Author: NammurEXP

ಕಾರ್ಕಳದ ಹಿರ್ಗಾನದಲ್ಲಿ ಅದ್ಧೂರಿ ನೇಮೋತ್ಸವ! – ಶ್ರೀಕ್ಷೇತ್ರ ಪೆಲತ್ತಿಜೆಯ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಧಾರ್ಮಿಕ ರಂಗು – ಕ್ರಿಯೇಟಿವ್ ಕಾಲೇಜು ಸಂಸ್ಥಾಪಕರಿಂದ ಹರಕೆ ನೇಮೋತ್ಸವ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕಾರ್ಕಳ: ಪರಶುರಾಮನ ಊರು ಕಾರ್ಕಳ ಪಟ್ಟಣ ಸಮೀಪದ ಹಿರ್ಗಾನ ಗ್ರಾಮದ ಶ್ರೀಕ್ಷೇತ್ರ ಪೆಲತ್ತಿಜೆಯ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಮಾ. 22 ಭಾನುವಾರ ರಾತ್ರಿ ಹರಕೆಯ ಸಿರಿ ಸಿಂಗಾರದ ನೇಮೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಧರ್ಮದೈವ ಅಣ್ಣಪ್ಪ ಪಂಜುರ್ಲಿ ಗಗ್ಗರ ಸೇವೆ ನಡೆದಿದ್ದು, ಸೇವೆಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಗಗ್ಗರ ಸೇವೆಯಲ್ಲಿ ಪಾಲ್ಗೊಂಡ ಭಕ್ತಾದಿಗಳು ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸುವ ಮೂಲಕ, ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವದ ಕೃಪೆಗೆ ಪಾತ್ರರಾಗಿ ಕೃತಾರ್ಥರಾದರು. ನೇಮೋತ್ಸವ ಹರಕೆದಾರರಾದ ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್, ವಿಮಲ್ ರಾಜ್, ಗಣಪತಿ ಕೆ. ಎಸ್ ಮತ್ತು ಕುಟುಂಬದವರು ಹಾಗೂ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಗಣನಾಥ ಶೆಟ್ಟಿ, ಆದರ್ಶ, ಅಮೃತ್ ಮತ್ತು…

Read More

ರಾಜ್ಯದ 3 ಪ್ರಮುಖ ನ್ಯೂಸ್: ನಿಮಗೆ ಬೇಕಾದ ಸುದ್ದಿ! ರಾಜ್ಯದಲ್ಲಿ ಸದ್ಯಕ್ಕೆ ಬಸ್‌ ಟಿಕೆಟ್ ದರ ಏರಿಕೆ ಇಲ್ಲ! ಪೆಟ್ರೋಲ್‌ ದರದಲ್ಲಿ ಏರಿಕೆ: ಹೋರಾಟ ಶುರು ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ: ಮಾ.31 ಕೊನೆ ದಿನ ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್ ಟಿಕೆಟ್ ದರವನ್ನು ಹೆಚ್ಚಿಸುವ ಪ್ರಶ್ನೆಯೇ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಹಿತಿ ನೀಡಿದ ಸಚಿವರು, ಸಾರಿಗೆ ನಿಗಮಗಳು ಡೀಸೆಲ್ ಅನ್ನು ಬಲ್ಕ್ನಲ್ಲಿ ಖರೀದಿ ಮಾಡುತ್ತಿವೆ. ಇತ್ತೀಚೆಗೆ ಇಸ್ರೇಲ್-ಇರಾನ್ ಸಂಘರ್ಷ ಪರಿಣಾಮದಿಂದ ಡೀಸೆಲ್ ದರ ಏರಿಕೆಯಾದರೂ, ಪ್ರಯಾಣಿಕರ ಮೇಲಿನ ಭಾರವನ್ನು ಹೆಚ್ಚಿಸುವ ಉದ್ದೇಶವಿಲ್ಲ ಎಂದು ತಿಳಿಸಿದ್ದಾರೆ. ಡೀಸೆಲ್ ದರ ಏರಿಕೆಯಾಗಿದ್ದರೂ ಅದೇ ರೀತಿಯಲ್ಲಿ ಖರೀದಿ ಮುಂದುವರೆಯಲಿದೆ. ಆದರೆ ಬಸ್ ಟಿಕೆಟ್ ದರ ಏರಿಕೆ ಮಾಡುವುದಿಲ್ಲ ಎಂದರು. ಪೆಟ್ರೋಲ್ ದರ ಏರಿಕೆ: ಹೋರಾಟ ಶುರು ಬೆಂಗಳೂರು: ಇನ್ನೊಂದೆಡೆ, ದೇಶಾದ್ಯಂತ ಪ್ರೀಮಿಯಂ ಪೆಟ್ರೋಲ್‌ ದರದಲ್ಲಿ ಏರಿಕೆ ಕಂಡುಬಂದಿದ್ದು, ಪ್ರತಿ ಲೀಟರ್‌ಗೆ ಸುಮಾರು 2.30 ರೂ. ಹೆಚ್ಚಳವಾಗಿದೆ. ಸರ್ಕಾರದ ಈ…

