Author: NammurEXP

ಅಂತಾ ರಾಷ್ಟ್ರೀಯ ಸಮ್ಮೇಳನದಲ್ಲಿ ಡಿಜಿಟಲ್ ತಂತ್ರಜ್ಞ ಗೌತಮ್ ನಾವಡ – ಬೆಂಗಳೂರು ಮೌಂಟ್ ಕಾರ್ಮೆಲ್ ಆಟೋನಮಸ್ ಕಾಲೇಜಿನಲ್ಲಿ ಸಮ್ಮೇಳನ – ಕುಂದಾಪುರದ ಫೋರ್ಥ್‌ಫೋಕಸ್ ಸಂಸ್ಥೆ ಸಂಸ್ಥಾಪಕ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಬೆಂಗಳೂರು ಮೌಂಟ್ ಕಾರ್ಮೆಲ್ ಆಟೋನಮಸ್ ಕಾಲೇಜಿನ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕುಂದಾಪುರದ ವಿ ಗೌತಮ್ ನಾವಡ ಉಪನ್ಯಾಸ ನೀಡುವ ಮೂಲಕ ರಾಜ್ಯ ಮಟ್ಟದಲ್ಲಿ ತಮ್ಮ ಡಿಜಿಟಲ್ ತಂತ್ರಜ್ಞಾನ ಜ್ಞಾನವನ್ನು ಹಂಚಲು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರು ಮೌಂಟ್ ಕಾರ್ಮೆಲ್ ಆಟೋನಮಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಮಾರ್ಚ್ 12 ಮತ್ತು 13ರಂದು ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನ “People, Planet and Profit: The New Paradigm of Sustainable Commerce” ನಡೆಯಲಿದೆ. ಈ ಸಮ್ಮೇಳನದಲ್ಲಿ ಶಿಕ್ಷಣ ತಜ್ಞರು, ಉದ್ಯಮಿಗಳು ಹಾಗೂ ಹಲವು ಕ್ಷೇತ್ರಗಳ ತಜ್ಞರು ಭಾಗವಹಿಸಿ ಆರ್ಥಿಕ ಬೆಳವಣಿಗೆ, ಪರಿಸರ ಜವಾಬ್ದಾರಿ ಮತ್ತು ಸಾಮಾಜಿಕ ಹೊಣೆಗಾರಿಕೆ ಕುರಿತಾಗಿ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಸಮ್ಮೇಳನದಲ್ಲಿ ಮುಖ್ಯ ಭಾಷಣಗಳು, ತಾಂತ್ರಿಕ ಅಧಿವೇಶನಗಳು ಹಾಗೂ…

Read More

ಶಿಕಾರಿಪುರ: ಮಹಿಳೆಯರ ಸೇವೆ ನೆನೆದ ಗಣ್ಯರು! – ಶಿಕಾರಿಪುರದ ಮೈತ್ರಿ ಪ್ರಾಥಮಿಕ ಶಾಲೆ, ಕುಮದ್ವತಿ ಪ್ರೌಢಶಾಲೆಯಲ್ಲಿ ಮಹಿಳಾ ದಿನಾಚರಣೆ, ಸರಸ್ವತಿ ಪೂಜೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಶಿಕಾರಿಪುರ: ಸ್ತ್ರೀ ಎಂಬುದು ಸಮಾಜದ ಬಹುದೊಡ್ಡ ಶಕ್ತಿಯಾಗಿದ್ದು, ಈ ಶಕ್ತಿಯಿಂದ ಸಮಾ ಜದ ಹಾಗೂ ಕುಟುಂಬದ ಏಳಿಗೆ ಸಾಧ್ಯ ಎಂದು ಪ್ರಾಚಾರ್ಯರಾದ ವಿಶ್ವನಾಥ ಪಿ ಹೇಳಿದ್ದಾರೆ. ಶಿಕಾರಿಪುರ ನಗರದ ಭವಾನಿ ರಾವ್ ಕೇರಿಯ ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಬಲೀಕರಣವು ಮಹಿಳೆಯರಿಗೆ ಶಿಕ್ಷಣ, ಆರ್ಥಿಕ ಸ್ವಾತಂತ್ರ್ಯ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಸಾಮಾಜಿಕ ಹಕ್ಕುಗಳನ್ನು ನೀಡಿ, ಪುರುಷರಂತೆಯೇ ಸಮಾನ ಅವಕಾಶಗಳನ್ನು ಪಡೆಯುವಂತೆ ಮಾಡುವುದಾಗಿದೆ. ಇದು ಆತ್ಮವಿಶ್ವಾಸ ಮೂಡಿಸುವುದು, ಲಿಂಗ ತಾರತಮ್ಯ ಹೋಗಲಾಡಿಸುವುದು, ಮತ್ತು ಆರೋಗ್ಯ ಹಾಗೂ ಭದ್ರತೆಯನ್ನು ಖಚಿತಪಡಿಸುವ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯ ಶಿಕ್ಷಕಿ ರೇಷ್ಮಾ ಬಾನುಸ್ತ್ರೀ ಕೇವಲ ಒಂದು ಹೆಸರಲ್ಲ, ಅದೊಂದು ಅದಮ್ಯ…

Read More

ಯುದ್ಧದ ಎಫೆಕ್ಟ್: ಸಿಲಿಂಡರ್ ಇನ್ನು ಸಿಗೋದು ಕಷ್ಟ?! – ಸಿಲಿಂಡರ್ ಬುಕ್ಕಿಂಗ್ ನಲ್ಲಿ ಹೊಸ ನಿಯಮ: ಏನೇನು? – ಯುದ್ಧದ ಸನ್ನಿವೇಶ ತಣ್ಣಗಾಗುವವರೆಗೆ ಸಿಲಿಂಡರ್ ವ್ಯತ್ಯಯ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: ಯುದ್ಧದ ಎಫೆಕ್ಟ್ ಇದೀಗ ಭಾರತಕ್ಕೂ ಬಿದ್ದಿದೆ. ಅಡುಗೆ ಅನಿಲದ ಪೂರೈಕೆಯಲ್ಲಿ ತೀವ್ರತರವಾದ ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಿಲಿಂಡರ್ ಬುಕ್ಕಿಂಗ್ ವಿಚಾರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಯುದ್ಧ ಹಿನ್ನೆಲೆ ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಾಸ ಮತ್ತು ಗ್ರಾಹಕರಲ್ಲಿ ಮನೆ ಮಾಡಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.‌ ಮತ್ತೊಂದು ಕಡೆಯಿಂದ ದೇಶದ ಹಲವಾರು ಗ್ರಾಹಕರು ಸಿಲಿಂಡರ್ ಖಾಲಿಯಾಗುವ ಮೊದಲೇ, ಅಂದರೆ ಎರಡು ತಿಂಗಳಿಗೊಮ್ಮೆ ಬುಕ್ ಮಾಡುತ್ತಿದ್ದವರು ಇದೀಗ 15 ದಿನಗಳಲ್ಲೇ ಪುನಃ ಬುಕ್ಕಿಂಗ್ ಮಾಡುತ್ತಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮತ್ತಷ್ಟು ಸಿಲಿಂಡರ್ ವಿಚಾರದಲ್ಲಿ ಕೃತಕ ಅಭಾವ ತಲೆದೋರುತ್ತಿದೆ ಎನ್ನಲಾಗಿದೆ. ಭಾರತದಲ್ಲಿಯೂ ಆತಂಕ: ಬುಕ್ಕಿಂಗ್ ನಿಯಮ ಬದಲು! ಸರ್ಕಾರವು ಭಾರತದಲ್ಲಿ ಅನಿಲದ ದಾಸ್ತಾನು ಸಮರ್ಪಕವಾಗಿದೆ ಎನ್ನುವ…

