1 ನೇ ತರಗತಿ ದಾಖಲಾತಿಗೆ 6 ವರ್ಷದ ಮಿತಿ ಸಡಿಲಿಕೆ – ರಾಜ್ಯ ಸರ್ಕಾರ ಆದೇಶ: ವಿಧಾನ ಸಭೆಯಲ್ಲಿ ಮಧು ಬಂಗಾರಪ್ಪ ಪ್ರಸ್ತಾಪ – ಎರಡು ತಿಂಗಳು ಮಾತ್ರ ಸಡಿಲಿಕೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: 2026-27 ನೇ ಸಾಲಿಗೆ 1 ನೇ ತರಗತಿಯ ದಾಖಲಾತಿಗೆ ಕಾದು ಕುಳಿತ್ತಿದ್ದ ಪೋಷಕರಿಗೆ ರಾಜ್ಯ ಸರ್ಕಾರ ಬಿಗ್ ರಿಲೀಫ್ ನೀಡಿದ್ದು, ದಾಖಲಾತಿಗೆ ಆರು ವರ್ಷದ ಮಿತಿ ಸಡಿಲಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಮಹತ್ವದ ಘೋಷಣೆ ಮಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದನೇ ತರಗತಿಯ ದಾಖಲಾತಿಗೆ ಇದ್ದ ಆರು ವರ್ಷದ ಮಿತಿಯನ್ನು ಎರಡು ತಿಂಗಳು ಸಡಿಲಿಕೆ ಮಾಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
Author: NammurEXP
ರೈತರಿಗೆ ಮೈಲುತುತ್ತ ಭಾರ! – ನುಂಗಲಾರದ ತುತ್ತಾದ ಕೊಳೆರೋಗ ಔಷಧ! – ಕೆಜಿಗೆ 250 ರೂ.ನಿಂದ 550 ರೂ.ಗೆ ಹೆಚ್ಚಳ ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಬಳಸುವ ಬೋರ್ಡ್ ಮಿಶ್ರಣದ ಮೈಲುತುತ್ತ ದರ ದಿಢೀರನೆ ದುಪ್ಪಟ್ಟಾಗಿದೆ. ಕೆಜಿ ಮೈಲುತುತ್ತಕ್ಕೆ ಸುಮಾರು 275 ರೂ. ಹೆಚ್ಚಾಗಿದ್ದು ಅಡಕೆ ಬೆಳೆಗಾರರು ಅಕ್ಷರಶಃ ಕಂಗಾಲಾಗಿದ್ದಾರೆ. ರೋಗಗಳ ನಡುವೆ ಅಡಕೆ ಬೆಳೆ ಸಂರಕ್ಷಣೆ ರೈತರಿಗೆ ಸವಾಲಾಗಿರುವ ಹೊತ್ತಲ್ಲಿ ಮೈಲುತುತ್ತ ದರ ಏರಿಕೆಯಾಗಿದೆ. ಅಡಕೆ ಎಲೆಚುಕ್ಕಿ, ಕೊಳೆ ರೋಗ ನಿಯಂತ್ರಣಕ್ಕೆ ಮೈಲುತುತ್ತ ಔಷಧ ಬಳಸುತ್ತಿರುವ ರೈತರಿಗೆ ದರ ಏರಿಕೆ ನುಂಗಲಾರದ ತುತ್ತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಸರಿಸುಮಾರು 4 ಬಾರಿ ಔಷಧ ಸಿಂಪಡಣೆ ರೈತರಿಗೆ ಅನಿವಾರ ಎಲೆಚುಕ್ಕಿ ರೋಗ ನಿಯಂತ್ರಣಕ್ಕಾಗಿ ಅಡಕೆ ಮರದ ಹೆಡಲಿಗೆ ಬೋರ್ಡೋ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಅತೀ ಹೆಚ್ಚು ಮಳೆ ಸುರಿಯುವ ಪ್ರದೇಶದಲ್ಲಿ ರೈತರು ಐದಾರು ಬಾರಿ ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಮೈಲುತುತ್ತ ಧಾರಣೆ ಮತ್ತಷ್ಟು ಏರಿಕೆ ಆಗಬಹುದು ಎನ್ನಲಾಗಿದೆ.…
