Author: NammurEXP

ಟಾಪ್ ನ್ಯೂಸ್ ಕರಾವಳಿ ತಿಂಡಿ ಜತೆಗೆ ವಿಷ ಸೇವಿಸಿದ್ದ ಉದ್ಯಮಿ ಆತ್ಮಹತ್ಯೆ! – ಬೆಳ್ತಂಗಡಿ: ಭಾರಿ ಗಾಳಿ ಮಳೆಗೆ ಕುಸಿದು ಬಿದ್ದ ಕೋಳಿ ಫಾರ್ಮ್ – ಬೈಂದೂರು: ಅಪಘಾತಕ್ಕೆ ಒಂದೇ ಕುಟುಂಬದ ಇಬ್ಬರು ಬಲಿ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಳ್ತಂಗಡಿ: ಕಳೆದ ತಿಂಗಳು ಮದುವೆಯಾಗಿದ್ದ ವಿವಾಹಿತ ಉದ್ಯಮಿ ಮಾ.17ರಂದು ತಿಂಡಿಯ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೊರಟದಲ್ಲಿದ್ದವನು ಚಿಕಿತ್ಸೆ ಫಲಿಸದೆ ಮಾ.29 ರಂದು ಬೆಳಗ್ಗೆ ಸಾವನ್ನಪ್ಪಿದ ಘಟನೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕರ್ನೋಡಿಯಲ್ಲಿ ಅಜ್ಜನ ಮನೆಯಲ್ಲಿ ವಾಸವಾಗಿದ್ದ ಮೂಲತಃ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ ಬಿ.ಸುದೀಪ್ ರೈ (36) ಪುತ್ತೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾರ್ಕಳ ತಾಲೂಕಿನ ಕಜೆ ನಿವಾಸಿ ಸೌಮ್ಯ ಶೆಟ್ಟಿ(28) ಜೊತೆ ಮನೆಮಂದಿಗೆ ಹೇಳದೆ ಫೆ.17 ರಂದು ವಿವಾಹ ನೊಂದಣಿ ಮಾಡಿಸಿಕೊಂಡದ್ದರು ಎನ್ನಲಾಗಿದೆ. ಅತ್ಮಹತ್ಯೆ ಮಾಡಿಕೊಂಡ ಸುದೀಪ್ ಕಳೆದ ಕೆಲವು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ SRN ಗ್ರೂಪ್…

Read More

ಬಂಗಾಳಕೊಲ್ಲಿ ವಾಯುಭಾರ ಕುಸಿತ: ಭಾರೀ ಮಳೆ! – 2 ದಿನ ಭಾರೀ ಮಳೆ ಅಲರ್ಟ್: ಗುಡುಗು ಮಿಂಚು ಸಾಧ್ಯತೆ – ಕೃಷಿ ಚಟುವಟಿಕೆಗೆ ಭಾರೀ ಹಾನಿ: ಜನ ಜೀವನ ಅಸ್ತವ್ಯಸ್ತ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಹವಾಮಾನ ವೈಪರಿತ್ಯದ ಪರಿಣಾಮ ಕರ್ನಾಟಕದ 14 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆ, ಗಾಳಿ ಹಾಗೂ ಗುಡುಗು ಮಿಂಚಿನ ಮುನ್ಸೂಚನೆ ನೀಡಲಾಗಿದೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯ ಪರಿಣಾಮವಾಗಿ ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಹವಾಮಾನ ವೈಪರಿತ್ಯದ ಕಾರಣ ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಪ್ರತ್ಯಾವರ್ತ ಮಾರುತಗಳು ರಾಜ್ಯದ ವಾತಾವರಣದಲ್ಲಿ ಅಸ್ಥಿರತೆ ಉಂಟುಮಾಡಿವೆ. ಇದರ ಪರಿಣಾಮವಾಗಿ ವಾಯುಭಾರ ಕುಸಿತ ನಿರ್ಮಾಣವಾಗಿ ಮಳೆಯ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ…

