ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಚೆಪಾಕ್ನಲ್ಲಿ ಚೆನ್ನೈ ಮೇಲೆ ರೈಡ್ ಮಾಡಿದ ಕೋಲ್ಕತ್ತಾ
* ಸೋಲಿನ ಸರಪಳಿಯಲ್ಲಿ ಸಿಲುಕಿದ ಸಿಎಸ್ಕೆ
NAMMMUR EXPRESS SPORTS NEWS
ಚೆನ್ನೈ: ಚೆಪಾಕ್ ಅಂಗಳದಲ್ಲಿ ನಡೆದ ಐಪಿಎಲ್ -2025 ರ ಚೆನ್ನೈ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ತವರಲ್ಲಿ ಚೆನ್ನೈ ಸೋತಿದೆ. ಸತತ 4 ಸೋಲುಗಳಿಂದ ಕಂಗೆಟ್ಟಿದ್ದ ಸಿಎಸ್ಕೆ ತಂಡದ ಮೇಲೆ ಕೋಲ್ಕತ್ತಾ ತಂಡ ರೈಡ್ ಮಾಡಿದೆ.
ಋತುರಾಜ್ ಗಾಯದಿಂದಾಗಿ ಹೊರಬಿದ್ದು, ಚೆನ್ನೈಗೆ ಮತ್ತೆ ಎಂ.ಎಸ್.ಧೋನಿ ನಾಯಕರಾದರೂ ತಂಡದ ಸೋತಿದ್ದು, ಸೋಲಿನಿಂದ ಪಾಠ ಕಲಿಯದಂತಿರುವ ಚೆನ್ನೈಯನ್ನು ಶುಕ್ರವಾರ ಕೋಲ್ಕತಾ 8 ವಿಕೆಟ್ ಗಳಿಂದ ಸೋಲಿಸಿದೆ. ಚೆನ್ನೈ 6ರಲ್ಲಿ 5ನೇ ಸೋಲು ಕಂಡಿದ್ದು,ಕೋಲ್ಕತಾ 3ನೇ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
ಕಳೆದ 4 ಪಂದ್ಯಗಳಲ್ಲಿ ಚೇಸಿಂಗ್ ವೇಳೆ ಸೋತಿದ್ದ ಸಿಎಸ್ಕೆಗೆ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡುವ ಅವಕಾಶ ಸಿಕ್ಕಿತು. ಆದರೆ ಬ್ಯಾಟಿಂಗ್ ಲಯ ಕಳೆದುಕೊಂಡತೆ ಆಟಗಾರರು ಒಂದೊಂದು ರನ್ ಗಳಿಸಲೂ ಪರದಾಡಿದರು. ಚೆನ್ನೈ 20 ಓವರ್ಗಳಲ್ಲಿ 9 ವಿಕೆಟ್ಗೆ 103 ರನ್ ಗಳಿಸಿತು. ಈ ಗುರಿ ಸುಲಭದ ಗುರಿಯನ್ನು ಕೆಕೆಆರ್ ಕೇವಲ 10.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ತಲುಪಿತು.
ಪವರ್ ಪ್ಲೇನಲ್ಲೇ ಕೆಕೆಆರ್ 71 ರನ್ ಚಚ್ಚಿತು. ಸುನಿಲ್ ನರೈನ್ ಸ್ಫೋಟಕ ಆಟದ ಮೂಲಕ ಚೆನ್ನೈ ಬೌಲರ್ಗಳ ಬೆವರಿಳಿಸಿದರು. ಕೇವಲ 18 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ಳೊಂದಿಗೆ 44 ರನ್ ಸಿಡಿಸಿದರು.
ಚೆನ್ನೈ ಬ್ಯಾಟರ್ಗಳ ನಿರುತ್ತರ..
ಮೊದಲು ಬ್ಯಾಟಿಂಗ್ಗೆ ಇಳಿದ ಸಿಎಸ್ಕೆ
ಬ್ಯಾಟರ್ಗಳನ್ನು ಕೆಕೆಆರ್ ಸ್ಪಿನ್ನರ್ಸ್ ಕಟ್ಟಿಹಾಕಿದರು. ವಿಜಯ್ ಶಂಕರ್ (29), ಶಿವಂ ದುಬೆ(ಔಟಾಗದೆ 31) ರನ್ಗಳಿಸಿ ತಂಡದ ಮಾನ ಉಳಿಸಿದರು. 9ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಧೋನಿ 4 ಎಸೆತಕ್ಕೆ 1 ರನ್ ಗಳಿಸಿದರು.
* ಮೊದಲ ಬಾರಿ ಚೆನ್ನೈಗೆ ಸತತ ಐದು ಸೋಲು,ಅತಿ ಕನಿಷ್ಠ ಸ್ಕೋರ್,ಅತಿ ದೊಡ್ಡ ಸೋಲು !
ಚೆನ್ನೈ ತಂಡ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿ ಸತತ 5 ಪಂದ್ಯಗಳಲ್ಲಿ ಸೋಲನುಭವಿಸಿತು. ಅಲ್ಲದೆ, ಚೆಪಾಕ್ ಕ್ರೀಡಾಂಗಣದಲ್ಲಿ ಸತತ 3 ಪಂದ್ಯಗಳಲ್ಲಿ ಸೋತಿದ್ದು ಇದೇ ಮೊದಲು.
ನಿನ್ನೆಯ ಪಂದ್ಯದಲ್ಲಿ ಚೆನ್ನೈ 103 ರನ್ ಗಳಿಸಿದ್ದು, ಇದು ಚೆಪಾಕ್ನಲ್ಲಿ ಚೆನ್ನೈನ ಅತಿ ಕನಿಷ್ಠ ಮೊತ್ತ. 2019ರಲ್ಲಿ ಮುಂಬೈ ವಿರುದ್ಧ 109 ರನ್ ಗಳಿಸಿತ್ತು. ಒಟ್ಟಾರೆ ಚೆನ್ನೈನಲ್ಲಿದು 2ನೇ ಕನಿಷ್ಠ. 2019ರಲ್ಲಿ ಸಿಎಸ್ಕೆ ವಿರುದ್ಧ ಆರ್ಸಿಬಿ 70 ರನ್ಗೆ ಆಲೌಟಾಗಿದ್ದು ಈಗಲೂ ಕನಿಷ್ಠ ಮೊತ್ತವಾಗಿಯೇ ಉಳಿದಿದೆ.
ನಿನ್ನೆಯ ಪಂದ್ಯದಲ್ಲಿ ಕೆಕೆಆರ್ 59 ಎಸೆತ ಬಾಕಿ ಉಳಿಸಿ ಜಯಗಳಿಸಿತು. ಇದು ಚೆನ್ನೈ ತಂಡಕ್ಕೆ ಐಪಿಎಲ್ ನಲ್ಲೇ ಎಸೆತಗಳ ಆಧಾರದಲ್ಲಿ ಅತಿ ದೊಡ್ಡ ಸೋಲಾಗಿದೆ.








