ಮಂಡ್ಯ: ಭಿಕ್ಷಾಟನೆ ಮಾಡಿಕೊಂಡಿದ್ದ ನೂರ್ ಎನ್ನುವ ವೃದ್ಧೆಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟ ಘಟನೆ ಮಂಡ್ಯದ ಭಾನುವಾರದಂದು ಗುತ್ತಲು ಬಡಾವಣೆಯಲ್ಲಿ ನಡೆದಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ ನೂರ್ ಳ ಮನೆಯನ್ನು ಪರಿಶೀಲಿಸಿದಾಗ ಮೂಟೆಗಟ್ಟಲೆ ಹಣ ಬೆಳಕಿಗೆ ಬಂದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ನೂರ್ ಅಂತ್ಯಸಂಸ್ಕಾರವನ್ನು ಆಕೆಯ ಸಂಬಂಧಿಕರು ಮತ್ತು ಅಕ್ಕಪಕ್ಕದ ಮನೆಯವರು ಸೇರಿ ನೆರವೇರಿಸಿದ್ದಾರೆ. ಬಳಿಕ ಅವರು ನೂರ್ ಳ ಮನೆಗೆ ಬಂದು ಆಕೆಗೆ ಸಂಬಂಧಿಸಿದ ವಸ್ತುಗಳನ್ನು ವಿಲೇವರಿ ಮಾಡುವ ಸಲುವಾಗಿ ಮನೆಯನ್ನು ತಡಕಾಡಿದಾಗ ಮೂಟೆಗಟ್ಟಲೆ ಹಣ ಪತ್ತೆಯಾಗಿದೆ. ಇದರಿಂದಾಗಿ ಎಲ್ಲರೂ ದಿಗ್ಬ್ರಮೆಗೊಂಡಿದ್ದಾರೆ. ಚಿಲ್ಲರೆ ಮತ್ತು ನೋಟುಗಳನ್ನು ಲೆಕ್ಕ ಹಾಕಿದಾಗ ಸುಮಾರು 8 ಲಕ್ಷ ರೂಪಾಯಿಗಳಷ್ಟು ಹಣ ಸಂಗ್ರಹವಾಗಿರುವ ಕುರಿತು ಮಾಹಿತಿ ಲಭಿಸಿದೆ. ಟಿಪ್ಪು ಸುಲ್ತಾನ್ ಕಟೌಟ್ ವಿವಾದ: ಸಿಟಿ ರವಿ ಸಿಟ್ಟು! ಚಿಕ್ಕಮಗಳೂರು: ನಗರದಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಟಿಪ್ಪುಸುಲ್ತಾನ್ ಕಟೌಟ್ ಅಳವಡಿಕೆ ಮತ್ತು ವಿವಾದಾತ್ಮಕ ಹಾಡು ಪ್ರಸಾರವಾಗುತ್ತಿರುವ ಕುರಿತು ಬಿಜೆಪಿ ನಾಯಕ ಸಿ.ಟಿ.ರವಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದಕ್ಕೆ…
Author: NammurEXP
ಬೆಂಗಳೂರು: ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಪ್ರತಿನಿಧಿಗಳು ಸಚಿವ ಖಾದರ್ ಅವರನ್ನು ಭೇಟಿ ಮಾಡಿ, ಅಡಿಕೆ ಸಂಬಂಧಿಸಿದ ವಿಚಾರಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಅರಗ ಜ್ಞಾನೇಂದ್ರ, ಎಂಎಲ್‌ಸಿ ಅರತಿ ಕೃಷ್ಣ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಅಡಿಕೆ ಬೆಳೆಗಾರರ ಹಿತಾಸಕ್ತಿ ಹಾಗೂ ಅವರ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ಬೆಳೆಗಾರರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ತೀರ್ಥಹಳ್ಳಿ -ಮುಳುಬಾಗಿಲಿನಲ್ಲಿ ರಿಂಗ್ ರಸ್ತೆ ವಿರುದ್ಧ ಜನಾಂದೋಲನ ತೀರ್ಥಹಳ್ಳಿ: ತೀರ್ಥಹಳ್ಳಿ -ಮುಳುಬಾಗಿಲಿನಲ್ಲಿ ರಿಂಗ್ ರಸ್ತೆ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಐತಿಹಾಸಿಕ ಪುರಾತನ ಭೀಮನಕಟ್ಟೆ (ಭೀಮಸೇ ತು )ಸೇತುವೆ,ಕೃಷಿ ಭೂಮಿ ಉಳಿಸಲು ಗ್ರಾಮಸ್ಥರ ಜನಾಂದೋಲನ ಶುರುವಾಗಿದೆ. ಸರ್ಕಾರವು ಪ್ರಸ್ತಾಪಿಸಿರುವ ತಾತ್ಕಾಲಿಕ ಅನುಮೋದಿತ ‘ರೋಡ್ ನೆಟ್‌ವರ್ಕ್ ಗ್ರಿಡ್ ಪ್ಲಾನ್’ (ರಿಂಗ್ ರಸ್ತೆ) ಯೋಜನೆಗೆ ತೀರ್ಥಹಳ್ಳಿ ತಾಲೂಕಿನ ಮುಳುಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೃಷಿಯನ್ನೇ ನಂಬಿ ಬದುಕುತ್ತಿರುವ ನೂರಾರು ಬಡ ರೈತರ ಜಮೀನುಗಳು…
ಶಿವಮೊಗ್ಗ: ಗೋಡೆಗೆ ಬಣ್ಣ ಹಚ್ಚುವ(ವಾಲ್ ಕೇರ್ ಪುಟ್ಟಿ) ಮಿಷನ್ ಅನ್ನು ಪರೀಕ್ಷಿಸುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ, ಮಂಗಳವಾರದಂದು ಯಡೇಹಳ್ಳಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಪೈಂಟರ್ ಶಾರುಖ್ ಖಾನ್ ಎಂದು ಗುರುತಿಸಲಾಗಿದೆ. ಶಿವಮೊಗ್ಗದಲ್ಲಿ ಹೊಸದಾಗಿ ಖರೀದಿಸಿ ತಂದಿದ್ದ ಮಿಷನ್ ಅನ್ನು ತಮ್ಮ ಮನೆಯಲ್ಲಿ ಟ್ರಯಲ್ ನೋಡುತ್ತಿದ್ದಾಗ, ಆಕಸ್ಮಿಕವಾಗಿ ವಿದ್ಯುತ್ ಸಂಚಾರ ಉಂಟಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಪರಿಣಾಮವಾಗಿ ತೀವ್ರ ಅಸ್ವಸ್ಥರಾಗಿದ್ದ ಶಾರುಖ್ ಖಾನ್ ಅವರನ್ನು ತಕ್ಷಣ ಹೊಳೆಹೊನ್ನೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಅವರನ್ನು ಪರೀಕ್ಷಿಸಿದ ವೈದ್ಯರು ಶಾರುಖ್ ಖಾನ್ ಆಗಲೇ ಮೃತಪಟ್ಟಿದ್ದಾರೆ •ಸಾಗರ: ರಂಗಮಂದಿರದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು ಸಾಗರ: ರಂಗಮಂದಿರದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ, ಸೋಮವಾರದಂದು ತುಮರಿ ಗ್ರಾಮದಲ್ಲಿರುವ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆದಿದೆ. ರಂಗಮಂದಿರದ ಮುಖ್ಯ ಬಾಗಿಲನ್ನು ಮುರಿದು ಒಳನುಗ್ಗಿದ ಖದೀಮರು, ರಂಗಮಂದಿರದ ಕುರ್ಚಿಗಳನ್ನು ಮುರಿದು, ಕಿಟಕಿಯ ಗಾಜುಗಳನ್ನು ಪುಡಿ ಮಾಡಿ, ರಂಗಮಂದಿರದ ನವೀಕರಣಕ್ಕಾಗಿ ತಂದಿರಿಸಿದ್ದ ಬಣ್ಣದ ಡಬ್ಬಿಗಳನ್ನು ಎಸೆದು, ಬಣ್ಣಗಳನ್ನು ಚೆಲ್ಲಿರುವುದಷ್ಟೇ…
