳ್ಳಿಯಲ್ಲಿ ಕಾರ್ಯನಿರ್ವಹಿಸಿದ್ದರು. ಗಣೇಶ್ ಅವರು ಹೊಸನಗರಕ್ಕೆ ವರ್ಗಾವಣೆ ಆದ ಬಳಿಕ ಗಿರಿರಾಜ್ ಅವರು ಪ್ರಭಾರ ಶಿಕ್ಷಣ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದರು. ಇದೀಗ ಮಂಜುನಾಥ್ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ತೀರ್ಥಹಳ್ಳಿ ತಾಲೂಕು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಎರಡರಲ್ಲೂ ಅತ್ಯುತ್ತಮ ಫಲಿತಾಂಶ ದಾಖಲು ಮಾಡಿದೆ. ಇದೀಗ ಹೊಸ ಶಿಕ್ಷಣ ಅಧಿಕಾರಿ ನೇಮಕವಾಗಿದ್ದು ಅಭಿನಂದನೆಗಳು.
ಕುಡುಮಲ್ಲಿಗೆ: ಕೃಷಿ & ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಘಟಕ ಶುರು – ಧಾತ್ರಿ ರೈತ ಉತ್ಪಾದಕರ ಕಂಪನಿಯ ನೂತನ ಉತ್ಪಾದನಾ ಘಟಕ ಉದ್ಘಾಟನೆ – ಅಡಿಕೆ ಹಾಗೂ ಇತರೆ ಉತ್ಪನ್ನಗಳು ಮಾರುಕಟ್ಟೆಗೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಕೃಷಿ ಇಲಾಖೆ ಶಿವಮೊಗ್ಗ, ನಬಾರ್ಡ್ ಬೆಂಗಳೂರು, ಧಾತ್ರಿ ಎಫ್‌ಪಿಸಿ ಮತ್ತು ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ ಸಹಯೋಗದಲ್ಲಿ “ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಘಟಕದ ಉದ್ಘಾಟನಾ ಕಾರ್ಯಕ್ರಮ ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆಯಲ್ಲಿ ನಡೆಯಿತು. ಈ ಮೂಲಕ ಗ್ರಾಮೀಣ ಅಭಿವೃದ್ಧಿ ಜತೆಗೆ ಉದ್ಯೋಗ ಸೃಷ್ಟಿಯಲ್ಲಿ ಈ ಘಟಕ ಸೇವೆ ಸಲ್ಲಿಸಲಿದೆ. ಧಾತ್ರಿ ರೈತ ಉತ್ಪಾದಕರ ಕಂಪನಿಯ ನೂತನ ಉತ್ಪಾದನಾ ಘಟಕ ಉದ್ಘಾಟನೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮ ತೀರ್ಥಹಳ್ಳಿ ತಾಲ್ಲೂಕಿನ ಕುಡುಮಲ್ಲಿಗೆಯ ಧಾತ್ರಿ ರೈತ ಉತ್ಪಾದಕರ ಕಂಪನಿ ಲಿ, (FPC) ಆವರಣದಲ್ಲಿ ಮೇ 13, 2026 ರಂದು ನೂತನ ಉತ್ಪಾದನಾ ಘಟಕದ ಉದ್ಘಾಟನೆ ಮತ್ತು ವಿವಿಧ ಮೌಲ್ಯವರ್ಧಿತ ಉತ್ಪನ್ನಗಳ ಲೋಕಾರ್ಪಣೆ…
