ಮಂಗಳೂರು ಪಲ್ಗುಣಿ ನದಿಗೆ ವಿಷಯುಕ್ತ ನೀರು!? – ಕೊಳಚೆ ನೀರು ಬಿಡುತ್ತಿರುವ ಕಾರ್ಖಾನೆಗಳು..ಕೇಳೋರಿಲ್ಲ – ಕಣ್ಣುಮುಚ್ಚಿ ಕುಳಿತಿದೆ ಜಿಲ್ಲಾಡಳಿತ: ಜನ ಹೋರಾಟ ಶುರು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮಂಗಳೂರು: ಮಂಗಳೂರಿನ ಕುಳೂರು ಸಮೀಪ ಪಲ್ಗುಣಿ ನದಿಗೆ ಇದೀಗ ವಿಷಯುಕ್ತ ನೀರು ಸೇರುತ್ತಿದೆ. ಸುತ್ತಮುತ್ತಲಿನ ಕೊಳಚೆ ನೀರು ಬಿಡುತ್ತಿರುವ ಕಾರ್ಖಾನೆಗಳು ನಡೆ ಕೇಳೋರಿಲ್ಲವಾಗಿದೆ. ಈ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ ಜಿಲ್ಲಾಡಳಿತದ ವಿರುದ್ಧ ಜನ ಹೋರಾಟ ಶುರುವಾಗಿದೆ. ಬೃಹತ್ ಕಾರ್ಖಾನೆಗಳಿಂದ ಹೊರಹೊಮ್ಮುತ್ತಿರುವ ಕಲ್ಮಶವು ಮಳವೂರು ಮೂಲಕ ಫಲ್ಗುಣಿ ನದಿಯ ಅಕ್ಕಪಕ್ಕದಲ್ಲಿ ಸೇರುತ್ತಿದೆ. ಪರಿಣಾಮವಾಗಿ ನೀರಿನಲ್ಲಿ ನೊರೆ ಕಂಡುಬಂದಿದ್ದು, ವಿಪರೀತ ವಾಸನೆಯ ಜೊತೆಗೆ ನದಿಯಲ್ಲಿ ಜೀವಿಸುತ್ತಿರುವ ಮೀನುಗಳು ಸಾಯುತ್ತಿವೆ. ಅಲ್ಲದೆ ಈ ನದಿಗೆ ಅಣೆಕಟ್ಟೊಂದನ್ನು ಕಟ್ಟಿದ್ದು, ಇಲ್ಲಿಂದಲೇ 10 ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜಾಗುತ್ತಿದೆ. ಜನರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತಹ ಆತಂಕ ಮನೆ ಮಾಡಿದೆ. ಅಣೆಕಟ್ಟಿನವರೆಗೆ ಹರಡಿರುವ ಕಲುಷಿತ ನೀರು, ಅಣೆಕಟ್ಟನ್ನು ಪ್ರವೇಶಿಸಿ ನದಿಯಲ್ಲಿ ಬೆರೆಯದೇ ಇರುತ್ತದೆಯೇ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಜನರ ಜೀವನದೊಂದಿಗೆ…
Author: NammurEXP
ರಾಜಧಾನಿಯಲ್ಲಿ ಸೇವಾ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಸ್ನೇಹ ಸಮ್ಮಿಲನ – ಶಾಲೆಯ ನೆನಪು ಮಾಡಿಕೊಂಡ ಹಿರಿಯ ವಿದ್ಯಾರ್ಥಿಗಳು – ರಾಜ್ಯದ ಮೂಲೆ ಮೂಲೆಯಲ್ಲಿರುವ ಹಳೆಯ ವಿದ್ಯಾರ್ಥಿಗಳು ಹಾಜರ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿಯ ಸೇವಾ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ನೇಹ ಸಮ್ಮಿಲನ ರಾಜಧಾನಿ ಬೆಂಗಳೂರಲ್ಲಿ ಸಂಭ್ರಮದಿಂದ ನಡೆಯಿತು. ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯಲ್ಲಿ ಕಾರ್ಯಕ್ರಮ ಮಾಡಿ ಅಕ್ಷರ ಕಳಿಸಿದ ಗುರುಗಳಿಗೆ ಗೌರವ ಸಲ್ಲಿಸಿದರು. ಇದೇ ವೇಳೆ ಮುಕುಂದ ಮಾಸ್ಟರ್ ಜಿ, ಭಾಗ್ಯ ಮಾತಾಜಿ, ಶಾಂತಲ ಮಾಯಿ ಮಾತಾಜಿ, ಮಹೇಶ್ ಮಾಸ್ಟರ್ ಜಿ ಹಾಗು ಸುಧಾ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನ ಕಬ್ಬನ್ ಪಾರ್ಕ್ ಸರ್ಕಾರಿ ನೌಕರರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆ ಮೂಲೆಯಲ್ಲಿ ಇರುವ ಹಳೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.ತೀರ್ಥಹಳ್ಳಿ ಹೆಮ್ಮೆಯ ಶಿಕ್ಷಣ ಸಂಸ್ಥೆ ಸೇವಾ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಸ್ನೇಹ ಸಮ್ಮಿಲನದಲ್ಲಿ ಅನೇಕ ಬ್ಯಾಚ್ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ನಟ ದಿಗಂತ್ ಇದೇ ಶಾಲೆಯ…
ಚಿಲುಮೆ ಜಡ್ಡು ದೇವಸ್ಥಾನದಲ್ಲಿ ಮಾರ್ಚ್ 13ರಂದು ಸಾಮೂಹಿಕ ಆಶ್ಲೇಷ ಬಲಿ – ಪ್ರಸಿದ್ಧ ಶ್ರೀಬ್ರಾಹ್ಮರಿ, ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ – ಸರ್ವ ಭಕ್ತರನ್ನು ಸ್ವಾಗತಿಸಿದ ದೇವಸ್ಥಾನ ಸಮಿತಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಶಿವಮೊಗ್ಗ: ತಾಲ್ಲೂಕಿನ ಚಿಲುಮೆಜೆಡ್ಡುವಿನ ಶ್ರೀಶಿವನಾಗ ಸೇವಾ ಟ್ರಸ್ಟ್ ವತಿಯಿಂದ ಶ್ರೀಬ್ರಾಹ್ಮರಿ, ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಆಶ್ಲೇಷಬಲಿ ಪೂಜೆ ಕಾರ್ಯಕ್ರಮವನ್ನು 13 ಮಾರ್ಚ್ 2026ರ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ. ಶುಕ್ರವಾರದ ಬೆಳಗಿನ ಶುಭ ಮುಹೂರ್ತದಲ್ಲಿ ಶ್ರೀಬ್ರಾಹ್ಮರಿ ದುರ್ಗಾಪರಮೇಶ್ವರಿ ಅಮ್ಮನವರು ಹಾಗೂ ಶ್ರೀವಾಸುಕಿ ನಾಗದೇವರ ಸನ್ನಿಧಾನದಲ್ಲಿ ದೇವರ ಪ್ರಿತ್ಯಾರ್ಥವಾಗಿ ಸರ್ಪಶಾಂತಿ ಹೋಮವನ್ನು ಮತ್ತು ಅದೇ ದಿನ ಸಂಜೆ 5:00ಗಂಟೆಗೆ ಆಶ್ಲೇಷಬಲಿ ಪೂಜೆ, ನಾಗದರ್ಶನಗಳು ನೆರವೇರಲಿವೆ. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಸಿರಿಮುಡಿ ಗಂಧ ಪ್ರಸಾದ ಮತ್ತು ಅನ್ನಪ್ರಸಾದವನ್ನು ವಿತರಿಸಲಾಗುವುದು. ಆಶ್ಲೇಷಬಲಿ ಪೂಜೆಯನ್ನು ಮಾಡಿಸಲು ಇಚ್ಛಿಸುವ ಭಕ್ತಾದಿಗಳು ಮುಂಚಿತವಾಗಿ ತಿಳಿಸಬೇಕಾಗಿ ದೇವಾಲಯದ ಧರ್ಮದರ್ಶಿಗಳಾದ ರಮೇಶ್ ನಾಗಪಾತ್ರಿಗಳು ಮಾಹಿತಿ ನೀಡಿದ್ದು, ಶಿವನಾಗ ಭಕ್ತವೃಂದ ಹಾಗೂ ಊರಿನ ಗ್ರಾಮಸ್ಥರು ಸರ್ವರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.