ನವದೆಹಲಿ: ವಿಮೆಗಳಿಲ್ಲದೆ ರಸ್ತೆಗಳಲ್ಲಿ ಸಂಚರಿಸುತ್ತಿರುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳಗೊಳ್ಳುತ್ತಿರುವ ಕುರಿತು ಸರ್ವೋಚ್ಚ ನ್ಯಾಯಾಲಯವು ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ದೇಶದಲ್ಲಿ ಮೂರನೇ ದರ್ಜೆಯ ವಿಮೆ ಕಡ್ಡಾಯವಾಗಿದ್ದು, ಇದನ್ನು ಅಳವಡಿಸಿಕೊಳ್ಳದ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕುವ ಸಲುವಾಗಿ ‘ನೋ ಇನ್ಸೂರೆನ್ಸ್, ನೋ ಫ್ಯೂಯಲ್’ ಎನ್ನುವ ಪೈಲಟ್ ಯೋಜನೆಯನ್ನು ಜಾರಿಗೆ ತರುವ ಕುರಿತು ಗಂಭೀರವಾಗಿ ಚಿಂತನೆ ನಡೆಸಿದ್ದು, ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಪೆಟ್ರೋಲಿಯಂ ಸಚಿವಾಲಯ, ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶನವನ್ನು ಸಹ ನೀಡಿದೆ ಎನ್ನುವ ಮಾಹಿತಿ ಲಭಿಸಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡಿರುವಂತಹ ದ್ವಿಸದಸ್ಯ ಪೀಠವು ರಸ್ತೆ ಸುರಕ್ಷತೆ ಮತ್ತು ಅಪಘಾತಕ್ಕೆ ಒಳಗಾಗಿರುವಂತಹ ಸಂತ್ರಸ್ತರಿಗೆ ಪರಿಹಾರವನ್ನು ಒದಗಿಸುವ ಕುರಿತು ಹಲವಾರು ಮಹತ್ವದಾಯಕ ಸೂಚನೆಗಳನ್ನು ಸಹ ನೀಡಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ ದೇಶದಲ್ಲಿ ನೋಂದಣಿಗೊಂಡಿರುವ 30.48ಕೋಟಿ ವಾಹನಗಳಲ್ಲಿ ಶೇಕಡ 56ರಷ್ಟು ವಾಹನಗಳಿಗೆ ಕಡ್ಡಾಯ ಮೂರನೇ ದರ್ಜೆಯ ವಿಮೆ…
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಉಪ್ಪೂರು ಸಮೀಪ ಗುರುವಾರ ಬೆಳಗ್ಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಏಕಾಏಕಿ ಬೆಂಕಿಗೆ ಆಹುತಿಯಾಗಿದೆ. ಬಸ್ ಉಡುಪಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರದತ್ತ ತನ್ನ ಎಂದಿನ ಸಂಚಾರದಲ್ಲಿದ್ದ ವೇಳೆ ಈ ಘಟನೆ ಸಂಭವಿಸಿದೆ. ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಘಟನೆ ವೇಳೆ ಪ್ರಯಾಣಿಕರ ಸುರಕ್ಷತೆ ಹಾಗೂ ಹಾನಿಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. •ಪುತ್ತೂರು: ಕೋಳಿ ಅಂಕದ ಮೇಲೆ ದಾಳಿ; ಇಬ್ಬರ ಬಂಧನ ಪುತ್ತೂರು: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಧಾವಿಸಿ, ಪೊಲೀಸರು ದಾಳಿ ನಡೆಸಿದ ಘಟನೆ, ಮಂಗಳವಾರದಂದು ಕೊಣಾಲು ಗ್ರಾಮದ ಪಾಂಡಿಬೆಟ್ಟುವಿನ ರಬ್ಬರ್ ತೋಟದಲ್ಲಿನ ಖಾಲಿ ಜಾಗದಲ್ಲಿ ನಡೆದಿದೆ. ರಾತ್ರಿಯ ಗಸ್ತು ಕರ್ತವ್ಯದಲ್ಲಿದ್ದ ಉಪ್ಪಿನಂಗಡಿ ಠಾಣೆಯ ಪಿಎಸ್ಐ ಕೌಶಿಕ್ ಬಿ.