Author: NammurEXP

ಹೆತ್ತವರನ್ನು ಮರೆತ ಮಕ್ಕಳು… ಶವದ ಜೊತೆ 10 ದಿನ ಕಳೆದ ಪತ್ನಿ! – ಮಕ್ಕಳಿದ್ರೂ ಅನಾಥವಾದ ಹೆತ್ತವರು..! – ಬಣಕಲ್‌ನಲ್ಲಿ ಪತಿಯ ಶವದ ಜೊತೆ 10 ದಿನ ಕಳೆದ ಪತ್ನಿ! – ಇದು ಆಧುನಿಕ ಜಗತ್ತಿನ ಕರಾಳ ಮುಖ. ಚಿಕ್ಕಮಗಳೂರು: ಮಕ್ಕಳನ್ನು ಸಾಕಿ ಸಲಹಿ, ಅವರು ದೊಡ್ಡ ಕೆಲಸಕ್ಕೆ ಹೋಗಿ ವಿದೇಶದಲ್ಲಿ ನೆಲೆಸಲಿ ಎಂಬುದು ಪ್ರತಿ ಪೋಷಕರ ಕನಸು. ಆದರೆ, ಅದೇ ಮಕ್ಕಳು ಹೆತ್ತವರನ್ನು ಮರೆತರೆ ಏನಾಗುತ್ತದೆ ಎಂಬುದಕ್ಕೆ ಚಿಕ್ಕಮಗಳೂರಿನ ಈ ಘಟನೆ ಸಾಕ್ಷಿಯಾಗಿದೆ. ಬಣಕಲ್‌ನ ಸುಭಾಷ್ ನಗರದಲ್ಲಿ ನಡೆದ ಈ ಕರುಣಾಜನಕ ಕಥೆ ಕಲ್ಲಿದ್ದವರ ಮನಸ್ಸನ್ನೂ ಕರಗಿಸುವಂತಿದೆ. 77 ವರ್ಷದ ಸಿರಿಲ್ ಮೋನಿಸ್ ಒಬ್ಬ ಪ್ರಾಮಾಣಿಕ ಗಾರೆ ಕೆಲಸಗಾರ. ಗಾರೆ ಕೆಲಸ ಮಾಡಿ ತಮ್ಮ ಇಬ್ಬರು ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸ ಕೊಡಿಸಿದ್ದರು. ಮಗ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿ ನೆಲೆಸಿದ್ದಾರೆ. ಆದರೆ, ಸುಭಾಷ್ ನಗರದ ಮನೆಯಲ್ಲಿ ಸಿರಿಲ್ ಹಾಗೂ ಅವರ ಪತ್ನಿ ಮಾತ್ರ ಅನಾಥರಾಗಿದ್ದರು. ಸಿರಿಲ್ ಮೋನಿಸ್…

