ಬೆಂಗಳೂರು: ಬ್ಯಾಂಕ್ ಗೆ ಸಂಬಂಧಿಸಿದಂತಹ ಕೆಲಸಗಳಿದ್ದರೆ ಗ್ರಾಹಕರು ಸೆಪ್ಟೆಂಬರ್ ತಿಂಗಳ ದಿನಾಂಕಗಳನ್ನು ಪರಿಶೀಲಿಸಿಕೊಂಡು ತಮ್ಮ ಕೆಲಸಗಳನ್ನು ಮುಗಿಸಿಕೊಳ್ಳಬೇಕಿದೆ. ಏಕೆಂದ್ರೆ ಸೆಪ್ಟೆಂಬರ್ ತಿಂಗಳಿನಲ್ಲಿ ಹಬ್ಬಗಳು, ಪ್ರಾದೇಶಿಕ ರಜೆಗಳು ಮತ್ತು ವಾರದ ರಜೆಗಳು ಸೇರಿದಂತೆ ಸಾಲು ಸಾಲು ರಜೆಗಳಿವೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಿರುವ ಕ್ಯಾಲೆಂಡರ್ ಅನ್ವಯ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳ ಶಾಖೆಗಳಿಗೆ ಆಯಾ ರಾಜ್ಯ ಮತ್ತು ನಗರಗಳಿಗೆ ಅನುಗುಣವಾಗಿ ರಜೆಗಳು ಅನ್ವಯಗೊಳ್ಳಲಿದೆ. ಯಾವತ್ತು ಯಾವತ್ತು ರಜೆ? ಸೆಪ್ಟೆಂಬರ್ 12ರ ಎರಡನೇ ಶನಿವಾರ ಮತ್ತು ಸೆಪ್ಟೆಂಬರ್ 26ರ ನಾಲ್ಕನೇ ಶನಿವಾರ ಹಾಗೂ ಎಂದಿನಂತೆ ಭಾನುವಾರಗಳು ಬ್ಯಾಂಕ್ ಗಳಿಗೆ ಸಾಮಾನ್ಯವಾಗಿ ರಜೆ ಇರುತ್ತದೆ. ಇದರೊಂದಿಗೆ ಸೆಪ್ಟೆಂಬರ್ 4ರ ಶುಕ್ರವಾರದಂದು ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೆಲವು ನಗರಗಳ ಬ್ಯಾಂಕ್ ಗಳಿಗೆ ಅಂದು ರಜೆ ಇರುತ್ತದೆ. ಮತ್ತು ಸೆಪ್ಟೆಂಬರ್ 14ರ ಸೋಮವಾರದಂದು ಗಣೇಶ ಚತುರ್ಥಿಯ ಪ್ರಯುಕ್ತ ಬೆಂಗಳೂರು, ಮುಂಬೈ ಮತ್ತು ಚೆನ್ನೈ ಸೇರಿದಂತೆ ಕೆಲವು ಪ್ರಮುಖ ನಗರಗಳ ಬ್ಯಾಂಕ್ ಶಾಖೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಅಷ್ಟೇ…
Author: NammurEXP
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತಾಲೂಕಿನ ಯಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ತೀರ್ಥಹಳ್ಳಿ ಹಾಗೂ ದಾನಿಗಳ ಸಹಯೋಗದಲ್ಲಿ ನೂತನ ತಂತ್ರಜ್ಞಾನದ ಸುಸಜ್ಜಿತ ಧ್ವನಿವರ್ಧಕ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಲಾಯಿತು. ಆಗಸ್ಟ್ 25ರಂದು ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನ ದಾನಿ ಶ್ರೀ ನಂಜೇಗೌಡರು ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಸುಮಾರು 