ದ್ವಿತೀಯ ಪಿಯುಸಿ ಫಲಿತಾಂಶ: ಉಡುಪಿ ಟಾಪರ್! – ಯಾದಗಿರಿ ಕೊನೆ ಸ್ಥಾನ: ಯಾರಿಗೆ ಮೊದಲ ಸ್ಥಾನ? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ವಿದ್ಯಾರ್ಥಿಗಳ ವೃತ್ತಿ ಜೀವನದ ಜೊತೆಗೆ, ಅವರ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಮಹತ್ವದ ಘಟ್ಟವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಸುದ್ಧಿಗೋಷ್ಠಿಯಲ್ಲಿ ಫಲಿತಾಂಶವನ್ನು ಪ್ರಕಟಿಸಿದ್ದು, ಈ ಬಾರಿಯ ಫಲಿತಾಂಶದಲ್ಲಿ ಕಲಾವಿಭಾಗದಲ್ಲಿ ಶೇಕಡ 53.29ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹಾಗೆಯೇ ವಾಣಿಜ್ಯ ವಿಭಾಗದಲ್ಲಿ 76.೦7ರಷ್ಟು ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ 82.54ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನವನ್ನು, ದಕ್ಷಿಣ ಕನ್ನಡ ಜಿಲ್ಲೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಯಾದಗಿರಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಕಲಾವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಂಜನಾಬಾಯಿ ಅವರು 600ಕ್ಕೆ 597, ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಕ್ಸ್ ಪರ್ಟ್ ಪದವಿಪೂರ್ವ ಕಾಲೇಜಿನ ಅಮೂಲ್ಯ ಕಾಮತ್ ಅವರು…
Author: NammurEXP
ಮಲೆನಾಡಿನ ಹುಡುಗ ಅಮೇರಿಕಾ ಕ್ರಿಕೆಟ್ ತಂಡದ ಬಿಗ್ ಸ್ಟಾರ್! – ಮೂಡಿಗೆರೆ ಮೂಲದ ನೊಸ್ತುಷ ಪ್ರದೀಪ್ ಕೆಂಜಿಗೆ ಅಮೇರಿಕಾದ ಆಲ್ ರೌಂಡರ್ – ತಂದೆ ಪ್ರದೀಪ್ ಕೆಂಜಿಗೆ ಕೂಡ ಕೃಷಿ ಸಂಶೋಧಕರು..! ಮಲೆನಾಡಿನ ಹುಡುಗ ಅಮೇರಿಕಾ ಕ್ರಿಕೆಟ್ ತಂಡದಲ್ಲಿ ಆಲ್ ರೌಂಡರ್. ಅಚ್ಚರಿ ಆಗಬಹುದು. ಆದ್ರೂ ಸತ್ಯ. ಮೂಡಿಗೆರೆ ಮೂಲದ ನೊಸ್ತುಷ ಪ್ರದೀಪ್ ಕೆಂಜಿಗೆ ಇದೀಗ ಅಮೇರಿಕಾ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದಾರೆ. ತಂದೆ ಪ್ರದೀಪ್ ಕೆಂಜಿಗೆ ಕೂಡ ಕೃಷಿ ಸಂಶೋಧಕರು. ನೊಸ್ತುಷ ಪ್ರದೀಪ್ ಕೆಂಜಿಗೆ ಅವರು 2 ಮಾರ್ಚ್ 1991ರಲ್ಲಿ ಜನಿಸಿದರು. ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೆಂಜಿಗೆ ಗ್ರಾಮದವರು. ಆದರೆ ಹುಟ್ಟಿದ್ದು ಆಬರ್ನ್ ಅಲಬಾಮಾ ಯುನೈಟೆಡ್ ಸ್ಟೇಟ್ಸ್ ನಲ್ಲಿ. ತಂದೆ ಪ್ರದೀಪ್ ಮೂಡಿಗೆರೆಯಲ್ಲಿ ಕಾಫಿ ತೋಟವನ್ನು ಹೊಂದಿದ್ದು, ಟಸ್ಕೆಗೀ ವಿಶ್ವವಿದ್ಯಾನಿಲಯದಲ್ಲಿ ಕೃಷಿ ಸಂಶೋಧಕರಾಗಿದ್ದಾರೆ. ನೊಸ್ತುಷ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಲವ್ ಡೇಲ್ ನ ದಿ ಲಾರೆನ್ಸ್ ಶಾಲೆಯಲ್ಲಿ ಅಧ್ಯಯನ ಮಾಡಿದರು. ಇವರು ಬಹುತೇಕ ಭಾರತದಲ್ಲೇ…
ತುಂಗಾನಗರದಲ್ಲಿ ಯುವಕನ ಶವ ಪತ್ತೆ; ಗೆಳೆಯನ ವಿರುದ್ಧವೇ ಕೊಲೆ ಆರೋಪ! – ಶಿವಮೊಗ್ಗದ ತುಂಗಾನಗರದಲ್ಲಿ ಯುವಕನ ಅನುಮಾನಾಸ್ಪದ ಸಾವು. – ತೋಟದ ಬಳಿ ಪತ್ತೆಯಾದ ಮಂಜುನಾಥ್ (24) ಮೃತದೇಹ. – ಹಣಕ್ಕಾಗಿ ಗೆಳೆಯ ಸಂತೋಷ್‌ನಿಂದ ಕೊಲೆ ಆರೋಪ ಮಾಡಿದ ಅಕ್ಕ ಲಕ್ಷ್ಮೀದೇವಿ. ಶಿವಮೊಗ್ಗ: ನಗರದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಹಣಕ್ಕಾಗಿ ಗೆಳೆಯನೇ ಕೊಲೆ ಮಾಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮೇಲಿನ ತುಂಗಾನಗರ ನಿವಾಸಿ ಮಂಜುನಾಥ್ (24) ಎಂಬ ಯುವಕ ಕಾಮತ್ ಲೇಔಟ್‌ನ ತೋಟವೊಂದರ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಮೃತ ಮಂಜುನಾಥ್ ಅಡಿಕೆ ಆರಿಸುವ ಕೆಲಸ ಮಾಡುತ್ತಿದ್ದನು. ವಿಪರೀತ ಕುಡಿತದ ಚಟ ಹೊಂದಿದ್ದ ಈತ, ಒಂದು ತಿಂಗಳ ಹಿಂದಷ್ಟೇ ಕೆಲಸ ಬಿಟ್ಟು ಮನೆಯಲ್ಲಿದ್ದನು. ನಿನ್ನೆ ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ಇಂದು ಹೆಣವಾಗಿ ಪತ್ತೆಯಾಗಿದ್ದಾನೆ. ಗೆಳೆಯನ ಮೇಲೆ ಅಕ್ಕನ ಗಂಭೀರ ಆರೋಪ: ಮಂಜುನಾಥ್ ಸಾವು ಸಹಜ ಸಾವಲ್ಲ, ಅದು ಆತನ ಗೆಳೆಯ ಸಂತೋಷ್…