Read More

ಸ್ನೇಹಿತರೇ ಸೇರಿ ಕಟ್ಟಿದ್ದು ಸಾವಿರಾರು ಕೋಟಿ ಬ್ಯುಸಿನೆಸ್..! ಕಷ್ಟ ಸುಖದ ನಡುವೆ ಸ್ನೇಹದ ನಿಜದ ಮಹತ್ವ ಸಾರಿದ ಉದ್ಯಮಿಗಳು ಇಂಡಿಯಾದ ದೊಡ್ಡ ಕಂಪನಿಗಳ ಮಾಲೀಕರು ಒಳ್ಳೆ ಫ್ರೆಂಡ್ಸ್ ಸ್ನೇಹಕ್ಕೆ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ. ಇಂತಹ ಸ್ನೇಹ ಅನೇಕ ಸಾಧನೆಗೆ ಸಾಕ್ಷಿಯಾಗಿದೆ. ಸ್ನೇಹಿತರ ಗೆಲುವುಗಳು ಇತಿಹಾಸ ಸೃಷ್ಟಿ ಮಾಡಿದೆ. ಅವರ ಕಷ್ಟಸುಖಗಳಲ್ಲಿ ಸಮಾನವಾಗಿ ಭಾಗಿಗಳಾಗುವವರು ಸ್ನೇಹಿತರು ಮಾತ್ರ ಎಂಬ ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ. ಆದರೆ ಕೆಲಸ ಮತ್ತು ಅದರ ಮೂಲಕ ಗಳಿಸಿದ ಸ್ಥಾನಮಾನಗಳಲ್ಲೂ ಸಮಾನತೆ ಕಂಡುಕೊಂಡವರು ವಿರಳ. ಅಂತಹ ಸ್ನೇಹಿತರು ಇಂದು ನಮ್ಮ ಕಣ್ಣ ಮುಂದೆ ಇದ್ದಾರೆ. ಓಲಾ ಕಂಪನಿಯನ್ನು 2010ರಲ್ಲಿ ಭವಿಷ್ ಅಗರ್ವಾಲ್ ಮತ್ತು ಅಂಕಿತ್ ಭಾಟಿ ಎಂಬ ಸ್ನೇಹಿತರು ಪ್ರಾರಂಭಿಸಿದರು. ಮೊದಲಿಗೆ ಕ್ಯಾಬ್‌ಗಳ ಸೇವೆಗೆ ಮಾತ್ರ ಸೀಮಿತವಾಗಿದ್ದ ಈ ಕಂಪನಿ ತನ್ನ ಆದಾಯ, ಪ್ರಸಿದ್ಧತೆ ಹೆಚ್ಚಿದಂತೆಲ್ಲ ಎಲೆಕ್ಟ್ರಿಕ್ ವಾಹನಗಳು, ಆಹಾರ, ಮೊಬೈಲ್ ಅಪ್ಲಿಕೇಶನ್‌ಗಳಿಗೆ ವಿಸ್ತರಿಸಿಕೊಂಡಿತು. ಭಾರತದ 250ಕ್ಕೂ ಅಧಿಕ ನಗರಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದ್ದಲ್ಲದೆ ಜನವರಿ 2018ರಲ್ಲಿ ಆಸ್ಟ್ರೇಲಿಯಾ…

Read More

ಆರ್.ಸಿ ಬದಲಾಗದಿದ್ದರೆ ಹಳೆ ಮಾಲೀಕರೇ ಹೊಣೆಗಾರರು! – ಅಪಘಾತ ಆದ್ರೂ ಕೇಸ್: ದಾಖಲೆ ಆಗದಿದ್ದರೆ ಬೇಗ ಮಾಡಿಸಿಕೊಳ್ಳಿ – ತಾನು ಮಾಡದ ತಪ್ಪಿಗೆ 47 ಲಕ್ಷ ಕಟ್ಟಲು ಕೋರ್ಟ್ ಆದೇಶ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ತಮ್ಮಲ್ಲಿರುವ ಯಾವುದೇ ವಾಹನವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದು, ಆರ್ ಸಿಯನ್ನು ಬದಲಾಯಿಸದಿದ್ದರೆ ಇನ್ನು ಮುಂದೆ ಹಳೆಯ ಮಾಲೀಕರೇ ಹೊಣೆಗಾರರಾಗುತ್ತಾರೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಆದೇಶವನ್ನು ಹೊರಡಿಸಿದೆ. ಅಲ್ಲದೆ ವಾಹನವನ್ನು ಖರೀದಿ ಮಾಡಿದ ವ್ಯಕ್ತಿಯು ಯಾವುದೇ ರೀತಿಯ ಅಪಘಾತವನ್ನು ನಡೆಸಿದರೆ, ಅದರ ಹೊಣೆ ವಾಹನವನ್ನು ಮಾರಾಟ ಮಾಡಿದ ಮಾಲೀಕನಿಗೆ ಅನ್ವಯಗೊಳ್ಳುತ್ತದೆ ಎನ್ನಲಾಗಿದೆ. ಮಾರತಹಳ್ಳಿಯ ಸುನಿಲ್ ಕುಮಾರ್ ಎನ್ನುವವರು ತಮ್ಮ ಬೈಕ್ ಅನ್ನು ಶಬ್ರೇಜ್ ಎನ್ನುವವರಿಗೆ ಮಾರಾಟ ಮಾಡಿದ್ದು, 2020ರ ಜೂನ್ 18ರಂದು ಶಬ್ರೇಜ್ ಅವರು ಹನುಮಂತ ಎನ್ನುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಹನುಮಂತ ಅವರು ಮೃತಪಟ್ಟಿದ್ದರು. ಹನುಮಂತ ಅವರ ಕುಟುಂಬಸ್ಥರು ಪರಿಹಾರವನ್ನು ಕೋರಿ ಮೋಟರ್ ಅಪಘಾತ ನ್ಯಾಯಮಂಡಳಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ವಿಮಾ…