ಕೊಪ್ಪ, ನರಸಿಂಹ ರಾಜಪುರ ಸುದ್ದಿ ಕೊಪ್ಪದ ಹುಡುಗಿ ರಾಷ್ಟ್ರ ಮಟ್ಟದಲ್ಲಿ ಸಾಧನೆ! – ರಾಷ್ಟ್ರ ಮಟ್ಟದ ಮುಕ್ತ ಯೂತ್ ಗೇಮ್ಸ್ ಗುಂಡೆಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ – ರೈತರ ಸಮಸ್ಯೆ ಬಗೆಹರಿಸಲು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಮನವಿ – ಕೊಪ್ಪದಲ್ಲಿ ಹೆಚ್ಚಾಯ್ತಾ ಇಸ್ಪೀಟ್?!: ಕಾಡಲ್ಲಿ ಆಟ ಆಡುತ್ತಿದ್ದ 9 ಮಂದಿ ಬಂಧನ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೊಪ್ಪ: ಕೊಪ್ಪ ತಾಲ್ಲೂಕಿನ ಅತ್ತಿಕೊಡಿಗೆ ಪಂಚಾಯತಿ ವ್ಯಾಪ್ತಿಯ ಕವನಹಳ್ಳದ ಕ್ಲೆಮೆಂಟ್ ಡಿಸೋಜಾ ಹಾಗೂ ಆಶಾ ಅವರ ಪುತ್ರಿಯಾದ ಅನೀಶಾ ಅವರು ಯೂತ್ ಗೇಮ್ಸ್ ಕೌನ್ಸಿಲ್ ಆಫ್ ಇಂಡಿಯಾ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಆಯೋಜಿ ಸಿದ್ದ ರಾಷ್ಟ್ರ ಮಟ್ಟದ ಮುಕ್ತ ಯೂತ್ ಗೇಮ್ಸ್‌ನಲ್ಲಿ ಭಾಗವಹಿಸಿ, ಗುಂಡೆಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಆಗಿರುವ ಅನೀಶಾ ಮಾ.26 ರಿಂದ 30ರವರೆಗೆ ನೇಪಾಳ ದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೂತ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ. ರೈತರ…
ವಾಲಿಬಾಲ್: ಕರ್ನಾಟಕ ತಂಡಕ್ಕೆ ಆಯ್ಕೆಯಾದ ತೀರ್ಥಹಳ್ಳಿ ಹುಡುಗ! – ಹಾರೆಕೊಪ್ಪದ ಶಬರೀಶ್ ಗೌಡ ಈಗ ರಾಷ್ಟ್ರ ಮಟ್ಟದಲ್ಲಿ ಸಾಧನೆ – ತೀರ್ಥಹಳ್ಳಿ ವಾಗ್ದೇವಿ ಶಾಲೆಯಲ್ಲಿ ಓದಿದ್ದ ವಿದ್ಯಾರ್ಥಿ – ಮಲೆನಾಡ ಮತ್ತೊಬ್ಬ ಕ್ರೀಡಾಪಟುಗೆ ಶುಭಾಶಯಗಳು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು/ತೀರ್ಥಹಳ್ಳಿ: ಮಾ.15 ರಿಂದ 20ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಯೂಥ್ ನ್ಯಾಷನಲ್ ವಾಲಿಬಾಲ್ ಪಂದ್ಯಾವಳಿಗೆ ತೀರ್ಥಹಳ್ಳಿ ಮೂಲದ ಶಬರೀಶ್ ಗೌಡ ಆಯ್ಕೆ ಆಗಿದ್ದಾರೆ. ತೀರ್ಥಹಳ್ಳಿ ತಾಲೂಕು ದಬ್ಬಣಗದ್ದೆ ಸಮೀಪದ ಹಾರೆಕೊಪ್ಪದ ಶ್ರೀಮತಿ ರಂಜಿತಾ ಶ್ರೀ ಜಗದೀಶ್ ಹಾರಕೊಪ್ಪ ಇವರ ಪುತ್ರ. ತೀರ್ಥಹಳ್ಳಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಾಗ್ದೇವಿಯಲ್ಲಿ ಎಸ್.