Read More

ತೀರ್ಥಹಳ್ಳಿ ಪಟ್ಟಣದಲ್ಲಿ ಹೈವೇ ಕೆಲಸ ಶುರು! – ತೀರ್ಥಹಳ್ಳಿ ಕೊಪ್ಪ ಸರ್ಕಸ್ ಇಂದ ಶಿವಮೊಗ್ಗವರೆಗೆ ಡಬಲ್ ರಸ್ತೆ – ತಲೆ ಎತ್ತಲಿವೆ ನೂತನ ಕಟ್ಟಡಗಳು: ಪಟ್ಟಣಕ್ಕೆ ಹೊಸ ರಂಗು! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ರಾಷ್ಟ್ರೀಯ ಹೆದ್ದಾರಿ ಇಲಾಖೆಯು ಕೊಪ್ಪ ವೃತ್ತದಿಂದ ಮಂಡಗದ್ದೆ, ನೆಲ್ಲಿಸರದ ಕ್ಯಾಂಪ್ ವರೆಗೆ ಇರುವ ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ, ಉನ್ನತೀಕರಣ ಮತ್ತು ಚತುಷ್ಪಥ ನಿರ್ಮಾಣ ಕಾಮಗಾರಿ ಇದೀಗ ಶುರುವಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಜಾಗ ತೆರವು ಕೆಲಸ ಸಂಪೂರ್ಣ ಆಗಿದೆ. ಹಳೆ ಕಟ್ಟಡಗಳು ನೆಲ ಸಮವಾಗಿ ಹೊಸ ಕಟ್ಟಡಗಳು ನಿರ್ಮಾಣ ಆಗುತ್ತಿವೆ. ರಸ್ತೆಯ ಕಾಮಗಾರಿಯ ಟೆಂಡರ್ ಅನ್ನು ಚಿಕ್ಕಮಗಳೂರಿನ ಪ್ರಸಿದ್ಧ ನಿರ್ಮಾಣ ಸಂಸ್ಥೆಯಾದ ಎಸ್ಎಲ್ ವಿ ಅರ್ಥ್ ಮೂವರ್ಸ್ ಪಡೆದುಕೊಂಡಿದೆ.‌ ಈಗಾಗಲೇ ಮಾರ್ಗದ ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಂಡಿರುವ ಸ್ವತ್ತಿನ ಮಾಲೀಕರಿಗೆ ಸುಮಾರು 70 ಕೋಟಿ ರೂಪಾಯಿ ಪರಿಹಾರವನ್ನು ಸಹ ನೀಡಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಕೆಲವು ಕಡೆ ಸಣ್ಣ ಪುಟ್ಟ ತಕರಾರು ಇದೆ. ಎಲ್ಲವೂ ಅಂದುಕೊಂಡಂತೆ ಆದರೆ ಹೊಸ…

