ತೀರ್ಥಹಳ್ಳಿಯಲ್ಲಿ ರಕ್ತದಾನದ ಮೂಲಕ ಪುನೀತ್ ನಮನ! – ರಾಮಕೃಷ್ಣಪುರದ ಸಮರ್ಪಣಾ ತಂಡ, ರೋಟರಿ ಬ್ಲಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ – ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ನಾಡಿನಾದ್ಯಂತ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಅವರ ಅಭಿಮಾನಿಗಳು ಆಚರಿಸುತ್ತಿದ್ದು, ತೀರ್ಥಹಳ್ಳಿಯಲ್ಲೂ ಕೂಡ ಇದರ ಸಂಭ್ರಮಾಚರಣೆ ನಡೆಯುತ್ತಿದೆ. ಇಲ್ಲಿನ ರೋಟರಿ ಬ್ಲಡ್ ಬ್ಯಾಂಕ್ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ರಾಮಕೃಷ್ಣಪುರದ ಸಮರ್ಪಣಾ ತಂಡದ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದು, ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಈ ಕಾರ್ಯಕ್ರಮದ ಮೂಲಕ ಸುಮಾರು 25 ಜನ ದಾನಿಗಳು ತಮ್ಮ ರಕ್ತವನ್ನು ನೀಡಿದ್ದಾರೆ. ಮುತ್ತುವಳ್ಳಿಯ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಮರ್ಪಣಾ ತಂಡದಿಂದ ಮೂರನೇ ವರ್ಷದ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ವಿಭಾಗದಲ್ಲಿ ರಕ್ತದ ಅವಶ್ಯಕತೆ ಇದ್ದ ಅದೆಷ್ಟೋ ಜನರಿಗೆ ತಮ್ಮ ಸಂಸ್ಥೆಯ ಮೂಲಕ ರಕ್ತವನ್ನು ದೊರಕಿಸುವ ಕಾರ್ಯವನ್ನು…
Author: NammurEXP
ತೀರ್ಥಹಳ್ಳಿಯಲ್ಲಿ ಅಹಿಂದ ಸಭೆ: ಒಗ್ಗಟ್ಟು ಪ್ರದರ್ಶನ – ಮಲೆನಾಡು ಅಹಿಂದ ಸಂಘಟನೆ ಅಧ್ಯಕ್ಷರಾಗಿ ಸಚಿನ್ ಗರಗ ಆಯ್ಕೆ – ತೀರ್ಥಹಳ್ಳಿಯಲ್ಲಿ ಶಾಂತವೇರಿ ಗೋಪಾಲ ಗೌಡರಿಗೆ ನಮನ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಅಹಿಂದ ವರ್ಗಗಳ ಪ್ರಮುಖರ ಸಂಘಟನೆ ಸಭೆ ನಡೆದಿದ್ದು ಅಹಿಂದ ವರ್ಗಗಳ ನಾಯಕರು ಭಾಗಿಯಾದರು. ಮಾ.16ರಂದು ಮಧ್ಯಾಹ್ನ 12 ಗಂಟೆಗೆ ತೀರ್ಥಹಳ್ಳಿಯ ಮಯೂರ ಹೋಟೆಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಸಚಿನ್ ಗರಗ, ನಾಗರಾಜ್ ಸಾಲೆಜನಗಲ್, ಪುತಬ್ಬಾ ಬೆಜ್ಜವಳ್ಳಿ, ಚಿಡುವ ಸೂರ್ಯನಾರಾಯಣ್, ಈರೇಗೋಡು ಶ್ರೀಧರಮೂರ್ತಿ ಎಸ್ ಟಿ, ದೇವರಾಜ್, ಪ್ರಶಾಂತ್ ಕುಪ್ಪಳ್ಳಿ, ಇರುವತ್ತಿ ದಿವಾಕರ್, ಅಬೂಬಕರ್ ರಂಜದಕಟ್ಟೆ, ವಾಸಪ್ಪ ನಗರ ಇನ್ನೂ ಮುಂತಾದವರು ಭಾಗವಹಿಸಿದ್ದರು. ಸಂಘಟನೆಯ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಾಲೇಜ್ ನ ಉಪನ್ಯಾಸಕರಾದಂತಹ ಸಚಿನ್ ಪುರದಾಳ್ ಅವರು ಧಿಕ್ಸೂಚಿ ಭಾಷಣ ಮಾಡಿ ಮಾರ್ಗದರ್ಶನ ನೀಡಿದರು. ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಅಲ್ಪ ಸಂಖ್ಯಾತ ವರ್ಗಗಳು ಎಲ್ಲಾ ಹಿಂದುಳಿದ ವರ್ಗಗಗಳು ಮತ್ತು ದಲಿತ ವರ್ಗಗಳು ಮಲೆನಾಡು…
ಮೂಡಿಗೆರೆ: ಕಾಫಿ ಬೆಳೆಯ ಖರೀದಿದಾರರು ಮತ್ತು ಮಾರಾಟಗಾರರ ಸಭೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮೂಡಿಗೆರೆ: ಎಸ್ಎಂ ಸೇಹಗಲ್ ಫೌಂಡೇಶನ್ ವತಿಯಿಂದ ಅಡ್ಯಂತರ ಸಮುದಾಯ ಭವನದಲ್ಲಿ, ಕಾಫಿ ಬೆಳೆಯುವ ಸಣ್ಣ ರೈತರಿಗೆ ತರಬೇತಿ ನೀಡುವ ಉದ್ದೇಶದಿಂದ ಕಾಫಿ ಬೆಳೆಯ ಖರೀದಿದಾರರು ಮತ್ತು ಮಾರಾಟಗಾರರ ನಡುವೆ ಸಭೆಯನ್ನು ಏರ್ಪಡಿಸಲಾಗಿತ್ತು. ಈ ತರಬೇತಿ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆ, ಹಾಸನ ಜಿಲ್ಲೆ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ, ಬೇಲೂರು ಸೇರಿದಂತೆ ವಿವಿಧ ಭಾಗಗಳಿಂದ 650ಕ್ಕೂ ಹೆಚ್ಚಿನ ಆಯ್ಕೆಯಾದ ಕಾಫಿ ರೈತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸೇಹಗಲ್ ಫೌಂಡೇಶನ್ ನ ಯೋಜನಾ ಮುಖ್ಯಸ್ಥರಾದ ಶಿವಶರಣಪ್ಪ ಅವರು “ಈ ಭಾಗದಲ್ಲಿನ ಸಣ್ಣ ಕಾಫಿ ರೈತರನ್ನು ಗುರಿಯಾಗಿಸಿಕೊಂಡು ಪುನರುತ್ಪಾದಕ ಕಾಫಿ ಕೃಷಿ ಪದ್ಧತಿಯ ಬಗ್ಗೆ ತರಬೇತಿಯನ್ನು ನೀಡುತ್ತಿದ್ದೇವೆ. ಈ ಪದ್ಧತಿಯ ಅಳವಡಿಕೆಯಿಂದಾಗಿ ಕಾಫಿ ಬೆಳೆಯಲ್ಲಿ ಉತ್ತಮ ಫಲಿತಾಂಶವನ್ನು ರೈತರು ನಿರೀಕ್ಷಿಸುತ್ತಿದ್ದಾರೆ. ಈಗಾಗಲೇ ಕೆಲ ರೈತರು ಪದ್ಧತಿಯ ಅಳವಡಿಕೆಯನ್ನು ಸಂಪೂರ್ಣವಾಗಿ ಮಾಡಿಕೊಂಡಿದ್ದಾರೆ. ಜೊತೆಗೆ ನಮ್ಮ ಸಂಸ್ಥೆಯು ಮಹಿಳಾ ರೈತರಿಗೆ ಹೆಚ್ಚಿನ ಪ್ರಾಶಸ್ತ್ಯ…
ಆರಗ ಜ್ಞಾನೇಂದ್ರ, ಸೂರ್ಯ ನಾರಾಯಣ ಅವರಿಗೆ ಶುಭಾಶಯಗಳು ರಾಜ್ಯದ ಎಲ್ಲಾ ಅಡಿಕೆ ಸಹಕಾರ ಸಂಘಗಳನ್ನೊಳಗೊಂಡ ರಾಜ್ಯ ಅಡಿಕೆ ಮಹಾಮಂಡಳದ ಅಧ್ಯಕ್ಷರಾಗಿ ಆರಗ ಜ್ಞಾನೇಂದ್ರ ಹಾಗೂ ಉಪಾಧ್ಯಕ್ಷರಾಗಿ ಸೂರ್ಯನಾರಾಯಣ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅಡಿಕೆ ಮಹಾ ಮಂಡಲದ ಎಲ್ಲಾ ನಿರ್ದೇಶಕರು ಹಾಜರಿದ್ದು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕರನ್ನು ಅಭಿನಂದಿಸಿದರು.
