ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!
ಐಪಿಎಲ್ -2025
* ಸನ್ ರೈಸರ್ಸ್ಸ್ ಆಟಕ್ಕೆ ಲಗಾಮು ಹಾಕಿದ ಲಖನೌ
* ಇಂದು ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಹೈವೋಲ್ಟೇಜ್ ಪಂದ್ಯ
NAMMUR EXPRESS SPORTS NEWS
ಹೈದರಾಬಾದ್: ತನ್ನ ಆಕ್ರಮಣಕಾರಿ ಆಟದ ಮೂಲಕ ಎದುರಾಳಿ ತಂಡಗಳಲ್ಲಿ ನಡುಕ ಹುಟ್ಟಿಸಿದ್ದ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಅವರದೇ ಹೋಂ ಗ್ರೌಂಡ್ಲ್ಲಿ ಲಖನೌ ಸೂಪರ್ ಜೈಂಟ್ಸ್ ಲಗಾಮು ಹಾಕಿದೆ. ಗುರುವಾರ ಹೈದರಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಲಖನೌ 5 ವಿಕೆಟ್ ಗೆಲುವು ಸಾಧಿಸಿದೆ. ಆರಂಭಿಕ ಪಂದ್ಯದಲ್ಲಿ ಸೋತಿದ್ದ ರಿಷಬ್ ಪಂತ್ ನಾಯಕತ್ವದ ಲಖನೌ, ಮೊದಲ ಗೆಲುವು ದಾಖಲಿಸಿತು.
ಸನ್ರೈಸರ್ಸ್ ಆರ್ಭಟಕ್ಕೆ ಲಗಾಮು ಹಾಕುತ್ತೇವೆ ಎಂದು ಪಣ !!
ಟಾಸ್ ಗೆದ್ದ ಲಖನೌ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು, ದೊಡ್ಡ ಸ್ಕೋರ್ ನಿರೀಕ್ಷಿಸಿದ್ದ ಹೈದ್ರಾಬಾದ್ ತಂಡವನ್ನು 190 ರನ್ ಗಳಿಗೆ ಕಟ್ಟಿಹಾಕಿತು. ಕೊನೆಗೆ ಹೈದ್ರಾಬಾದ್ ತಂಡವು 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು.
3ನೇ ಓವರ್ನಲ್ಲಿ ಶಾರ್ದೂಲ್ ಆರಂಭಿಕ 2 ಎಸೆತಗಳಲ್ಲಿ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ ವಿಕೆಟ್ ಕಿತ್ತು ಲಖನೌ ಮೇಲುಗೈಗೆ ಕಾರಣರಾದರು. ಆದರೆ ಟ್ಯಾವಿಸ್ ಹೆಡ್ 28 ಎಸೆತಗಳಲ್ಲಿ 47, ನಿತೀಶ್ ರೆಡ್ಡಿ 32, ಕ್ಲಾಸೆನ್ 26 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಅಬ್ಬರಿಸಿದ ಅನಿಕೇತ್ ವರ್ಮಾ 13 ಎಸೆತಗಳಲ್ಲಿ 36, ನಾಯಕ ಪ್ಯಾಟ್ ಕಮಿನ್ಸ್ 4 ಎಸೆತಗಳಲ್ಲಿ 18 ರನ್ ಸಿಡಿಸಿ ತಂಡದ ಮೊತ್ತವನ್ನು 190 ಕ್ಕೆ ತಂದರು.