ಬಾರಲ್ಲಿ ಮಕ್ಕಳಿಗೆ ಮದ್ಯ ಕೊಟ್ರೆ ಮಾಲೀಕರು ಅರೆಸ್ಟ್! – ಅಪ್ರಾಪ್ತರ ಮದ್ಯಪಾನಕ್ಕೆ ಹೈಕೋರ್ಟ್ ಬ್ರೇಕ್..! – ವಯಸ್ಸಿನ ಪರೀಕ್ಷೆ ಕಡ್ಡಾಯ, ನಿಯಮ ಉಲ್ಲಂಘಿಸಿದ್ರೆ ಯಾರಿಗೆ ಶಿಕ್ಷೆ? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮಂಗಳೂರು: ಪಬ್, ವೈನ್ ಶಾಪ್, ಬಾರ್ ಮತ್ತು ಬ್ರೇವರಿಜ್ ಗಳಲ್ಲಿ ಅಪ್ರಾಪ್ತರು ಮದ್ಯಪಾನ ಮಾಡುವ ಪ್ರವೃತ್ತಿಗೆ ಕರ್ನಾಟಕ ಹೈಕೋರ್ಟ್ ಗಂಭೀರ ಕಡಿವಾಣ ಹಾಕಿದೆ. ಅಪ್ರಾಪ್ತರನ್ನು ಮದ್ಯಪಾನದ ವ್ಯಸನದಿಂದ ರಕ್ಷಿಸುವುದು ಆಡಳಿತ ಮಂಡಳಿಯ ನೈತಿಕ ಮತ್ತು ಶಾಸನಾತ್ಮಕ ಕರ್ತವ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬಾರ್ ಅಂಡ್ ರೆಸ್ಟೋರೆಂಟ್, ಪಬ್ ಅಲ್ಲಿ ಗ್ರಾಹಕರು ಪ್ರವೇಶಿಸುವಾಗಲೇ ಅವರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಮದ್ಯ ಸರಬರಾಜು ಮಾಡುವ ಸಂದರ್ಭದಲ್ಲೂ ಸಿಬ್ಬಂದಿಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಿದೆ. ಎಚ್ಚರಿಕೆ ಬೋರ್ಡ್ ಕಡ್ಡಾಯ: ಮದ್ಯ ಕೊಟ್ರೆ ಕೇಸ್ “ಅಪ್ರಾಪ್ತರಿಗೆ ಮದ್ಯ ನೀಡಲಾಗುವುದಿಲ್ಲ” ಎಂಬ ಎಚ್ಚರಿಕೆ ಫಲಕಗಳನ್ನು ಪ್ರತಿಯೊಂದು ಬ್ರಿವರಿಯಲ್ಲಿ ಎದ್ದು ಕಾಣುವಂತೆ ಹಾಕಿರಬೇಕು. ಅಪ್ರಾಪ್ತರು ಮದ್ಯದ ಅಂಗಡಿಗಳ…
ಈಗ ಅಣಬೆ ಕಾಲ: ಅರೋಗ್ಯಯುತ ಆಹಾರ! – ಮಳೆ ಹಿಡಿದ ಬೆನ್ನಲ್ಲೇ ಎಲ್ಲೆಡೆ ಅಣಬೆ ಸೀಸನ್ – ಅಣಬೆ ಎಲ್ಲರ ನೆಚ್ಚಿನ ಆಹಾರ…ಮಿಸ್ ಮಾಡ್ಕೋಬೇಡಿ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮಲೆನಾಡು/ಕರಾವಳಿ: ಆಹಾರ ಪ್ರಿಯರ ಅತ್ಯಂತ ಮೆಚ್ಚಿನ ಹಾಗೂ ಪೌಷ್ಟಿಕಾಂಶದ ಆಹಾರ ಅಣಬೆ. ಬಹು ಬೇಡಿಕೆಯ ಆಹಾರ ಕೂಡ. ಪಟ್ಟಣ, ನಗರ, ಹಳ್ಳಿಗಳಲ್ಲಿ ಅಣಬೆಗೆ ಭಾರೀ ಡಿಮ್ಯಾಂಡ್ ಇದೆ. ಮಳೆ ಶುರುವಾಗುವ ಮುನ್ನ ಕಾಡಲ್ಲಿ ಅಣಬೆ ಹುಟ್ಟುವುದು ಸಾಮಾನ್ಯ. ಈ ಅಣಬೆ ವಿಭಿನ್ನ ವಿಭಿನ್ನ ರೀತಿಯಲ್ಲಿ ಸಿಗುತ್ತವೆ. ಅರೋಗ್ಯಯುತ ಆಹಾರ..! ಮಾನವನ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಜೀರ್ಣಕ್ರಿಯೆಯನ್ನು ಸುಧಾರಿಸುವ, ತೂಕ ಇಳಿಕೆಗೆ ನೆರವಾಗುವ ಮತ್ತು ಮೂಳೆಗಳನ್ನು ಬಲಪಡಿಸುವ ವಿಟಮಿನ್ ಡಿ, ಬಿ ಹಾಗೂ ಪ್ರೋಟೀನ್ ಅನ್ನು ಸಮೃದ್ಧವಾಗಿ ಹೊಂದಿರುವ ಪದಾರ್ಥವಾದ ಅಣಬೆಯು ಇದೀಗ ಮಲೆನಾಡಿನಲ್ಲಿ ಸಂಭವಿಸಿದ ತೀವ್ರ ಮಳೆಯಿಂದಾಗಿ ತಲೆಯೆತ್ತಿ ನಿಂತಿದೆ. ಮಳೆಯ ಪರಿಣಾಮವಾಗಿ ಮಲೆನಾಡಿನ ನೆಲವು ತಂಪಾಗಿರುವ ಕಾರಣ ಅಣಬೆಗಳು ಮಣ್ಣಿನ ಮೇಲೆ ಈಗಾಗಲೇ ಹುಟ್ಟಿಕೊಂಡಿದ್ದು, ಆರೋಗ್ಯದ…
ಗ್ಯಾಸ್ ಬಳಸದಿದ್ದರೆ ಎಲ್‌ಪಿಜಿ ಪೂರೈಕೆ ಸ್ಥಗಿತ!? – ಕೇಂದ್ರ ಸರ್ಕಾರದಿಂದ ಜನತೆಗೆ ಸರ್ಕಾರದಿಂದ ಎಚ್ಚರಿಕೆ – ಪಿ. ಎನ್. ಜಿ ಗ್ಯಾಸ್ ಬಳಕೆದಾರರಿಗೆ ಅಲರ್ಟ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮಂಗಳೂರು: ಕೇಂದ್ರ ಸರ್ಕಾರ ಅಗತ್ಯವಿರುವಷ್ಟು ಇಂಧನ ಹಾಗೂ ಎಲ್‌ಪಿಜಿ ಸಂಗ್ರಹವಿದೆ ಎಂದು ಹೇಳಿಕೆ ನೀಡುತ್ತಿದ್ದರೂ ಎಲ್‌ಪಿಜಿ ಬುಕ್ ಮಾಡಿದ ಹಲವು ದಿನಗಳ ಬಳಿಕ ಸಿಲಿಂಡರ್‌ಗಳು ಸಿಗುತ್ತಿವೆ. ಇದೆಲ್ಲದರ ನಡುವೆ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಒಂದುವೇಳೆ ನಿಮ್ಮ ಮನೆಯಲ್ಲಿ ಪೈಪ್ಸ್ ಗ್ಯಾಸ್ (ಪಿಎನ್ ಜಿ) ಕನೆಕ್ಷನ್ ಇದ್ದರೂ ನೀವು ಅದನ್ನು ಬಳಸದಿದ್ದರೆ ನಿಮ್ಮ ಎಲ್‌ಪಿಜಿ ಪೂರೈಕೆ ಕೂಡ ಕಟ್ ಆಗುತ್ತದೆ. ಪಿಎನ್‌ಜಿ ಹಾಗೂ ಎಲ್‌ಪಿಜಿ ಎರಡನ್ನೂ ಬಳಸುವಂತಿಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ನಿಮ್ಮ ಏರಿಯಾದಲ್ಲಿ ಪೈಪ್‌ಲೈನ್ ಇದ್ದರೂ ನೀವು ಸಂಪರ್ಕ ಪಡೆಯದಿದ್ದರೆ 3 ತಿಂಗಳೊಳಗೆ ಸಂಪರ್ಕ ಪಡೆಯಲು ಗಡುವು ನೀಡಲಾಗಿದೆ. ಈ ಕುರಿತು ನೋಟಿಸ್ ಮೂಲಕ ಆ ಮನೆಯ ಗಮನಕ್ಕೆ ತಂದ 3 ತಿಂಗಳ ನಂತರ ಆ ಮನೆಗಳಿಗೆ…