ಹೆತ್ತವರನ್ನು ಮರೆತ ಮಕ್ಕಳು… ಶವದ ಜೊತೆ 10 ದಿನ ಕಳೆದ ಪತ್ನಿ! – ಮಕ್ಕಳಿದ್ರೂ ಅನಾಥವಾದ ಹೆತ್ತವರು..! – ಬಣಕಲ್‌ನಲ್ಲಿ ಪತಿಯ ಶವದ ಜೊತೆ 10 ದಿನ ಕಳೆದ ಪತ್ನಿ! – ಇದು ಆಧುನಿಕ ಜಗತ್ತಿನ ಕರಾಳ ಮುಖ. ಚಿಕ್ಕಮಗಳೂರು: ಮಕ್ಕಳನ್ನು ಸಾಕಿ ಸಲಹಿ, ಅವರು ದೊಡ್ಡ ಕೆಲಸಕ್ಕೆ ಹೋಗಿ ವಿದೇಶದಲ್ಲಿ ನೆಲೆಸಲಿ ಎಂಬುದು ಪ್ರತಿ ಪೋಷಕರ ಕನಸು. ಆದರೆ, ಅದೇ ಮಕ್ಕಳು ಹೆತ್ತವರನ್ನು ಮರೆತರೆ ಏನಾಗುತ್ತದೆ ಎಂಬುದಕ್ಕೆ ಚಿಕ್ಕಮಗಳೂರಿನ ಈ ಘಟನೆ ಸಾಕ್ಷಿಯಾಗಿದೆ. ಬಣಕಲ್‌ನ ಸುಭಾಷ್ ನಗರದಲ್ಲಿ ನಡೆದ ಈ ಕರುಣಾಜನಕ ಕಥೆ ಕಲ್ಲಿದ್ದವರ ಮನಸ್ಸನ್ನೂ ಕರಗಿಸುವಂತಿದೆ. 77 ವರ್ಷದ ಸಿರಿಲ್ ಮೋನಿಸ್ ಒಬ್ಬ ಪ್ರಾಮಾಣಿಕ ಗಾರೆ ಕೆಲಸಗಾರ. ಗಾರೆ ಕೆಲಸ ಮಾಡಿ ತಮ್ಮ ಇಬ್ಬರು ಮಕ್ಕಳಿಗೆ ಅತ್ಯುತ್ತಮ ವಿದ್ಯಾಭ್ಯಾಸ ಕೊಡಿಸಿದ್ದರು. ಮಗ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿದ್ದರೆ, ಮಗಳು ದುಬೈನಲ್ಲಿ ಶಿಕ್ಷಕಿಯಾಗಿ ನೆಲೆಸಿದ್ದಾರೆ. ಆದರೆ, ಸುಭಾಷ್ ನಗರದ ಮನೆಯಲ್ಲಿ ಸಿರಿಲ್ ಹಾಗೂ ಅವರ ಪತ್ನಿ ಮಾತ್ರ ಅನಾಥರಾಗಿದ್ದರು. ಸಿರಿಲ್ ಮೋನಿಸ್…
ಸ್ನೇಹಿತರೇ ಸೇರಿ ಕಟ್ಟಿದ್ದು ಸಾವಿರಾರು ಕೋಟಿ ಬ್ಯುಸಿನೆಸ್..! ಕಷ್ಟ ಸುಖದ ನಡುವೆ ಸ್ನೇಹದ ನಿಜದ ಮಹತ್ವ ಸಾರಿದ ಉದ್ಯಮಿಗಳು ಇಂಡಿಯಾದ ದೊಡ್ಡ ಕಂಪನಿಗಳ ಮಾಲೀಕರು ಒಳ್ಳೆ ಫ್ರೆಂಡ್ಸ್ ಸ್ನೇಹಕ್ಕೆ ಜಗತ್ತನ್ನೇ ಗೆಲ್ಲುವ ಶಕ್ತಿ ಇದೆ. ಇಂತಹ ಸ್ನೇಹ ಅನೇಕ ಸಾಧನೆಗೆ ಸಾಕ್ಷಿಯಾಗಿದೆ. ಸ್ನೇಹಿತರ ಗೆಲುವುಗಳು ಇತಿಹಾಸ ಸೃಷ್ಟಿ ಮಾಡಿದೆ. ಅವರ ಕಷ್ಟಸುಖಗಳಲ್ಲಿ ಸಮಾನವಾಗಿ ಭಾಗಿಗಳಾಗುವವರು ಸ್ನೇಹಿತರು ಮಾತ್ರ ಎಂಬ ಮಾತು ನಮ್ಮಲ್ಲಿ ಚಾಲ್ತಿಯಲ್ಲಿದೆ. ಆದರೆ ಕೆಲಸ ಮತ್ತು ಅದರ ಮೂಲಕ ಗಳಿಸಿದ ಸ್ಥಾನಮಾನಗಳಲ್ಲೂ ಸಮಾನತೆ ಕಂಡುಕೊಂಡವರು ವಿರಳ. ಅಂತಹ ಸ್ನೇಹಿತರು ಇಂದು ನಮ್ಮ ಕಣ್ಣ ಮುಂದೆ ಇದ್ದಾರೆ. ಓಲಾ ಕಂಪನಿಯನ್ನು 2010ರಲ್ಲಿ ಭವಿಷ್ ಅಗರ್ವಾಲ್ ಮತ್ತು ಅಂಕಿತ್ ಭಾಟಿ ಎಂಬ ಸ್ನೇಹಿತರು ಪ್ರಾರಂಭಿಸಿದರು. ಮೊದಲಿಗೆ ಕ್ಯಾಬ್‌ಗಳ ಸೇವೆಗೆ ಮಾತ್ರ ಸೀಮಿತವಾಗಿದ್ದ ಈ ಕಂಪನಿ ತನ್ನ ಆದಾಯ, ಪ್ರಸಿದ್ಧತೆ ಹೆಚ್ಚಿದಂತೆಲ್ಲ ಎಲೆಕ್ಟ್ರಿಕ್ ವಾಹನಗಳು, ಆಹಾರ, ಮೊಬೈಲ್ ಅಪ್ಲಿಕೇಶನ್‌ಗಳಿಗೆ ವಿಸ್ತರಿಸಿಕೊಂಡಿತು. ಭಾರತದ 250ಕ್ಕೂ ಅಧಿಕ ನಗರಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದ್ದಲ್ಲದೆ ಜನವರಿ 2018ರಲ್ಲಿ ಆಸ್ಟ್ರೇಲಿಯಾ…