Read More

ಕೊಪ್ಪ ತಾಲೂಕಲ್ಲಿ ಆಶ್ರಯ ನಿವೇಶನ ಹಂಚಿಕೆ! – ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ. ಡಿ.ರಾಜೇಗೌಡ ಅವರಿಂದ ಮಾಹಿತಿ – ಪ್ರತಿ ನಿವೇಶನಕ್ಕೂ ನಂಬರ್: ಸೂರಿಲ್ಲದವರಿಗೆ ಗುಡ್ ನ್ಯೂಸ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೊಪ್ಪ: ಬಹಳ ವರ್ಷಗಳಿಂದ ನಿವೇಶನ ಹಂಚಿಕೆ ವಿಚಾರವು ನೆನೆಗುದಿಗೆ ಬಿದ್ದಿದ್ದರಿಂದ ಈ ಭಾಗದ ಜನರು ನಿರಾಶ್ರಿತರಾಗಿಯೇ ಉಳಿದುಕೊಂಡಿದ್ದರು. ಇದೀಗ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ನಿವೇಶನ ಹಂಚಿಕೆಗೆ ಮುಂದಾಗಿದೆ. ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ. ಡಿ.ರಾಜೇಗೌಡ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹಂಚಿಕೆಗೆ ಆಯ್ಕೆಯಾಗಿರುವ ನಿವೇಶನಗಳ ಸಂಖ್ಯೆ 83. ಅವುಗಳಲ್ಲಿ 18 ನಿವೇಶನಗಳು 2015ರ ಅನ್ವಯ ಹಂಚಿಕೆಯಾಗಿದೆ. 2025ರ ಅನ್ವಯ ಹಂಚಿಕೆ ಮಾಡಲಾದ ನಿವೇಶನಗಳ ಸಂಖ್ಯೆ 16. 2021ರ ಅನ್ವಯ ಸ್ಥಿರೀಕರಣದ ಹಿನ್ನೆಲೆಯಲ್ಲಿ ಆಯ್ಕೆ ಮಾಡಿರುವ ನಿವೇಶನಗಳ ಸಂಖ್ಯೆ 49. ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಒಟ್ಟು 30 ಹಾಗೂ ವಿಕಲಚೇತನರಿಗೆ 4 ವಿಧವೆಯರಿಗೆ 6, ಸಾಮಾನ್ಯ ವರ್ಗದವರಿಗೆ 44 ನಿವೇಶನಗಳನ್ನು…

Read More

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಳೆ ಓಪಿಡಿ ಸೇವೆ ಬಂದ್!? – ವೈದ್ಯರಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ – ಸರ್ಕಾರಿ ವೈದ್ಯರ ಸಂಘದಿಂದ ಹೋರಾಟ: ಏನೇನ್ ಇರುತ್ತೆ? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ‎ಬೆಂಗಳೂರು: ರಾಜ್ಯದ ಸರ್ಕಾರಿ ವೈದ್ಯರು ತಮ್ಮ ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 11 ರಿಂದ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದರಿಂದಾಗಿ ಜಿಲ್ಲಾ, ತಾಲ್ಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೊರ ರೋಗಿಗಳ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ‎ಸರ್ಕಾರಿ ವೈದ್ಯರ ಸಂಘವು ಕಳೆದ ಹಲವು ದಿನಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದರೂ, ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವೈದ್ಯರು ಕರ್ತವ್ಯದ ವೇಳೆ ಕಪ್ಪು ಪಟ್ಟಿ ಧರಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ವೇತನ ಶ್ರೇಣಿಯ ಸುಧಾರಣೆ ಮತ್ತು ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿ ಕೆಲಸದ ಒತ್ತಡ ಕಡಿಮೆ ಮಾಡುವುದು. ‎ಆಸ್ಪತ್ರೆಗಳಲ್ಲಿ ಆಧುನಿಕ ವೈದ್ಯಕೀಯ ಸೌಲಭ್ಯಗಳ…

