ಮೊದಲ ಮ್ಯಾಚ್ನಲ್ಲೇ ಮಿಂಚಿಂಗ್ ಆಟೋ ಡ್ರೈವರ್ ಮಗ ವಿಘ್ನೇಶ್ ಪುತ್ತೂರು!
– ಸ್ಟೇಡಿಯಂನಲ್ಲೇ ವಿಘ್ನೇಶನ ಬೆನ್ನು ತಟ್ಟಿದ ಧೋನಿ!
– ನೀತಾ ಅಂಬಾನಿಯಿಂದ ಮುಂಬೈ ತಂಡದ ಅತ್ಯುತ್ತಮ ಬೌಲರ್ ಪ್ರಶಸ್ತಿ!
NAMMUR EXPRESS NEWS
ವಿಘ್ನೇಶ್ ಪುತ್ತೂರು ಬಲಗೈ ಬ್ಯಾಟರ್, ಎಡಗೈ ಸ್ಪಿನ್ ಬೌಲರ್! ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮನ್ ನಿವಾಸಿ. ತಂದೆ ಸುನಿಲ್ ಕುಮಾರ್ ಆಟೋರಿಕ್ಷಾ ಚಾಲಕ. ತಾಯಿ ಕೆ.ಪಿ.ಬಿಂದು ಗೃಹಿಣಿ. ಆರ್ಥಿಕ ಸಂಕಷ್ಟದ ನಡುವೆಯೂ ಮಗನ ಕ್ರಿಕೆಟ್ ಭವಿಷ್ಯಕ್ಕಾಗಿ ಮಲಪ್ಪುರಂನಿಂದ ತ್ರಿಶೂರ್ಗೆ ಸ್ಥಳಾಂತರಗೊಂಡರು. ಕಾಲೇಜು ಮಟ್ಟದಲ್ಲಿ ಮೀಡಿಯಮ್ ಪೇಸರ್ ಆಗಿದ್ದ ವಿಘ್ನೇಶ್ ನಂತರ ಸ್ಪಿನ್ನರ್ ಆಗಿ ರೂಪುಗೊಂಡರು.
ತ್ರಿಶೂರ್ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ಪರ್ಫಾಮ್ ಮಾಡಿ ಗಮನ ಸೆಳೆದಿದ್ದ ವೀಘ್ನೇಶ್, ಕೇರಳ ಪರ ಅಂಡರ್ -14, ಅಂಡರ್ -19 ಅಂಡರ್ -23 ತಂಡಗಳಲ್ಲಿ ಆಡಿದ್ದರು. ಇಲ್ಲಿ ಅದ್ಬುತ ಪ್ರದರ್ಶನ ನೀಡಿದ್ದ ವೀಘ್ನೇಶ್, ಕೇರಳ ಕ್ರಿಕೆಟ್ ಲೀಗ್ನಲ್ಲಿ ಅಲೆಪ್ಪಿ ರಿಪಲ್ಸ್ ಆಡಿದರು.
ಬದುಕು ಬದಲಿಸಿದ ಕೇರಳ ಕ್ರಿಕೆಟ್ ಲೀಗ್!
ವೀಘ್ನೇಶ್ ಕ್ರಿಕೆಟ್ ಕರಿಯರ್ಗೆ ತಿರುವು ನೀಡಿದ್ದೇ ಕೇರಳ ಕ್ರಿಕೆಟ್ ಲೀಗ್. ಈ ಟೂರ್ನಿಯನ್ನು ನೋಡಲು ಮುಂಬೈ ಇಂಡಿಯನ್ಸ್ ಸ್ಕೌಟಿಂಗ್ ಟೀಮ್ ತೆರಳಿತ್ತು. ಈತನ ಆಟ ನೋಡಿದ್ದ ಮುಂಬೈ ಸ್ಕೌಟಿಂಗ್ ಟೀಮ್, ಟ್ರಯಲ್ಸ್ಗೆ ಬರುವಂತೆ ಹೇಳಿತ್ತು. ಬಳಿಕ ಟ್ರಯಲ್ಸ್ಗೆ ಬಂದಿದ್ದ ವೀಘ್ನೇಶ್ ಬೌಲಿಂಗ್ ನೋಡಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಇಂಪ್ರೆಸ್ ಆಗಿದ್ದರು. ಅಂತಿಮವಾಗಿ ಮುಂಬೈ ಹರಾಜಿನಲ್ಲಿ 30 ಲಕ್ಷಕ್ಕೆ ಖರೀದಿಯನ್ನೂ ಮಾಡಿತು.