Read More

ಟಾಪ್ ನ್ಯೂಸ್ ನ್ಯೂಸ್ ಮಲ್ನಾಡ್ ಮಂಗಳೂರು: ಕುಕ್ಕರ್ ಬಾಂಬ್ ಕೇಸ್: ಏ.10ರಂದು ಶಿಕ್ಷೆ ಪ್ರಕಟ! ಶಿವಮೊಗ್ಗ: ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ: ಕೊಲೆ ಶಂಕೆ! ತೀರ್ಥಹಳ್ಳಿ: ಅನುಮಾನ ಹುಟ್ಟಿಸಿದ ವೃದ್ಧೆಯ ನಡತೆ! ಕೊಪ್ಪ: ಮತ್ತೊಂದು ಹಿಟ್ ಆ್ಯಂಡ್ ರನ್: ಮಣಿಪಾಲ ದಾಖಲು ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಶಿವಮೊಗ್ಗ: ಶಿವಮೊಗ್ಗದ ಖಾಸಗಿ ಕಾಲೇಜೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದ ಉಪನ್ಯಾಸಕರೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಭದ್ರಾವತಿ ಮತ್ತು ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮದಲ್ಲಿ ನಡೆದಿದೆ.‌ ತಮ್ಮದೇ ತೋಟದ ಮಧ್ಯೆ, ಬೆಂಕಿ ಹೊತ್ತಿ ಉರಿದಿರುವ ಸ್ಥಿತಿಯಲ್ಲಿ ಉಪನ್ಯಾಸಕರಾದ ಸುರೇಶ್ ಅವರ ಶವ ಪತ್ತೆಯಾಗಿರುವುದು ಆಘಾತಕಾರಿಯಾಗಿದೆ. ಶನಿವಾರದಂದು ಮದುವೆಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದ ಸುರೇಶ್ ಅವರು, ಭಾನುವಾರ ಬೆಳಿಗ್ಗೆ ತೋಟದಲ್ಲಿ ಈ ರೀತಿ ಪತ್ತೆಯಾಗಿದ್ದಾರೆ.‌ ಆಗಲೂ ಕೂಡ ಶವವು ಉರಿಯುತ್ತಿದ್ದು, ಸುತ್ತಮುತ್ತಲಿನ ಗರಿಗಳು ಕೂಡ ಬೆಂಕಿಯಿಂದ ಉರಿಯುತ್ತಿತ್ತು ಎನ್ನಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹೊಳೆಹೊನ್ನೂರು ಠಾಣೆಯ ಪೊಲೀಸರು ಪರಿಶೀಲನೆಯನ್ನು ನಡೆಸಿದ್ದಾರೆ.‌ ಸುರೇಶ್ ಅವರ…

Read More

ಸ್ಕ್ರೀಮ್ ಆಮಿಷಕ್ಕೆ ಮುಗ್ದರ ಕೋಟಿ ಕೋಟಿ ಹಣ ಹೋಯ್ತು! – ಜನರ 3 ಕೋಟಿ ನುಂಗಿದ ವಂಚಕರು: ಹೊಸನಗರದಲ್ಲಿ ಸಿಕ್ಕಿ ಬಿದ್ದ ಆರೋಪಿಗಳು – ಸ್ಕ್ರೀಮ್ ಗಳಿಗೆ ಹಣ ಹಾಕುವ ಮುನ್ನ ಎಚ್ಚರ ಎಚ್ಚರ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಮಲೆನಾಡು/ಕರಾವಳಿ: ಜನರಿಗೆ ಆಸೆ ಹುಟ್ಟಿಸಿ. ಗೃಹ ಉಪಯೋಗಿ ಸ್ಕೀಮ್ ಹೆಸರಲ್ಲಿ ಜನರಿಗೆ ವಂಚನೆ ಮಾಡುವ ಪ್ರಕರಣ ಹೆಚ್ಚಾಗಿದೆ. ಈ ನಡುವೆ ಕಡಿಮೆ ಹೂಡಿಕೆ, ಬಂಪರ್ ಬಹುಮಾನ ಎಂದು ಬಹುತೇಕರನ್ನು ವಂಚಿಸಿದ ಘಟನೆ ನಡೆದಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಇಂತಹ ಅನೇಕ ಸ್ಕ್ರೀಮ್ ಕೆಲಸ ಮಾಡುತ್ತಿವೆ. ಆಮಿಷಗಳಿಗೆ ಬಲಿಯಾಗಿ ರಾಜ್ಯದಲ್ಲಿ ಸಾವಿರಾರು ಜನರು ಕಷ್ಟಪಟ್ಟು ಸಂಪಾದಿಸಿದ ಕೋಟ್ಯಾಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ತಿಂಗಳ ಕಂತು ಕಟ್ಟಿ ವರ್ಷ ಕಳೆದರೂ ಅನೇಕರಿಗೆ ದುಡ್ಡು ಬರಲಿಲ್ಲ, ಬಹುಮಾನವೂ ಬರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೊಸನಗರ ಮತ್ತು ಉಡುಪಿ ಭಾಗದಲ್ಲಿ ಬೆಳಕಿಗೆ ಬಂದಿರುವ ‘ ಗ್ರೂಪ್ನ 3 ಕೋಟಿ ರೂಪಾಯಿ ವಂಚನೆ ಮಾಡಿದೆ ಎಂಬ ಆರೋಪ…