Read More

ನಾಗರಹಳ್ಳಿಯಲ್ಲಿ ನಾಗ ದೇವರಿಗೆ ವಿಶೇಷ ಪೂಜೆ – ಮಾ. 12ರಿಂದ ಮಾ.16ರವರೆಗೆ ಸರ್ಪ ಸಂಸ್ಕಾರ, ಹರಕೆ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ, ನಾಗ ದರ್ಶನ – ಸರ್ವರನ್ನು ಸ್ವಾಗತಿಸಿದ ಅರ್ಚಕ ವೃಂದ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಹೊಸನಗರ: ಪ್ರತಿ ವರ್ಷದಂತೆ ಸರ್ಪದೋಷ ನಿವೃತ್ತಿಗೆ ನಾಗರಹಳ್ಳಿಯ ಶ್ರೀನಾಗೇಂದ್ರ ಸ್ವಾಮಿ ದೇವಾಲಯದಲ್ಲಿ ದಿನಾಂಕ 12 ಮಾರ್ಚ್ 2026ರಿಂದ ದಿನಾಂಕ 16 ಮಾರ್ಚ್ 2026ರವರೆಗೆ ಸರ್ಪ ಸಂಸ್ಕಾರ, ಹರಕೆ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ, ನಾಗದರ್ಶನ ಮತ್ತು ಶ್ರೀಸ್ವಾಮಿಗೆ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ. ಮಾ.12ರ ಗುರುವಾರದಂದು ಸರ್ಪ ಸಂಸ್ಕಾರ ಕ್ರಿಯೆ ಆರಂಭಗೊಳ್ಳಲಿದ್ದು, ದಿನಾಂಕ 16ರ ಸೋಮವಾರದಂದು ಪ್ರತಿಷ್ಠಾಹೋಮ ಪೂರ್ವಕ ಹರಕೆ ನಾಗಶಿಲಾ ಪ್ರತಿಷ್ಠೆ, ಆಶ್ಲೇಷ ಬಲಿ, ಬ್ರಹ್ಮಚಾರಿ ಬ್ರಾಹ್ಮಣ ಆರಾಧನೆ, ಶ್ರೀಸ್ವಾಮಿಗೆ ವಿಶೇಷ ಪೂಜಾಸಹಿತ ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಮತ್ತು ನಾಗದರ್ಶನವನ್ನು ಏರ್ಪಡಿಸಿದ್ದಾರೆ. ಸರ್ವರನ್ನು ಸ್ವಾಗತಿಸಲಾಗಿದೆ.

Read More

ಕರಾವಳಿ ಟಾಪ್ ನ್ಯೂಸ್ • ಪುತ್ತೂರು: ತಲವಾರು ಹಿಡಿದು ಓಡಾಡಿದವನ ಮೇಲೆ ಕೇಸ್! • ಬ್ರಹ್ಮಾವರ: 10 ಮಂದಿ ಪೊಲೀಸರ ವಶಕ್ಕೆ • ಉಡುಪಿ: ಮಕ್ಕಳ ಅಪಹರಣ ಸುಳ್ಳು ಸುದ್ದಿ • ಬೆಳ್ತಂಗಡಿ: ಹಾವು ಕಚ್ಚಿ ವ್ಯಕ್ತಿ ಸಾವು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಪುತ್ತೂರು: ವ್ಯಕ್ತಿಯೊಬ್ಬ ತಲವಾರು ಹಿಡಿದು ಜನರನ್ನು ಭಯಗೊಳಿಸಿದ ಘಟನೆ ಪುತ್ತೂರಿನ ಮುಕ್ವೆ ಜಂಕ್ಷನ್ ನಲ್ಲಿ ನಡೆದಿದ್ದು, ಓರ್ವನ ವಿರುದ್ಧ ಕೇಸ್ ದಾಖಲಾಗಿದೆ. ಅಬ್ದುಲ್ ರಹಿಮ್ ಎನ್ನುವ ವ್ಯಕ್ತಿಯು ಸಂಜೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ರಾತ್ರಿಯ ವೇಳೆ ಮಸೀದಿಯ ಬಳಿ ಬಂದು ಸಿಯಾಬ್ ಎಲ್ಲಿ ಎಂದು ಕೇಳಿ ಗಲಾಟೆ ಆರಂಭಿಸಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಸೀದಿಯವರು ಅಬ್ದುಲ್ ರಹಿಮ್ ನನ್ನು ಅಲ್ಲಿಂದ ಕಳುಹಿಸಿದ್ದಾರೆ.ಹತ್ತು ನಿಮಿಷಗಳ ಬಳಿಕ ಮರಳಿ ಬಂದ ಅಬ್ದುಲ್ ರಹಿಮ್ ತಲವಾರು ಹಿಡಿದುಕೊಂಡು ಬೀಸುತ್ತಾ, ಜನರಲ್ಲಿ ಭಯವನ್ನು ಹುಟ್ಟಿಸಿದ್ದಾನೆ. ಜನದಟ್ಟಣೆ ಹೆಚ್ಚಾಗುತ್ತಿದ್ದಂತೆ ಅಬ್ದುಲ್ ರಹಿಮ್ ಅಲ್ಲಿಂದ ಆಟೋ ಹತ್ತಿ ಪರಾರಿಯಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಸಿರಾಜುದ್ದೀನ್…

