ಸಿಲಿಂಡರ್ 50 ರೂ., ಪೆಟ್ರೋಲ್-ಡೀಸೆಲ್ 7 ರೂಪಾಯಿ ಏರಿಕೆ!? – ಅಗತ್ಯ ವಸ್ತು ಬೆಲೆ ಗಗನಕ್ಕೆ: ಈಗ ಇಂಧನ ದುಬಾರಿ ಸಾಧ್ಯತೆ – ಬಡವರ ಜೀವನ ಇನ್ನು ಕಷ್ಟ ಕಷ್ಟ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: ದೇಶದಲ್ಲಿ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಬರಸಿಡಿಲಿನಂತಹ ಸುದ್ದಿ ಎದುರಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 50 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ತೈಲ ಮಾರುಕಟ್ಟೆ ಕಂಪನಿಗಳು ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಸುಮಾರು 50 ರೂಪಾಯಿಗಳಷ್ಟು ಹೆಚ್ಚಿಸಲು ಚಿಂತನೆ ನಡೆಸುತ್ತಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿನ ಸಬ್ಸಿಡಿ ರಹಿತ ಸಿಲಿಂಡರ್ ದರ ಮತ್ತು ಅಂತರಾಷ್ಟ್ರೀಯ ದರಗಳ ನಡುವಿನ ವ್ಯತ್ಯಾಸವನ್ನು ಸರಿದೂಗಿಸಲು ಈ ಕ್ರಮ ಅನಿವಾರ್ಯ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ದರ ಏರಿಕೆ ಜಾರಿಗೆ ಬಂದಲ್ಲಿ, ಸಾಮಾನ್ಯ ಕುಟುಂಬಗಳ ಅಡುಗೆ ಮನೆಯ ಬಜೆಟ್ ಮೇಲೆ ನೇರ ಪರಿಣಾಮ ಬೀರಲಿದೆ. ಇಂಧನ ದರದಲ್ಲೂ ಭಾರೀ…
Author: NammurEXP
ಬಿಟ್‌ಕಾಯಿನ್ ಹಗರಣ: ಶ್ರೀಕಿ ಸೇರಿ ಮೂವರು ಅರೆಸ್ಟ್! – ಇಡಿ ತನಿಖೆಗೆ ಹೊಸ ತಿರುವು: ಬಿಟ್ ಕಾಯಿನ್ ದಂಧೆ ಬಯಲು – ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆ: ಒಂದಷ್ಟು ಮಂದಿ ಬಲೆಗೆ?! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು : ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಶ್ರೀ ಕೃಷ್ಣ ಅಲಿಯಾಸ್ ಶ್ರೀಕಿ, ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗಡೆ ಎಂಬ ಮೂವರು ಇಡಿ ಬಲೆಗೆ ಬಿದ್ದಿದ್ದಾರೆ. ಏನಿದು ಆರೋಪ?: ಬಿಟ್‌ಕಾಯಿನ್ ವಿನಿಮಯ ಕೇಂದ್ರಗಳನ್ನು ಹ್ಯಾಕ್ ಮಾಡಿ ಭಾರಿ ಪ್ರಮಾಣದ ಡಿಜಿಟಲ್ ಹಣ ಲೂಟಿ ಮಾಡಿದ ಆರೋಪ ಇವರ ಮೇಲಿದೆ. ಅಷ್ಟೇ ಅಲ್ಲ, ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಅನ್ನು ಹ್ಯಾಕ್ ಮಾಡಿ ಅಕ್ರಮ ಹಣ ವರ್ಗಾವಣೆ ನಡೆಸಿದ ಗಂಭೀರ ಆರೋಪವೂ ಮುಖ್ಯ ಆರೋಪಿ ಶ್ರೀಕಿ ಮತ್ತು ಆತನ ತಂಡದ ಮೇಲಿದೆ. ರಾಬಿನ್ ಖಂಡೇವಾಲ ಮತ್ತು ಸುನೀಶ್ ಹೆಗಡೆ, ಕಳ್ಳತನದ…