Read More

ಯುದ್ಧ ಮುಂದುವರಿದರೆ ಸೀಮೆ ಎಣ್ಣೆ ಬುಡ್ಡಿಯೇ ಗತಿ?! – ಪಡಿತರ ಅಂಗಡಿಗಳಲ್ಲಿ ಇನ್ನು ಮುಂದೆ ಸೀಮೆ ಎಣ್ಣೆ ಲಭ್ಯ – ಗ್ಯಾಸ್ ಮುಂದೆ ಕಷ್ಟ ಆಗುತ್ತಾ? ಕೇಂದ್ರದ ನಿಯಮ ಏನು? ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಭಾರತದಲ್ಲಿ ತಲೆದೋರಬಹುದಾದ ಸಿಲಿಂಡರ್ ಪುರೈಕೆಯಲ್ಲಿನ ವ್ಯತ್ಯಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಪರಿಣಾಮವಾಗಿ ಇನ್ನು ಮುಂದೆ ಮನೆಯಲ್ಲಿ ಅಡುಗೆಗೆ ಸಿಲಿಂಡರ್ ಬದಲಾಗಿ ಸೀಮೆಎಣ್ಣೆಯನ್ನು ಬಳಸಲು ಅವಕಾಶ ಕಲ್ಪಿಸಿದೆ.‌ ಇದಕ್ಕೆ ಸಂಬಂಧಿಸಿದಂತೆ ಆದೇಶವನ್ನು ಹೊರಡಿಸಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶದ ಎಲ್ಲಾ ರಾಜ್ಯಗಳ ಪಡಿತರ ಅಂಗಡಿಗಳಿಗೆ 1 ಲಕ್ಷ ಕಿಲೋಲೀಟರ್ ನಷ್ಟು, ನಿಯಮಿತ ಕೋಟಾದ ಜೊತೆಗೆ, ಇನ್ನೂ ಹೆಚ್ಚುವರಿಯಾಗಿ 48,000 ಕಿಲೋಲೀಟರ್ ಸೀಮೆಎಣ್ಣೆಯನ್ನು ಹಂಚಿಕೆ ಮಾಡಿದೆ. ಮೊದಲಿಗೆ ಬಡ ಕುಟುಂಬಗಳಿಗೆ ಇದನ್ನು ಅಡುಗೆಯ ಇಂಧನವಾಗಿ ವಿತರಿಸಲಾಗುತ್ತದೆ ಎನ್ನುವ ಮಾಹಿತಿ ಲಭಿಸಿದೆ. ಹೊಟೇಲ್ ಮತ್ತು ರೆಸ್ಟೋರೆಂಟ್ ಗಳಿಗೆ ಸಿಲಿಂಡರ್ ಗೆ ಪರ್ಯಾಯ ಇಂಧನವಾಗಿ ಬಯೋಮಾಸ್, ಆರ್ ಡಿಎಫ್ ಪೆಲೆಟ್ ಮತ್ತು…