ಸ್ಮಾರ್ಟ್ ಫೋನ್, ಇಂಟರ್ ನೆಟ್ ಬಳಕೆದಾರರಿಗೆ ಶಾಕ್! – ಡೇಟಾ ದರ ಹೆಚ್ಚಳಕ್ಕೆ ಕೇಂದ್ರ ನಿರ್ಧಾರ – ಇಂಟರ್ನೆಟ್ ಚಟ ಕಡಿಮೆ ಮಾಡಲು ಮಾಸ್ಟರ್ ಪ್ಲಾನ್? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: ಇಂಟರ್ ನೆಟ್ ಡೇಟಾ ಬಳಕೆಯ ಮೇಲೆ ಹೊಸದಾಗಿ ಡೇಟಾ ತೆರಿಗೆಯನ್ನು ವಿಧಿಸಲು ಕೇಂದ್ರ ಸರ್ಕಾರವು ನಿರ್ಧಾರವನ್ನು ಕೈಗೊಂಡಿದ್ದು, ಇದರಿಂದ ಸ್ಮಾರ್ಟ್ ಫೋನ್ ಮತ್ತು ಇಂಟರ್ ನೆಟ್ ಬಳಕೆದಾರರು ಆಘಾತಕ್ಕೆ ಒಳಗಾಗಿದ್ದಾರೆ. ಜನವರಿ ತಿಂಗಳಿನಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಟೆಲಿಕಾಂ ಇಲಾಖೆಯ ಪರಾಮರ್ಶನ ಸಭೆ ನಡೆದಿದ್ದು, ಅಲ್ಲಿ ಇದರ ಕುರಿತು ಚರ್ಚೆಯನ್ನು ನಡೆಸಲಾಗಿತ್ತು ಎನ್ನಲಾಗಿದೆ. ಸರ್ಕಾರದ ಆದಾಯವನ್ನು ಹೆಚ್ಚಿಸಲು ಮತ್ತು ಯುವ ಜನತೆಯಲ್ಲಿ ಅಧಿಕವಾಗುತ್ತಿರುವ ಇಂಟರ್ ನೆಟ್ ಚಟವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಸಮೀಕ್ಷೆಯ ಪ್ರಕಾರ ಕಳೆದ ಹಣಕಾಸು ವರ್ಷದಲ್ಲಿ ಭಾರತೀಯ ಪ್ರಜೆಗಳು ಒಟ್ಟು 229 ಬಿಲಿಯನ್ ಜಿಬಿ ಡೇಟಾ ಬಳಸಿದ್ದು, ಪ್ರತಿ ಒಂದು ಜಿಬಿಯ ಮೇಲೆ…
ಗೋಪಾಲಗೌಡರ ಸ್ಮಾರಕ ಸ್ಥಾಪನೆಗೆ ನಿಯೋಗ – ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಆಚರಣೆ ಸಮಿತಿಯಿಂದ ಸಿಎಂ, ಡಿಸಿಎಂ ಭೇಟಿ – ತೀರ್ಥಹಳ್ಳಿಯ ಆರಗ ಮತ್ತು ಹೋರಾಟ ಭೂಮಿ ಸಾಗರದ ಕಾಗೋಡಿನಲ್ಲಿ ಗೋಪಾಲಗೌಡರ ಸ್ಮಾರಕಕ್ಕೆ ಒತ್ತಾಯ ಬೆಂಗಳೂರು/ ತೀರ್ಥಹಳ್ಳಿ: ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಹುಟ್ಟೂರು ಆರಗ ಮತ್ತು ಹೋರಾಟ ಭೂಮಿ ಸಾಗರದ ಕಾಗೋಡಿನಲ್ಲಿ ಗೋಪಾಲಗೌಡರ ಸ್ಮಾರಕ ಸ್ಥಾಪಿಸಬೇಕು ಎಂದು ಶಾಂತವೇರಿ ಗೋಪಾಲಗೌಡ ಜನ್ಮ ಶತಮಾನೋತ್ಸವ ಆಚರಣೆ ಸಮಿತಿ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಒತ್ತಾಯಿಸಿದೆ. ಬಜೆಟ್ ಅಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಮರುನಾಮಕರಣ ಮಾಡಿರುವ ಕುರಿತು ಸಮಿತಿ ಮುಖ್ಯ ಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.