ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್ !!
* WPL: 2 ನೇ ಬಾರಿ ಮುಂಬೈ ಇಂಡಿಯನ್ಸ್ಗೆ WPL ಟ್ರೋಫಿ
* WPL:1,000 ರನ್ ಗಳಿಸಿದ ಮೊದಲ ಬ್ಯಾಟರ್ ನ್ಯಾಟ್ ಸಿವರ್-ಬ್ರಂಟ್
* “ಆತಂಕ ಬೇಡ, ನಾನು ಯಾವುದೇ ಘೋಷಣೆ ಮಾಡುತ್ತಿಲ್ಲ”- ನಿವೃತ್ತಿ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ
NAMMUR EXPRESS SPORTS NEWS
* WPL: 2 ನೇ ಬಾರಿ ಮುಂಬೈ ಇಂಡಿಯನ್ಸ್ಗೆ WPL ಟ್ರೋಫಿ
ಮುಂಬೈ: ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ WPL 2025 ಫೈನಲ್ನಲ್ಲಿ ಮುಂಬೈ ಇಂಡಿಯನ್ಸ್ (MI) ತಂಡವು ಡೆಲ್ಲಿ ಕ್ಯಾಪಿಟಲ್ಸ್ (DC) ಅನ್ನು 8 ರನ್ಗಳಿಂದ ಸೋಲಿಸಿ ಟ್ರೋಫಿಗೆ ಮುತ್ತಿಕ್ಕಿದೆ.
ಮುಂಬೈ ತಂಡವು ಎರಡನೇ ಬಾರಿಗೆ WPL ಪ್ರಶಸ್ತಿಯನ್ನು ಗೆದ್ದಿದೆ. ಇದರೊಂದಿಗೆ ಒಂದಕ್ಕಿಂತ ಹೆಚ್ಚು WPL ಪ್ರಶಸ್ತಿಗಳನ್ನು ಗೆದ್ದ ಮೊದಲ ತಂಡವಾಗಿ ಹೊರಹೊಮ್ಮಿದೆ. MI ಅಂತಿಮ ಪಂದ್ಯದಲ್ಲಿ 149/7 ಗಳಿಸಿತ್ತು. ಈ ಗುರಿ ಬೆನ್ನಟ್ಟಿದ DC 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ಸೋಲು ಒಪ್ಪಿಕೊಂಡಿತು. ಇದರೊಂದಿಗೆ DC ಸತತವಾಗಿ ಮೂರು WPL ಫೈನಲ್ ಗಳಲ್ಲಿ ಸೋತಿದೆ.
* WPL:1,000 ರನ್ ಗಳಿಸಿದ ಮೊದಲ ಬ್ಯಾಟರ್ ನ್ಯಾಟ್ ಸಿವರ್-ಬ್ರಂಟ್
ಮುಂಬೈ: ಇಂಗ್ಲೆಂಡ್ ಆಲ್ರೌಂಡರ್ ನ್ಯಾಟ್ ಸಿವರ್-ಬ್ರಂಟ್ ಮಹಿಳಾ ಪ್ರೀಮಿಯರ್ ಲೀಗ್ (WPL) ಇತಿಹಾಸದಲ್ಲಿ 1,000 ರನ್ಗಳ ಗಡಿ ದಾಟಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
WPL 2025ರ ಫೈನಲ್ ಪಂದ್ಯದಲ್ಲಿ ನ್ಯಾಟ್ ಸಿವರ್-ಬ್ರಂಟ್ ಈ ಸಾಧನೆ ಮಾಡಿದ್ದಾರೆ. ಬಲಗೈ ಬ್ಯಾಟರ್ ನ್ಯಾಟ್ ಸಿವರ್-ಬ್ರಂಟ್ ತಾವು ಎದುರಿಸಿದ ಮೂರನೇ ಎಸೆತದಲ್ಲಿ ಇತಿಹಾಸ ನಿರ್ಮಿಸಿದರು ಮತ್ತು ಅವರು ತಮ್ಮ 29ನೇ ಪಂದ್ಯದಲ್ಲಿ ಈ ಮೈಲಿಗಲ್ಲು ಸಾಧಿಸಿದರು.
* “ಆತಂಕ ಬೇಡ, ನಾನು ಯಾವುದೇ ಘೋಷಣೆ ಮಾಡುತ್ತಿಲ್ಲ”- ನಿವೃತ್ತಿ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ
ಬೆಂಗಳೂರು: “ಯಾರೂ ಉದ್ವೇಗಕ್ಕೆ ಒಳಗಾಗಬೇಡಿ. ನಾನು ಯಾವುದೇ (ನಿವೃತ್ತಿ) ಘೋಷಣೆ ಮಾಡುತ್ತಿಲ್ಲ” ಎಂದು ಟೀಂ ಇಂಡಿಯಾ ಮಾಜಿ ನಾಯಕ ರನ್ ಮಷಿನ್ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.
ಇದರೊಂದಿಗೆ ತಮ್ಮ ನಿವೃತ್ತಿಯ ಕುರಿತು ಕೆಲಕಾಲದಿಂದ ನಡೆಯುತ್ತಿದ್ದ ಚರ್ಚೆಗಳಿಗೆ ತೆರೆ ಎಳೆದಿದ್ದಾರೆ. ಇತ್ತೀಚೆಗೆ ಭಾರತ ತಂಡವು ದುಬೈನಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದಾಗ ಕೊಹ್ಲಿ ನಿವೃತ್ತಿ ಘೋಷಿಸುವರು ಎಂಬ ಮಾತುಗಳು ಕೇಳಿಬಂದಿದ್ದವು. ಹೋದ ವರ್ಷ ಅಮೆರಿಕದಲ್ಲಿ ಟಿ20 ವಿಶ್ವಕಪ್ ಗೆದ್ದಾಗ ಅವರು ಚುಟುಕು ಮಾದರಿಗೆ ವಿದಾಯ ಹೇಳಿದ್ದರು.
ಇದಕ್ಕೆಲ್ಲ ವಿರಾಟ್ ಕೊಹ್ಲಿ ಶನಿವಾರ ಆರ್ ಸಿ ಬಿ ಇನ್ನೋವೇಶನ್ ಲ್ಯಾಬ್ನಲ್ಲಿ ನಡೆದ ಟಾಕ್ ಸೆಷನ್ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಸದ್ಯಕ್ಕೆ ಎಲ್ಲವೂ ಸರಿಯಾಗಿದೆ. ನಾನು ಆಟವನ್ನು ಆಡಲು ಇಷ್ಟಪಡುತ್ತೇನೆ. ಕ್ರಿಕೆಟ್ ಆಟವನ್ನು ಆನಂದಿಸುತ್ತೇನೆ. ಮುಂದೆ ಯಾವುದೇ ಮೈಲಿಗಲ್ಲು ಸಾಧಿಸುವ ಆಸೆ ಇಲ್ಲ. ನನ್ನೊಳಗೆ ಸ್ಪರ್ಧಾತ್ಮಕ ಪ್ರವೃತ್ತಿ ಇನ್ನೂ ಇದೆ. ಅದು ಜೀವಂತ ಇರುವವರೆಗೂ ನಾನು ಆಟವಾಡುತ್ತೇನೆ. ನಾನು ಯಾವುದೇ ಸಾಧನೆಗಾಗಿ ಆಡುತ್ತಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.