Read More

ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ! – ವಿದ್ಯಾರ್ಥಿಗಳು, ಪೋಷಕರಲ್ಲಿ ಹೆಚ್ಚಿದ ಕುತೂಹಲ – ಫಲಿತಾಂಶ ನೋಡೋದು ಹೇಗೆ?.. ಎಷ್ಟು ಸಮಯಕ್ಕೆ ಫಲಿತಾಂಶ? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 9ರ ಗುರುವಾರದಂದು ಪ್ರಕಟಗೊಳ್ಳಲಿದೆ. ಪಿಯುಸಿ ಪರೀಕ್ಷೆ ಬರೆದ ಎಲ್ಲರಲ್ಲಿ ಕುತೂಹಲ ಮನೆ ಮಾಡಿದೆ.ಫೆಬ್ರವರಿ 28ರಿಂದ ಮಾರ್ಚ್ 17ರ ವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಮಾರ್ಚ್ 20 ರಿಂದ ಪ್ರಾರಂಭಗೊಂಡಿತ್ತು. ಮೌಲ್ಯಮಾಪನ ಕಾರ್ಯವು ಕೆಲವು ದಿನಗಳ ಹಿಂದೆಯೇ ಮುಕ್ತಾಯಗೊಂಡಿತ್ತು. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದಾರೆ. ಅಧಿಕೃತ ವೆಬ್‌ಸೈಟ್‌ನಲ್ಲೂ ಫಲಿತಾಂಶ ಪ್ರಕಟ: ನೋಡೋದು ಹೇಗೆ? ಮೊದಲು ಅಧಿಕೃತ ವೆಬ್ ಸೈಟ್ karresults.nic.in ‘ ಗೆ ಭೇಟಿ ನೀಡಿ Karnataka 2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟ್ರೇಶನ್ ನಂಬ‌ರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ‘Submit’ ಬಟನ್ ಒತ್ತಿದ…

Read More

ಶ್ರೀ ಮೂಕಾಂಬಿಕಾ ಟೈರ್ಸ್ ಆ್ಯಂಡ್ ಅಲೈನ್ ಮೆಂಟ್ ನೂತನ ಮಳಿಗೆ ಉದ್ಘಾಟನೆ – ತೀರ್ಥಹಳ್ಳಿಯ ಎ ಪಿ ರಸ್ತೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರ – ಗಣ್ಯರು, ಗ್ರಾಹಕರ ಸಮ್ಮುಖದಲ್ಲಿ ಉದ್ಘಾಟನೆ ತೀರ್ಥಹಳ್ಳಿ: ತೀರ್ಥಹಳ್ಳಿಯ ಆಜಾದ್ ರಸ್ತೆಯ ಬಿಎನ್ ಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಮೂಕಾಂಬಿಕಾ ಟೈರ್ಸ್ ಆ್ಯಂಡ್ ಅಲೈನ್ ಮೆಂಟ್ ಮಳಿಗೆಯನ್ನು ತೀರ್ಥಹಳ್ಳಿಯ ಎ ಪಿ ರಸ್ತೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹೊಸ ಮಳಿಗೆಯ ಉದ್ಘಾಟನಾ ಸಮಾರಂಭವು ದಿನಾಂಕ 8 ಏಪ್ರಿಲ್ 2026ರ ಬುಧವಾರದಂದು ಬೆಳಿಗ್ಗೆ 10:00ಗಂಟೆಗೆ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಗೀತಾ ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಶಿವಮೊಗ್ಗದ ರಝಾ ಟೈರ್ಸ್ ಮಾಲೀಕರಾದ ನೂರ್ ಮಹಮ್ಮದ್ ಹುಸೇನ್ ಆಗಮಿಸಿದ್ದರು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ,…

