ಹಳೆ ಪದ್ಧತಿಯೂ ಹೋಯ್ತು.. ಲೈಫು ಹೋಯ್ತು! – ಓಡುವ ಜಗತ್ತಲ್ಲಿ ಈಗ ಓಡಿದವನೇ ಜಾಣ… – ಮರೆಯಾದ ಹಳೆಯ ಸಂಪ್ರದಾಯ ಮತ್ತು ಜೀವನ ಶೈಲಿ – ಸಂಸ್ಕೃತಿಯ ಮೌಲ್ಯಗಳನ್ನು ಉಳಿಸಿಕೊಳ್ಳುವುದು ನಮ್ಮ ಪೀಳಿಗೆಯ ಪ್ರಮುಖ ಹೊಣೆ – ಮಾನವೀಯ ಮೌಲ್ಯಗಳು, ಪ್ರಾಮಾಣಿಕತೆಗೆ ಬೆಲೆ ಇಲ್ಲವಯ್ಯಾ…! ಸಂಸ್ಕೃತಿಯ ತವರೂರು, ಕಲೆ, ಸಾಹಿತ್ಯ, ಸಂಪ್ರದಾಯಗಳ ಸೂರು. ಭಾರತದ ಹಿಂದೂ ಸಂಪ್ರದಾಯವು ಅತ್ಯಂತ ಪವಿತ್ರವಾದದ್ದು. ಏಕೆಂದರೆ ಭಾರತದ ಇತಿಹಾಸದಲ್ಲಿ ಹಿಂದೂ ಧರ್ಮವೂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಆದರೆ ವಿಪರ್ಯಾಸವೆಂದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಧುನೀಕರಣ , ಪಾಶ್ಚಾತ್ಯ ಸಂಸ್ಕೃತಿ ಸೇರಿದಂತೆ ಹೀಗೆ ಅನೇಕ ಕಾರಣಗಳಿಂದಾಗಿ ನಮ್ಮ ಪ್ರಾಚೀನ ಸಂಪ್ರದಾಯ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಕಾಣುತ್ತಿದೆ. ಇದರಿಂದಾಗಿ ಮಾನವೀಯ ಮೌಲ್ಯಗಳು ಕುಂಠಿತವಾಗಿ, ಸಂಸ್ಕೃತಿಯೂ ನಶಿಸಿಹೋಗುತ್ತಿದೆ. ಒಳ್ಳೆತನ, ಪ್ರಾಮಾಣಿಕತೆ ಮರೆಯಾಗುತ್ತಿದೆ. ಆಧುನಿಕ ಲೋಕದ ವೇಗದಲ್ಲಿ ಹಣ ಮೊದಲ ಸ್ಥಾನ ಪಡೆಯುತ್ತಿದೆ. ಹಳೆಯ ಸಂಪ್ರದಾಯ ಮತ್ತು ಜೀವನಶೈಲಿ ಬದಲಾವಣೆಯ ಪ್ರಮುಖ ಕಾರಣಗಳನ್ನು ಹುಡುಕುತ್ತಾ ಹೋದರೆ ಒಂದಷ್ಟು ಪ್ರಭಾವಗಳು ಇಲ್ಲಿ…
Author: NammurEXP
ಪ್ರಿಯತಮೆ ಕೊಂದು ಫ್ರಿಡ್ಜ್ ಅಲ್ಲಿ ಇಟ್ಟ ಟೆಕ್ಕಿ! – ಮದುವೆಗೆ ಹುಡುಗಿ ಸಿಗಲಿಲ್ಲ ಎಂದು ವಿಷ ಸೇವಿಸಿ ಆತ್ಮಹತ್ಯೆ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕಡೂರು: ಯುವಕನೊಬ್ಬ ಮದುವೆಯಾಗುತ್ತಿಲ್ಲ ಎನ್ನುವ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬೋರಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಶಿರಾ ಗ್ರಾಮದ ಬ್ರಹ್ಮಸಂದ್ರ ಗ್ರಾಮದ ನಿವಾಸಿ, ಕುರಿ ಕಾಯುವ ಕೆಲಸ ಮಾಡಿಕೊಂಡಿದ್ದ 26 ವರ್ಷದ ಕುಮಾರ್ ಎಂದು ಗುರುತಿಸಲಾಗಿದೆ. ಕುರಿ ಕಾಯುತ್ತಿದ್ದ ಸಂದರ್ಭದಲ್ಲಿ ಮದುವೆಯ ವಿಚಾರದಲ್ಲಿ ಮಾನಸಿಕವಾಗಿ ನೊಂದು ಮದ್ಯವನ್ನು ಸೇವಿಸಿ, ತೆಂಗಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಪ್ರಿಯತಮೆ ಕೊಂದು ಫ್ರಿಡ್ಜ್ ಅಲ್ಲಿ ಇಟ್ಟ ಟೆಕ್ಕಿ! ಭಾರತೀಯ ನೌಕಾಪಡೆಯ ಐಎನ್‌ಎಸ್ ಡೇಗಾದಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ 30 ವರ್ಷದ ಚಿಂತಡ ರವೀಂದ್ರ, ತನ್ನ ಪ್ರೇಯಸಿಯನ್ನೇ ಅಮಾನುಷವಾಗಿ ಕೊಲೆ ಮಾಡಿ, ದೇಹವನ್ನು ತುಂಡರಿಸಿ ಫ್ರಿಡ್ಜ್ ಸೇರಿಸಿದ್ದಾನೆ. 2021 ರಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾಗಿದ್ದ ಪೋಲಿಪಲ್ಲಿ ಮೌನಿಕಾ…
ಸಿಮೆಂಟ್, ಆಟೋ ಗ್ಯಾಸ್ ದುಬಾರಿ! – ಯುದ್ಧ ಪರಿಣಾಮ ಆಟೋ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ – ಮನೆ ಕಟ್ಟೋದು ಇನ್ನು ಕಷ್ಟ ಕಷ್ಟ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಉಡುಪಿ: ಇಸ್ರೇಲ್- ಅಮೆರಿಕಾ ಮತ್ತು ಇರಾನ್ ನಡುವಿನ ಕದನವು ತಿಂಗಳುಗಳು ಕಳೆದರೂ ಇನ್ನೂ ಮುಂದುವರಿದಿದ್ದು, ಪರಿಣಾಮವಾಗಿ ಜಗತ್ತಿನ ಅನೇಕ ದೇಶಗಳಲ್ಲಿ ಹಲವಾರು ಬಗೆಯ ಸಮಸ್ಯೆಗಳು ಪ್ರತಿದಿನ ಒಂದರಂತೆ ತಲೆದೋರುತ್ತಿದೆ. ಇದೀಗ ಆಟೋ ಗ್ಯಾಸ್ ಸರದಿಯಾಗಿದೆ. ಆಟೋ ಚಾಲಕರಿಗೆ ತಮ್ಮ ವಾಹನಗಳಿಗೆ ಅಳವಡಿಸಲು ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ, ಪ್ರಸ್ತುತ ಅವರು ಪೆಟ್ರೋಲ್ ಬಳಸುವ ಅನಿವಾರ್ಯತೆ ಎದುರಾಗಿದೆ. ಸಿಎನ್‌ಜಿ ಪೂರೈಕೆ ಇರುವುದರಿಂದ ಆಟೋಗಳಿಗೆ ಇದುವರೆಗೂ ಯಾವುದೇ ರೀತಿಯ ಸಮಸ್ಯೆ ತಲೆದೋರಿಲ್ಲ. ಆದರೆ, ಗ್ಯಾಸ್ ಅನ್ನು ಅಳವಡಿಸಿಕೊಂಡಿರುವ ಆಟೋಗಳಿಗೆ ಸಮಯಕ್ಕೆ ಸರಿಯಾಗಿ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ ಎನ್ನುವುದು ಆಟೋ ಚಾಲಕರ ಅಭಿಪ್ರಾಯವಾಗಿದೆ. ಇದರಿಂದಾಗಿ ಆಟೋ ಗ್ಯಾಸ್ ಸಿಕ್ಕಿದಾಗ ಮಾತ್ರ ಅದನ್ನು ಅಳವಡಿಸಲಾಗುತ್ತಿದ್ದು, ಉಳಿದ ದಿನಗಳಲ್ಲಿ ಪೆಟ್ರೋಲ್ ನಿಂದ ಆಟೋವನ್ನು ಓಡಿಸಲಾಗುತ್ತಿದೆ ಎನ್ನಲಾಗಿದೆ. ಅದರಲ್ಲೂ ಉಡುಪಿ…
ಟಾಪ್ 5 ನ್ಯೂಸ್ ಕರ್ನಾಟಕ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ವೇದಿಕೆಯಲ್ಲಿ ಅಸ್ವಸ್ಥ! – ಕೊಡಗು: ಟ್ರೆಕ್ಕಿಂಗ್ ತೆರಳಿದ ಯುವತಿ ನಾಪತ್ತೆ: ಆನೆ ದಾಳಿ? – ವಿಮಾನ ನಿಲ್ದಾಣದಲ್ಲಿ ಅಶ್ಲೀಲ ಫೋಟೋ, ಕೊಳೆತ ಪಾರ್ಸೆಲ್! – ಶಿವಮೊಗ್ಗ: ಚರ್ಚ್ ಪ್ರಾರ್ಥನೆಯ ವೇಳೆ ಹೆಜ್ಜೇನು ದಾಳಿ! – ಶಾಸಕ ಸುನಿಲ್ ಕುಮಾರ್ ನಿಂದನೆ: ಓರ್ವನ ಬಂಧನ? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಏಪ್ರಿಲ್ 3ರ ಶುಕ್ರವಾರದಂದು ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಹಾಗೂ ಕರ್ನಾಟಕದ ನಿವೃತ್ತ ಲೋಕಾಯುಕ್ತರಾದ ಎನ್ ಸಂತೋಷ್ ಹೆಗ್ಡೆ ಅವರು ವೇದಿಕೆಯಲ್ಲಿ ಅಸ್ವಸ್ಥಗೊಂಡ ಘಟನೆ ನಡೆದಿದೆ. ಕಡಿಮೆ ಸಕ್ಕರೆಯ ಮಟ್ಟ ಮತ್ತು ಹೆಚ್ಚು ರಕ್ತದೊತ್ತಡದಿಂದ ಅವರು ಕುಸಿದುಬಿದ್ದರು ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಅವರನ್ನು ಮಣಿಪಾಲ್ (ವಿಕ್ರಂ) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಪ್ರಸ್ತುತ ನ್ಯಾಯಮೂರ್ತಿಗಳು ಚೇತರಿಸಿಕೊಳ್ಳುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕೊಡಗು: ಟ್ರೆಕ್ಕಿಂಗ್ ತೆರಳಿದ ಯುವತಿ…
ಏ.7ರಂದು ದ್ವಿತೀಯ ಪಿಯುಸಿ, ಏ.24ರಂದು ಎಸ್ ಎಸ್ ಎಲ್ ಸಿ ಫಲಿತಾಂಶ – ಎಸ್ಎಮ್ಎಸ್ ಮೂಲಕವೂ ಫಲಿತಾಂಶ ಬರಲಿದೆ…! – ಪರೀಕ್ಷೆ ಫಲಿತಾಂಶವೇ ಜೀವನ ಅಲ್ಲ.. ಸೋತು ಗೆದ್ದವರೇ ಹೆಚ್ಚು! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: 2026ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳ ಫಲಿತಾಂಶಗಳನ್ನು ನೋಡಲು ಆಯಾ ತರಗತಿಗಳ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾತರದಿಂದ ಕಾಯುತ್ತಿದ್ದಾರೆ. ಏಪ್ರಿಲ್ 7ರಂದು ದ್ವಿತೀಯ ಪಿಯುಸಿ ಮತ್ತು ಏಪ್ರಿಲ್ 24ರಂದು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ನಿರೀಕ್ಷೆಯ ಜೊತೆಗೆ ಆತಂಕ ಮತ್ತು ಕುತೂಹಲ ಮನೆ ಮಾಡಿದೆ. ಫಲಿತಾಂಶ ಪ್ರಕಟವಾದ ನಂತರ ವಿದ್ಯಾರ್ಥಿಗಳು ಸಂಬಂಧಿತ ಇಲಾಖೆಯ ಅಧಿಕೃತ ವೆಬ್ ಸೈಟ್ ಮೂಲಕ ತಮ್ಮ ಅಂಕಪಟ್ಟಿಯನ್ನು ಪರಿಶೀಲಿಸಬಹುದು, ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಬಳಸಿ ವೆಬ್ ಸೈಟ್ ಗೆ ಲಾಗಿನ್…