Read More

ದೇಶದಲ್ಲಿ ಆನ್ ಲೈನ್ ಗೇಮಿಂಗ್ ಆ್ಯಪ್ ಬ್ಯಾನ್! – ಡಿಜಿಟಲ್ ಗೇಮ್ ಕೂಡ ನಿಷೇಧ: ಸರ್ಕಾರದ ಮಾಹಿತಿ – ಆನ್ ಲೈನ್ ಗೇಮ್ ಆರಂಭಿಸಿದವರಿಗೆ 1 ಕೋಟಿ ದಂಡ ಮತ್ತು 3 ವರ್ಷಗಳವರೆಗೆ ಜೈಲು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: ಕೇಂದ್ರ ಸರ್ಕಾರವು ಹಣ ಕಟ್ಟಿ ಆಡುವ, ಜೂಜಿನಂತಹ ಆನ್ ಲೈನ್ ಆಟಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆನ್ ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025 ಅನ್ನು ಜಾರಿಗೆ ತರುವ ಮೂಲಕ, ಅಂತಹ ಆಟಗಳನ್ನು ಬ್ಯಾನ್ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಾತನಾಡಿರುವ ಕೇಂದ್ರ ವ್ಯವಹಾರಗಳ ಸಚಿವಾಲಯ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಚಿವರಾದ ಡಾ.ಎಲ್.ಮುರುಗನ್ ಅವರು “ಆಟ ಯಾವುದೇ ಇರಲಿ, ಅದರಲ್ಲಿ ಹಣ ಕಟ್ಟಿ ಆಡುವಂತಹ ಆಯ್ಕೆಗಳಿದ್ದರೆ, ಅಂತಹ ಆಟಗಳಿಗೆ ಯಾವುದೇ ರೀತಿಯ ಅವಕಾಶ ನೀಡಲಾಗುವುದಿಲ್ಲ. ಡಿಜಿಟಲ್ ವೇದಿಕೆಗಳು ಜನರಿಗೆ ಸುರಕ್ಷಿತವಾಗಿರಬೇಕು. ಬೆಟ್ಟಿಂಗ್ ಕಟ್ಟಿ ಆಡುವಂತಹ ಯಾವುದೇ ಆಟಗಳನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಇವುಗಳಿಗೆ ಪಾವತಿಸಲು…

Read More

ಪುನೀತ್ ಹುಟ್ಟು ಹಬ್ಬ: ತೀರ್ಥಹಳ್ಳಿಯಲ್ಲಿ ವಿಭಿನ್ನ ಕಾರ್ಯಕ್ರಮ! – ಪುನೀತ್ ಬ್ರಿಗೇಡ್ ಸಂಸ್ಥೆಯಿಂದ ಸಾಮಾಜಿಕ ಕೆಲಸ – ಸಾಧಕರಿಗೆ ಸನ್ಮಾನ, ಪುನೀತ್ ಗೀತ ಗಾಯನ, ಸೇವಕರಿಗೆ ಗೌರವ – ಚಿಡುವದಲ್ಲಿ ಜನಪದ ಅಂಟಿಗೆ ಪಿಂಟಿಗೆ ಜತೆ ಪುನೀತ್ ನಮನ – ಕುಪ್ಪಳಿ ಬಳಿ ಶಾಲೆಯ ಮಕ್ಕಳಿಗೆ ಸಿಹಿ ವಿತರಣೆ ತೀರ್ಥಹಳ್ಳಿ: ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ತಾಲ್ಲೂಕಿನ ಹಲವಾರು ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಹಲವಾರು ಕಾರ್ಯಕ್ರಮಗಳು ನೆರವೇರಿದವು. ತೀರ್ಥಹಳ್ಳಿಯ ಪುನೀತ್ ಬ್ರಿಗೇಡ್ ಸಂಸ್ಥೆ, ವಿಶ್ವಮಾನವ ಕನ್ನಡ ವೇದಿಕೆ, ಶ್ರೀನಾರಾಯಣ ಗುರು ವಿಚಾರ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ತೀರ್ಥಹಳ್ಳಿಯಲ್ಲಿ ‘ನಮ್ಮೂರ್ ಎಕ್ಸ್ ಪ್ರೆಸ್’ ಮಾಧ್ಯಮದ ಪ್ರಾದೇಶಿಕ ಕಛೇರಿಯಲ್ಲಿ ‘ಪುನೀತ್ ನಮನ’, ಪುನೀತ್ ಗೀತೆಗಳ ಗಾಯನ ಕಾರ್ಯಕ್ರಮದ ಜೊತೆಗೆ ಸ್ಥಳೀಯ ಸಾಧಕ ಮಕ್ಕಳು ಮತ್ತು ಸಮಾಜ ಸೇವಕರನ್ನು ಗುರುತಿಸಿ, ಪುನೀತ್ ಪುರಸ್ಕಾರ ನೀಡಿ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪುನೀತ್ ಬ್ರಿಗೇಡ್ ಸಂಸ್ಥೆಯ ಪ್ರಮುಖರಾದ ಸುಧಾಕರ್ ಕುಪ್ಪಳಿ, ಪಟ್ಟಣ ಪಂಚಾಯತ್…