ಕರಾವಳಿ ಟಾಪ್ ನ್ಯೂಸ್ ಭಗ್ನ ಪ್ರೇಮಿಯಿಂದ ಯುವತಿಗೆ ಚೂರಿ ಇರಿತ! – ಮಣಿಪಾಲದ ಶಾಂತಿನಗರ ಸಮೀಪದ ಮಹಿಳಾ ಪಿಜಿಯಲ್ಲಿ ಘಟನೆ • ಕಡಬ: ಬಾಲಕಿಯ ಮಾನಭಂಗಕ್ಕೆ ಯತ್ನ; ಕೇಸ್ • ಉಳ್ಳಾಲ: ಯು.ಟಿ.ಖಾದರ್ ಮೇಲೆ ಹಲ್ಲೆಗೆ ಯತ್ನ ಉಡುಪಿ: ಭಗ್ನ ಪ್ರೇಮಿಯಿಂದ ಯುವತಿಗೆ ಚೂರಿಯಿಂದ ಇರಿದ ಘಟನೆ ಮಣಿಪಾಲ- ಅಲೆವೂರು ರಸ್ತೆಯ ಶಾಂತಿನಗರ ಸಮೀಪದ ಐಡಿಯಲ್ ಬಿಲ್ಡಿಂಗ್ ನಲ್ಲಿರುವ ಮಹಿಳಾ ಪಿಜಿಯಲ್ಲಿ ನಡೆದಿದೆ. ಅಂಕೋಲ ಮೂಲದ ಯೋಗಿತಾ(23) ಮಾರಣಾಂತಿಕ ಹಲ್ಲೆಗೊಳಗಾದ ಯುವತಿ. ಈಕೆ ಮಣಿಪಾಲ- ಅಲೆವೂರು ರಸ್ತೆಯ ಶಾಂತಿನಗರ ಸಮೀಪದ ಐಡಿಯಲ್ ಬಿಲ್ಡಿಂಗ್ ನಲ್ಲಿರುವ ಮಹಿಳಾ ಪಿಜಿಯಲ್ಲಿ ವಾಸವಾಗಿದ್ದಳು. ಮಂಗಳವಾರ ರಾತ್ರಿ ಆಕೆಗೆ ಚೂರಿ ಇರಿಯಲಾಗಿದೆ. ಯುವತಿಯು ಪ್ರೀತಿ ನಿರಾಕರಿಸಿರುವುದಕ್ಕೆ ಭಗ್ನ ಪ್ರೇಮಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಕಡಬ: ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಯತ್ನಿಸಿದ ಘಟನೆ, ಕಳೆದ ಕೆಲವು ದಿನಗಳ ಹಿಂದೆ ಅಜಕಾರುವಿನಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಬಾಲಕಿಯು ಪಕ್ಕದ ಮನೆಗೆ ಟಿವಿ ನೋಡಲೆಂದು ಹೋಗಿದ್ದ ಸಂದರ್ಭದಲ್ಲಿ, ಅಲ್ಲಿಗೆ…
ಜನರಿಗೆ ಕೇಂದ್ರದ ಶಾಕ್: ಚಿನ್ನ ಇನ್ನು ದುಬಾರಿ! – ಆಮದು ಸುಂಕ ಹೆಚ್ಚಳ; ಬೆಲೆಗಳಲ್ಲಿ ಭಾರೀ ಏರಿಕೆ – ಚಿನ್ನದ ಬೆಲೆ ಒಂದು ಗ್ರಾಂಗೆ 1.275 ರೂಪಾಯಿ ಹೆಚ್ಚಳ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಆಮದು ತೆರಿಗೆಯನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಅವುಗಳ ಬೆಲೆಯು ದುಪ್ಪಟ್ಟಾಗಿದೆ. ಸರ್ಕಾರವು ಮಧ್ಯರಾತ್ರಿಯಿಂದಲೇ ಆಮದು ತೆರಿಗೆ ಜಾರಿಗೆ ಬರುವಂತೆ ಮಾಡಿದ್ದು, ಶೇಕಡ 6ರಿಂದ ಶೇಕಡ 15ಕ್ಕೆ ಏರಿಸಿದ್ದರ ಪರಿಣಾಮವಾಗಿ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಅಮೂಲ್ಯ ವಸ್ತುಗಳ ಬೆಲೆ ಶೇಕಡ 6ರಷ್ಟು ಅಧಿಕವಾಗಿದೆ. ಪರಿಣಾಮವಾಗಿ ಜ್ಯುವೆಲ್ಲರಿ ಅಸೋಸಿಯೇಷನ್ ಬೆಲೆ ಪಟ್ಟಿಯ ಪ್ರಕಾರ ಚಿನ್ನದ ಬೆಲೆ ಒಂದು ಗ್ರಾಂಗೆ 1.275 ರೂಪಾಯಿಗಳಷ್ಟು ಹೆಚ್ಚಳವಾಗಿದ್ದು, ಆಭರಣವು 14.115 ರಿಂದ 15.390 ರೂಪಾಯಿಗಳಷ್ಟು ಹೆಚ್ಚಳಗೊಂಡಿದೆ. ಅದೇ ರೀತಿ ಅಪರಂಜಿ ಚಿನ್ನದ ಬೆಲೆ 16.789 ರೂಪಾಯಿ ತಲುಪಿದೆ. ಇನ್ನು ಬೆಳ್ಳಿಯ ಬೆಲೆ ಬೆಂಗಳೂರು ಮತ್ತು ಮುಂಬೈಗಳಲ್ಲಿ ಒಂದು ಗ್ರಾಂಗೆ 310 ರೂಪಾಯಿಗಳಷ್ಟಿದ್ದರೆ, ಚೆನ್ನೈನಲ್ಲಿ ಇದರ ಬೆಲೆ 330ಕ್ಕೆ…
ಪೆಟ್ರೋಲ್, ಡೀಸೆಲ್ ಪ್ರಾಬ್ಲಮ್ ಆಗುತ್ತಾ? – ಜಾಗತಿಕ ಮಟ್ಟದಲ್ಲಿ ಇಂಧನ ಸರಬರಾಜು ಸಮಸ್ಯೆ – ಗ್ರಾಹಕರಿಗೆ ಬಾಟಲಿ, ಕ್ಯಾನ್ ಗಳಲ್ಲಿ ಪೆಟ್ರೋಲ್, ಡೀಸೆಲ್ ನೀಡುವಂತಿಲ್ಲ – ಹೊಸ ನಿಯಮ ಏನು? ಬಂಕ್ ಗಳಿಗೆ ಸೂಚನೆ ಏನು? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಅಭಾವದ ಕಾರಣದಿಂದಾಗಿ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಜಾಗತಿಕ ಮಟ್ಟದಲ್ಲಿ ಇಂಧನ ಸರಬರಾಜು ಸಮಸ್ಯೆ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ನಿಯಮ 2022 ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರವು ಬಂಕ್ ಗಳಿಗೆ ಆದೇಶವನ್ನು ಹೊರಡಿಸಿದೆ. ನಿಯಮದ ಪ್ರಕಾರ ರಾಜ್ಯದ ಎಲ್ಲಾ ಪೆಟ್ರೋಲ್ ಬಂಕ್ ಗಳು ಸರ್ಕಾರ ನಿಗದಿಪಡಿಸಿರುವ ನಿಯಮಾವಳಿಯ ಪ್ರಕಾರವೇ ಇಂಧನಗಳನ್ನು ಮಾರಾಟ ಮಾಡಬೇಕಾಗಿದೆ. ಒಂದು ವೇಳೆ ಇಂಧನವನ್ನು ಅಗತ್ಯಕ್ಕಿಂತ ಹೆಚ್ಚು ಸಂಗ್ರಹಿಸಿಟ್ಟುಕೊಂಡು ಅಭಾವವನ್ನು ಮತ್ತಷ್ಟು ಹೆಚ್ಚಿಸಿದರೆ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಸರ್ಕಾರದ ಮಾರ್ಗಸೂಚಿಯ ಪ್ರಕಾರ ವಾಹನಗಳ ಕಂಟೇನರ್ ಗಳಿಗೆ ಗರಿಷ್ಠ 200 ಲೀಟರ್ ಪೆಟ್ರೋಲ್…
ಅಡಿಕೆ , ಕೊಬ್ಬರಿ ಎರಡಕ್ಕೂ ಒಳ್ಳೆ ದರ! – ಮತ್ತೆ ಲಕ್ಷದತ್ತ ಅಡಿಕೆ ಸರಕು: ಅಡಿಕೆಗೆ ಬಂಪರ್ ಬೆಲೆ – ಹೊಸ ರಾಶಿ ಜತೆ ಹಳೆ ರಾಶಿಗೂ ಡಿಮ್ಯಾಂಡ್ – ಕೊಬ್ಬರಿಗೆ ಉತ್ತಮ ದರ: ಕಾಯಿ, ಎಳೆ ನೀರಿಗೂ ಡಿಮ್ಯಾಂಡ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಶಿವಮೊಗ್ಗ/ಚನ್ನಗಿರಿ: ಅಡಿಕೆ ಮತ್ತು ಕೊಬ್ಬರಿ ಮಾರುಕಟ್ಟೆಯಲ್ಲಿ ಬೆಳೆಗಾರರಿಗೆ ಸಿಹಿ ಸುದ್ಧಿ ಸಿಕ್ಕಿದೆ. ಉತ್ತಮ ಗುಣಮಟ್ಟದ ಅಡಿಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆಯು ಅಧಿಕ ಪ್ರಮಾಣದಲ್ಲಿ ಸೃಷ್ಟಿಯಾಗಿರುವ ಪರಿಣಾಮದಿಂದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಖರೀದಿಯು ಬಿರುಸುಗೊಂಡಿದೆ. ಕೇವಲ ಹೊಸ ರಾಶಿಗಷ್ಟೇ ಅಲ್ಲದೆ ಹಳೆ ರಾಶಿಗೂ ಉತ್ತಮ ಬೇಡಿಕೆ ಇದ್ದು, ತೀರ್ಥಹಳ್ಳಿ ಮಾರುಕಟ್ಟೆಯೊಂದರಲ್ಲೇ ಸರಕು ಅಡಿಕೆಯ ಬೆಲೆ 95.