ಪ್ರತಿಷ್ಠಾನದ ಅಧ್ಯಕ್ಷ, ಶಾಸಕ ಆರಗ ಜ್ಞಾನೇಂದ್ರ, ಉಪಾಧ್ಯಕ್ಷ ಜಿ.ಎ. ಪುರುಷೋತ್ತಮ ಗೌಡ, ಕಾರ್ಯದರ್ಶಿ ರಾಮಮನೋಹರ ಶಾಂತವೇರಿ, ಸದಸ್ಯರಾದ ಮಣಿ ಹೆಗ್ಡೆ, ರಾಜಣ್ಣ, ಆಶಾ ಬಾಲರಾಜ್, ಇಳಿಮನೆ ವನಮಾಲಯ್ಯ, ನಂಟೂರು ಸುಬ್ಬಯ್ಯ, ವಾಟಗದ್ದೆ ದಿನೇಶ್,…
ಬಾರಿಗೆ ನುಗ್ಗಿ ಹಣ, ಎಣ್ಣೆ ಕದ್ದ ಕಳ್ಳರು! – ತೀರ್ಥಹಳ್ಳಿ ತಾಲೂಕಿನ ಸಿಕೆ ರಸ್ತೆಯಲ್ಲಿ ಘಟನೆ – ತೀರ್ಥಹಳ್ಳಿ: ಆರಗ ಸಮೀಪ ತೋಟಕ್ಕೆ ಬೆಂಕಿ..! – ಶಿವಮೊಗ್ಗ : ಅಪಘಾತಕ್ಕೆ ಮೆಡಿಕಲ್ ವಿದ್ಯಾರ್ಥಿನಿ ಬಲಿ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಸಿಕೆ ರಸ್ತೆಯಲ್ಲಿರುವ ಮದ್ಯದ ಅಂಗಡಿಗೆ ನುಗ್ಗಿದ ಕಳ್ಳರು ಹಣ, ಮದ್ಯದ ಬಾಟಲ್ ಕದ್ದು ಪರಾರಿ ಆಗಿರುವ ಘಟನೆ ಗುರುವಾರ ಮಧ್ಯ ರಾತ್ರಿ ನಡೆದಿದೆ. ರಾತ್ರಿ ಕಳ್ಳರು ನುಗ್ಗಿ ಸುಮಾರು 40 ಸಾವಿರ ಕದ್ದಿದ್ದು, ಮದ್ಯದ ಬಾಟಲ್ ಕೂಡ ಕದ್ದಿದ್ದಾರೆ. ಸಿಸಿಟಿವಿ ಬಾಕ್ಸ್ ಕದ್ದಿದ್ದಾರೆ. ಇತ್ತೀಚಿಗೆ ಕಳ್ಳತನ ಹೆಚ್ಚಿದ್ದು, ಪೊಲೀಸ್ ಇಲಾಖೆ ಗಮನಿಸಬೇಕಿದೆ. ಪೊಲೀಸ್, ಶ್ವಾನ ದಳ ಪರಿಶೀಲನೆ ನಡೆಯುತ್ತಿದೆ. ತೀರ್ಥಹಳ್ಳಿ: ಆರಗ ಸಮೀಪ ತೋಟಕ್ಕೆ ಬೆಂಕಿ..! ತೀರ್ಥಹಳ್ಳಿ : ಬೇಸಿಗೆ ಹೆಚ್ಚುತ್ತಿರುವ ಬೆನ್ನಲ್ಲೇ ಬೆಂಕಿ ದುರಂತಗಳು ಹೆಚ್ಚು ತ್ತಿವೆ. ಇದೀಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ತೋಟದಲ್ಲಿ ಬೆಂಕಿ ಹತ್ತಿಕೊಂಡ ಘಟನೆ ಆರಗ ಗ್ರಾಮಪಂಚಾಯಿತಿ ವ್ಯಾಪ್ತಿಯ…