ಸಮಸ್ಯೆಗೆ ದನಿ ಕೊಟ್ಟು ಗೆದ್ದ ಹೊಸನಗರ ಹುಡುಗ ಪ್ರಭು ವಾರಂಬಳ್ಳಿ – ನೆಟ್ವರ್ಕ್ ಹೋರಾಟದ ಮೂಲಕ ಮೋದಿಗೂ ಸವಾಲು – ಮಲೆನಾಡ ಆಚರಣೆ, ಪದ್ಧತಿ, ಜನ ಜೀವನದ ಪರಿಚಯದ ಕೆಲಸ ಎಲೆಮರೆಯ ಕಾಯಿಯಂತಿದ್ದರೂ, ಕನ್ನಡನಾಡಿಗೆ ತನ್ನದೇ ಆದ ಮಹತ್ವದ ಕೊಡುಗೆ ನೀಡಿದ ಸಾವಿರಾರು ಜನ ಇಂದು ನಮ್ಮೆದುರು ಮಾದರಿಯಾಗಿ ನಿಲ್ಲುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಪ್ರಭು ವಾರಂಬಳ್ಳಿ ಎನ್ನುವ ಯುವಕ ಕೂಡ ಒಬ್ಬರು. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ವಾರಂಬಳ್ಳಿ ಎಂಬ ಪ್ರದೇಶದಲ್ಲಿ ಹುಟ್ಟಿ, ಬೆಳೆದು ಇದೀಗ ತಮ್ಮ ಊರಿನ ಅನೇಕ ಸೌಲಭ್ಯವನ್ನು ತನ್ಮ ದನಿ ಮೂಲಕವೇ ತರಿಸಿಕೊಂಡಾತ. ಒಳ್ಳೆ ಲೇಖಕ ಕೂಡ ಹೌದು. ಹೊಸನಗರ ತಾಲ್ಲೂಕಿನ ವಾರಂಬಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ 1996ರ ಆಗಸ್ಟ್ 12ರಂದು ನಾಗೇಶ್ ಪ್ರಭು ಮತ್ತು ಜಯಂತಿ ನಾಗೇಶ್ ಪ್ರಭು ಅವರ ಪುತ್ರರಾಗಿ ಜನಿಸಿದರು. ಸಹೋದರ ವೆಂಕಟೇಶ್ ಪ್ರಭು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ. ಬಿಕಾಂ ಪದವೀಧರರಾದ ವಿನಾಯಕ ಅವರು ಬರವಣಿಗೆಯ ಆಸಕ್ತಿಯನ್ನೂ ಹೊಂದಿದ್ದಾರೆ. ಇವರ ಲೇಖನಗಳು ವಿಕ್ರಮ,…
ಟಾಪ್ 3 ನ್ಯೂಸ್ ತೀರ್ಥಹಳ್ಳಿ ಸಕ್ರೆಬೈಲ್ ಬಳಿ ಬೈಕಿಗೆ ಸಿಕ್ಕಿ ಚಿರತೆ ಸಾವು! – ಬೈಕ್ ಸವಾರ ಗಂಭೀರ: ಕೇಸು ದಾಖಲು ತೀರ್ಥಹಳ್ಳಿಯಲ್ಲಿ ಗೋ ಸಾಗಿಸುತ್ತಿದ್ದವರ ಮೇಲೆ ಹಲ್ಲೆ! – ವಾಹನ ಸಮೇತ ಮೂವರ ತೀರ್ಥಹಳ್ಳಿ ಪೊಲೀಸರು ವಶಕ್ಕೆ: ಸಂಧಾನ? ತೀರ್ಥಹಳ್ಳಿ, ತಳುವೆ, ಹಿಲಿಕೆರೆಯಲ್ಲಿ ಕಾರು ಆಕ್ಸಿಡೆಂಟ್! – ತೀರ್ಥಹಳ್ಳಿ ತಾಲೂಕಲ್ಲಿ ಹೆಚ್ಚಿದ ಅಪಘಾತ: ಕಾರಣ ಏನು? ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಸಕ್ರೆಬೈಲ್ ಬಳಿ ಶುಕ್ರವಾರ ಮಧ್ಯಾಹ್ನ ಬೈಕ್ ಹಾಗೂ ಚಿರತೆ ನಡುವೆ ಸಂಭವಿಸಿದ ಅಪಘಾತದಲ್ಲಿ ಚಿರತೆಯೊಂದು ಸಾವನ್ನಪ್ಪಿದ್ದು ಬೈಕ್ ಸವಾರನನ್ನು ಮೆಗ್ಗನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸವಾರನಿಗೆ ಅರಣ್ಯ ಪ್ರದೇಶದಿಂದ ಚಿರತೆ ಹಠಾತ್ತನೆ ರಸ್ತೆ ದಾಟಲು ಬಂದಿದ್ದು, ಕ್ಷಣಾರ್ಧದಲ್ಲಿ ಬೈಕ್ ಚಿರತೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ. ಘಟನೆ ಬಳಿಕ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೀರ್ಥಹಳ್ಳಿಯಲ್ಲಿ ಗೋ ಸಾಗಿಸುತ್ತಿದ್ದವರ ಮೇಲೆ ಹಲ್ಲೆ!…
ಶ್ರವಣ ಸಮಸ್ಯೆ ಇದೆಯಾ?.. ಶಿವಮೊಗ್ಗದಲ್ಲಿ ಫ್ರೀ ಕ್ಯಾಂಪ್! – ಶಿವಮೊಗ್ಗದಲ್ಲಿ ಈಶ್ವರ್ ಮಲ್ಪೆ ತಂಡದಿಂದ ಉಚಿತ ಶ್ರವಣ ತಪಾಸಣಾ ಶಿಬಿರ – ಹೊಸನಗರ: ಪಲ್ಟಿಯಾದ ಖಾಸಗಿ ಬಸ್: 11 ಜನಕ್ಕೆ ಗಾಯ! – •ಶಿವಮೊಗ್ಗ: ಜಿಮ್ ಟ್ರೈನರ್ ಮೇಲೆ ಮುಖ ಮುಚ್ಚಿಕೊಂಡು ಹಲ್ಲೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಶಿವಮೊಗ್ಗ: ಮುಳುಗು ತಜ್ಞರಾದ ಈಶ್ವರ್ ಮಲ್ಪೆಯವರ ತಂಡದ ವತಿಯಿಂದ ಶಿವಮೊಗ್ಗದ ರಾಷ್ಟ್ರೀಯ ಸಮಿತಿ ಮತ್ತು ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ರಾಷ್ಟ್ರೀಯ ಪ್ರೌಢಶಾಲೆಯ ಆವರಣದಲ್ಲಿ ಮೇ 10ರ ಭಾನುವಾರ ಮತ್ತು 11ರ ಸೋಮವಾರದಂದು ಎರಡು ದಿನಗಳ ಕಾಲ ಉಚಿತ ಶ್ರವಣ ತಪಾಸಣೆ ಮತ್ತು ಶ್ರವಣ ಯಂತ್ರಕ್ಕೆ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶ್ರವಣ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ನೋಂದಣಿ ಮಾಡಿಸಬೇಕಾಗಿದ್ದು, 30ಜನರಿಗೆ ಮಾತ್ರ ಸೀಮಿತವಾಗಿದೆ ಎಂದು ತಿಳಿಸಲಾಗಿದೆ. ತಪಾಸಣಾ ಶಿಬಿರದಲ್ಲಿ ಅಂತರರಾಷ್ಟ್ರೀಯ ಸಂಸ್ಥೆಯಲ್ಲಿ ಅನುಭವ ಪಡೆದಿರುವ ವೈದ್ಯರು ಪಾಲ್ಗೊಳ್ಳಲಿದ್ದು, ರೋಗಿಗಳ ತಪಾಸಣೆಯನ್ನು…
