ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
* ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಕಿಂಗ್ ಕೊಹ್ಲಿ
* ಮತ್ತೆ ಆರಂಭವಾಗಲಿದೆ ಐಪಿಎಲ್ ಹಬ್ಬ
NAMMMUR EXPRESS SPORTS NEWS
ದೆಹಲಿ: ಕ್ರಿಕೆಟ್ ಜಗತ್ತಿನ ರನ್ ಮಷಿನ್ ಕಿಂಗ್ ಕೊಹ್ಲಿ ಅಂತರಾಷ್ಟ್ರೀಯ ಟೆಸ್ಟ್ಗೂ ವಿದಾಯ ಹೇಳಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.
ರೋಹಿತ್ ಶರ್ಮಾ ಅವರ ಹಾದಿಯನ್ನೇ ಕೊಹ್ಲಿ ಅನುಸರಿಸಿ ಟೆಸ್ಟ್ಗೆ ವಿದಾಯ ಹೇಳಲು ಉದ್ದೇಶಿಸಿದ್ದಾರೆ ಎಂದು ಕ್ರಿಕೆಟ್ ಮೂಲಗಳು ಬಹಿರಂಗಪಡಿಸಿವೆ. ಅಲ್ಲದೆ ಕೊಹ್ಲಿ ಈ ವಿಷಯವನ್ನು ಬಿಸಿಸಿಐ ಗಮನಕ್ಕೂ ತಂದಿದ್ದಾರೆ ಎಂದು ವರದಿಗಳಾಗಿವೆ.
* ರನ್ ಮಷಿನ್ ಟೆಸ್ಟ್ ದಾಖಲೆ
36 ವರ್ಷದ ವಿರಾಟ್ ಕೊಹ್ಲಿ 123 ಟೆಸ್ಟ್ ಪಂದ್ಯಗಳಲ್ಲಿ 30 ಶತಕಗಳು ಸೇರಿದಂತೆ 46.85 ಸರಾಸರಿಯೊಂದಿಗೆ 9230 ರನ್ ಗಳಿಸಿದ್ದಾರೆ. ಆದಾಗ್ಯೂ, ಕಳೆದ ಐದು ವರ್ಷಗಳಲ್ಲಿ ಅವರ ಸರಾಸರಿ ಕುಸಿದಿದೆ, 37 ಪಂದ್ಯಗಳಲ್ಲಿ ಕೇವಲ ಮೂರು ಶತಕಗಳು ಬಾರಿಸಿದ್ದು 1990 ರನ್ ಗಳಿಸಿದ್ದಾರೆ.
ಸದ್ಯ ಐಪಿಎಲ್ 2025ರಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಕೊಹ್ಲಿ 11 ಪಂದ್ಯಗಳನ್ನು ಆಡಿ 143.46 ಸ್ಟ್ರೈಕ್ ರೇಟ್ನೊಂದಿಗೆ 505 ರನ್ಗಳನ್ನು ಗಳಿಸಿದ್ದಾರೆ, ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ.
* ಮತ್ತೆ ಆರಂಭವಾಗಲಿದೆ ಐಪಿಎಲ್ ಹಬ್ಬ
ಐಪಿಎಲ್ 2025 ಮೇ 17 ರಿಂದ ಮತ್ತೆ ಶುರುವಾಗಲಿದೆ ಎಂದು ಬಿಸಿಸಿಐ ಸೋಮವಾರ ಹೇಳಿದೆ. ಭಾರತ-ಪಾಕ್ ಗಡಿ ವಿಚಾರದಿಂದ ಐಪಿಎಲ್ ಒಂದು ವಾರ ನಿಂತುಹೋಗಿತ್ತು. ಉಳಿದ ಪಂದ್ಯಗಳು ಆರು ಕಡೆಗಳಲ್ಲಿ ನಡೆಯುತ್ತೆ, ಫೈನಲ್ ಜೂನ್ 3 ಕ್ಕೆ ಅಂತ ಬಿಸಿಸಿಐ ಹೇಳಿದೆ.