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆಗೆ ಧ್ವನಿವರ್ಧಕ ವ್ಯವಸ್ಥೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು. ಸುಮಾರು 117 ವರ್ಷಗಳ ಇತಿಹಾಸ ಹೊಂದಿರುವ ಯಡೂರು ಶಾಲೆ ಈ ಭಾಗದ ಅನೇಕ ಮಹನೀಯರಿಗೆ ವಿದ್ಯಾಭ್ಯಾಸ ನೀಡಿದೆ. ಸುತ್ತಮುತ್ತಲಿನ ಹಲವು ಗ್ರಾಮಗಳಿಂದ ವಿದ್ಯಾರ್ಥಿಗಳು ಈ ಶಾಲೆಗೆ ಆಗಮಿಸಿ ಶಿಕ್ಷಣ ಪಡೆಯುತ್ತಿದ್ದ ಕಾಲವಿತ್ತು. ನಂತರ ಸುತ್ತಮುತ್ತಲಿನ ಪ್ರದೇಶಗಳು ಮುಳುಗಡೆಯಾಗಿ ಜನಸಂಖ್ಯೆ ವಿರಳವಾದರೂ, ಶಾಲೆಯು ತನ್ನ ಸ್ವಂತ ಶ್ರಮ ಹಾಗೂ ಸ್ಥಳೀಯರ ಸಹಕಾರದಿಂದ ಮುನ್ನಡೆಯುತ್ತಾ ಬಂದಿದೆ. ರೋಟರಿ ಕ್ಲಬ್ ತೀರ್ಥಹಳ್ಳಿ ವತಿಯಿಂದ ಶಾಲೆಗೆ ಹಲವು ಬಾರಿ ನೋಟ್‌ಬುಕ್‌ಗಳು ಹಾಗೂ ವಿವಿಧ ಶಾಲಾ ಪರಿಕರಗಳನ್ನು ನೀಡಲಾಗಿದೆ. ಸಭೆ-ಸಮಾರಂಭಗಳ ಸಂದರ್ಭದಲ್ಲಿ…
ಉಡುಪಿ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಗಸ್ಟ್ 27ರಂದು ಖಾಸಗಿ ತರಬೇತಿ ವಿಮಾನ ಅಪಘಾತದಲ್ಲಿ ಉಡುಪಿ ಮೂಲದ ತರಬೇತಿ ಪೈಲಟ್ ಅಭಿಷೇಕ್ ಪೂಜಾರಿ(22) ಮೃತಪಟ್ಟಿದ್ದಾರೆ. ಅಭಿಷೇಕ್ ಪೂಜಾರಿ ಅವರು ಉಡುಪಿ ಜಿಲ್ಲೆಯ ಕಣಜಾರು ಗ್ರಾಮದ ಕಾಡೆಬರ್ಕೆ ನಿವಾಸಿ ಮೂಲದವರಾಗಿದ್ದು, ಈ ಪ್ರದೇಶವು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ. ಲಭ್ಯ ಮಾಹಿತಿಯ ಪ್ರಕಾರ, ಅವರು ಕಳೆದ ಸುಮಾರು ಎರಡೂವರೆ ವರ್ಷಗಳಿಂದ ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ಪೈಲಟ್ ಆಗಿ ತರಬೇತಿ ಪಡೆಯುತ್ತಿದ್ದರು. ಅಭಿಷೇಕ್ ಅವರ ತಂದೆ ಪ್ರಭಾಕರ್ ಪೂಜಾರಿ ಹಾಗೂ ತಾಯಿ ಶಶಿಕಲಾ ಪೂಜಾರಿ ಅವರು ಮಹಾರಾಷ್ಟ್ರದ ಮುಂಬೈನಲ್ಲಿ ವಾಸವಾಗಿದ್ದಾರೆ. ಅಭಿಷೇಕ್ ಅವರು ತಮ್ಮ ಕುಟುಂಬದೊಂದಿಗೆ ಆಗಾಗ ಕಣಜಾರು ಗ್ರಾಮದ ಕಾಡೆಬರ್ಕೆಯಲ್ಲಿರುವ ತಮ್ಮ ತಾಯಿಯ ಸಹೋದರ ಜೀವನ್ ಕುಮಾರ್ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಅಪಘಾತದ ಮಾಹಿತಿ ತಿಳಿದ ಕುಟುಂಬಸ್ಥರು ಕಾನ್ಪುರಕ್ಕೆ ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳು ಮುಂದುವರಿದಿವೆ. ಮಂಗಳೂರು: ಮಾದಕ ವಸ್ತು ಸೇವನೆ; ನಾಲ್ವರ ಬಂಧನ ಮಂಗಳೂರು: ಮಾದಕ…
ಬೆಂಗಳೂರು: ಸರ್ಕಾರದ ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ನಡೆಸುತ್ತಿರುವ ವಿಶೇಷ ತಪಾಸಣಾ ಅಭಿಯಾನದ ಸಂದರ್ಭದಲ್ಲಿ ಹಲವಾರು ಹೊಟೇಲ್ ಮತ್ತು ಆಹಾರ ಉದ್ಯಮದಲ್ಲಿ ಸ್ವಚ್ಛತೆ, ಆಹಾರ ಸುರಕ್ಷತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತಹ ಹಲವಾರು ಲೋಪದೋಷಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತಾಲಯವು ರಾಜ್ಯದ ಎಲ್ಲಾ ಆಹಾರ ಉದ್ದಿಮೆದಾರರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಮತ್ತು ಸಲಹೆಯನ್ನು ಹೊರಡಿಸಿದೆ. ತಪಾಸಣೆಯ ಸಂದರ್ಭದಲ್ಲಿ ಪತ್ತೆಯಾಗಿರುವಂತಹ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಹೊಟೇಲ್ ಸೇರಿದಂತೆ ಇತರೆ ಆಹಾರ ಉದ್ದಿಮೆದಾರರಿಗೆ ಕಾಲಾವಕಾಶವನ್ನು ನೀಡಲಾಗಿದ್ದು, ಈ ಅವಧಿಯಲ್ಲಿಯೇ ಅಗತ್ಯ ಕ್ರಮಗಳನ್ನು ಕೈಗೊಂಡು ಆಹಾರ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ. ಒಂದು ವೇಳೆ ನೀಡಿರುವಂತಹ ಅವಧಿಯ ಬಳಿಕವೂ ಮರುತಪಾಸಣೆಯ ಸಂದರ್ಭದಲ್ಲಿ ನಿಯಮವನ್ನು ಉಲ್ಲಂಘಿಸಿ ಲೋಪದೋಷಗಳು ಮುಂದುವರಿದದ್ದೇಯಾದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2026ರ ಅಡಿಯಲ್ಲಿ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಆಯುಕ್ತಾಲಯವು ಎಚ್ಚರಿಕೆಯನ್ನು ನೀಡಿದೆ. ಹೋಟೆಲ್ ಅಲ್ಲಿ ಏನೇನು ಕಡ್ಡಾಯ? ಆಹಾರ ಉದ್ದಿಮೆದಾರರು ಎಫ್ಎಸ್ಎಸ್ಎಐ ಪರವಾನಗಿ…