Read More

ಶುರುವಾಯ್ತು ಐಪಿಎಲ್ ರಂಗು..! – ಬೆಂಗಳೂರಲ್ಲೇ ಮೊದಲ ಮ್ಯಾಚ್: ಅಭಿಮಾನಿಗಳ ಕಾತುರ – ದೇಶದ ಮಹಾ ನಗರಗಳಲ್ಲಿ ಪಂದ್ಯ: ಬೆಟ್ಟಿಂಗ್ ಬ್ಯಾನ್..! – 11 ಮಂದಿ ಮೃತರ ನೆನಪಲ್ಲಿ 11 ಕುರ್ಚಿ ಖಾಲಿ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕ್ರಿಕೆಟ್ ಪ್ರೇಮಿಗಳ ಮೆಚ್ಚಿನ ಕ್ರಿಕೆಟ್ ಪಂದ್ಯಾವಳಿ ಐಪಿಎಲ್ 19ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ., ದೇಶ ವಿದೇಶದ ನೂರಾರು ಸ್ಟಾರ್ ಆಟಗಾರರು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆಟ ಆಡಲಿದ್ದಾರೆ. ಐಪಿಎಲ್ ಮೊದಲ 20 ಪಂದ್ಯಗಳ ವಿವರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಬಿಡುಗಡೆಗೊಳಿಸಿದೆ. ಮಾರ್ಚ್ 28ರಂದು ಐಪಿಎಲ್ ಗೆ ಅದ್ಧೂರಿ ಚಾಲನೆ ದೊರೆಯಲಿದ್ದು, ಈ ಬಾರಿ ಐಪಿಎಲ್ ಉದ್ಘಾಟನಾ ಪಂದ್ಯ ಕರ್ನಾಟಕದ ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ 7:30ಕ್ಕೆ ನಡೆಯಲಿದೆ. ಐಪಿಎಲ್ ನೂರಾರು ಕೋಟಿ ವ್ಯವಹಾರ. ಆದರೆ ಜನ ಬೆಟ್ಟಿಂಗ್ ಗೀಳಿಗೆ ಬೀಳುವ ಸಾಧ್ಯತೆ ಇದೆ. ಪೊಲೀಸ್ ಹಾಗೂ ಭಾರತ ಸರ್ಕಾರ ಇಂತಹ ಚಟುವಟಿಕೆ ಮೇಲೆ ನಿಗಾ ಇಡಬೇಕಿದೆ.…

Read More

ಕರಾವಳಿ ಟಾಪ್ ನ್ಯೂಸ್ • ಬಂಟ್ವಾಳ: ರಕ್ತದ ಕಲೆಯುಳ್ಳ ಇನೋವಾ ಕಾರು ಪತ್ತೆ • ಸುಳ್ಯ: ಕೆಎಫ್‌ಡಿ ಸಿ ಕಾರ್ಮಿಕರಿಂದ ಏ.1ರಂದು ಪ್ರತಿಭಟನೆ • ಉಳ್ಳಾಲ: ಕಬ್ಬಿಣದ ಬಕೆಟ್ ಬಿದ್ದು ಕಾರ್ಮಿಕ ಸಾವು..! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬಂಟ್ವಾಳ: ಬುಡೋಳಿ ಹತ್ತಿರದಲ್ಲಿ ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟು ಫ್ಲೈ ಓವರ್ ನ ಮೇಲ್ಭಾಗದಲ್ಲಿ ರಕ್ತದ ಕಲೆಯುಳ್ಳ ಇನೋವಾ ಕಾರ್ ಕಂಡುಬಂದ ಘಟನೆ ಶುಕ್ರವಾರದಂದು ನಡೆದಿದೆ. ರೌಡಿಶೀಟರ್ ಮುಳ್ಳುಗಡ್ಡೆ ಹೌಸ್, ತಲಪಾಡಿ ನಿವಾಸಿಯಾದ ಆರೀಫ್ ನ ಹತ್ಯೆಗೆ ಬಳಸಿರುವ ವಾಹನ ಇದೇ ಆಗಿರಬಹುದೆಂದು ಅನುಮಾನಗಳು ವ್ಯಕ್ತವಾಗಿವೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆಯನ್ನು ನಡೆಸಿದರು. ತನಿಖೆಯ ಬಳಿಕ ಇನ್ನಷ್ಟೇ ಮಾಹಿತಿ ಲಭಿಸಬೇಕಿದೆ. •ಸುಳ್ಯ: ಕೆಎಫ್‌ಡಿ ಸಿ ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಸುಳ್ಯ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಸುಳ್ಯ-ಐವರ್ನಾಡು- ಸುಬ್ರಹ್ಮಣ್ಯದ ರಬ್ಬರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ವಿವಿಧ ಬೇಡಿಕೆಗಳನ್ನು ಇಟ್ಟಿದ್ದು, ಅದನ್ನು ಸಂಬಂಧಿತ ವ್ಯಕ್ತಿಗಳ ಗಮನಕ್ಕೆ ಹಲವಾರು ಸಮಯಗಳಿಂದ ತರಲಾಗುತ್ತಿದ್ದರೂ,…