ಶೃಂಗೇರಿ ಮತ ಮರು ಎಣಿಕೆ: ಚುನಾವಣಾಧಿಕಾರಿಗಳಿಗೆ ದೂರು! – ಟಿ.ಡಿ.ರಾಜೇಗೌಡ ಅವರಿಂದ ಚುನಾವಣಾಧಿಕಾರಿಗಳಿಗೆ ದೂರು – ಜೀವರಾಜ್ ಹೇಳಿದ್ದೇನು…? ರಾಜೇಗೌಡ ಹೇಳಿದ್ದೇನು..? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಶೃಂಗೇರಿ: ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಮೇ 2ರ ಶನಿವಾರದಂದು ನಡೆದ ಅಂಚೆ ಮತಗಳ ಮರು ಎಣಿಕೆಯ ನಂತರ ರಾಜಕೀಯ ವಿವಾದವು ತೀವ್ರಗೊಂಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಟಿ.ಡಿ.ರಾಜೇಗೌಡ ಅವರು ವಿಜಯಶಾಲಿಯಾಗಿದ್ದು, ಅಂಚೆ ಮತಗಳ ಮರುಎಣಿಕೆಯ ನಂತರ ಬಿಜೆಪಿ ಪಕ್ಷದ ಜೀವರಾಜ್ ವಿಜಯ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಅಂಚೆ ಮತಗಳಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿ ದೂರನ್ನು ದಾಖಲಿಸಿದ್ದು, ಜೀವರಾಜ್ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು. ಇದೀಗ ಪ್ರಕರಣವು ಕಾನೂನು ಹಾದಿ ಹಿಡಿದಿದೆ ಎನ್ನುವ ಮಾಹಿತಿ ಲಭಿಸಿದೆ. ಇದರಿಂದಾಗಿ ಬೇಸತ್ತ ಜೀವರಾಜ್ ಅವರು ಇಂತಹ ಬೆಳವಣಿಗೆಯ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಚುನಾವಣಾ ಆಯೋಗದಿಂದ ತಾವು…
ಗಾಯಕಿ, ಸಂಗೀತದ ಸಾಧಕಿ ಅನನ್ಯ ಭಗತ್! ಟಿವಿಯಿಂದ ಸಿನಿಮಾ ಲೋಕದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ತೀರ್ಥಹಳ್ಳಿ ಕೃಷಿಕ ಕುಟುಂಬದ ಯುವ ಗಾಯಕಿಗೆ ನೂರಾರು ಪ್ರಶಸ್ತಿ ಮಲೆನಾಡಿನ ಗಾನ ಕೋಗಿಲೆ ಎಂದೇ ಕರೆಯಬಹುದಾದ ಅದ್ಭುತ ಗಾನ ಪ್ರತಿಭೆ ಅನನ್ಯ ಭಗತ್. ಸಂಗೀತ ಮತ್ತು ಚಲನಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಪ್ರಗತಿಪರ ಕೃಷಿಕರು, ವ್ಯಾಪಾರಿಗಳು ಆದ ಸತೀಶ್ ಭಗತ್ ಮತ್ತು ಸಾವಿತ್ರಿ ದಂಪತಿಗಳ ಪುತ್ರಿಯಾಗಿ ಅನನ್ಯ ಭಗತ್ ತೀರ್ಥಹಳ್ಳಿಯಂತಹ ಮಲೆನಾಡಿನ ಸುಂದರ ಪರಿಸರದಲ್ಲಿ ಜನಿಸಿದರು. ತೀರ್ಥಹಳ್ಳಿಯ ಸಹ್ಯಾದ್ರಿ ಶಾಲೆ ಹಾಗೂ ಚಿನ್ಮಯ ಕಾಲೇಜಿನಲ್ಲಿ ಅಧ್ಯಯನ ಮಾಡಿ ಜೈನ್ ವಿಶ್ವವಿದ್ಯಾನಿಲಯದಿಂದ ಎಂ ಎ ಮ್ಯೂಸಿಕ್, ಎಂ ಫಿಲ್. ಹಾಗೂ ಪಿಎಚ್. ಡಿ. ಪದವಿಯನ್ನು ಪಡೆದಿದ್ದಾರೆ. ಬಾಲ್ಯದಿಂದಲೇ ಸಂಗೀತದ ಸಾಧನೆ ಮೊದಲಿಗೆ ನೃತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಅನನ್ಯರಿಗೆ ನಂತರದ ದಿನಗಳಲ್ಲಿ ಸಂಗೀತ ಕ್ಷೇತ್ರದ ಒಲವು ಉಂಟಾಗಿ ಸಂಗೀತಾಭ್ಯಾಸದಲ್ಲಿ ನಿರತರಾಗುತ್ತಾರೆ. ಬಾಲ್ಯದಿಂದಲೇ ಸಂಗೀತ ಕಲಿಯಬೇಕೆಂಬ ಆಸೆಯನ್ನು ಹೊತ್ತು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಚಿಂತಾಮಣಿ ಶ್ರೀನಿವಾಸರವರಲ್ಲಿ…
ಮೇಕೇರಿ ಕ್ರಿಕೆಟ್ ಲೀಗ್ ಅದ್ದೂರಿ ಕ್ರಿಕೆಟ್ ಹಬ್ಬ! – ಈಶ ಕ್ರಿಕೆಟರ್ಸ್, ಮೇಕೇರಿ-ಕೌರಿ ಇವರ ಆಯೋಜನೆ • ಫ್ರೆಂಡ್ಸ್ ನಿಸರ್ಗ, ನೇಚರ್ ಕಿಂಗ್ಸ್, ರಾಮ ದೂತ, ಆರ್.ಆರ್ ಬ್ರದರ್ಸ್ ತಂಡಗಳಿಗೆ ಪ್ರಶಸ್ತಿಯ ಗರಿ • ಗಣ್ಯರ ಉಪಸ್ಥಿತಿಯಲ್ಲಿ ಎಂಸಿಎಲ್ ಗೆ ವರ್ಣರಂಜಿತ ತೆರೆ ಈಶ ಕ್ರಿಕೆಟರ್ಸ್, ಮೇಕೇರಿ-ಕೌರಿ ಇವರ ಆಶ್ರಯದಲ್ಲಿ ಮೇಕೇರಿ ಪ್ರೀಮಿಯರ್ ಲೀಗ್-2026 ಮೇ 2 ಮತ್ತು 3 ಅದ್ಧೂರಿಯಾಗಿ ನಡೆಯಿತು. ಕು.ಸಾನ್ವಿ ಜೋಯಿಸ್ ಯಡೂರು, ಅಂತರಾಷ್ಟ್ರೀಯ ಕರಾಟೆ ಪಟು ಹಾಗೂ ಎಂ.ಎಂ.ಗೌಡಪ್ಪ ಗೌಡ್ರ, ಆರಕ್ಷಕ ವೃತ್ತ ನಿರೀಕ್ಷಕರು, ಹೊಸನಗರ ಕ್ರೀಡಾಕೂಟ ಉದ್ಘಾಟಿಸಿದರು. ಲೀಗ್ ನ ಪ್ರಥಮ ಬಹುಮಾನವನ್ನು ಸುಮಂತ್ ಮತ್ತು ಸುಜಿತ್, ಮೇಲಿನಬೈಸೆ ಮಾಲಿಕತ್ವದ ಫ್ರೆಂಡ್ಸ್ ನಿಸರ್ಗ, ದ್ವಿತೀಯ ಬಹುಮಾನವನ್ನು ರಾಜೇಶ್ ಹಿರಿಗೆ ಮತ್ತು ರಾಘವೇಂದ್ರ ಕಲಸುಳ್ಳಿ ಮಾಲಿಕತ್ವದ ನೇಚರ್ ಕಿಂಗ್ಸ್, ತೃತೀಯ ಸ್ಥಾನವನ್ನು ರಾಘವೇಂದ್ರ, ಸಂತೋಷ್ ಯಡೂರು ಮತ್ತು ವಿನಾಯಕ ಅವರ ರಾಮ ದೂತ, ನಾಲ್ಕನೇ ಸ್ಥಾನವನ್ನು ರಜಾಕ್ ಮತ್ತು ರಶೀದ್ ಯಡೂರು ಮಾಲಿಕತ್ವದ ಆರ್.ಆರ್ ಬ್ರದರ್ಸ್…
ಕರಾವಳಿ ಟಾಪ್ ನ್ಯೂಸ್ • ಪುತ್ತೂರು: ಯಕ್ಷಗಾನ ಕಲಾವಿದರ, ಹೆತ್ತವರ ಅವಹೇಳನ; ತಿಮರೋಡಿ ಅರ್ಜಿ ವಜಾ • ಮಂಗಳೂರು: ಚಿಪ್ಪುಹಂದಿ ಮಾರಾಟಕ್ಕೆ ಯತ್ನ; ಮೂವರ ಬಂಧನ • ಬೈಂದೂರು: ನಗದು ಹಣ ಕಳುವು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಪುತ್ತೂರು: ಯಕ್ಷಗಾನ ಕಲಾವಿದರ, ಹೆತ್ತವರ ಅವಹೇಳನ; ತಿಮರೋಡಿ ಅರ್ಜಿ ವಜಾ ಪುತ್ತೂರು: ಯಕ್ಷಗಾನ ಕಲಾವಿದರು ಮತ್ತು ಅವರ ಕುಟುಂಬದ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ ಮಹೇಶ್ ಶೆಟ್ಟಿ ತಿಮರೋಡಿ ಜಾಮೀನಿಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಯಕ್ಷಗಾನ ಕಲಾವಿದರಾದ ಪ್ರಜ್ವಲ್ ಕುಮಾರ್ ಅವರೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮತ್ತೋರ್ವ ಯಕ್ಷಗಾನ ಕಲಾವಿದರಾದ ದಿನೇಶ್ ಕೊಡಪದವು ಹಾಗೂ ಅವರ ತಾಯಿಯ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ದಿನೇಶ್ ಅವರ ತಾಯಿ ಲೀಲಾವತಿ ಶೆಟ್ಟಿಗಾರ್ ಅವರು ಪುತ್ತೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಧರ್ಮ ನಿಂದನೆ, ಅವಾಚ್ಯ ಶಬ್ದಗಳ ಬೈಗುಳ, ಜೀವ ಬೆದರಿಕೆ…
ಕಾಫಿ ನಾಡಿನ ಅರುಣ್ ಬಿನ್ನಡಿಗೆ ಬಂಗಾಳದಲ್ಲಿ ಮ್ಯಾಜಿಕ್! – ಪಶ್ಚಿಮ ಬಂಗಾಳದಲ್ಲಿ ಹಲವು ಕ್ಷೇತ್ರಗಳ ಉಸ್ತುವಾರಿಯಾಗಿ ಗೆಲುವು – ಪಕ್ಷ, ಸಂಘಟನೆ ಮೂಲಕ ಬಂಗಾಳ ಗೆಲುವಲ್ಲಿ ಶ್ರಮ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಚಿಕ್ಕಮಗಳೂರು: ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿದೆ. ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ದಾಖಲೆ ಮಾಡಿದೆ. ದೀದಿ ಆಡಳಿತಕ್ಕೆ ಬ್ರೇಕ್ ಹಾಕಿ ಹೊಸ ಅಲೆ ಸೃಷ್ಟಿ ಮಾಡಿದೆ. ಈ ಚುನಾವಣೆಯಲ್ಲಿ ಕಾಫಿ ನಾಡಿನ ಯುವಕನೊಬ್ಬ ಈ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದೀಗ ಅವರ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಿಜೆಪಿ ಪೂರ್ಣಾವಧಿ ಕಾರ್ಯಕರ್ತ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನೆಲೆಯಿಂದ ಬಂದಿರುವ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೂಲದ ಅರುಣ್ ಬಿನ್ನಡಿ ಅವರಿಗೆ ಉತ್ತರ ಬಂಗಾಳದ ಕೂಚ್ ಬೆಹಾರ್, ಅಲಿಪುರ್ ದ್ವಾರ್, ಡಾರ್ಜಿಲಿಂಗ್ ಸೇರಿದಂತೆ ಹಲವು ಜಿಲ್ಲೆಗಳ 28 ಕ್ಷೇತ್ರಗಳ ಉಸ್ತುವಾರಿಯನ್ನು ವಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅರುಣ್ ಬಿನ್ನಡಿ ಅವರು ಕಳೆದ ಆರು ತಿಂಗಳಿನಿಂದ ಉತ್ತರ ಬಂಗಾಳದಲ್ಲಿಯೇ ಬೀಡುಬಿಟ್ಟಿದ್ದರು.…