* ಹೀಗಿದೆ ಐಪಿಎಲ್ -2025 ರ ಹೊಸ ಶೆಡ್ಯೂಲ್
ಮೇ 17 (ಶನಿವಾರ) – ರಾತ್ರಿ 7:30 ಕ್ಕೆ ಆರ್ಸಿಬಿ vs ಕೆಕೆಆರ್ (ಸ್ಥಳ: ಬೆಂಗಳೂರು)
ಮೇ 18 (ಭಾನುವಾರ) – ಮಧ್ಯಾಹ್ನ 3:30ಕ್ಕೆ ರಾಜಸ್ಥಾನ್ ರಾಯಲ್ಸ್ vs ಪಂಜಾಬ್ ಕಿಂಗ್ಸ್ (ಸ್ಥಳ: ಜೈಪುರ)
ಮೇ 18 (ಭಾನುವಾರ) – ರಾತ್ರಿ 7:30 ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ vs ಗುಜರಾತ್ ಟೈಟಾನ್ಸ್ (ಸ್ಥಳ: ದೆಹಲಿ)
ಮೇ 19(ಸೋಮವಾರ) – ರಾತ್ರಿ 7:30 ಕ್ಕೆ ಲಕ್ನೋ ಸೂಪರ್ ಜೈಂಟ್ಸ್ vs ಸನ್ರೈಸರ್ಸ್ ಹೈದರಾಬಾದ್ (ಸ್ಥಳ: ಲಕ್ನೋ)
ಮೇ 20 (ಮಂಗಳವಾರ) – ರಾತ್ರಿ 7:30ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ vs ರಾಜಸ್ಥಾನ್ ರಾಯಲ್ಸ್ (ಸ್ಥಳ: ದೆಹಲಿ)
ಮೇ 21(ಬುಧವಾರ) – ರಾತ್ರಿ 7:30 ಕ್ಕೆ ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಸ್ಥಳ: ಮುಂಬೈ)
ಮೇ 25 (ಗುರುವಾರ) – ರಾತ್ರಿ 7:30 ಕ್ಕೆ ಗುಜರಾತ್ ಟೈಟಾನ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಸ್ಥಳ: ಅಹಮದಾಬಾದ್)
ಮೇ 23 (ಶುಕ್ರವಾರ) – ರಾತ್ರಿ 7:30 ಆರ್ಸಿಬಿ vs ಸನ್ರೈಸರ್ಸ್ ಹೈದರಾಬಾದ್ (ಸ್ಥಳ: ಬೆಂಗಳೂರು)
ಮೇ 24 (ಶನಿವಾರ) – ರಾತ್ರಿ 7:30 ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ (ಸ್ಥಳ: ಜೈಪುರ)
ಮೇ 25 (ಭಾನುವಾರ) – ಮಧ್ಯಾಹ್ನ 3:30 ಗುಜರಾತ್ ಟೈಟಾನ್ಸ್ vs ಪಂಜಾಬ್ ಕಿಂಗ್ಸ್ (ಸ್ಥಳ: ಅಹಮದಾಬಾದ್)
ಮೇ 25 (ಭಾನುವಾರ) – ರಾತ್ರಿ 7:30ಸನ್ರೈಸರ್ಸ್ ಹೈದರಾಬಾದ್ vs ಮುಂಬೈ ಇಂಡಿಯನ್ಸ್ (ಸ್ಥಳ: ದೆಹಲಿ)
ಮೇ 26 (ಸೋಮವಾರ) – ರಾತ್ರಿ 7:30 ರಾಜಸ್ಥಾನ್ ರಾಯಲ್ಸ್ vs ಲಕ್ನೋ ಸೂಪರ್ ಜೈಂಟ್ಸ್ (ಸ್ಥಳ: ಜೈಪುರ)
ಮೇ 27(ಮಂಗಳವಾರ) – ರಾತ್ರಿ 7:30 ಚೆನ್ನೈ ಸೂಪರ್ ಕಿಂಗ್ಸ್ vs ಗುಜರಾತ್ ಟೈಟಾನ್ಸ್ (ಸ್ಥಳ: ಲಕ್ನೋ)
ಮೇ 28 (ಬುಧವಾರ) – ರಾತ್ರಿ 7:30: ಕೆಕೆಆರ್ vs ಡೆಲ್ಲಿ ಕ್ಯಾಪಿಟಲ್ಸ್ (ಸ್ಥಳ: ದೆಹಲಿ)
ಐಪಿಎಲ್ 2025: ಪ್ಲೇ ಆಫ್
ಮೇ 29(ಗುರುವಾರ) – ರಾತ್ರಿ 7:30 ಕ್ವಾಲಿಫೈಯರ್ 1 (ಸ್ಥಳ: ನಂತರ ತಿಳಿಸಲಾಗುವುದು)
ಮೇ 30 (ಶುಕ್ರವಾರ) – ರಾತ್ರಿ 7:30 ಎಲಿಮಿನೇಟರ್ (ಸ್ಥಳ: ನಂತರ ತಿಳಿಸಲಾಗುವುದು)
ಮೇ 31(ಶನಿವಾರ) – ರಾತ್ರಿ 7:30 ಕ್ವಾಲಿಫೈಯರ್ 2 (ಸ್ಥಳ: ನಂತರ ತಿಳಿಸಲಾಗುವುದು)
ಜೂ.02 (ಸೋಮವಾರ) – ರಾತ್ರಿ 7:30: TBD (ಸ್ಥಳ: ನಂತರ ತಿಳಿಸಲಾಗುವುದು)
ಜೂ.03 (ಮಂಗಳವಾರ) – ರಾತ್ರಿ 7:30 TBD (ಸ್ಥಳ: ನಂತರ ತಿಳಿಸಲಾಗುವುದು)