ಗ್ರಾಮ ಪಂಚಾಯತ್ ಚುನಾವಣೆ ಸದ್ಯಕ್ಕೆ ಡೌಟು! – ಮೀಸಲಾತಿ ಪ್ರಕಟಣೆಗೆ ಸಮಯ ಕೋರಿದ ರಾಜ್ಯ ಸರ್ಕಾರ – ಪ್ರತಿ ಗ್ರಾಮದಲ್ಲೂ ಭಾರೀ ಪೈಪೋಟಿ ಸಾಧ್ಯತೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ಧ ಆಗುತ್ತಿದ್ದು, ಮೀಸಲಾತಿ ಪ್ರಕಟಣೆಗೆ ಸಮಯ ಕೋರಿದೆ. ರಾಜ್ಯದಲ್ಲಿ 5,950 ಗ್ರಾಮ ಪಂಚಾಯಿತಿಗಳಿದ್ದು ಅವುಗಳ ಸದಸ್ಯರ ಅಧಿಕಾರ ಅವಧಿ ಫೆಬ್ರವರಿಯಲ್ಲಿ ಮುಗಿದಿದೆ. ರಾಜ್ಯದಲ್ಲಿ ಒಟ್ಟು 96 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ. ಆದ್ದರಿಂದ, ಹೊಸದಾಗಿ ಜನಸಂಖ್ಯೆಗೆ ಅನುಗುಣವಾಗಿ ಒಟ್ಟು ಸದಸ್ಯರ ಸಂಖ್ಯೆ ಗುರುತಿಸಲು ನಾಲ್ಕು ವಾರ ಬೇಕು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಲಿಖಿತ ಮನವಿ ಮಾಡಿದೆ. ಇದರಿಂದ ಚುನಾವಣೆ ಇನ್ನು ಎರಡು ತಿಂಗಳು ಡೌಟು. ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಮೀಸಲಾತಿ ಪ್ರಕಟಣೆಗೆ ಸಮಯ ಬೇಕಿದೆ. ಜತೆಗೆ ಸ್ಥಳೀಯ ಸಂಸ್ಥೆ ಚುನಾವಣೆ ಇರುವುದರಿಂದ ಯಾವಾಗ ದಿನಾಂಕ ನಿಗದಿ ಆಗಲಿದೆ ಎಂಬ ಅನುಮಾನ ಮೂಡಿದೆ. ಅಲ್ಲದೆ ಮಳೆಗಾಲದಲ್ಲಿ ಚುನಾವಣೆ ನಡೆಸಲು ಸಾಧ್ಯ ಇಲ್ಲ.…
ಇಂದಾವರ ರಸ್ತೆ ಕಥೆ ಕೇಳೋರಿಲ್ಲ! – ತೀರ್ಥಹಳ್ಳಿ ಪಟ್ಟಣದ ಪಕ್ಕದ ರಸ್ತೆ ದುರಸ್ತಿಗಾಗಿ ಗ್ರಾಮಸ್ಥರ ಪಟ್ಟು – ರಸ್ತೆ ಬೇಕು ರಸ್ತೆ: ಶಾಸಕರು, ಸರ್ಕಾರಕ್ಕೆ ಜನರ ಅಗ್ರಹ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿಯಿಂದ ಕೇವಲ 1.5 ಕಿಲೋಮೀಟರ್ ನಷ್ಟು ಅಂತರದಲ್ಲಿರುವ ಇಂದಾವರ ಪ್ರದೇಶದ ರಸ್ತೆಯು ತೀವ್ರ ಹದಗೆಟ್ಟಿದ್ದು, ಇಲ್ಲಿ ಸಂಚರಿಸುವ ವಾಹನಗಳು ಮತ್ತು ಇಲ್ಲಿಂದ ಪಟ್ಟಣಕ್ಕೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ತೀರ್ಥಹಳ್ಳಿಯ ಮುಖ್ಯರಸ್ತೆಯಿಂದ ಬೆಟ್ಟಮಕ್ಕಿ ಮಾರ್ಗವಾಗಿ ಸಂಚರಿಸುವ ಬೈಪಾಸ್ ರಸ್ತೆ ಕೂಡ ಆಗಿದೆ. ಅಲ್ಲದೆ ತೀರ್ಥಹಳ್ಳಿಯ ಪಟ್ಟಣದ ರಸ್ತೆಗಳು ಬ್ಲಾಕ್ ಆಗಿದ್ದ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಹಲವಾರು ವಾಹನಗಳು ಸಂಚರಿಸಿದ್ದವು ಎನ್ನಲಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿನ ಶಾಸಕರು ಒಂದು ಕೋಟಿ ಅನುದಾನವನ್ನು ಮಂಜೂರು ಮಾಡಿಸಿದ್ದು, ಇದರಿಂದ ಕೇವಲ ಬದ್ನೇಹಿತ್ಲು ಬಳಿ ಕಾಂಕ್ರೀಟ್ ರಸ್ತೆ, ಒಂದು ಕಿರು ಸೇತುವೆ ಮತ್ತು ಕೊರೋಡಿ ಬಳಿ ಒಂದು ಮೋರಿಯ ನಿರ್ಮಾಣ ಕಾರ್ಯ ಮಾತ್ರ ನಡೆದಿದೆ. ಅಲ್ಲದೆ…