Read More

ತೀರ್ಥಹಳ್ಳಿಯಲ್ಲಿ ರಕ್ತದಾನದ ಮೂಲಕ ಪುನೀತ್ ನಮನ! – ರಾಮಕೃಷ್ಣಪುರದ ಸಮರ್ಪಣಾ ತಂಡ, ರೋಟರಿ ಬ್ಲಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ – ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪುನೀತ್ ನಮನ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಜನ್ಮದಿನವನ್ನು ನಾಡಿನಾದ್ಯಂತ ಅದ್ಧೂರಿಯಾಗಿ ಮತ್ತು ಅರ್ಥಪೂರ್ಣವಾಗಿ ಅವರ ಅಭಿಮಾನಿಗಳು ಆಚರಿಸುತ್ತಿದ್ದು, ತೀರ್ಥಹಳ್ಳಿಯಲ್ಲೂ ಕೂಡ ಇದರ ಸಂಭ್ರಮಾಚರಣೆ ನಡೆಯುತ್ತಿದೆ. ಇಲ್ಲಿನ ರೋಟರಿ ಬ್ಲಡ್ ಬ್ಯಾಂಕ್ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ರಾಮಕೃಷ್ಣಪುರದ ಸಮರ್ಪಣಾ ತಂಡದ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿದ್ದು, ಅತ್ಯಂತ ಯಶಸ್ವಿಯಾಗಿ ನೆರವೇರಿದೆ. ಈ ಕಾರ್ಯಕ್ರಮದ ಮೂಲಕ ಸುಮಾರು 25 ಜನ ದಾನಿಗಳು ತಮ್ಮ ರಕ್ತವನ್ನು ನೀಡಿದ್ದಾರೆ. ಮುತ್ತುವಳ್ಳಿಯ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸಮರ್ಪಣಾ ತಂಡದಿಂದ ಮೂರನೇ ವರ್ಷದ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ವಿಭಾಗದಲ್ಲಿ ರಕ್ತದ ಅವಶ್ಯಕತೆ ಇದ್ದ ಅದೆಷ್ಟೋ ಜನರಿಗೆ ತಮ್ಮ ಸಂಸ್ಥೆಯ ಮೂಲಕ ರಕ್ತವನ್ನು ದೊರಕಿಸುವ ಕಾರ್ಯವನ್ನು…