ಕರಾವಳಿ ಟಾಪ್ ನ್ಯೂಸ್ • ಕಡಬ: ಅಕ್ರಮ ಜಾನುವಾರು ಸಾಗಾಟ; ಪತ್ತೆ ಹಚ್ಚಿದ ಪೊಲೀಸರು • ಉಡುಪಿ: ಇಬ್ಬರು ಆರೋಪಿಗಳ ಗಡಿಪಾರು • ಮಂಗಳೂರು: ಮೀನು ಹಿಡಿಯಲು ಹೋಗಿದ್ದ ಯುವಕರ ಪೈಕಿ ಓರ್ವ ನಾಪತ್ತೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಕಡಬ: ಅಕ್ರಮ ಜಾನುವಾರು ಸಾಗಾಟ; ಪತ್ತೆ ಹಚ್ಚಿದ ಪೊಲೀಸರು ಕಡಬ: ಹಾಸನದಿಂದ ಕೇರಳದ ಕಡೆಗೆ ಕಂಟೇನರ್ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಪತ್ತೆ ಹಚ್ಚಿದ ಘಟನೆ, ಕನ್ವರೆ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಕಡಬ ಠಾಣಾ ಸಬ್ ಇನ್ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಅವರ ನೇತೃತ್ವದ ತಂಡವು 18 ಜಾನುವಾರುಗಳನ್ನು ಅಮಾನುಷವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೆರೆಹಿಡಿಯುವ ಪ್ರಯತ್ನ ನಡೆಸಿದ್ದಾರೆ. ಆದರೆ ಇಬ್ಬರಲ್ಲಿ ಓರ್ವ ಪರಾರಿಯಾಗಿದ್ದು, ಮತ್ತೊಬ್ಬನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರ ಬಲೆಗೆ ಸಿಲುಕಿದ ಆರೋಪಿಯನ್ನು ಹೊಸೂರು ಮೂಲದ ಅಕ್ರಮ್ ಪಾಷಾ ಎಂದು ಗುರುತಿಸಲಾಗಿದೆ. ತನಿಖೆಯ ಬಳಿಕ ಇನ್ನಷ್ಟೇ ಹೆಚ್ಚಿನ…
ಕಂಟೆಂಟ್ ಕ್ರಿಯೇಟರ್ ಗಳ ಮೇಲೆ ಸರ್ಕಾರದ ಕಣ್ಣು! – ಇನ್ನು ಸೋಷಿಯಲ್ ಮೀಡಿಯಾದಲ್ಲಿ ಒಟ್ರಾಸಿ ಹಾಕಿದ್ರೆ ಕೇಸ್ – ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳಲು ನಿಯಮ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: ಇಲ್ಲಿಯವರೆಗೆ ವೃತ್ತಿಪರ ಸುದ್ಧಿ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದ್ದ ಮತ್ತು ಅನ್ವಯಗೊಳ್ಳುತ್ತಿದ್ದ ನಿಯಮಗಳು, ಇನ್ನು ಮುಂದೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಎಕ್ಸ್ ಗಳಲ್ಲಿ ವಿಚಾರಗಳನ್ನು ಹಂಚಿಕೊಳ್ಳುವ ಸ್ವತಂತ್ರ ಕ್ರಿಯೇಟರ್ ಗಳಿಗೂ ಅನ್ವಯಿಸಲು ಕೇಂದ್ರ ಸರ್ಕಾರವು ಮುಂದಾಗಿದೆ. ನಿಯಂತ್ರಣದ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಸರ್ಕಾರವು ಈ ಕ್ರಮವನ್ನು ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತಾಗಿ ಹೊಸ ರೀತಿಯ ಚರ್ಚೆಗಳು ಪ್ರಾರಂಭಗೊಳ್ಳಲು ಕಾರಣವಾಗಿದೆ. ಮಾಹಿತಿ ತಂತ್ರಜ್ಞಾನ ನಿಯಮಗಳಲ್ಲಿ ಕೆಲವೊಂದು ತಿದ್ದುಪಡಿಗಳನ್ನು