ಸಿ ಮತ್ತು ಸಿಬ್ಬಂದಿಗಳು ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರನ್ನು ಕಂಡೊಡನೆ ಅಲ್ಲಿ ನೆರೆದಿದ್ದ ಆರೋಪಿಗಳು ಓಡಿ ಹೋಗಿದ್ದು, ಇಬ್ಬರು ಆರೋಪಿಗಳು ಪೊಲೀಸರಿಗೆ…
ಉಡುಪಿ: ದೇಶದ ಹಲವೆಡೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿ ಸೇವಿಸಲು ಯೋಗ್ಯವಲ್ಲದ ಆಹಾರ ಉತ್ಪನ್ನಗಳನ್ನು ಪತ್ತೆ ಮಾಡುತ್ತಿರುವ ನಡುವೆಯೇ, ಸಾಮಾನ್ಯರು ಹೆಚ್ಚಾಗಿ ಬಳಸುವ ಬಾಳೆಹಣ್ಣಿಗೂ ಕೃತಕ ಬಣ್ಣ ಹಚ್ಚಿ ಮಾರಾಟ ಮಾಡುತ್ತಿದ್ದ ಜಾಲ ಉಡುಪಿಯಲ್ಲಿ ಬಯಲಾಗಿದೆ. ಗುರುವಾರ (ಆ.20) ಉಡುಪಿ ತಾಲೂಕಿನ ಅಲೆವೂರಿನಲ್ಲಿ ಕುಂದಾಪುರ ಉಪ ವಿಭಾಗಾಧಿಕಾರಿ (ಎಸಿ) ನೇತೃತ್ವದ ತಂಡ ಬಾಳೆಕಾಯಿ ಮಂಡಿಗೆ ದಾಳಿ ನಡೆಸಿದ್ದು, ಕೃತಕ ಬಣ್ಣ ಹಚ್ಚಿ ಮಾರಾಟಕ್ಕೆ ಸಿದ್ಧಪಡಿಸಿದ್ದ ಸುಮಾರು 5 ಸಾವಿರ ಕೆಜಿ ಬಾಳೆಕಾಯಿಗಳನ್ನು ಸೀಜ್ ಮಾಡಿದೆ. ವಶಪಡಿಸಿಕೊಂಡ ಬಾಳೆಕಾಯಿಗಳ ಮೌಲ್ಯ ಸುಮಾರು 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ದಾಳಿ ವೇಳೆ ಬಾಳೆಕಾಯಿಗಳಿಗೆ ಕೃತಕ ಬಣ್ಣ ಹಚ್ಚಲು ಬಳಸುತ್ತಿದ್ದ ರಾಸಾಯನಿಕಗಳನ್ನು ಕೂಡ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಎಡಿಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಉಪ ವಿಭಾಗಾಧಿಕಾರಿ ರಶ್ಮಿ ನೇತೃತ್ವದ ತಂಡವು ಅಲೆವೂರಿನ ಮೂರು ಕಡೆ ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದು, ಈ ವೇಳೆ ಅಕ್ರಮ ಬಯಲಾಗಿದೆ…
ತೀರ್ಥಹಳ್ಳಿ: ಅಡಿಕೆ ನಿಷೇಧ ಹಂತ ತಲುಪಲು ಬಿಜೆಪಿ ಸರ್ಕಾರವೇ ಕಾರಣ. 2001ರಲ್ಲಿ ವಾಜಪೇಯಿ ಪ್ರಧಾನಿಯಾಗಿದ್ದ ಸಂದರ್ಭ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿಯನ್ನು ಸಲ್ಲಿಸಿದೆ. 