Read More

ತುಂಗಾವಾರ್ತೆ-ನಿಸರ್ಗ ನಿರ್ಮಾಣ ಕಛೇರಿ ಉದ್ಘಾಟನೆ – ತೀರ್ಥಹಳ್ಳಿಯ ಪ್ರಸಿದ್ಧ ಪತ್ರಕರ್ತ ವಿಶ್ವನಾಥ್ ಶೆಟ್ಟಿ ಅವರ ನೂತನ ಕಚೇರಿ – ಚಕ್ಕೋಡಬೈಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಪುನರ್‌ ಪ್ರತಿಷ್ಠಾಪನೆ ನಮ್ಮೂರ್ ಪ್ರೆಸ್ ನ್ಯೂಸ್ ತೀರ್ಥಹಳ್ಳಿ: ಹಿರಿಯ ಪತ್ರಕರ್ತ ಡಿ.ಎಸ್.ವಿಶ್ವನಾಥ ಶೆಟ್ಟಿ ಅವರ ತುಂಗಾ ವಾರ್ತೆ ವಾರಪತ್ರಿಕೆಯ ನೂತನ ಕಾರ್ಯಾಲಯ ಹಾಗೂ ಅವರ ಪುತ್ರ ಎಂಟೆಕ್ ಪದವೀಧರರಾದ ಸುಶಾಂತ್ ಶೆಟ್ಟಿ ಅವರ ನಿಸರ್ಗ ನಿರ್ಮಾಣ ಕನ್ಸ್‌ಟ್ರಕ್ಷನ್ ಸಂಸ್ಥೆಯ ನೂತನ ಕಛೇರಿ ಕಟ್ಟಡವನ್ನು ಮಾರ್ಚ್ 26ರಂದು ಎಂಎಡಿಬಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥಗೌಡ ಉದ್ಘಾಟಿಸಿದರು. ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ ಸಮೀಪ ಈ ಕಟ್ಟಡ ಇದೆ. ಆತ್ಮೀಯರು, ಹಿತೈಷಿಗಳನ್ನು ಡಿಎಸ್‌ವಿ ಕುಟುಂಬ ಸ್ವಾಗತಿಸಿ, ಸತ್ಕರಿಸಿದರು. ಈ ಹಿಂದೆ ಮುಖ್ಯ ಬಸ್‌ ನಿಲ್ದಾಣದ ಬಳಿ ಇದ್ದ ತುಂಗಾ ವಾರ್ತೆ ಕಾರ್ಯಾಲಯದ ಜಾಗದಲ್ಲೇ ನೂತನ ಕಟ್ಟಡ ನಿರ್ಮಾಣಗೊಂಡಿದೆ. ತೀರ್ಥಹಳ್ಳಿ ಗಣ್ಯರು, ರಾಜಕೀಯ ನಾಯಕರು ಭಾಗವಹಿಸಿದ್ದರು. ಕುಟುಂಬದವರು, ಸಿಬ್ಬಂದಿ ಹಾಜರಿದ್ದರು. ಚಕ್ಕೋಡಬೈಲಿನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ನೂತನ ಶಿಲಾಮಯ ಪುನರ್‌…