ಚಿಕ್ಕಮಗಳೂರು: ಆಟವಾಡುತ್ತಿದ್ದ ಬಾಲಕನನ್ನು ಕಾಡಾನೆಯೊಂದು ಬೆನ್ನಟ್ಟಿದ ಘಟನೆ, ಹರವಿನಗುಂಡಿ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದ ಲೇಬರ್ ಲೈನ್ ಮುಂಭಾಗದಲ್ಲಿ ಬಾಲಕ ಆಟವಾಡುತ್ತಿದ್ದ ಸಂದರ್ಭದಲ್ಲಿ ಒಂಟಿ ಸಲಗವೊಂದು ಏಕಾಏಕಿ ಪ್ರತ್ಯಕ್ಷಗೊಂಡು, ಬಾಲಕನತ್ತ ಧಾವಿಸಿ ಬಂದಿದೆ. ಬಳಿಕ ಕಾಡಾನೆಯು ಕೂಡಲೇ ರಸ್ತೆಯಲ್ಲಿ ಮುನ್ನುಗ್ಗಿದ್ದರಿಂದ ಬಾಲಕನು ಅದೃಷ್ಟದಿಂದಾಗಿ ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನುವ ಮಾಹಿತಿ ಲಭಿಸಿದೆ. ಇತ್ತೀಚಿನ ಕೆಲವು ದಿನಗಳಿಂದ ಕಾಡಂಚಿನ ಪ್ರದೇಶಗಳು ಮತ್ತು ಕಾಫಿತೋಟಗಳ ನಡುವೆ ಪುಂಡಾನೆಗಳು ಬೀಡುಬಿಟ್ಟಿದ್ದು, ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ತೀವ್ರ ರೀತಿಯ ಆತಂಕವನ್ನು ಸೃಷ್ಟಿಸಿದೆ. ಪರಿಣಾಮವಾಗಿ ಸ್ಥಳೀಯರು ಮತ್ತು ತೋಟದ ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುವಂತಹ ಪರಿಸ್ಥಿತಿ ಎದುರಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಅರಣ್ಯ ಇಲಾಖೆಯವರು ಸಾರ್ವಜನಿಕರಿಗೆ ಮತ್ತು ಗ್ರಾಮಸ್ಥರಿಗೆ ಅನಗತ್ಯವಾಗಿ ಮತ್ತು ಒಂಟಿಯಾಗಿ ಸಂಚಾರ ನಡೆಸದೆ ಎಚ್ಚರಿಕೆಯಿಂದಿರುವಂತೆ ಸೂಚನೆಯನ್ನು ನೀಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. •ಶಿವಮೊಗ್ಗ: ಎಸ್ಎಸ್ಎಲ್ ಸಿ ವಿದ್ಯಾರ್ಥಿ ನೀರು ಪಾಲು ಶಿವಮೊಗ್ಗ: ಈಜಲು ತೆರಳಿದ್ದ ಎಸ್ಎಸ್ಎಲ್ ಸಿ ವಿದ್ಯಾರ್ಥಿಯೊಬ್ಬ ನೀರು ಪಾಲಾಗಿರುವ ಘಟನೆ, ಬುಧವಾರದಂದು ಅಬ್ಬಲಗೆರೆ…
ಮಂಗಳೂರು: ಮೊಬೈಲ್ ವಿಚಾರವಾಗಿ ಅಣ್ಣ ಮತ್ತು ತಂಗಿಯ ನಡುವೆ ಕಲಹ ಉಂಟಾಗಿದ್ದು, ಅದು ಕೊಲೆಯಲ್ಲಿ ಅಂತ್ಯ ಕಂಡಿರುವ ಘಟನೆ, ಕಂಬಳಪದವುನಲ್ಲಿ ನಡೆದಿದೆ. ಸ್ಯಾಮ್ಸನ್ ಫ್ಯಾನ್ಸಿಸ್ ಕುಟಿನ್ಹಾ ಮತ್ತು ಆತನ ಸಹೋದರಿಯ ನಡುವೆ 2019ರಲ್ಲಿ ಜಗಳ ನಡೆದಿದ್ದು, ಅದು ಮಿತಿಮೀರಿದ ಪರಿಣಾಮವಾಗಿ ಸ್ಯಾಮ್ಸನ್ ತನ್ನ ಸಹೋದರಿಯನ್ನು ಕೊಲೆ ಮಾಡಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರದಂದು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ವಿಚಾರಣೆಯನ್ನು ನಡೆಸಿದ್ದು, ಆರೋಪಿಯಾದ ಸ್ಯಾಮ್ಸನ್ ಫ್ಯಾನ್ಸಿಸ್ ಕುಟಿನ್ಹಾ ಗೆ ಭಾರತೀಯ ದಂಡ ಸಂಹಿತೆಯ ಕಲಂ 3೦4ರ ಅಡಿಯಲ್ಲಿ ನಾಲ್ಕು ವರ್ಷಗಳ ಸಾದಾ ಜೈಲು ಶಿಕ್ಷೆ ಮತ್ತು 10.000 ದಂಡ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಕ್ಕಾಗಿ ಕಲಂ 201 ಐಪಿಸಿ ಅಡಿಯಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಕಾಲ ಜೈಲುಶಿಕ್ಷೆ ಮತ್ತು 1000 ರೂಪಾಯಿ ದಂಡ ವಿಧಿಸುವಂತೆ ನ್ಯಾಯಾಲಯವು ಆದೇಶವನ್ನು ಹೊರಡಿಸಿದೆ. •ಕುಂದಾಪುರ: ಮುಳುಗಿದ ಪರ್ಶಿನ್ ಹಡಗು; ಮೀನುಗಾರರ ರಕ್ಷಣೆ ಕುಂದಾಪುರ: ಶ್ರೀಬಾಲಾಂಜನೇಯ ಹೆಸರಿನ ಪರ್ಶಿನ್ ಮೀನುಗಾರಿಕಾ ಹಡಗೊಂದು…
ತೀರ್ಥಹಳ್ಳಿ : ಆಗಸ್ಟ್ 28 ರ ಶುಕ್ರವಾರ ಬೆಳಿಗ್ಗೆ 9-30ಕ್ಕೆ ಕುರುವಳ್ಳಿ ಬೊಮ್ಮ ರಸ ಯ್ಯನ ಅಗ್ರಹಾರದ ಶ್ರೀ ಗುರು ಮಂದಿರದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172 ನೇ ಜನ್ಮ ಜಯಂತಿ ಹಾಗೂ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ, ಈ ಶುಭ ಕಾರ್ಯದಲ್ಲಿ ಭಾಗವಹಿಸಿ ಶ್ರೀ ನಾರಾಯಣ ಗುರುಗಳ ಕೃಪೆಗೆ ಪಾತ್ರರಾ ಗಬೇಕೆಂದು ತೀರ್ಥಹಳ್ಳಿ ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ. ತಿರುಮಲ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ ತೀರ್ಥಹಳ್ಳಿ : ರಥಬೀದಿಯಲ್ಲಿರುವ ತಿರುಮಲ ಶ್ರೀಲಕ್ಷ್ಮೀವೆಂಕಟರಮಣ ದೇವಸ್ಥಾ ನದ ಶ್ರೀ ಮಹಾಲಕ್ಷ್ಮೀ ಅಮ್ಮನವರ ಸಾನಿಧ್ಯದಲ್ಲಿ ವರ್ಷಂಪ್ರತಿಯಂತೆ ದಿನಾಂಕ : 28-08-2026 ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮೀ ವೃತಾಚರಣೆಯನ್ನು ಶ್ರದ್ಧಾಭಕ್ತಿ ಪೂರ್ವಕವಾಗಿ ಆಚರಿಸಲಾಗುವುದು.ಬೆಳಗ್ಗೆ 9-30ಕ್ಕೆ ಪ್ರಾರ್ಥನೆ, ಕಲಶ ಸ್ಥಾಪನೆ ಮಹಾಲಕ್ಷ್ಮೀ ಅಮ್ಮನವರಿಗೆ ಮುತ್ತೈದೆಯರಿಂದ ಉಡಿ ತುಂಬುವುದು, ಕುಂಕುಮಾರ್ಚನೆ ಜರುಗಲಿರುವುದು. ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಪ್ರಸಾದ ವಿನಿಯೋಗ, ಸಂಜೆ…