Read More

ಕೊಪ್ಪದ ಅಮಡಿ ಮನೆ ಬಳಿ ರಾಶಿ ರಾಶಿ ಕಸ! – ಮಾಂಸದಿಂದ ಹಿಡಿದು ಊರ ಕಸ ರಸ್ತೆಗೆ: ಯಾರು ಹೊಣೆ? – ಶರತ್ ಕಾರಂಗಿ ಚಾರಿಟೇಬಲ್ ಟ್ರಸ್ಟ್ ಸ್ವಚ್ಛತೆ – ಚಿಕ್ಕಮಗಳೂರು: ಕಾಡಾನೆ ದಾಳಿಗೆ ಹಸು ಬಲಿ ಮರದಿಂದ ಬಿದ್ದು ಸಾವು; ಮಾಲೀಕನ ವಿರುದ್ಧ ಕೇಸ್! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೊಪ್ಪ: ಕೊಪ್ಪದ ರಾಷ್ಟ್ರೀಯ ಹೆದ್ದಾರಿ ಅಮ್ಮಡಿ ಮನೆ ಬಳಿ ರಾಶಿ ರಾಶಿ ಕಸವನ್ನು ತಂದು ನಿತ್ಯ ಸುರಿಯುತ್ತಿದ್ದಾರೆ, ಪ್ಲಾಸ್ಟಿಕ್,ತ್ಯಾಜ್ಯ ವಸ್ತುಗಳು,ಡೈಪರ್ ಗಳು, ಮಾಂಸ, ಕೋಳಿ ತ್ಯಾಜ್ಯ ಸುರಿಯಲಾಗುತ್ತಿದೆ. ಈ ಅವ್ಯವಸ್ಥೆ ನೋಡಿ ಶರತ್ ಕಾರಂಗಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸದಸ್ಯರೆಲ್ಲ ಬೆಳಗ್ಗೆ 6.30ರಿಂದ ಶ್ರಮದಾನ ಮಾಡಿ ಒಂದಷ್ಟು ಜಾಗವನ್ನು ಸ್ವಚ್ಛಗೊಳಿಸಿದ್ದಾರೆ. ಪ್ರತಿ ನಿತ್ಯ ಇಲ್ಲಿ ಕಸ ಸುರಿಯಲಾಗುತ್ತಿದೆ. ಕೊಪ್ಪ ಪಟ್ಟಣಕ್ಕೆ ಅನತಿ ದೂರದಲ್ಲಿರುವ ಈ ಅವ್ಯವಸ್ಥೆ ಸರಿ ಮಾಡುವವರು ಯಾರು?. ಚಿಕ್ಕಮಗಳೂರು: ಕಾಡಾನೆ ದಾಳಿಗೆ ಹಸು ಬಲಿ ಚಿಕ್ಕಮಗಳೂರು: ಕಾಡಾನೆ ಉಪಟಳ ಕಾಫಿ ನಾಡಲ್ಲಿ ಮತ್ತೆ ಶುರುವಾಗಿದೆ. ಆನೆ…