Read More

ತೀರ್ಥಹಳ್ಳಿಯಲ್ಲಿ ಅಹಿಂದ ಸಭೆ: ಒಗ್ಗಟ್ಟು ಪ್ರದರ್ಶನ – ಮಲೆನಾಡು ಅಹಿಂದ ಸಂಘಟನೆ ಅಧ್ಯಕ್ಷರಾಗಿ ಸಚಿನ್ ಗರಗ ಆಯ್ಕೆ – ತೀರ್ಥಹಳ್ಳಿಯಲ್ಲಿ ಶಾಂತವೇರಿ ಗೋಪಾಲ ಗೌಡರಿಗೆ ನಮನ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಅಹಿಂದ ವರ್ಗಗಳ ಪ್ರಮುಖರ ಸಂಘಟನೆ ಸಭೆ ನಡೆದಿದ್ದು ಅಹಿಂದ ವರ್ಗಗಳ ನಾಯಕರು ಭಾಗಿಯಾದರು. ಮಾ.16ರಂದು ಮಧ್ಯಾಹ್ನ 12 ಗಂಟೆಗೆ ತೀರ್ಥಹಳ್ಳಿಯ ಮಯೂರ ಹೋಟೆಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ಸಚಿನ್ ಗರಗ, ನಾಗರಾಜ್ ಸಾಲೆಜನಗಲ್, ಪುತಬ್ಬಾ ಬೆಜ್ಜವಳ್ಳಿ, ಚಿಡುವ ಸೂರ್ಯನಾರಾಯಣ್, ಈರೇಗೋಡು ಶ್ರೀಧರಮೂರ್ತಿ ಎಸ್ ಟಿ, ದೇವರಾಜ್, ಪ್ರಶಾಂತ್ ಕುಪ್ಪಳ್ಳಿ, ಇರುವತ್ತಿ ದಿವಾಕರ್, ಅಬೂಬಕರ್ ರಂಜದಕಟ್ಟೆ, ವಾಸಪ್ಪ ನಗರ ಇನ್ನೂ ಮುಂತಾದವರು ಭಾಗವಹಿಸಿದ್ದರು. ಸಂಘಟನೆಯ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಾಲೇಜ್ ನ ಉಪನ್ಯಾಸಕರಾದಂತಹ ಸಚಿನ್ ಪುರದಾಳ್ ಅವರು ಧಿಕ್ಸೂಚಿ ಭಾಷಣ ಮಾಡಿ ಮಾರ್ಗದರ್ಶನ ನೀಡಿದರು. ತೀರ್ಥಹಳ್ಳಿ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಅಲ್ಪ ಸಂಖ್ಯಾತ ವರ್ಗಗಳು ಎಲ್ಲಾ ಹಿಂದುಳಿದ ವರ್ಗಗಗಳು ಮತ್ತು ದಲಿತ ವರ್ಗಗಳು ಮಲೆನಾಡು…

Read More

ಮೂಡಿಗೆರೆ: ಕಾಫಿ ಬೆಳೆಯ ಖರೀದಿದಾರರು ಮತ್ತು ಮಾರಾಟಗಾರರ ಸಭೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮೂಡಿಗೆರೆ: ಎಸ್ಎಂ ಸೇಹಗಲ್ ಫೌಂಡೇಶನ್ ವತಿಯಿಂದ ಅಡ್ಯಂತರ ಸಮುದಾಯ ಭವನದಲ್ಲಿ, ಕಾಫಿ ಬೆಳೆಯುವ ಸಣ್ಣ ರೈತರಿಗೆ ತರಬೇತಿ ನೀಡುವ ಉದ್ದೇಶದಿಂದ ಕಾಫಿ ಬೆಳೆಯ ಖರೀದಿದಾರರು ಮತ್ತು ಮಾರಾಟಗಾರರ ನಡುವೆ ಸಭೆಯನ್ನು ಏರ್ಪಡಿಸಲಾಗಿತ್ತು. ಈ ತರಬೇತಿ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆ, ಹಾಸನ ಜಿಲ್ಲೆ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ, ಬೇಲೂರು ಸೇರಿದಂತೆ ವಿವಿಧ ಭಾಗಗಳಿಂದ 650ಕ್ಕೂ ಹೆಚ್ಚಿನ ಆಯ್ಕೆಯಾದ ಕಾಫಿ ರೈತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸೇಹಗಲ್ ಫೌಂಡೇಶನ್ ನ ಯೋಜನಾ ಮುಖ್ಯಸ್ಥರಾದ ಶಿವಶರಣಪ್ಪ ಅವರು “ಈ ಭಾಗದಲ್ಲಿನ ಸಣ್ಣ ಕಾಫಿ ರೈತರನ್ನು ಗುರಿಯಾಗಿಸಿಕೊಂಡು ಪುನರುತ್ಪಾದಕ ಕಾಫಿ ಕೃಷಿ ಪದ್ಧತಿಯ ಬಗ್ಗೆ ತರಬೇತಿಯನ್ನು ನೀಡುತ್ತಿದ್ದೇವೆ. ಈ ಪದ್ಧತಿಯ ಅಳವಡಿಕೆಯಿಂದಾಗಿ ಕಾಫಿ ಬೆಳೆಯಲ್ಲಿ ಉತ್ತಮ ಫಲಿತಾಂಶವನ್ನು ರೈತರು ನಿರೀಕ್ಷಿಸುತ್ತಿದ್ದಾರೆ. ಈಗಾಗಲೇ ಕೆಲ ರೈತರು ಪದ್ಧತಿಯ ಅಳವಡಿಕೆಯನ್ನು ಸಂಪೂರ್ಣವಾಗಿ ಮಾಡಿಕೊಂಡಿದ್ದಾರೆ. ಜೊತೆಗೆ ನಮ್ಮ ಸಂಸ್ಥೆಯು ಮಹಿಳಾ ರೈತರಿಗೆ ಹೆಚ್ಚಿನ ಪ್ರಾಶಸ್ತ್ಯ…