೦೦೦ದ ಗಡಿಯನ್ನು ದಾಟಿದೆ. ಸರಕು ಅಡಿಕೆಗೆ 95.೦59 ಗರಿಷ್ಠ ಬೆಲೆಯಿದ್ದು, ಶಿವಮೊಗ್ಗದಲ್ಲಿ ಸರಕು ಅಡಿಕೆಗೆ 68.919 ಮತ್ತು ಚನ್ನಗಿರಿಯಲ್ಲಿ ರಾಶಿ ಅಡಿಕೆಗೆ 55.100 ರೂಪಾಯಿಗಳಿವೆ. ಅದೇ ರೀತಿ ಬೆಟ್ಟೆ ಅಡಿಕೆಗೆ 61.300 ಗಳಷ್ಟು ಗರಿಷ್ಠ ಬೆಲೆ ಹಾಗೂ 59.೦೦9 ರೂಪಾಯಿಗಳಷ್ಟು ಮಾದರಿ…
ಕರಾವಳಿ ಟಾಪ್ ನ್ಯೂಸ್ ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರುತ್ತಿದ್ದ ಬಿಸಿಎ ವಿದ್ಯಾರ್ಥಿನಿ ಅರೆಸ್ಟ್! – ಬೆಳ್ತಂಗಡಿ: ಕುಸಿದು ಬಿದ್ದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ – ಮಂಗಳೂರು: ಪಾರ್ಕ್ ಮಾಡಿದ್ದ ಸ್ಕೂಟರ್ ಕಳ್ಳತನ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮೂಲ್ಕಿ: ಹೈಡೋವಿಡ್ ಗಾಂಜಾ ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳವಾರದಂದು ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ನಡೆದಿದೆ. ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸುಹಾನ ಎಂದು ಗುರುತಿಸಲಾಗಿದೆ. ಅಚ್ಚರಿ ಎಂದರೆ ಸುಹಾನ ಕುಂದಾಪುರದ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು. ದುಡ್ಡಿನ ಆಸೆಗೆ ಇಂತಹ ದಂಧೆಗೆ ಇಳಿದಿದ್ದಾಳೆ. ಮಂಗಳವಾರದಂದು ಸುಹಾನ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಹೈಡೋವಿಡ್ ಗಾಂಜಾ ಸಾಗಾಟ ಮಾಡುತ್ತಿರುವ ಸಂದರ್ಭದಲ್ಲಿ ಪಣಂಬೂರು ಎಸಿಪಿ ತಂಡ ಹಾಗೂ ಮೂಲ್ಕಿ ಠಾಣೆಯ ಪೊಲೀಸರು ಕಾರ್ಯಾಚರಣೆಯನ್ನು ನಡೆಸಿ ಸುಹಾನಳನ್ನು ಬಂಧಿಸಿದ್ದಾರೆ. ಸುಹಾನ ಚೆನ್ನೈ ನಿಂದ ಮಾದಕ ವಸ್ತುವನ್ನು ತರಿಸಿಕೊಂಡು, ಮಾರಾಟ ಮಾಡಿ ಹಣ ಗಳಿಸುವ ಉದ್ದೇಶವನ್ನು ಹೊಂದಿದ್ದಳು ಎನ್ನಲಾಗಿದೆ. ಈ…