ಕರಾವಳಿ ಟಾಪ್ ನ್ಯೂಸ್ • ಕಡಬ: ಮದ್ಯವೆಂದು ಕೀಟನಾಶಕ ಸೇವನೆ; ವ್ಯಕ್ತಿ ಅಸ್ವಸ್ಥ! • ಸುಳ್ಯ: ಕಡಿಮೆ ರಕ್ತದೊತ್ತಡದಿಂದ ಉಪನ್ಯಾಸಕ ಸಾವು • ಮೂಡಬಿದರೆ: ಗ್ಯಾರೇಜ್ ಧ್ವಂಸ; 13 ಮಂದಿ ವಿರುದ್ಧ ಕೇಸ್ • ಬಂಟ್ವಾಳ: ಲೈಂಗಿಕ ದೌರ್ಜನ್ಯ: 20 ವರ್ಷಗಳ ಶಿಕ್ಷೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಸುಳ್ಯ: ಇದ್ದಕ್ಕಿದ್ದಂತೆ ಕುಸಿದು ಬಿದ್ದು ಉಪನ್ಯಾಸಕರೊಬ್ಬರು ಕಾಲೇಜಿನಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಜು ಪಿ ಅವರು ಸುಳ್ಯದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಧ್ಯಾಹ್ನ ತರಗತಿಗಳನ್ನು ನಡೆಸಿದ ಬಳಿಕ, ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿದ್ಯಾರ್ಥಿಯ ಸಹಾಯದಿಂದ ಉಪನ್ಯಾಸಕರ ಕೊಠಡಿಗೆ ತೆರಳಿ ವಿಶ್ರಾಂತಿ ಪಡೆದಿದ್ದಾರೆ. ಸ್ವಲ್ಪ ಸಮಯದ ನಂತರ ಕೊಂಚ ಚೇತರಿಸಿಕೊಂಡ ಅವರು, ಔಷಧಿಯನ್ನು ತೆಗೆದುಕೊಳ್ಳಲು ಮೆಡಿಕಲ್ ಶಾಪ್ ಗೆ ಬಂದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಮಂಜು ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು…
ಅಕ್ಲಾಪುರದಲ್ಲಿ ಮಾ.15ರಂದು ‘ಶ್ರೀ ದೇವಿ ಮಹಾತ್ಮೆ’! – ಕೋದಂಡರಾಮ ದೇವಸ್ಥಾನ ಆವರಣದಲ್ಲಿ ಹರಕೆ ಬಯಲಾಟ – ಸರ್ವರಿಗೂ ಶ್ರೀಮತಿ ಗೀತಾ ಮತ್ತು ಶ್ರೀ ರಾಜೇಂದ್ರ ಕುಟುಂಬದ ಸ್ವಾಗತ ನಮ್ಮೂರ್ ಎಕ್ಸ್ ಪ್ರೆಸ್ ತೀರ್ಥಹಳ್ಳಿ: ತಾಲೂಕಿನ ಅಗ್ರಹಾರ ಹೋಬಳಿಯ ತ್ರಿಯಂಬಕಪುರ ಗ್ರಾಮ ಪಂಚಾಯಿತಿಯ ಅಕ್ಲಾಪುರ ಗ್ರಾಮದಲ್ಲಿ ಮಾರ್ಚ್ 15ರ ಭಾನುವಾರ ಸಂಜೆ 6:30ಕ್ಕೆ ಸರಿಯಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಶ್ರೀದೇವಿ ಮಹಾತ್ಮೆ ಎಂಬ ಹರಕೆ ಬಯಲಾಟವನ್ನ ಹಮ್ಮಿಕೊಳ್ಳಲಾಗಿದೆ.. ಶ್ರೀಮತಿ ಗೀತಾ ಶ್ರೀ ರಾಜೇಂದ್ರ ಹೆಚ್.