Read More

ಆರಗ ಜ್ಞಾನೇಂದ್ರ, ಸೂರ್ಯ ನಾರಾಯಣ ಅವರಿಗೆ ಶುಭಾಶಯಗಳು ರಾಜ್ಯದ ಎಲ್ಲಾ ಅಡಿಕೆ ಸಹಕಾರ ಸಂಘಗಳನ್ನೊಳಗೊಂಡ ರಾಜ್ಯ ಅಡಿಕೆ ಮಹಾಮಂಡಳದ ಅಧ್ಯಕ್ಷರಾಗಿ ಆರಗ ಜ್ಞಾನೇಂದ್ರ ಹಾಗೂ ಉಪಾಧ್ಯಕ್ಷರಾಗಿ ಸೂರ್ಯನಾರಾಯಣ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಅಡಿಕೆ ಮಹಾ ಮಂಡಲದ ಎಲ್ಲಾ ನಿರ್ದೇಶಕರು ಹಾಜರಿದ್ದು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕರನ್ನು ಅಭಿನಂದಿಸಿದರು.

Read More

ಸ್ಮಾರ್ಟ್ ಫೋನ್, ಇಂಟರ್ ನೆಟ್ ಬಳಕೆದಾರರಿಗೆ ಶಾಕ್! – ಡೇಟಾ ದರ ಹೆಚ್ಚಳಕ್ಕೆ ಕೇಂದ್ರ ನಿರ್ಧಾರ – ಇಂಟರ್ನೆಟ್ ಚಟ ಕಡಿಮೆ ಮಾಡಲು ಮಾಸ್ಟರ್ ಪ್ಲಾನ್? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: ಇಂಟರ್ ನೆಟ್ ಡೇಟಾ ಬಳಕೆಯ ಮೇಲೆ ಹೊಸದಾಗಿ ಡೇಟಾ ತೆರಿಗೆಯನ್ನು ವಿಧಿಸಲು ಕೇಂದ್ರ ಸರ್ಕಾರವು ನಿರ್ಧಾರವನ್ನು ಕೈಗೊಂಡಿದ್ದು, ಇದರಿಂದ ಸ್ಮಾರ್ಟ್ ಫೋನ್ ಮತ್ತು ಇಂಟರ್ ನೆಟ್ ಬಳಕೆದಾರರು ಆಘಾತಕ್ಕೆ ಒಳಗಾಗಿದ್ದಾರೆ. ಜನವರಿ ತಿಂಗಳಿನಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಟೆಲಿಕಾಂ ಇಲಾಖೆಯ ಪರಾಮರ್ಶನ ಸಭೆ ನಡೆದಿದ್ದು, ಅಲ್ಲಿ ಇದರ ಕುರಿತು ಚರ್ಚೆಯನ್ನು ನಡೆಸಲಾಗಿತ್ತು ಎನ್ನಲಾಗಿದೆ. ಸರ್ಕಾರದ ಆದಾಯವನ್ನು ಹೆಚ್ಚಿಸಲು ಮತ್ತು ಯುವ ಜನತೆಯಲ್ಲಿ ಅಧಿಕವಾಗುತ್ತಿರುವ ಇಂಟರ್ ನೆಟ್ ಚಟವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಸಮೀಕ್ಷೆಯ ಪ್ರಕಾರ ಕಳೆದ ಹಣಕಾಸು ವರ್ಷದಲ್ಲಿ ಭಾರತೀಯ ಪ್ರಜೆಗಳು ಒಟ್ಟು 229 ಬಿಲಿಯನ್ ಜಿಬಿ ಡೇಟಾ ಬಳಸಿದ್ದು, ಪ್ರತಿ ಒಂದು ಜಿಬಿಯ ಮೇಲೆ…

Read More