Read More

ಶಿವಮೊಗ್ಗ ಜಿಲ್ಲೆಯಲ್ಲಿ ಏನೇನು? ರಿಪ್ಪನ್ ಪೇಟೆ: ಮದುವೆ ಆಮಂತ್ರಣಕ್ಕೆ ತೆರಳಿದ್ದ ಕಾರು ಬೆಂಕಿಗಾಹುತಿ ಶಿರಾಳಕೊಪ್ಪ: ಅಂಗಾಂಗ ದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ತೀರ್ಥಹಳ್ಳಿ: ಕುಪ್ಪಳಿ ಸಮೀಪ ಕಾಡಿಗೆ ಬೆಂಕಿ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ : ತಾಲೂಕಿನ ದೇವಂಗಿ ಸಮೀಪದ ಕುವೆಂಪು ಜೈವಿಕ ಅರಣ್ಯದಲ್ಲಿದ್ದ ವಿದ್ಯುತ್ ಟ್ರಾನ್ಸರ್ಮರ್ ನಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹತ್ತಿಕೊಂಡು ಅಗ್ನಿ ಶಾಮಕ ದಳ ಸಿಬ್ಬಂದಿ ನಂದಿಸಿದ್ದಾರೆ. ಅರಣ್ಯದ ಒಳಗಿದ್ದ ವಿದ್ಯುತ್ ಟ್ರಾನ್ಸಾರ್ಮರ್ ನಿಂದ ಶಾರ್ಟ್ ಸರ್ಕ್ಯೂಟ್ ಆಗಿದ್ದು ತಕ್ಷಣವೇ ಸುತ್ತ ಮುತ್ತಲೂ ಬೆಂಕಿ ಹತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಸ್ಥಳೀಯರು ಸಹಕಾರ ಮಾಡಿದ್ದಾರೆ. ರಿಪ್ಪನ್ ಪೇಟೆ: ಮದುವೆ ಆಮಂತ್ರಣಕ್ಕೆ ತೆರಳಿದ್ದ ಕಾರು ಬೆಂಕಿಗಾಹುತಿ ರಿಪ್ಪನ್ ಪೇಟೆ: ಚಲಿಸುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಏಕಾಏಕಿ ಬೆಂಕಿ ತಗುಲಿದ ಘಟನೆ, ಬೆಳ್ಳೂರು ಗ್ರಾಮದಲ್ಲಿ ನಡೆದಿದೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ದ್ಯಾಮ್ಲಾಪುರದ ಶ್ರೀಕಾಂತ್ ಎನ್ನುವವರು ತಮ್ಮ ತಂಗಿಯ ಮದುವೆ ಆಮಂತ್ರಣ ಪತ್ರಿಕೆಯನ್ನು…

Read More

ಹಳ್ಳಿ ಹಳ್ಳಿಯಲ್ಲಿ ವಿಮಾನ, ಸರ್ಕಾರಿ ಸಿಬ್ಬಂದಿಯ ಸರ್ವೇ! – ಅರಣ್ಯ ಪ್ರದೇಶದ ಗುರುತು: ಕಂದಾಯ ಇಲಾಖೆಯೂ ಭಾಗಿ? – ಜನರಿಗೆ ಮಾಹಿತಿಯೇ ಇಲ್ಲ.. ಪ್ರಾಬ್ಲಮ್ ಮಾಡಬೇಡಿ ಪ್ಲೀಸ್.. ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಚಿಕ್ಕಮಗಳೂರು: ಅರಣ್ಯ ಇಲಾಖೆಯ ಸರ್ವೇ ಇದೀಗ ಜನರಲ್ಲಿ ಅನೇಕ ಪ್ರಶ್ನೆ ಹುಟ್ಟು ಹಾಕಿದೆ. ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ತಾಲೂಕಿನ ಎಲ್ಲಾ ಗ್ರಾಮಗಳ ಎಸ್ಐಟಿ ಸರ್ವೆ ನಡೆಯುತ್ತಿದ್ದು ವಿಲೇಜ್ ಅಕೌಂಟೆಂಟ್ ಫಾರೆಸ್ಟ್ ಆಫೀಸರ್ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ಸರ್ಕಾರಿ ನಿಯೋಜಿತ ಒಬ್ಬರು ಸರ್ವೆ ಅಧಿಕಾರಿ ಕೆಲಸ ಮಾಡುತ್ತಿದ್ದಾರೆ. ಗ್ರಾಮದ ಈ ಸರ್ವೇಯಲ್ಲಿ ಆಯಾಗ್ರಾಮದ ಸರ್ವೇ ನಂಬರ್ ಒಳಗಿರುವ ಖಾತೆ ಜಮೀನುಗಳ ವಿಸ್ತೀರ್ಣ ಹಾಗೂ ಮಾಲೀಕರ ವಿವರಗಳನ್ನು ದಾಖಲಿಸಬೇಕಿದೆ. ಎಸ್ಐಟಿ ಸರ್ವೆಯ ಸಾಧಕ ಬಾದಕಗಳನ್ನು ಜನತೆಗೆ ತಿಳಿಸಿ ಕ್ರಮ ಕೈಗೊಳ್ಳಬೇಕು ಎಂಬ ಅಗ್ರಹ ಹೆಚ್ಚಿದೆ. ಒಂದು ಕಡೆ ವಿಮಾನದ ಮೂಲಕ ಅರಣ್ಯ ಸರ್ವೇ ಮಾಡಲಾಗುತ್ತಿದೆ. ಇನ್ನು ಒಂದು ಕಡೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ…

Read More