ನವ ದೆಹಲಿ: ಒರಾಕಲ್ ಎನ್ನುವ ಸಾಫ್ಟ್ ವೇರ್ ಜಗತ್ತಿನ ದೈತ್ಯ ಸಂಸ್ಥೆಯು ಮಂಗಳವಾರದಂದು ತನ್ನ ಉದ್ಯೋಗಗಳಿಗೆ ಇ-ಮೇಲ್ ಮೂಲಕ ಆಘಾತಕಾರಿ ಸಂಗತಿಯೊಂದನ್ನು ನೀಡಿದೆ. ಬೆಳಿಗ್ಗೆ 6:00ಗಂಟೆಯ ಸುಮಾರಿಗೆ ತನ್ನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಇ-ಮೇಲ್ ಅನ್ನು ಕಳುಹಿಸಿದ್ದು ಅದರಲ್ಲಿ “ನಿಮ್ಮ ಹುದ್ದೆಗೆ ಸಂಬಂಧಿಸಿದಂತೆ ಕೆಲವು ಕಠಿಣ ಸುದ್ಧಿಯನ್ನು ಹಂಚಿಕೊಳ್ಳುತ್ತಿದ್ದು, ಇಂದು ನಿಮ್ಮ ಕೆಲಸದ ಕೊನೆಯ ದಿನವಾಗಿದೆ” ಎಂದು ತಿಳಿಸಿದೆ ಎನ್ನಲಾಗಿದೆ.
ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ನ ಮೂಲಸೌಕರ್ಯಕ್ಕಾಗಿ ಒರಾಕಲ್ ಭಾರಿ ಪ್ರಮಾಣದ ಹೂಡಿಕೆಯನ್ನು ಮಾಡುತ್ತಿದ್ದು, ಇದರ ಪರಿಣಾಮವಾಗಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತವನ್ನು ಕೈಗೊಂಡಿದೆ. ಈಗಾಗಲೇ ಒರಾಕಲ್ ಹಲವು ಬಾರಿ ಉದ್ಯೋಗ ಕಡಿತವನ್ನು ಕೈಗೊಂಡಿದ್ದು, ಇದರಿಂದಾಗಿ ಎಷ್ಟು ಜನ ಉದ್ಯೋಗಿಗಳು ಲೇಆಫ್ ಎನ್ನುವ ಹೆಸರಿನಲ್ಲಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎನ್ನುವುದರ ಕುರಿತು ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಮಾಹಿತಿಯ ಪ್ರಕಾರ 2026ರ ಆರ್ಥಿಕ ವರ್ಷದಲ್ಲಿ ಒರಾಕಲ್ ತನ್ನ ಶೇಕಡ 13ರಷ್ಟು ಅಂದರೆ ಸರಿ ಸುಮಾರು 21.000 ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಜಾಗತಿಕ ಸಿಬ್ಬಂದಿಗಳ ಸಂಖ್ಯೆ 1.41.000ಕ್ಕೆ ಕುಸಿದಿದೆ.