ಡಿಸೆಂಬರ್ನಲ್ಲಿ ನಡೆದಿದ್ದ ಹರಾಜಿನಲ್ಲಿ ವಿಘ್ನೇಶ್ನ ಖರೀದಿಸಿದ್ದ ಮುಂಬೈ, 2025 ಜನವರಿಯಲ್ಲಿ ಸೌತ್ ಆಫ್ರಿಕಾಗೆ ಕಳುಹಿಸಿತ್ತು. ಸೌತ್ ಆಫ್ರಿಕಾ ಟಿ20 ಲೀಗ್ನ MI ಕೇಪ್ ಟೌನ್ ತಂಡದ ನೆಟ್ ಬೌಲರ್ ಆಗಿ ಸೇರಿದ ವೀಘ್ನೇಶ್ ಪುತ್ತೂರು, ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್ ಗರಡಿಯಲ್ಲಿ ಮತ್ತಷ್ಟು ಪಳಗಿದರು. ಇದೇ ಅನುಭವ ಐಪಿಎಲ್ನಲ್ಲಿ ಕೈ ಹಿಡಿಯಿತು. ಸಿಕ್ಕ ಅವಕಾಶ ಸದ್ಭಳಕೆ ಮಾಡಿಕೊಂಡಿರುವ ವೀಘ್ನೇಶ್, ಮೊದಲ ಮ್ಯಾಚ್ನಲ್ಲೇ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಭಾರತೀಯ ಕ್ರಿಕೆಟ್ನ ಹೊಸ ಭರವಸೆಯಾಗಿ ಕಾಣಿಸಿಕೊಳ್ತಿರುವ ವೀಘ್ನೇಶ್, ಇದೇ ಆಟ ಮುಂದುವರೆಸಿದರೆ ಮುಂದೊಂದು ದಿನ ಟೀಮ್ ಇಂಡಿಯಾ ಸೇರೋದು ಪಕ್ಕಾ!…
ಸ್ಟೇಡಿಯಂನಲ್ಲೇ ವಿಘ್ನೇಶನ ಬೆನ್ನು ತಟ್ಟಿದ ಧೋನಿ!
23 ವರ್ಷದ ವಿಘ್ನೇಶ್ ಚೆನ್ನೈ ತಂಡಕ್ಕೆ 156 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟುತ್ತಿದ್ದಾಗ, ನಾಯಕ ರುತುರಾಜ್ ಗಾಯಕ್ವಾಡ್ 26 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿ ಸಹಿತ 53 ರನ್ ಗಳಿಸಿದರು. ಆದರೆ ಮುಂಬೈ ತಂಡದ ವಿಘ್ನೇಶ್ ರುತುರಾಜ್, ಶಿವಂ ದುಬೆ ಮತ್ತು ದೀಪಕ್ ಹೂಡಾ ಎಂಬ 3 ಪ್ರಮುಖ ವಿಕೆಟ್ಗಳನ್ನು ಪಡೆದು ಚೆನ್ನೈ ತಂಡ ಮತ್ತು ಅಭಿಮಾನಿಗಳಿಗೆ ಆಘಾತವನ್ನು ನೀಡಿದರು.
ಪಂದ್ಯದ ನಂತರ ಧೋನಿ ವಿಘ್ನೇಶ್ ಅವರನ್ನು ಹೊಗಳಿದರು. ಡಗೌಟ್ಗೆ ಹೋಗುವ ಮೊದಲು, ಧೋನಿ ವಿಘ್ನೇಶ್ ಅವರನ್ನು ಕರೆದು ಕೆಲವು ನಿಮಿಷಗಳ ಕಾಲ ಮಾತನಾಡಿದರು. ಈ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ವಿಘ್ನೇಶ್ ಸ್ನೇಹಿತ ಶ್ರೀರಾಕ್ ಧೋನಿ ಹೇಳಿದ್ದನ್ನು ಬಹಿರಂಗಪಡಿಸಿದರು.
ಶ್ರೀರಾಕ್, “ಧೋನಿ ನಿಮ್ಮ ವಯಸ್ಸು ಎಷ್ಟು ಎಂದು ಕೇಳಿದರು ಮತ್ತು ಐಪಿಎಲ್ಗೆ ಆಯ್ಕೆಯಾದ ನಂತರದ ತರಬೇತಿಯನ್ನು ಮುಂದುವರಿಸಲು ಸಲಹೆ ನೀಡಿದರು” ಎಂದು ಹೇಳಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ವಿಘ್ನೇಶ್ ಬೆನ್ನು ತಟ್ಟಿ ಧೋನಿ ಸಲಹೆ ನೀಡಿರುವ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನೀತಾ ಅಂಬಾನಿಯಿಂದ ಮುಂಬೈ ತಂಡದ ಅತ್ಯುತ್ತಮ ಬೌಲರ್ ಪ್ರಶಸ್ತಿ!
ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಅವರು ಮುಂಬೈ ಇಂಡಿಯನ್ಸ್ ತಂಡದ ಡ್ರೆಸ್ಸಿಂಗ್ ಕೋಣೆಯಲ್ಲಿ ವಿಘ್ನೇಶ್ ಪುತ್ತೂರು ಅವರಿಗೆ ಮುಂಬೈ ತಂಡದ ಅತ್ಯುತ್ತಮ ಬೌಲರ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ವೇಳೆ, ತಮಗೆ ತಂಡದಲ್ಲಿ ಸ್ಥಾನ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸುವ ಭಾಗವಾಗಿ ವಿಘ್ನೇಶ್ ಪುತ್ತೂರು ಅವರು ವಿನಮ್ರವಾಗಿ ನೀತಾ ಅಂಬಾನಿಯ ಕಾಲಿಗೆರದರು.








