ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!
IPL 2025
* ಲಕ್ನೋ ಗೆಲುವಿನ ಕನಸನ್ನು ಭಗ್ನಗೊಳಿಸಿದ ಅಶುತೋಷ್- ಡೆಲ್ಲಿಗೆ ರೋಚಕ ಗೆಲುವು
* ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಋತುರಾಜ್,ಖಲೀಲ್ ??
NAMMUR EXPRESS SPORTS NEWS
ವಿಶಾಖಪಟ್ಟಣಂ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ರಣರೋಚಕ ಪಂದ್ಯದಲ್ಲಿ ಅಶುತೋಷ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 3 ಎಸೆತಗಳು ಬಾಕಿ ಇರುವಂತೆ 1 ವಿಕೆಟ್ನಿಂದ ಗೆಲುವು ಸಾಧಿಸಿದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಸ್ಟೇಡಿಯಂನಲ್ಲಿ ನಿನ್ನೆ ನಡೆದ IPL 2025ರ ಆವೃತ್ತಿಯ 4ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡವು 8 ವಿಕೆಟ್ ನಷ್ಟಕ್ಕೆ 209 ರನ್ ಬಾರಿಸಿತ್ತು. 210 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು 19.3 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿ ಗೆಲುವು ಸಾಧಿಸಿದೆ.
ಡೆಲ್ಲಿ ತಂಡದ ಪರ ಅಶುತೋಷ್ ಶರ್ಮಾ ಅಜೇಯ 66 ರನ್ ಬಾರಿಸಿದರೆ, ವಿಪ್ರಜ್ ನಿಗಮ್ 39 ರನ್ ಹಾಗೂ ಟ್ರಿಸ್ಟಾನ್ ಸ್ಟಬ್ 34 ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಲಕ್ಕೋ ತಂಡದ ಪರ ಮಿಚೆಲ್ ಮಾರ್ಷ್ 72 ರನ್ (36 ಎಸೆತ, 6 ಬೌಂಡರಿ, 6 ಸಿಕ್ಸ್), ನಿಕೋಲಸ್ ಪೂರನ್ 75 ರನ್ (30 ಎಸೆತ, 6 ಬೌಂಡರಿ, 7 ಸಿಕ್ಸ್ ಹಾಗೂ ಡೇವಿಡ್ ಮಿಲ್ಲರ್ 27 ರನ್ ಬಾರಿಸಿದ್ದರು. ಆದರೆ ನಾಯಕ ರಿಷಬ್ ಪಂತ್ 6 ಎಸೆತಗಳನ್ನು ಎದುರಿಸಿದರೂ ಒಂದೇ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಡೆಲ್ಲಿ ಪರ ಮಿಚೆಲ್ ಸ್ಟಾರ್ಕ್ ಪ್ರಮುಖ 3 ವಿಕೆಟ್ ಉರುಳಿಸಿದರೆ, ಕುಲದೀಪ್ ಯಾದವ್ 2 ವಿಕೆಟ್, ಮುಖೇಶ್ ಕುಮಾರ್ ಹಾಗೂ ವಿಪ್ರಜ್ ನಿಗಮ್ ತಲಾ 1 ವಿಕೆಟ್ ಪಡೆದುಕೊಂಡಿದ್ದರು.
* ಬಾಲ್ ಟ್ಯಾಂಪರಿಂಗ್ ಮಾಡಿದ್ರಾ ಋತುರಾಜ್,ಖಲೀಲ್ ??
ಚೆನ್ನೈ: ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಫಿಕಿಂಗ್ಸ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ 2016 ಮತ್ತು 2017 ರಲ್ಲಿ ಎರಡು ವರ್ಷಗಳ ಕಾಲ ನಿಷೇಧಿಸಲಾಗಿತ್ತು. ಇದೀಗ ಮತ್ತೊಮ್ಮೆ ಸಿಎಸ್ಕೆ ತಂಡ ಬ್ಯಾನ್ ಆಗುತ್ತಾ? ಎಂಬ ಕುತೂಹಲ ಮೂಡಿಸಿದೆ.
ಹೌದು.. IPL 2025ರ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ ಈ ಪಂದ್ಯದಲ್ಲಿ ಸೆರೆಯಾದ ವಿವಾದಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಸಿಎಸ್ಕೆ ತಂಡದ ಆಟಗಾರರಾದ ಖಲೀಲ್ ಅಹ್ಮದ್ ಮತ್ತು ನಾಯಕ ಋತುರಾಜ್ ಗಾಯಕ್ವಾಡ್ ಮೇಲೆ ಬಾಲ್ ಟ್ಯಾಂಪರಿಂಗ್ ಆರೋಪ ಹೊರಿಸಲಾಗಿದೆ. ಈ ಘಟನೆಯು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ತಂಡದ ಸಾಧನೆಯ ಮೇಲೆ ಪ್ರಶ್ನೆಗಳನ್ನು ಕೇಳಿಬರುತ್ತಿವೆ.
ಐಪಿಎಲ್ ಅಧಿಕಾರಿಗಳು ಸಿಎಸ್ಕೆ ತಂಡಕ್ಕೆ ನೋಟಿಸ್ ಜಾರಿ ಮಾಡಿ ಈ ಬಗ್ಗೆ ತನಿಖೆ ನಡೆಸಬೇಕು ಎಂಬ ಆಗ್ರಹಗಳು ಕೇಳಿಬರುತ್ತಿದೆ. ಅಲ್ಲದೇ ಐಪಿಎಲ್ನಿಂದ ಸಿಎಸ್ಕೆ ತಂಡವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಇಂದಿನ ಪಂದ್ಯ :
ಗುಜರಾತ್ ಟೈಟಾನ್ಸ್ ತಂಡವು ಕಿಂಗ್ಸ್ ಇಲವೆನ್ ಪಂಜಾಬ್ ತಂಡವನ್ನು ಎದುರಿಸಲಿದೆ. ಸಂಜೆ 7:30 ಕ್ಕೆ ಪಂದ್ಯ ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆಯಲಿದೆ.