Read More

ಆಧುನಿಕ ಯುಗದಲ್ಲಿ ಮತ್ತೆ ಮಣ್ಣಿನ ಮಡಿಕೆಗೆ ಡಿಮ್ಯಾಂಡ್! –  ಮಡಿಕೆಯಲ್ಲಿ ತುಂಬಿಸಿದAತಹ ನೀರು ಭಾರಿ ತಂಪು –  ಮಡಿಕೆೆಯಲ್ಲಿ ಅಡುಗೆ ಮಾಡಿದರೆ ಹೆಚ್ಚು ರುಚಿಕರ, ಆರೋಗ್ಯಕರ ಬೇಸಿಗೆ ಬಂತೆಂದರೆ ಎಲ್ಲರೂ ತಣ್ಣನೆಯ ಗುಟುಕು ನೀರು ಸಿಕ್ಕರೆ ಸಾಕಪ್ಪ ಎನ್ನುವಂತೆ ಕುಂಬಾರರ ಪ್ರಕೃತಿ ಪ್ರಿಡ್ಜ್ (ಮಣ್ಣಿನ ಮಡಿಕೆ) ಹೆಚ್ಚು ಸಹಕಾರಿಯಾಗಿದೆ. ಈ ಹಿಂದೆ ಬೇಸಿಗೆ ಬಂದರೆ ಎಲ್ಲರೂ ತಣ್ಣನೆ ಮಣ್ಣಿನ ಮಡಕೆ ನೀರು ಕುಡಿಯುತ್ತಿದ್ದವರೇ, ಅದು ಆರೋಗ್ಯಕ್ಕೂ ಹಿತಕರವಾಗಿತ್ತು. ಇತ್ತೀಚೆಗೆ ಆ ಮಣ್ಣಿನ ಮಡಿಕೆಗಳು ಕಡಿಮೆಯಾಗುತ್ತಾ ಪ್ಲಾಸ್ಟಿಕ್ ಬಾಟಲಿ, ಸ್ಪೀಲ್, ಅಲ್ಯೂಮಿನಿಯಂ, ಅಕ್ವಗಾರ್ಡ್ ಹಾಗೂ ಇಲೆಕ್ಟ್ರಾನಿಕ್ ಫ್ರಿಡ್ಜ್ಗಳಲ್ಲಿ ನೀರು ಸಂಗ್ರಹಿಸಿ ಕುಡಿಯುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಇದೀಗ ಇತ್ತೀಚಿಗೆ ಮತ್ತೆ ಮಡಿಕೆ, ಮಣ್ಣಿನ ಪಾತ್ರೆಗಳಿಗೆ ಬೇಡಿಕೆ ಹೆಚ್ಚಿದೆ. ಸಾಗಣೆ ಮತ್ತು ಉತ್ಪಾದನೆ ಕಷ್ಟ ಕಷ್ಟ! ಮಡಿಕೆಗಳೊಂದಿಗೆ ಮಣ್ಣಿನಿಂದ ಮಾಡಿದ ವಿವಿಧ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಮಣ್ಣಿನ ಮಡಿಕೆಗಳಿಗೆ ಈ ಹಿಂದೆ ಹೆಚ್ಚು ಬೇಡಿಕೆ ಇತ್ತು. ಇದೀಗ ಬೆಳೆಯುತ್ತಿರುವ ತಂತ್ರಜ್ಞಾನದಿಂದ ಎಲ್ಲರೂ ಎಲೆಕ್ಟ್ರಾನಿಕ್ ಯುಗಕ್ಕೆ…