ಎಸ್.ಎಲ್.ಸಿ ಓದಿದ್ದು, ಬೆಂಗಳೂರು ಜಯನಗರದ ಸುರಾನಾ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂ ಓದುತ್ತಿದ್ದಾರೆ. ಕ್ರೀಡಾ ಇಲಾಖೆ ಇವರನ್ನು ಆಯ್ಕೆ ಮಾಡಿದ್ದು, ಓಡಿಸ್ಸಾದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಆಳ್ವಾಸ್ ಕಾಲೇಜಿನಲ್ಲಿ ತರಬೇತಿ ಕ್ಯಾಂಪ್ ಅಲ್ಲಿ ತರಬೇತಿ ಪಡೆದಿದ್ದರು. ಶಬರೀಶ್ ಗೌಡ ಇವರಿಗೆ ಅಭಿನಂದನೆಗಳು ಶುಭ ಕೋರುವವರು ಹಾರೆಕೊಪ್ಪ ಕುಟುಂಬದವರು ಮತ್ತು…
ಕರಾವಳಿ ಟಾಪ್ ನ್ಯೂಸ್ • ಬೆಳ್ತಂಗಡಿ: ಅಕ್ರಮ ಡೀಸೆಲ್ ದಾಸ್ತಾನು: ದಾಳಿ • ಕಡಬ: ಬಾವಿ ತೋಡಲು ಸ್ಫೋಟಕ ಬಳಕೆ; ಮನೆಗಳಿಗೆ ಹಾನಿ • ಬಂಟ್ವಾಳ: ಬಸ್ ನಲ್ಲಿ ಚಿನ್ನಾಭರಣ ಕಳುವು; ಆರೋಪಿ ಸೆರೆ • ಉಡುಪಿ: ಕುಡಿದ ಅಮಲಲ್ಲಿ ವೃದ್ಧೆಯ ಕೊಲೆ..! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಳ್ತಂಗಡಿ: ಬೆಳ್ತಂಗಡಿ ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ ವಿಶ್ವ, ಆಹಾರ ಶಿರಸ್ತೇದಾರರಾದ ಸಂತೋಷ್ ಮತ್ತವರ ತಂಡವು ಕಾರ್ಯಾಚರಣೆ ನಡೆಸಿದ ಘಟನೆ, ಕಣಿಯೂರು ಗ್ರಾಮದಲ್ಲಿ ನಡೆದಿದೆ. ಮುದೆಲ್ತಿಯಾರ್ ಎನ್ನುವಲ್ಲಿನ ಜಗದೀಶ್ ಎನ್ನುವವರ ಮನೆಯ ಶೆಡ್ ನಲ್ಲಿ ಡೀಸೆಲ್ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. 20 ಬ್ಯಾರಲ್ ನಲ್ಲಿ 200 ಲೀಟರ್ ನಂತೆ 4.000 ಲೀಟರ್ ಡೀಸೆಲ್, 5 ಬ್ಯಾರಲ್ ಕ್ಯಾನ್ ನಲ್ಲಿ 35 ಲೀಟರ್ ನಂತೆ ಸಂಗ್ರಹಿಸಿಟ್ಟಿದ್ದ 175 ಲೀಟರ್ ಡೀಸೆಲ್ ಹಾಗೂ 5 ಖಾಲಿ ಕ್ಯಾನ್ ಗಳಿದ್ದವು ಎನ್ನಲಾಗಿದೆ. ಒಟ್ಟು 3.50.000 ರೂಪಾಯಿಯಷ್ಟು ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ…
ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರ ಮನೆಯಲ್ಲಿ ಧರ್ಮಸ್ಥಳ ಯಕ್ಷಗಾನ ಮಾ.16ಕ್ಕೆ ಧಾರ್ಮಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ – ಸರ್ವರಿಗೂ ಸ್ವಾಗತಿಸಿದ ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರಾದ ಶ್ರೀಮತಿ ಮೋಹಿನಿ ಎ ಆಚಾರ್ಯ ಮತ್ತು ಶ್ರೀ ಅನಂತ ಪದ್ಮನಾಭ ಆಚಾರ್ಯ ಮತ್ತು ಮಕ್ಕಳು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿಯ ಗಾಯತ್ರಿ ಜ್ಯೂವೆಲ್ಲರ್ಸ್ ಮಾಲೀಕರಾದ ಶ್ರೀಮತಿ ಮೋಹಿನಿ ಎ ಆಚಾರ್ಯ ಮತ್ತು ಶ್ರೀ ಅನಂತ ಪದ್ಮನಾಭ ಆಚಾರ್ಯ ಮತ್ತು ಮಕ್ಕಳು ಇವರ ಮನೆ ಶ್ರೀ ಗಾಯತ್ರಿಯಲ್ಲಿ ಮಾರ್ಚ್ 16ರ ಸೋಮವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮೇಳದವರಿಂದ ಯಕ್ಷಗಾನ ಬಯಲಾಟದ ಸೇವೆಯನ್ನು ಆಯೋಜಿಸಲಾಗಿದೆ. ಮಾ.16ನೇ ತಾರೀಕು ಬೆಳಿಗ್ಗೆ 8ಗಂಟೆಗೆ ಮನೆಗೆ ಶ್ರೀ ಕ್ಷೇತ್ರದ ದೈವ ದೇವರ ಆಗಮನವಾಗಲಿದೆ. 11 ಗಂಟೆಗೆ ಗಣ ಹೋಮ,ಫಲ ನೈವೇದ್ಯ ಸಮರ್ಪಣೆ ಶ್ರೀ ಮಹಾ ಗಣಪತಿ ದೇವರಿಗೆ ಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ ಮನೆಯಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ಚಂಡೆ ವಾದನ, ಮಂಗಳ ವಾದ್ಯ ಗೋಷ್ಠಿ,…
ತೀರ್ಥಹಳ್ಳಿಗೆ ಮತ್ತೊಂದು ಹೊಸ ಸೇತುವೆ! – ಭೀಮನಕಟ್ಟೆ-ಆಲಗೇರಿಯಲ್ಲಿ ತುಂಗಾ ಮಾಲತಿ ನದಿ ಸಂಗಮ ಸ್ಥಳದಲ್ಲಿ ಸೇತುವೆ – ಸೇತುವೆ ನಿರ್ಮಾಣಕ್ಕೆ ಜಾರಕಿಹೊಳಿ-ಸಿದ್ದರಾಮಯ್ಯರಿಗೆ ಮನವಿ – ರಾಮಕೃಷ್ಣಪುರದಲ್ಲಿ ಮಾ.15ಕ್ಕೆ ಸಮರ್ಪಣಾ ತಂಡದ ರಕ್ತದಾನ ಶಿಬಿರ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಭೀಮನಕಟ್ಟೆ- ಆಲ ಗೇರಿ ಗ್ರಾಮಗಳ ನಡುವೆ ತುಂಗಾ ಹಾಗೂ ಮಾಲತಿ ನದಿ ಸಂಗಮ ಸ್ಥಳದಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ನೂತನ ಸೇತುವೆ ನಿರ್ಮಿಸುವಂತೆ ಅಲಗೇರಿ ಗ್ರಾಮದ ಯೋಗೇಂದ್ರ ನಾಯ್ಸ್ ಮಾರ್ಚ್ 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕೀಹೊಳಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ತೀರ್ಥಹಳ್ಳಿ ಹಾಗೂ ಕಮ್ಮರಡಿ-ಶೃಂಗೇರಿ ಮಾರ್ಗದ ದೂರ ಈ ಸೇತುವೆ ನಿರ್ಮಾಣದಿಂದ 10 ಕಿಲೋಮೀಟರ್ ನಷ್ಟು ಕಡಿಮೆಯಾಗಲಿದೆ. ತೀರ್ಥಹಳ್ಳಿ-ಹೆಗ್ಗೋಡು-ಚಕ್ಕೋಡಬೈಲು, ಕೊಡ ಗೊಳ್ಳಿ, ಕಾಸರವಳ್ಳಿ, ರಾಮಕೃಷ್ಣಾಪುರ ಸೇರಿ ದಂತೆ ಹಲವು ಗ್ರಾಮಗಳ ಸಾವಿರಾರು ಗ್ರಾಮಸ್ಥರಿಗೆ ಈ ಸೇತುವೆ ನಿರ್ಮಾಣದಿಂದ ಪ್ರಯೋಜನವಾಗಲಿದೆ. ಯೋಗೇಂದ್ರ ನಾಯಕ್ ಅವರ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು…
ಪೆಟ್ರೋಲ್ ತುಂಬಿಸಲು ಮುಗಿಬಿದ್ದ ಜನ! – ಪೆಟ್ರೋಲ್ ದರ ಹೆಚ್ಚಾಗುವ ಆತಂಕಕ್ಕೆ ಜನರ ಕ್ಯೂ – ಕಾರವಾರ ಸೇರಿ ರಾಜ್ಯದ ಹಲವೆಡೆ ಘಟನೆ – ಎಲ್‌ಪಿಜಿ ಸಿಲಿಂಡರ್ ದರ ಏರಿಕೆ: ಹೋಟೆಲ್ ತಿಂಡಿ ಭಾರ!? – ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು/ಕಾರವಾರ: ಮಧ್ಯ ಪ್ರಾಚ್ಯದಲ್ಲಿ ಭುಗಿಲೆದ್ದಿರುವ ಇರಾನ್ ಮತ್ತು ಇರಾಕ್ ನಡುವಿನ ಯುದ್ಧ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ. ಜಾಗತಿಕ ಮಟ್ಟದಲ್ಲಿ ತೈಲ ರಫ್ತಿಗೆ ಹೊಡೆತ ಬಿದ್ದ ಪರಿಣಾಮ ಭಾರತದಲ್ಲಿಯೂ ಎಲ್‌ಪಿಜಿ ಗ್ಯಾಸ್ ದರದಲ್ಲಿ ದಿಢೀರ್ ಏರಿಕೆಯಾಗಿದೆ. ಇನ್ನೊಂದೆಡೆ, ಯುದ್ಧದ ಕಾರಣದಿಂದ ಇಂಧನ ಕೊರತೆಯಾಗಲಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ಆತಂಕಗೊಂಡ ಉತ್ತರ ಕನ್ನಡ ಜಿಲ್ಲೆಯ ಜನತೆ ಪೆಟ್ರೋಲ್, ಡೀಸೆಲ್‌ಗಾಗಿ ಬಂಕ್‌ಗಳಿಗೆ ಮುಗಿಬೀಳುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ದಾಂಡೇಲಿ ಸೇರಿದಂತೆ ವಿವಿಧ ಭಾಗಗಳ ಜನ ಪೆಟ್ರೋಲ್ ಖರೀದಿಗೆ ಮುಂದಾಗಿದ್ದಾರೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಪ್ರತಿದಿನ 1 ಲಕ್ಷದ 20…
ಶಿವಮೊಗ್ಗ ಅಡಿಕೆ ಮಾರುಕಟ್ಟೆ 10-03-2026 ಸರಕು: 59800-76800-98496 ಬೆಟ್ಟೆ: 50610-63500-64310 ರಾಶಿ: 47199-53200-56259 ಗೊರಬಲು: 23099-36400-39599 ಮಲೆನಾಡ ಎಲ್ಲಾ ಕೃಷಿ ಸುದ್ದಿಗಳಿಗಾಗಿ…ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ವೀಕ್ಷಿಸಿ.