ತರುವ ಮೂಲಕ, ವೈಯಕ್ತಿಕವಾಗಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳುವವರಿಗೂ ನಿಯಂತ್ರಣದ ಚೌಕಟ್ಟನ್ನು ವಿಸ್ತರಿಸುವ ಪ್ರಯತ್ನ ನಡೆಸಲಾಗಿದೆ. ಕೇಂದ್ರ ಸರ್ಕಾರದ ನಿರ್ಧಾರದಂತೆ ಹೊಸ ತಿದ್ದುಪಡಿ ಜಾರಿಗೆ ಬಂದಲ್ಲಿ ಸುದ್ಧಿ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು…
ಎನ್. ಆರ್. ಪುರ ಕಾಡು ಆನೆ ದಾಳಿ: 70 ಅಡಿಕೆ ಮರ ಪುಡಿ ಪುಡಿ! – ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಸದಸ್ಯರು – ಕೊಪ್ಪದಲ್ಲಿ ಬಾಲಾಜಿ ಹೋಟೆಲ್ ಮುಳ್ಳುಗುಡ್ಡೆ ಹೋಟೆಲ್ ಉದ್ಘಾಟನೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಎನ್.ಆರ್ ಪುರ: ಹೊನ್ನೇಕೊಡುಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾಲೂರು ಗ್ರಾಮದ ರೈತ ಚೆಲುವ ಅವರ ಅಡಿಕೆ ತೋಟಕ್ಕೆ ಮುಂಜಾನೆ ಕಾಡಾನೆ ದಾಳಿ ನಡೆಸಿ 70ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಹಾನಿಗೊಳಿಸಿರುವ ದುರ್ಘಟನೆ ಕುರಿತು ಮಾಹಿತಿ ಪಡೆದು, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಪದಾಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಸೂಕ್ತ ಪರಿಹಾರ ಒದಗಿಸಲು, ಭದ್ರಾ ಹಿನ್ನೀರು ಕಡಿಮೆಯಾಗುತ್ತಿರುವ ಹಿನ್ನೆಲೆ ಆನೆಗಳ ಓಡಾಟ ಹೆಚ್ಚುತ್ತಿರುವುದರಿಂದ ರೈಲ್ವೆ ಬ್ಯಾರಿಕೇಡ್ ಬೇಲಿ ನಿರ್ಮಿಸಲು ಆಗ್ರಹಿಸಲಾಯಿತು. ಶೃಂಗೇರಿ ರೈತ ಒಕ್ಕೂಟದ ಅಧ್ಯಕ್ಷರಾದ ವಿಶ್ವನಾಥ್ ಗದ್ದೆಮನೆ, ಪ್ರಮುಖರಾದ ರಾಘವೇಂದ್ರ ಇತರರು ಇದ್ದರು. ಕೊಪ್ಪದಲ್ಲಿ…
ಗಬ್ಬಾನೆ ಕ್ಷೇತ್ರದಲ್ಲಿ ಜಾತ್ರಾ ಸಂಭ್ರಮ! – ಶ್ರೀ ಪಂಚಲಿಂಗೇಶ್ವರ ಸ್ವಾಮಿಯ ಭವ್ಯ ರಥೋತ್ಸವ – ಭಕ್ತಸಾಗರದ ನಡುವೆ ಜರುಗಿದ ಜಾತ್ರಾ ಮಹೋತ್ಸವ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕೊಪ್ಪ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಗಬ್ಬಾನೆಯಲ್ಲಿ ಶ್ರೀ ಪಂಚಲಿಂಗೇಶ್ವರ ಸ್ವಾಮಿಯ ವಾರ್ಷಿಕ ರಥೋತ್ಸವವು ಶ್ರದ್ಧಾಭಕ್ತಿ ಹಾಗೂ ಸಡಗರದೊಂದಿಗೆಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಜರುಗಿತು. ಮಲೆನಾಡಲ್ಲೇ ಕಾರಣಿಕ ದೇವಾಲಯ ಇದಾಗಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ಸನ್ನಿಧಿಯಲ್ಲಿ ಪಂಚಲಿಂಗೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ, ರುದ್ರಾಭಿಷೇಕ, ಗಣಪತಿ ಪೂಜೆ ಸೇರಿದಂತೆ ವಿವಿಧ ಹೋಮ-ಹವನಗಳು ನಡೆದವು. ಅರ್ಚಕ ವೃಂದದವರಿಂದ ಮಂತ್ರಘೋಷಗಳ ನಡುವೆ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಂಡವು. ಉತ್ಸವ ಮೂರ್ತಿಯನ್ನು ಮಂಟಪದಿಂದ ಮೆರವಣಿಗೆಯ ಮೂಲಕ ತಂದು, ಹೂವುಗಳಿಂದ ಅಲಂಕೃತಗೊಂಡಿದ್ದ ಮಹಾರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಮಧ್ಯಾಹ್ನದ ಶುಭ ಮುಹೂರ್ತದಲ್ಲಿ ನೆರೆದಿದ್ದ ಸಾವಿರಾರು ಭಕ್ತರ “ಹರ ಹರ ಮಹಾದೇವ”, “ಶಂಭೋ ಶಂಕರ” ಎಂಬ ಜಯಘೋಷಗಳ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥದ ಹಗ್ಗ ಹಿಡಿದು ಎಳೆದು ಪುನೀತರಾದರು. ರಥ…
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಕಡ್ಡಾಯ ಇಲ್ಲ! – ನಿಯಮ ವಾಪಸ್ ಪಡೆದ ರಾಜ್ಯ ಸರ್ಕಾರ – 7 ಬಾರಿ ಗಡುವು ವಿಸ್ತರಿಸಿದರೂ ಪ್ರಯೋಜನವಿಲ್ಲ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಕೆಯನ್ನು ಕಡ್ಡಾಯಗೊಳಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ವಾಪಸ್ ಪಡೆದಿದೆ. ಏಳು ಬಾರಿ ಗಡುವು ವಿಸ್ತರಿಸಿದರೂ ವಾಹನ ಸವಾರರು ನಿರಾಸಕ್ತಿ ತೋರಿದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಆದರೆ ಈ ನಿರ್ಧಾರ ನಿಯಮ ಪಾಲಿಸಿ ಹಣ ತೆತ್ತಿದ್ದ ವಾಹನ ಮಾಲಿಕರು ಈಗ ಸರ್ಕಾರದ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಸರ್ಕಾರ ಏಳನೇ ಬಾರಿ ಗಡುವು ವಿಸ್ತರಿಸಿದ್ದಾಗ ರಾಜ್ಯದಲ್ಲಿ ಕೇವಲ ಶೇಕಡ 29ರಷ್ಟು ವಾಹನ ಮಾಲಿಕರು ಮಾತ್ರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದರು. ಉಳಿದ ಶೇಕಡ 71ರಷ್ಟು ವಾಹನ ಮಾಲಿಕರು ನಿರ್ಲಕ್ಷ್ಯ ತೋರಿದ ಕಾರಣ ಕಡ್ಡಾಯ ಆದೇಶ ವ್ಯರ್ಥವಾಯಿತು ಎಂದು ಹೇಳಲಾಗುತ್ತಿದೆ. ನಿಯಮ ಪಾಲಿಸಿದವರಿಗೆ ವಂಚನೆ ಭಾವನೆ: ಆನ್‌ಲೈನ್‌ನಲ್ಲಿ…