ನವದೆಹಲಿ: ಈರುಳ್ಳಿ ಬೆಲೆಯಲ್ಲಿ ಏಕಾಏಕಿ ಏರಿಕೆ ಕಂಡುಬಂದಿದ್ದು, ಕಳೆದ ವರ್ಷಕ್ಕಿಂತ ಶೇಕಡ 45ರಷ್ಟು ಹೆಚ್ಚಳಗೊಂಡಿದೆ ಎನ್ನಲಾಗಿದೆ. ಮಾಹಿತಿಯ ಪ್ರಕಾರ ಬೆಂಗಳೂರಿನಲ್ಲಿ ಒಂದು ಕೆಜಿ ಈರುಳ್ಳಿಯು 45 ರಿಂದ 52 ರೂಪಾಯಿಗಳಿಗೆ ಮಾರಾಟವಾಗುತ್ತಿದ್ದರೆ, ದೆಹಲಿಯಲ್ಲಿ ಇದರ ಬೆಲೆ 35 ರಿಂದ 65ರೂಪಾಯಿಗೆ, ಚೆನ್ನೈನಲ್ಲಿ 33 ರೂಪಾಯಿಗಳಿಂದ 58 ರೂಪಾಯಿಗೆ ತಲುಪಿದೆ. ಮಹಾರಾಷ್ಟ್ರದಲ್ಲಿ ಖಾರಿಫ್ ಬೆಳೆ ಉತ್ಪಾದನೆಯಲ್ಲಿನ ಕುಸಿತ ಮತ್ತು ಹಬ್ಬದ ಸಮಯವಾದ್ದರಿಂದ ಬೇಡಿಕೆ ಹೆಚ್ಚಳಗೊಂಡಿರುವುದೇ ಬೆಲೆ ಅಧಿಕಗೊಳ್ಳಲು ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ಮಹತ್ವದಾಯಕ ನಿರ್ಣಯವನ್ನು ಕೈಗೊಂಡಿದ್ದು, ತನ್ನ ಬಳಿ ಇರುವ ಬಫರ್ ಶೇಖರಣೆಯಿಂದ ಈರುಳ್ಳಿಗಳನ್ನು ಪ್ರಮುಖ ನಗರಗಳಿಗೆ ಸಾಗಿಸಲು ‘ಕಾಂಡಾ ಎಕ್ಸ್ ಪ್ರೆಸ್ ‘ ರೈಲು ಸೇವೆಯನ್ನು ಸೋಮವಾರದಿಂದ ಆರಂಭಿಸಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ. ಹಬ್ಬದ ಸಂದರ್ಭದಲ್ಲಿ ಜನತೆಗೆ ಶಾಕ್ ಬೆಂಗಳೂರು: ಶ್ರಾವಣ ಮಾಸದ ಹಬ್ಬಗಳ ಸಂಭ್ರಮದಲ್ಲಿರುವ ಸಾರ್ವಜನಿಕರಿಗೆ ಸಿಹಿಯ ಬದಲಿಗೆ ಕಹಿಯನ್ನು ನೀಡುವಂತಹ ವರದಿಯೊಂದು ಹೊರಬಿದ್ದಿದೆ. ಈಗಾಗಲೇ ಹಲವಾರು ಸರಕು…
ಬೆಂಗಳೂರು: ರೈತರಿಗೆ ಸಹಕಾರಿ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತಿರುವ ಸಾಲದ ಮಿತಿಯನ್ನು 5ಲಕ್ಷಕ್ಕೆ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಸಂದೇಶವನ್ನು ನೀಡಿದ್ದು, ಬೆಂಗಳೂರಿನ ಸಹಕಾರ ಸಂಘಗಳ ನಿಬಂಧಕರ ಕಛೇರಿಯಿಂದ ಸುತ್ತೋಲೆಯನ್ನು ಸಹ ಹೊರಡಿಸಲಾಗಿದೆ. 2023-24ರಲ್ಲಿ ಶೂನ್ಯ ಬಡ್ಡಿ ದರದ ಬೆಳೆ ಸಾಲದ ಮಿತಿಯನ್ನು ಸಿದ್ಧರಾಮಯ್ಯ ಅವರ ನೇತೃತ್ವದ ಸರ್ಕಾರವು 3ರಿಂದ 5ಲಕ್ಷಕ್ಕೆ ಹೆಚ್ಚಿಸಿತ್ತು. ಆದರೆ ನಬಾರ್ಡ್ ಇದಕ್ಕೆ ಅಗತ್ಯವಾಗಿರುವಂತಹ ಮೊತ್ತವನ್ನು ಬಿಡುಗಡೆಗೊಳಿಸದ ಹಿನ್ನೆಲೆಯಲ್ಲಿ ಹಲವಾರು