Read More

ಮರಳು ಮಾಫಿಯಾಕ್ಕೆ ಪೊಲೀಸ್ ಶಾಕ್! – ಮುಂಜಾನೆ ದಾಳಿಯಲ್ಲಿ ಲಾರಿಗಳು ಸೀಜ್ – ತೀರ್ಥಹಳ್ಳಿ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಮರಳು ಅಕ್ರಮ – ದೇವರ ಹೆಸರಿನಲ್ಲಿ ಲಾರಿಗಳ ಸಂಚಾರ.! ನಮ್ಮೂರ್ ಎಕ್ಸ್ ಪ್ರೆಸ್ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರು ನಡೆಸಿದ ಮುಂಜಾನೆ ದಾಳಿ ಗಮನ ಸೆಳೆದಿದೆ. ಅರಸುರಳಿ ಹಾಗೂ ಆರಗ ಭಾಗಗಳಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮರಳು ತುಂಬಿದ್ದ ಎರಡು ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪರವಾನಗಿ ಇಲ್ಲದೆ ಮರಳು ಸಾಗಾಣಿಕೆ ಹೆಚ್ಚಾಗಿದೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆ ಪೊಲೀಸರು ಚುರುಕುಗೊಂಡಿದ್ದರು. ಖಚಿತ ಮಾಹಿತಿ ಆಧರಿಸಿ ವೃತ್ತ ನಿರೀಕ್ಷಕ ಇಮ್ರಾನ್ ಬೇಗ್ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಬೆಳಗ್ಗಿನ ಜಾವ ಕಾರ್ಯಾಚರಣೆ ಆರಂಭಿಸಿತು. ಸಂದೇಹಾಸ್ಪದವಾಗಿ ಸಂಚರಿಸುತ್ತಿದ್ದ ಲಾರಿಗಳನ್ನು ತಡೆದು ತಪಾಸಣೆ ನಡೆಸಿದಾಗ, ಸಾಗಿಸುತ್ತಿದ್ದ ಮರಳಿಗೆ ಸಂಬಂಧಿಸಿದ ಯಾವುದೇ ಮಾನ್ಯ ದಾಖಲೆಗಳು ದೊರಕಲಿಲ್ಲ. ಈ ಹಿನ್ನೆಲೆಯಲ್ಲಿ ತಕ್ಷಣವೇ ಲಾರಿಗಳನ್ನು…

Read More

ಟಾಪ್ ನ್ಯೂಸ್ ಚಿಕ್ಕಮಗಳೂರು • ಚಿಕ್ಕಮಗಳೂರು: ಬಸ್ ಮೇಲೆ ದಾವೂದ್ ಇಬ್ರಾಹಿಂ ಚಿತ್ರ! – ಬಸ್ ವಶಕ್ಕೆ ಪಡೆದ ಪೊಲೀಸರು: ಏನಿದು ಘಟನೆ? • ತರೀಕೆರೆ: ಜನರ ಕಿರುಕುಳ: ಮನನೊಂದು ಮಹಿಳೆ ಆತ್ಮಹತ್ಯೆ • ಚಿಕ್ಕಮಗಳೂರು: 2 ದಿನ ಮಾಂಸ ಮಾರಾಟ ನಿಷೇಧ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಚಿಕ್ಕಮಗಳೂರು: ತಮಿಳುನಾಡು ಮೂಲದಿಂದ ಕಾಫಿನಾಡು ಚಿಕ್ಕಮಗಳೂರಿಗೆ ಆಗಮಿಸಿದ ಖಾಸಗಿ ಬಸ್ ಒಂದರ ಮೇಲೆ, ಮುಂಬೈ ಸರಣಿ ಸ್ಫೋಟದ ಸಂಚುಕೋರ, ಭೂಗತ ಲೋಕದ ಕುಖ್ಯಾತ ಅಪರಾಧಿಯಾಗಿರುವ ದಾವೂದ್ ಇಬ್ರಾಹಿಂನ ಚಿತ್ರ ಮತ್ತು ಆತನನ್ನು ಹೊಗಳುವಂತಹ ಬರವಣಿಗೆಯನ್ನು ಹಾಕಿರುವುದು ಕಂಡುಬಂದಿದ್ದು, ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು ಬಸ್ ಅನ್ನು ಅಡ್ಡಗಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಸ್ ನ ಸುತ್ತಲೂ ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವಂತಹ ಮತ್ತು ಅಪರಾಧ ಲೋಕವನ್ನೇ ವೈಭವೀಕರಿಸುವಂತಹ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ. ಇದರಿಂದ ಸ್ಥಳದಲ್ಲಿ ಕೆಲವು ಸಮಯ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ತಕ್ಷಣ ಬಸವನಹಳ್ಳಿ ಪೊಲೀಸರು ವಾತಾವರಣವನ್ನು…

Read More