ಅಮರಪಾಲಿ ಸುರೇಶ್ ವಿರುದ್ಧ ನಡೆದ ಸಂಚಿನ ಕುರಿತು ಪತ್ರಿಕಾ ಪ್ರಕಟಣೆ ಮಾನವೀಯತೆ ಹಾಗೂ ಸಂಕಷ್ಟಕ್ಕೆ ಸ್ಪಂದಿಸಿದಕ್ಕೆ ನಮ್ಮಗಳಿಗಾದ ಮೋಸ ಹಾಗೂ ವಂಚನೆಯ ಪ್ರಕರಣ ಇದು: ಅನುದೀಪ್ (ಪುಟ್ಟ) ಕುಶಾವತಿ ಪತ್ರಿಕಾ ಪ್ರಕಟಣೆ ನೂರು ಕೋಟಿ ವಂಚನೆ ಎಂಬ ಪ್ರಕರಣದ ವಿಚಾರವಾಗಿ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾದ ದುರುದ್ದೇಶ ಪೂರಿತ ಆರೋಪಗಳ ಬಗ್ಗೆಅನುದೀಪ್ (ಪುಟ್ಟ) ಕುಶಾವತಿ ಸ್ಪಷ್ಟನೆ ನೀಡಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ನನ್ನ ಹೆಂಡತಿಯ ಸಹೋದರಿಯಾದ ಶ್ರೀಮತಿ ಯಶೋಧ ರಾಜ್ ಅವರು ತೀರ್ಥಹಳ್ಳಿಯ ಅರಳಿಸರ ಮೂಲದ ಬೆಂಗಳೂರು ನಿವಾಸಿಯಾಗಿದ್ದು, ರೇ ಎಜುಕೇಶನ್ ಟ್ರಸ್ಟ್ ಒಂದನ್ನು ರಚಿಸಿಕೊಂಡು ಕಾಲೇಜನ್ನು ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆರ್ಥಿಕ ದುಸ್ಥಿತಿಯಲ್ಲಿರುವ ಆ ಸಂಸ್ಥೆಗೆ ನಾನು ಅನೇಕ ಬಾರಿ ಆರ್ಥಿಕ ಸಹಾಯ ಮಾಡಿರುತ್ತೇನೆ. ಈ ವಿಚಾರವಾಗಿ ಸಂಸ್ಥೆಗೆ ದೇಣಿಗೆ ನೀಡುವವರಿದ್ದರೆ ತಿಳಿಸುವಂತೆ ಯಶೋಧರವರು ನನ್ನಲ್ಲಿ ಪದೇಪದೇ ಮನವಿ ಮಾಡಿಕೊಂಡಿದ್ದರಿಂದ ನಾನು ಅಮ್ರಪಾಲಿ ಸುರೇಶ್ ಅವರಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದೆ. ತಾಲೂಕಿನಾದ್ಯಂತ ಸಂಪರ್ಕವಿರುವ ಹಾಗೂ ಕಷ್ಟದಲ್ಲಿರುವ ವ್ಯಕ್ತಿಗಳಿಗೆ…
114 ದೇಶಗಳಲ್ಲಿ ಶಾಲಾ ಮಕ್ಕಳಿಗೆ ಮೊಬೈಲ್ ಬ್ಯಾನ್! – ಮೊಬೈಲ್ ಇಂದ ಅನಾರೋಗ್ಯ, ಶಿಕ್ಷಣ ಹಿನ್ನಡೆ – ಯುವ ಜನರ ಬದುಕು ಮೊಬೈಲ್ ಚಟಕ್ಕೆ ಬಲಿ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: ಇಂದಿನ ತಲೆಮಾರಿನ ಮಕ್ಕಳು ಮೊಬೈಲ್ ಚಟಕ್ಕೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಅದರಿಂದ ಮಕ್ಕಳನ್ನು ಹೊರತರುವ ನಿಟ್ಟಿನಲ್ಲಿ ಸುಮಾರು 114 ದೇಶಗಳು ಶಾಲಾ ಮಕ್ಕಳು ಮೊಬೈಲ್ ಬಳಸುವುದನ್ನು ನಿಷೇಧಿಸಿದೆ. ಮಕ್ಕಳು ಮೊಬೈಲ್ ಚಟಕ್ಕೆ ದಾಸರಾಗಿರುವ ಕಾರಣ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸೈಬರ್ ಬುಲ್ಲಿಂಗ್ ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕ ಅನಾರೋಗ್ಯಕ್ಕೆ ಒಳಗಾಗುವಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕರ್ನಾಟಕ ಸೇರಿ ಈಗಾಗಲೇ ಜಗತ್ತಿನ ಶೇಕಡ 58 ರಷ್ಟು ದೇಶಗಳು ಶಾಲೆಗಳಲ್ಲಿ ಮಕ್ಕಳು ಮೊಬೈಲ್ ಬಳಸುವುದನ್ನು ನಿಷೇಧಿಸಿದೆ ಎಂದು ಯುನೆಸ್ಕೊದ ಜಾಗತಿಕ ಶಿಕ್ಷಣ ನಿಗಾ ಸಮಿತಿಯು ವರದಿಯನ್ನು ಪ್ರಕಟಿಸಿದೆ. ಕರ್ನಾಟಕದಲ್ಲೂ 14 ವರ್ಷದ ಮಕ್ಕಳಿಗೆ ಮೊಬೈಲ್ ನಿಷೇಧ ಕರ್ನಾಟಕ ಸರ್ಕಾರವು ಕೂಡ 14 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದನ್ನು ಸಂಪೂರ್ಣವಾಗಿ…
ತೀರ್ಥಹಳ್ಳಿ, ಕೊಪ್ಪದಲ್ಲಿ ಗುಡುಗು, ಸಿಡಿಲು, ಗಾಳಿ, ಮಳೆ! – ಭಾರೀ ಮಳೆಗೆ ವಿದ್ಯುತ್, ನೆಟ್ವರ್ಕ್ ಇಲ್ಲ.. ಭಾರೀ ಅನಾಹುತ – ಮಲೆನಾಡಲ್ಲಿ ಮಹಾ ಮಳೆಗೆ ಬೆಚ್ಚಿ ಬಿದ್ದ ಜನ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ/ ಕೊಪ್ಪ: ಮಲೆನಾಡಲ್ಲಿ ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ಅನೇಕ ಹಳ್ಳಿಗಳು ಕತ್ತಲೆಯಲ್ಲಿ ಮುಳುಗಿವೆ. ವಿದ್ಯುತ್, ನೆಟ್ವರ್ಕ್ ಇಲ್ಲದಾಗಿದೆ. ಅಕಾಲಿಕ ಮಳೆಗೆ ಇಡೀ ಜನ ಜೀವನ ತೊಂದರೆ ಆಗಿದೆ. ತೀರ್ಥಹಳ್ಳಿ, ಹೊಸನಗರ, ಶಿವಮೊಗ್ಗ, ಕೊಪ್ಪ, ಶೃಂಗೇರಿ ಭಾಗದಲ್ಲಿ ಅತೀ ಹೆಚ್ಚು ಮಳೆ ಆಗಿದೆ. ಗುಡುಗು, ಸಿಡಿಲು, ಗಾಳಿ, ಮಳೆ! ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಹೊಸನಗರ ಸೇರಿ ಹಲವಾರು ಭಾಗಗಳಲ್ಲಿ ಸೋಮವಾರ ರಾತ್ರಿ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದೆ. ಅನೇಕ ಕಡೆ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಕಟ್ಟಡದ ಮೇಲೆ ಬಿದ್ದ ಜಾಹೀರಾತು ನಾಮ ಫಲಕ! ತೀರ್ಥಹಳ್ಳಿಯಲ್ಲಿ ಸತತ ಒಂದು ಗಂಟೆಗಳ ಕಾಲ ಮಳೆ ಸುರಿದಿದೆ. ಆಗುಂಬೆ ಬಸ್ ನಿಲ್ದಾಣದ ಸಮೀಪದಲ್ಲಿರುವ…