2017, 2021 ರಲ್ಲಿ ವಿವಿಧ ಇಲಾಖೆಯ ಸಚಿವರು, ಸಂಸದರು ನಿಷೇಧಕ್ಕೆ ಆಗ್ರಹಿಸಿದ್ದಾರೆ. ಆಗ ನಮ್ಮ ಅಡಿಕೆ ಜ್ಞಾನೇಂದ್ರ ಎಲ್ಲಿ ಹೋಗಿದ್ದರು ಎಂದು ಕಾಂಗ್ರೆಸ್ ನಾಯಕ ರಮೇಶ್ ಹೆಗ್ಡೆ ಆರೋಪಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಅಡಿಕೆ ಬೆಳೆಗಾರರಿಗೆ ನಬಾರ್ಡ್, ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಸಂಘದಲ್ಲಿ ಸಾಲ ಸಿಗದಂತೆ ಮಾಡಿದ್ದಾರೆ. ಉತ್ತರ ಭಾರತದ ಅಡಿಕೆ ವ್ಯಾಪಾರಿಗಳ ಲಾಭಕ್ಕಾಗಿ ಬೆಳೆಗಾರರನ್ನು ಬಲಿ ಹಾಕುತ್ತಿದ್ದಾರೆ. ಇಂಡೋನೇಷಿಯಾದ ಅಡಿಕೆ ಶ್ರೀಲಂಕ ಮೂಲಕ ತೆರಿಗೆ ವಂಚಿಸಿ ಮರು ರಪ್ತು ಮಾಡಲಾಗುತ್ತಿದೆ. ಇವೆಲ್ಲ ಅಡಿಕೆ ಜ್ಞಾನೇಂದ್ರಣ್ಣಂಗೆ ಗೊತ್ತಿಲ್ವೆ ಎಂದು ರಮೇಶ್ ಹೆಗ್ಡೆ ಪ್ರಶ್ನಿಸಿದ್ದಾರೆ. ಭಾರತೀಯ ಸಂಸ್ಕೃತಿಯ ಸಂಕೇತವೂ ಹಾಗೂ ಲಕ್ಷಾಂತರ ರೈತರ ಜೀವನಾಡಿಯೂ ಆಗಿರುವ ಅಡಿಕೆ ಬೆಳೆಗೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ನೀತಿಗಳಿಂದ ದೊಡ್ಡ ಮಟ್ಟದ ಆತಂಕ ಎದುರಾಗಿದೆ. ಅಡಿಕೆ ಬೆಳೆಗಾರರ ಹಿತ…
ಶೃಂಗೇರಿ: ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿದುಶೇಖರ ಭಾರತೀ ಮಹಾಸ್ವಾಮಿಗಳ 34 ನೇ ವರ್ಧಂತೋತ್ಸವದ ಪ್ರಯುಕ್ತ ರಕ್ತದಾನಿಗಳು ವಾಟ್ಸ್ ಆ್ಯಪ್ ಗ್ರೂಪ್ ಹಾಗೂ ಕಾರ್ಮಿಕ ಮಿತ್ರ ಬಳಗವು ಅಭಿನವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶೃಂಗೇರಿ ಮತ್ತು ರೋಟ್ರಾಕ್ಟ್ ಕ್ಲಬ್ ಇವರ ಸಹಯೋಗದಲ್ಲಿ ಆಗಸ್ಟ್ 19 ರಂದು ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಿದೆ. ಶೃಂಗೇರಿಯ ಶ್ರೀಮಠದ ಶಾರದಾ ಕೃಪಾದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯುವ ಈ ಶಿಬಿರದಲ್ಲಿ ಎಲ್ಲಾ ರಕ್ತದಾನಿಗಳು,ಆಸಕ್ತರು ಬಂದು ರಕ್ತದಾನ ಮಾಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಬೆಂಗಳೂರು: ಪ್ರತಿಭೆ ಮತ್ತು ಓದಿನ ಬಗ್ಗೆ ವಿಶೇಷ ಒಲವು ಹಾಗೂ ಉತ್ಸಾಹವಿದ್ದರೂ ಕೆಲವೊಮ್ಮೆ ವಿದ್ಯಾರ್ಥಿಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿ, ತಮ್ಮ ಕನಸುಗಳನ್ನು ಚಿವುಟಿ ಹಾಕಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಆದರೆ, ಅಂತಹ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಲು ಭಾರತದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ‘ಎಸ್ ಬಿಐ’ ತನ್ನ ಎಸ್ ಬಿಐ ಫೌಂಡೇಶನ್ ನ ವತಿಯಿಂದ ‘ಎಸ್‌ಬಿಐ ಪ್ಲಾಟಿನಂ 2026-27 ಆಶಾ ವಿದ್ಯಾರ್ಥಿವೇತನ’ ಎನ್ನುವ ಹೊಸ ಯೋಜನೆಯೊಂದನ್ನು ರೂಪಿಸಿದೆ. ವಿದ್ಯಾರ್ಥಿಗಳ ಹೆಚ್ಚಿನ ವ್ಯಾಸಂಗಕ್ಕೆ ನೆರವಾಗುವ ಉದ್ದೇಶದಿಂದ ಈ ವಿದ್ಯಾರ್ಥಿ ವೇತನವನ್ನು ಪ್ರಾರಂಭಿಸಿದ್ದು, 9ನೇ ತರಗತಿಯಿಂದ ಉನ್ನತ ವ್ಯಾಸಂಗದವರೆಗೆ ಹಾಗೂ ವಿದೇಶಗಳಲ್ಲಿ ವ್ಯಾಸಂಗ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನವು ಆರ್ಥಿಕವಾಗಿ ಆಸರೆಯಾಗಲಿದೆ. ಈಗಾಗಲೇ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಸೆಪ್ಟೆಂಬರ್ 4ರ ಶುಕ್ರವಾರದಂದು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ ಲೈನ್ ಮೂಲಕ ನಡೆಯಲಿದ್ದು, ಉಚಿತವಾಗಿ ಸಲ್ಲಿಸಬಹುದಾಗಿದೆ. ಅರ್ಹ ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಈ ಮೂಲಕ…
ಉಡುಪಿ: ಸುಮಾರು ಮೂರು ಗಂಟೆಗಳ ಕಾಲ ಅರಬ್ಬಿ ಸಮುದ್ರದಲ್ಲಿ ದಡದಿಂದ ದೂರ ಈಜುತ್ತಿದ್ದ ವ್ಯಕ್ತಿಯೊಬ್ಬರನ್ನು ಸಮಾಜ ಸೇವಕ ಈಶ್ವರ್ ಮಲ್ಪೆ ಅವರು ಸಮುದ್ರಕ್ಕೆ ಇಳಿದು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ. ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಕಾಡಿಪಟ್ಣ ನಿವಾಸಿ ಹಾಗೂ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಈ ಹಿಂದೆ ಲೈಫ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯತೀಶ್ (38) ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ಯತೀಶ್ ಈ ಹಿಂದೆ ಕೂಡ ಒಂದೆರಡು ಬಾರಿ ಇದೇ ರೀತಿಯ ಕೃತ್ಯಕ್ಕೆ ಮುಂದಾಗಿದ್ದರು. ಆಗ ಸ್ಥಳೀಯರು ಮಧ್ಯಪ್ರವೇಶಿಸಿ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದರು. ಭಾನುವಾರ ಮಧ್ಯಾಹ್ನ ಸ್ಥಳೀಯ ನಿವಾಸಿಗಳು ನೋಡುತ್ತಿದ್ದಂತೆಯೇ ಯತೀಶ್ ಅರಬ್ಬಿ ಸಮುದ್ರಕ್ಕೆ ಇಳಿದಿದ್ದರು. ಕಾಪುವಿನಿಂದ ದೋಣಿಯಲ್ಲಿ ಬಂದ ಮೀನುಗಾರರು ಅರ್ಧ ಗಂಟೆಗೂ ಹೆಚ್ಚು ಕಾಲ ಹಲವು ಬಾರಿ ಪ್ರಯತ್ನಿಸಿ ಅವರನ್ನು ದೋಣಿಗೆ ಎಳೆದುಕೊಳ್ಳಲು ಯತ್ನಿಸಿದರೂ ಯಶಸ್ವಿಯಾಗಲಿಲ್ಲ. ಪಡುಬಿದ್ರಿ ಬೀಚ್‌ಗೆ ಆಗಮಿಸಿದ ಈಶ್ವರ್ ಸಮುದ್ರಕ್ಕೆ ಇಳಿದರು. ಯತೀಶ್ ಇದ್ದಲ್ಲಿಗೆ ಸುಮಾರು ಮೂರು ನಾಟಿಕಲ್ ಮೈಲುಗಳಷ್ಟು ದೂರ ಈಜಿಕೊಂಡು ತೆರಳಿದ ಅವರು,…