ಉದ್ಯಮ..ಶಿಕ್ಷಣ..ಮಾನವೀಯತೆಯ ಹೀರೋ ಮೊಹಮ್ಮದ್ ಶಫಿ ಎಂಬ ಸಿಂಪಲ್ ಮ್ಯಾನ್! – ರಾಷ್ಟ್ರ ಪ್ರಶಸ್ತಿ ವಿಜೇತ ಮಲೆನಾಡ ಹೆಮ್ಮೆಯ ಉದ್ಯಮಿ – ಆಜಾದ್ ಗ್ರೂಪ್ ಮೂಲಕ ಶಿಕ್ಷಣ ಸಂಸ್ಥೆ ಕಟ್ಟಿದ ಸಾಧಕ ಹಳ್ಳಿಯಲ್ಲಿ ಹುಟ್ಟಿ ಉದ್ಯಮದ ಮೂಲಕ ಎಂಟ್ರಿಯಾಗಿ ನವೋದ್ಯಮ ಕಟ್ಟಿದ ಸಾಹಸಿಗ ಮೊಹಮ್ಮದ್ ಶಫಿ. ಶಫಿ ಅವರು 1974ರ ಸೆಪ್ಟೆಂಬರ್ 6ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಸೊಪ್ಪುಗುಡ್ಡೆಯಲ್ಲಿ ಜನಿಸಿದರು. ತಂದೆ ಮೊಹಮದ್ ಗೌಸ್, ತಾಯಿ ಸಬೀರ ಬಾನು. ಇವರ ಸಹೋದರ ಮೊಹಮದ್ ರಫಿ, ಸಹೋದರಿ ರೇಷ್ಮಾ ಬಾನು. ಶಫಿ ತೀರ್ಥಹಳ್ಳಿಯ ಖ್ಯಾತ ಉದ್ಯಮಿಯಾಗಿದ್ದು ಆಜಾದ್ ಗ್ಲಾಸ್ ಆ್ಯಂಡ್ ಪ್ಲೇವುಡ್, ಆಜಾದ್ ಪೈಂಟ್ಸ್, ಆಜಾದ್ ಡಿ ಡೆಕೋರ್ ಎಂಬ ನಿರ್ಮಾಣ ಸಾಮಗ್ರಿಗಳ ಉದ್ಯಮ ಸಂಸ್ಥೆಗಳನ್ನು, ಆಜಾದ್ ಇನ್ಟ್ಸಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ ಮತ್ತು ಆಜಾದ್ ರೋಬೋಟಿಕ್ ಟೆಕ್ನಾಲಜಿ ಎಂಬ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿದ್ದಾರೆ. ಮಲೆನಾಡಿನ ಅನೇಕ ಸಂಘ, ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶಫಿ ಅವರ ಸಾಧನೆಗೆ ಇತ್ತೀಚೆಗೆ…
ಬಾವಿ ಮಣ್ಣು ತೆಗೆಯಲು ಹೋಗಿ ಬಾವಿಗೆ ಬಿದ್ದ ಮೂವರು! – ಕಾರ್ಕಳದ ಕುಕ್ಕುಂದೂರು ಅಶ್ವಥಪುರದಲ್ಲಿ ಘಟನೆ – ಕಾರ್ಕಳ ಅಗ್ನಿ ಶಾಮಕ ದಳದ ಯಶಸ್ವಿ ಕಾರ್ಯಚರಣೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರು ಅಶ್ವಥಪುರದಲ್ಲಿ ಬಾವಿಯ ಮಣ್ಣು ತೆಗೆಯುವ ವೇಳೆ ಮೂವರು ಕಾರ್ಮಿಕರು ಬಾವಿಯಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ. ಗಾಯಗೊಂಡಿದ್ದ ರಾಜೇಶ್ ಅವರನ್ನು ರಕ್ಷಿಸಲು ಹೋದ ಪವನ್ ಹಾಗೂ ಗೋಪಾಲ್ ನಾಯ್ಕ ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. ಮಾಹಿತಿ ಪಡೆದ ಕಾರ್ಕಳ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಸಾಹಸಮಯ ಕಾರ್ಯಾಚರಣೆ ನಡೆಸಿ ಮೂವರನ್ನೂ ಸುರಕ್ಷಿತವಾಗಿ ಮೇಲಕ್ಕೆತ್ತಿದೆ. ಗಾಯಾಳು ರಾಜೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಮೂಲಕ ಕಾರ್ಕಳ ಅಗ್ನಿ ಶಾಮಕ ದಳದ ಸಿಬ್ಬಂದಿ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.