Read More

ಕರಾವಳಿ ಟಾಪ್ ನ್ಯೂಸ್ • ಪುತ್ತೂರು: ಕ್ರೈನ್ ಢಿಕ್ಕಿಯಾಗಿ ವ್ಯಕ್ತಿ ಸಾವು • ಬೈಂದೂರು: ಲಕ್ಷಾಂತರ ರೂಪಾಯಿ ದುರುಪಯೋಗ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಪುತ್ತೂರು: ಕ್ರೈನ್ ಢಿಕ್ಕಿಯಾಗಿ ವ್ಯಕ್ತಿ ಸಾವು ಪುತ್ತೂರು: ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಕ್ರೈನ್ ಢಿಕ್ಕಿ ಹೊಡೆದ ಘಟನೆ, ಮಂಗಳವಾರದಂದು ಕಲ್ಲೇರಿಯಲ್ಲಿ ನಡೆದಿದೆ. ಪರಿಣಾಮವಾಗಿ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಕೊಳ್ತಿಗೆ ನಿವಾಸಿ ಮಹಾಲಿಂಗಮ್ ಎಂದು ಗುರುತಿಸಲಾಗಿದೆ. ಜೋಗಿಬೆಟ್ಟುವಿನಲ್ಲಿದ್ದ ಅವರ ಮಗಳ ಮನೆಗೆ ಬಂದ ಸಂದರ್ಭದಲ್ಲಿ, ಕಲ್ಲೇರಿ ಪ್ರಯಾಣಿಕರ ತಂಗುದಾಣದಲ್ಲಿ ನಿಂತಿದ್ದರು. ಆಗ ಗುರುವಾಯನಕೆರೆಯಿಂದ ಉಪ್ಪಿನಂಗಡಿಯ ಕಡೆಗೆ ತೆರಳುತ್ತಿದ್ದ ಕ್ರೈನ್ ಮಹಾಲಿಂಗಮ್ ಅವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಮಹಾಲಿಂಗಮ್ ಅವರು ರಸ್ತೆಗೆ ಬಿದ್ದಿದ್ದು, ವೇಗವಾಗಿ ಚಲಿಸುತ್ತಿದ್ದ ಕ್ರೈನ್ ಅವರ ತಲೆಯ ಮೇಲೆ ಹರಿದುಹೋಗಿದೆ ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆಯನ್ನು ನಡೆಸಿ, ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. • ಬೈಂದೂರು:…

Read More

ನೃತ್ಯ ಲೋಕದ ಸಾಧಕಿ ವಿದುಷಿ ದೀಕ್ಷಾ..! ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಸತತ ಪರಿಶ್ರಮ, ಪ್ರಾಮಾಣಿಕತೆ, ಛಲ ಸಾಧನೆಗೆ ಶಕ್ತಿ ಸಾಧನೆಗೆ ಬಡತನ, ಸಮಯ ಯಾವುದು ಅಡ್ಡಿ ಅಲ್ಲ. ಸತತ ಪರಿಶ್ರಮ, ಛಲದಿಂದ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸಾಕ್ಷಿ ಬ್ರಹ್ಮಾವರ ಮೂಲದ ವಿಶ್ವ ವಿಖ್ಯಾತ ಭರತನಾಟ್ಯ ಪಟು ವಿದುಷಿ ದೀಕ್ಷಾ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ದೀಕ್ಷಾ ಅವರು ಬಡ ಕುಟುಂಬದ ಮಗಳು. ತಂದೆ ದೀಕ್ಷಾ ಅವರು ಕಲಿಯುತ್ತಿದ್ದ ಲಿಟಲ್ ರಾಕ್ ಶಾಲೆಯ ವಾಹನದ ಡ್ರೈವರ್ ಆಗಿ ಕಾರ್ಯನಿರ್ವಹಿಸಿದರೆ, ತಾಯಿ ಅದೇ ಶಾಲೆಯ ಹಾಸ್ಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕಲೆಯಲ್ಲಿ ಆಸಕ್ತಿ ಇರುವ ದೀಕ್ಷಾ ಅವರ ತಾಯಿ ಮಗಳನ್ನು ಮೂರನೇ ವಯಸ್ಸಿಗೇ ನೃತ್ಯ ತರಬೇತಿ ಶಾಲೆಗೆ ಸೇರಿಸಲು ಹೋದಾಗ “ಮಗು ತುಂಬಾ ಸಣ್ಣದು, ಅದರ ಕಾಲುಗಳಿಗೆ ನೃತ್ಯ ಮಾಡುವಷ್ಟು ಸಾಮರ್ಥ್ಯ ಬಂದಿರುವುದಿಲ್ಲ” ಎಂದು ಗುರುಗಳು ಮರಳಿ ಕಳುಹಿಸಿದ್ದರು. ದೀಕ್ಷಾ ಅವರ ತಾಯಿ ಪ್ರಯತ್ನ ಬಿಡಲಿಲ್ಲ. ಮಗಳ ಯುಕೆಜಿ…

Read More

ಹೊಸ ನಗರ ಮರು ಕ್ಷೇತ್ರ ಸ್ಥಾಪನೆಗೆ ಹೋರಾಟ! – ಸಾವಿರಾರು ಜನರಿಂದ ಪ್ರತಿಭಟನೆ: ಪಕ್ಷಾತೀತವಾಗಿ ನ್ಯಾಯಕ್ಕಾಗಿ ಪಟ್ಟು – ಪಾದಯಾತ್ರೆಗೆ ಹರಿದು ಬಂದ ಜನಸಾಗರ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಹೊಸನಗರ: ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಹೊಸನಗರ ತಾಲೂಕಲ್ಲಿ ಭಾರಿ ಹೋರಾಟ ಶುರುವಾಗಿದೆ. ಪಕ್ಷಾತೀತ ಹೋರಾಟಕ್ಕೆ ಜನ ಬೆಂಬಲ, ರಾಜಕೀಯ-ಧಾರ್ಮಿಕ ನಾಯಕರ ಬೆಂಬಲ ಸಿಕ್ಕಿದ್ದು, ಸಾವಿರಾರು ಜನ ಭಾಗಿಯಾಗಿದ್ದಾರೆ. ಹೊಸನಗರ ತಾಲೂಕು ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಹೊಸನಗರ ಪ್ರದೇಶ ಸಮಗ್ರ ಅಭಿವೃದ್ಧಿ ಕಾಣಬೇಕಾದರೆ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ ಅನಿವಾರ್ಯ ಎಂದು ಜನಪ್ರತಿನಿಧಿಗಳು, ಮಠಾಧೀಶರು ಹಾಗೂ ವಿವಿಧ ಧರ್ಮಗುರುಗಳು ಒಮ್ಮತದ ಧ್ವನಿಯಲ್ಲಿ ಒತ್ತಾಯಿಸಿದ್ದಾರೆ. ಹೊಸ ನಗರ ತಾಲೂಕಿನ ನಗರ ಹೋಬಳಿಯ ಚಿಕ್ಕಪೇಟೆಯ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಸಂಕಷ್ಟ ಹರ ಚತುರ್ಥಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಸಾವಿರಾರು ಜನರು ಪಾದಯಾತ್ರೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಭಾರೀ ಬೆಂಬಲ ವ್ಯಕ್ತಪಡಿಸಿದರು.…

Read More

ಸೇತುವೆ ಮೇಲಿಂದ ನದಿಗೆ ಜಿಗಿದು ನರ್ಸ್ ಸಾವು! – ಮುಡುಬದಲ್ಲಿ ಆತ್ಮಹತ್ಯೆ: ಕಾರಣ ನಿಗೂಢ – ಶಿವಮೊಗ್ಗದಿಂದ ಬಂದು ನದಿಗೆ ಹಾರಿದಳು! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಎನ್. ಆರ್. ಪುರ:ಸೇತುವೆ ಮೇಲಿಂದ ನದಿಗೆ ಜಿಗಿದು ನರ್ಸ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್. ಪುರ ತಾಲೂಕಿನಲ್ಲಿ ನಡೆದಿದೆ. ಮೃತರನ್ನು ಮುತ್ತಿನಕೊಪ್ಪ ಮೂಲದ ರನ್ಯ (35) ಎಂದು ಗುರುತಿಸಲಾಗಿದೆ. ಈಕೆ ಶಿವಮೊಗ್ಗದ ನಾರಾಯಣ ಹೃದಯಾಲಯದಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರನ್ಯ ಅವರು ಮಡಬು ಸೇತುವೆ ಬಳಿ ಬಂದು, ದಿಢೀರನೆ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ತಕ್ಷಣವೇ ಕಾರ್ಯಾಚರಣೆ ನಡೆಸಲಾಗಿದೆ. ರನ್ಯ ಅವರ ಮೃತದೇಹವನ್ನು ನದಿಯಿಂದ ಹೊರತೆಗೆಯಲಾಗಿದೆ. ಮೃತ ರನ್ಯ ಅವರಿಗೆ ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿತ್ತು. ಇವರು ಪತಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಸಂಬಂಧ…

Read More