ದೊಡ್ಡ ಗುರಿ ಬೆನ್ನತ್ತಿದ ಲಖನೌ !!ಈ ದೊಡ್ಡ ಗುರಿ ಬೆನ್ನತ್ತಿದ ಲಖನೌ ಕೇವಲ 16.1 ಓವರ್ಗಳಲ್ಲೇ ಗೆಲುವನ್ನು ತನ್ನದಾಗಿಸಿಕೊಂಡಿತು. 2ನೇ ವಿಕೆಟ್ಗೆ ಜೊತೆಯಾದ ಪೂರನ್-ಮಿಚೆಲ್ ಮಾರ್ಷ್ 43 ಎಸೆತಗಳಲ್ಲಿ 116 ರನ್ ಸಿಡಿಸಿದರು. 18 ಎಸೆತಗಳಲ್ಲೇ ಅರ್ಧಶತಕ ಪೂರ್ಣಗೊಳಿಸಿದ ಪೂರನ್ 26 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ಗಳೊಂದಿಗೆ 70 ರನ್ ಸಿಡಿಸಿದರು. ಮಾರ್ಷ್ 31ಬಾಲ್ಗಳಲ್ಲಿ 52 ರನ್ ಬಾರಿಸಿ ತಂಡ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
* ಇಂದು ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ಹೈವೋಲ್ಟೇಜ್ ಪಂದ್ಯ
ಚೆನೈ: ಐಪಿಎಲ್ನ ಹೈವೋಲ್ಟೇಜ್ ಹಾಗೂ ಬಹುನಿರೀಕ್ಷಿತ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಸಾಂಪ್ರದಾಯಿಕ ಎದುರಾಳಿಗಳಾದ ಆರ್ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ ನಡುವಿನ ಪಂದ್ಯ ಶುಕ್ರವಾರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಬಾರಿ ಎರಡೂ ತಂಡಗಳು ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದ್ದು, ಸತತ 2ನೇ ಗೆಲುವಿಗಾಗಿ ಪೈಪೋಟಿ ನಡೆಸಲಿವೆ.
ಈ ಬಾರಿ ಎರಡೂ ತಂಡಗಳು ಬಲಿಷ್ಠವಾಗಿದ್ದು, ರೋಚಕ ಪೈಪೋಟಿ ಎದುರಾಗುವುದು ಖಚಿತ. ಅದರಲ್ಲೂ ಚೆಪಾಕ್ನ ಸ್ಪಿನ್ ಸ್ನೇಹಿ ಪಿಚ್ ಆಗಿದ್ದು, ಚೆನ್ನೈ ಸಿನ್ನರ್ಗಳು ಹಾಗೂ ಆರ್ಸಿಬಿ ಬ್ಯಾಟರ್ಗಳ ನಡುವೆ ತೀವ್ರ ಸ್ಪರ್ಧೆ ಎದುರಾಗಬಹುದು.
ಆರ್ಸಿಬಿಯಲ್ಲಿ ಸ್ಪೋಟಕ ಬ್ಯಾಟರ್ಗಳಿದ್ದಾರೆ. ಅದರಲ್ಲೂ ನಾಯಕ ರಜತ್ ಪಾಟೀದಾರ್ ಸ್ಪಿನ್ನರ್ಗಳ ಎದುರು ಉತ್ತಮ ದಾಖಲೆ ಹೊಂದಿದ್ದಾರೆ. ಫಿಲ್ ಸ್ಟಾಲ್ ಹಾಗೂ ವಿರಾಟ್ ಕೊಹ್ಲಿ ತಂಡದ ಆಧಾರಸ್ತಂಭವಾಗಿದ್ದು, ಚೆಪಾಕ್ನಲ್ಲಿ ಕೊಹ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬ ಕುತೂಹಲವಿದೆ. ದೇವದತ್ ಪಡಿಕ್ಕಲ್ ಸಿಕ್ಕ ಅವಕಾಶ ಉಪಯೋಗಿಸಿಕೊಳ್ಳಬೇಕಿದ್ದು, ಲಿಯಾಮ್ ಲಿವಿಂಗ್ಸ್ಟೋನ್, ಟಿಮ್ ಡೇವಿಡ್ರಿಂದಲೂ ತಂಡಕ್ಕೆ ಹೆಚ್ಚಿನ ನಿರೀಕ್ಷೆಯಿದೆ.