ಎಸ್ ಹಸಿಗೆ ಇವರು ಹರಕೆ ಬಯಲಾಟವನ್ನ ಆಯೋಜಿಸಿದ್ದು ಇವರ ಹಸಿಗೆ ನಿವಾಸದಲ್ಲಿ ಮಾರ್ಚ್ 15ರ ಭಾನುವಾರ ಬೆಳಗ್ಗೆ ಗಣಹೋಮ & ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಇರುತ್ತದೆ.. ಸಂಜೆ ಅಕ್ಲಾಪುರ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಹರಕೆ ಬಯಲಾಟ ನೆರವೇರಲಿದ್ದು, ರಾತ್ರಿಯೂ ಅನ್ನಸಂತರ್ಪಣೆ ಇರಲಿದೆ.. ಎಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಸತ್ಕಾರ ಸ್ವೀಕರಿಸಿ, ಯಕ್ಷಗಾನ ವೀಕ್ಷಿಸಿ, ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮತಿ ಗೀತಾ ಶ್ರೀ…
ಚಿಕ್ಕಮಗಳೂರು ಟಾಪ್ ನ್ಯೂಸ್ • ಚಿಕ್ಕಮಗಳೂರು: ಮಗುವಿನ ಮರ್ಮಾಂಗಕ್ಕೆ ತಗುಲಿದ ಕಬ್ಬಿಣ! • ನರಸಿಂಹರಾಜಪುರ : ದಂಪತಿ ಹತ್ಯೆ: ಹಂತಕನಿಗೆ ಮರಣದಂಡನೆ • ಚಿಕ್ಕಮಗಳೂರು: ಮದುವೆಯಾದ 2 ತಿಂಗಳೊಳಗೆ ಪತಿ ಕೊಂದ ಪತ್ನಿ! • ಕೊಪ್ಪ: ಕಾಡಿಗೆ ಬೆಂಕಿ: ಅಗ್ನಿ ಶಾಮಕ ದಳದ ಕಾರ್ಯಾಚರಣೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಚಿಕ್ಕಮಗಳೂರು: ಅಂಗನವಾಡಿ ಕೇಂದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ, ಮಗುವಿನ ಮರ್ಮಾಂಗಕ್ಕೆ ಕಬ್ಬಿಣದ ತಂತಿ ತಗುಲಿ, ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೌರಿಕಾಲುವೆ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. ಮಗು ಅಂಗನವಾಡಿಯಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಮರಕ್ಕೆ ಅಳವಡಿಸಿದ್ದ ಕಬ್ಬಿಣದ ಜಾಲರಿಯ ತಂತಿ ತಗುಲಿ ಈ ರೀತಿಯ ದುರ್ಘಟನೆ ಸಂಭವಿಸಿದೆ. ಇದನ್ನು ಗಮನಿಸಿದ ಶಿಕ್ಷಕಿಯು ಮಗುವಿನ ಪೋಷಕರಿಗೆ ಯಾವುದೇ ಮಾಹಿತಿ ನೀಡದೆ ಮತ್ತೊಂದು ಮಗುವಿನ ಪೋಷಕರೊಂದಿಗೆ ಮನೆಗೆ ಕಳುಹಿಸಿದ್ದಾರೆ. ಮನೆಗೆ ಆಗಮಿಸಿದ ಮಗು ಒಂದೇ ಸಮನೆ ಅಳುತ್ತಿರುವುದನ್ನು ಕಂಡು ಗಾಬರಿಗೊಂಡ ಮಗುವಿನ ಪೋಷಕರು, ಮಗುವನ್ನು ಸಂಪೂರ್ಣವಾಗಿ ಪರೀಕ್ಷಿಸಿದಾಗ ನಿಜಾಂಶ ಬೆಳಕಿಗೆ ಬಂದಿದೆ. ತಕ್ಷಣ ಪೋಷಕರು…