ರೈತರು ಈ ಉತ್ತಮ ಯೋಜನೆಯಿಂದ ವಂಚಿತರಾಗುವಂತಾಯಿತು. ಅಲ್ಲದೆ ರೈತರಿಗಾಗಿ ಕೆಲವು ಸಹಕಾರಿ ಸಂಘಗಳು ತಮ್ಮ ಸಂಘದ ಸ್ವಂತ ನಿಧಿಯಿಂದ ಸಾಲವನ್ನು ನೀಡುವ ಮೂಲಕ ಸಮಸ್ಯೆಗೆ ಸಿಲುಕಿಕೊಳ್ಳುವಂತಾಗಿತ್ತು. ನಬಾರ್ಡ್ ನಿಂದ ಹಣವು ಬಿಡುಗಡೆಗೊಳ್ಳದ ಕಾರಣದಿಂದ ಸಹಕಾರಿ ಸಂಘಗಳು ಸಾಲ ನೀಡಿದ ರೈತರಿಗೆ ಹಣದ ಮರುಪಾವತಿಯ ಸಂದರ್ಭದಲ್ಲಿ ಬಡ್ಡಿಯನ್ನು ಕಟ್ಟುವಂತೆ ತಿಳಿಸಿತ್ತು. ಆದರೆ ರೈತರು ಬಡ್ಡಿಯ ಹಣವನ್ನು ಪಾವತಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಈ ರೀತಿಯ ಸಮಸ್ಯೆಗಳು ಮತ್ತೊಮ್ಮೆ ತಲೆದೋರದಂತೆ ಮಾಡಲು ಸರ್ಕಾರವು ಸಹಕಾರಿ ಇಲಾಖೆಯಿಂದ…
ಉಡುಪಿ: ಫೇಸ್ ಬುಕ್ ನಲ್ಲಿ ಲಾಟರಿ ಟಿಕೆಟ್ ಗೆ ಸಂಬಂಧಿಸಿದಂತೆ ಜಾಹೀರಾತನ್ನು ನೋಡಿ ಹಣದ ಆಸೆಗೆ ಒಳಗಾಗಿ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಜಾಹೀರಾತಿನಿಂದ ಪ್ರಭಾವಿತರಾದ ಜುಲಿಯಾನ ಎನ್ನುವ ಮಹಿಳೆಯು ಲಾಟರಿ ಟಿಕೆಟ್ ಅನ್ನು ಆನ್ ಲೈನ್ ನಲ್ಲಿ ಲಿಂಕ್ ಅನ್ನು ಒತ್ತುವ ಮೂಲಕ ಖರೀದಿಸಿದ್ದಾರೆ. ಇದಾದ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಜುಲಿಯಾನ ಅವರಿಗೆ ಕರೆ ಮಾಡಿ “ನಿಮಗೆ ಭಾರಿ ಮೊಟ್ಟದ ಲಾಟರಿ ಬಹುಮಾನ ಬಂದಿದೆ” ಎಂದು ನಂಬಿಸಿದ್ದಾನೆ. ಜೊತೆಗೆ ಈ ಬಹುಮಾನದ ಹಣವನ್ನು ಖಾತೆಗೆ ಹಾಕಿಸಿಕೊಳ್ಳಬೇಕೆಂದರೆ ಪ್ರೋಸೆಸಿಂಗ್ ಚಾರ್ಜ್, ಶಿಫ್ಟಿಂಗ್ ಚಾರ್ಜ್, ಫೊರೆಕ್ಸ್ ಚಾರ್ಜ್ ಮತ್ತು ಹ್ಯಾಂಡಲಿಂಗ್ ಶುಲ್ಕವನ್ನು ಪಾವತಿಸಬೇಕೆಂದು ತಿಳಿಸಿದ್ದಾನೆ. ಇದನ್ನು ನಿಜವೆಂದು ಭಾವಿಸಿದ ಜುಲಿಯಾನ ಅಪರಿಚಿತ ವ್ಯಕ್ತಿಯು ಸೂಚಿಸಿದ ವಿವಿಧ ಬ್ಯಾಂಕ ಖಾತೆಗಳಿಗೆ ಏಪ್ರಿಲ್ ನಿಂದ ಜುಲೈ ತಿಂಗಳವರೆಗೆ ಹಂತಹಂತವಾಗಿ ಸುಮಾರು 27.06.862 ರೂಪಾಯಿಗಳಷ್ಟು ಹಣವನ್ನು ವರ್ಗಾಯಿಸಿದ್ದಾರೆ. ಇಷ್ಟಾದರೂ ಯಾವುದೇ ಬಹುಮಾನ ಬಂದು ತಲುಪದಿರುವುದರಿಂದ ಜುಲಿಯಾನ ತಾನು ವಂಚನೆಗೆ ಒಳಗಾಗಿದ್ದೇನೆ ಎನ್ನುವುದನ್ನು ಅರಿತಿದ್ದಾರೆ. ಘಟನೆಗೆ…