ಆರ್.ಸಿ ಬದಲಾಗದಿದ್ದರೆ ಹಳೆ ಮಾಲೀಕರೇ ಹೊಣೆಗಾರರು! – ಅಪಘಾತ ಆದ್ರೂ ಕೇಸ್: ದಾಖಲೆ ಆಗದಿದ್ದರೆ ಬೇಗ ಮಾಡಿಸಿಕೊಳ್ಳಿ – ತಾನು ಮಾಡದ ತಪ್ಪಿಗೆ 47 ಲಕ್ಷ ಕಟ್ಟಲು ಕೋರ್ಟ್ ಆದೇಶ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ತಮ್ಮಲ್ಲಿರುವ ಯಾವುದೇ ವಾಹನವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದು, ಆರ್ ಸಿಯನ್ನು ಬದಲಾಯಿಸದಿದ್ದರೆ ಇನ್ನು ಮುಂದೆ ಹಳೆಯ ಮಾಲೀಕರೇ ಹೊಣೆಗಾರರಾಗುತ್ತಾರೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಆದೇಶವನ್ನು ಹೊರಡಿಸಿದೆ. ಅಲ್ಲದೆ ವಾಹನವನ್ನು ಖರೀದಿ ಮಾಡಿದ ವ್ಯಕ್ತಿಯು ಯಾವುದೇ ರೀತಿಯ ಅಪಘಾತವನ್ನು ನಡೆಸಿದರೆ, ಅದರ ಹೊಣೆ ವಾಹನವನ್ನು ಮಾರಾಟ ಮಾಡಿದ ಮಾಲೀಕನಿಗೆ ಅನ್ವಯಗೊಳ್ಳುತ್ತದೆ ಎನ್ನಲಾಗಿದೆ. ಮಾರತಹಳ್ಳಿಯ ಸುನಿಲ್ ಕುಮಾರ್ ಎನ್ನುವವರು ತಮ್ಮ ಬೈಕ್ ಅನ್ನು ಶಬ್ರೇಜ್ ಎನ್ನುವವರಿಗೆ ಮಾರಾಟ ಮಾಡಿದ್ದು, 2020ರ ಜೂನ್ 18ರಂದು ಶಬ್ರೇಜ್ ಅವರು ಹನುಮಂತ ಎನ್ನುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಹನುಮಂತ ಅವರು ಮೃತಪಟ್ಟಿದ್ದರು. ಹನುಮಂತ ಅವರ ಕುಟುಂಬಸ್ಥರು ಪರಿಹಾರವನ್ನು ಕೋರಿ ಮೋಟರ್ ಅಪಘಾತ ನ್ಯಾಯಮಂಡಳಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ವಿಮಾ…
ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಕ್ಷಣಗಣನೆ! – ವಿದ್ಯಾರ್ಥಿಗಳು, ಪೋಷಕರಲ್ಲಿ ಹೆಚ್ಚಿದ ಕುತೂಹಲ – ಫಲಿತಾಂಶ ನೋಡೋದು ಹೇಗೆ?.. ಎಷ್ಟು ಸಮಯಕ್ಕೆ ಫಲಿತಾಂಶ? ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 9ರ ಗುರುವಾರದಂದು ಪ್ರಕಟಗೊಳ್ಳಲಿದೆ. ಪಿಯುಸಿ ಪರೀಕ್ಷೆ ಬರೆದ ಎಲ್ಲರಲ್ಲಿ ಕುತೂಹಲ ಮನೆ ಮಾಡಿದೆ.ಫೆಬ್ರವರಿ 28ರಿಂದ ಮಾರ್ಚ್ 17ರ ವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಮಾರ್ಚ್ 20 ರಿಂದ ಪ್ರಾರಂಭಗೊಂಡಿತ್ತು. ಮೌಲ್ಯಮಾಪನ ಕಾರ್ಯವು ಕೆಲವು ದಿನಗಳ ಹಿಂದೆಯೇ ಮುಕ್ತಾಯಗೊಂಡಿತ್ತು. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯನ್ನು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದಾರೆ. ಅಧಿಕೃತ ವೆಬ್‌ಸೈಟ್‌ನಲ್ಲೂ ಫಲಿತಾಂಶ ಪ್ರಕಟ: ನೋಡೋದು ಹೇಗೆ? ಮೊದಲು ಅಧಿಕೃತ ವೆಬ್ ಸೈಟ್ karresults.nic.in ‘ ಗೆ ಭೇಟಿ ನೀಡಿ Karnataka 2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ‘Submit’ ಬಟನ್ ಒತ್ತಿದ…
ಶ್ರೀ ಮೂಕಾಂಬಿಕಾ ಟೈರ್ಸ್ ಆ್ಯಂಡ್ ಅಲೈನ್ ಮೆಂಟ್ ನೂತನ ಮಳಿಗೆ ಉದ್ಘಾಟನೆ – ತೀರ್ಥಹಳ್ಳಿಯ ಎ ಪಿ ರಸ್ತೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರ – ಗಣ್ಯರು, ಗ್ರಾಹಕರ ಸಮ್ಮುಖದಲ್ಲಿ ಉದ್ಘಾಟನೆ ತೀರ್ಥಹಳ್ಳಿ: ತೀರ್ಥಹಳ್ಳಿಯ ಆಜಾದ್ ರಸ್ತೆಯ ಬಿಎನ್ ಕೆ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಮೂಕಾಂಬಿಕಾ ಟೈರ್ಸ್ ಆ್ಯಂಡ್ ಅಲೈನ್ ಮೆಂಟ್ ಮಳಿಗೆಯನ್ನು ತೀರ್ಥಹಳ್ಳಿಯ ಎ ಪಿ ರಸ್ತೆಯಲ್ಲಿರುವ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹೊಸ ಮಳಿಗೆಯ ಉದ್ಘಾಟನಾ ಸಮಾರಂಭವು ದಿನಾಂಕ 8 ಏಪ್ರಿಲ್ 2026ರ ಬುಧವಾರದಂದು ಬೆಳಿಗ್ಗೆ 10:00ಗಂಟೆಗೆ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷರಾದ ರತ್ನಾಕರ ಶೆಟ್ಟಿ, ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಗೀತಾ ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಸೊಪ್ಪುಗುಡ್ಡೆ ರಾಘವೇಂದ್ರ ಮತ್ತು ಶಿವಮೊಗ್ಗದ ರಝಾ ಟೈರ್ಸ್ ಮಾಲೀಕರಾದ ನೂರ್ ಮಹಮ್ಮದ್ ಹುಸೇನ್ ಆಗಮಿಸಿದ್ದರು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ,…
ಆಧುನಿಕ ಯುಗದಲ್ಲಿ ಮತ್ತೆ ಮಣ್ಣಿನ ಮಡಿಕೆಗೆ ಡಿಮ್ಯಾಂಡ್! – ಮಡಿಕೆಯಲ್ಲಿ ತುಂಬಿಸಿದAತಹ ನೀರು ಭಾರಿ ತಂಪು – ಮಡಿಕೆೆಯಲ್ಲಿ ಅಡುಗೆ ಮಾಡಿದರೆ ಹೆಚ್ಚು ರುಚಿಕರ, ಆರೋಗ್ಯಕರ ಬೇಸಿಗೆ ಬಂತೆಂದರೆ ಎಲ್ಲರೂ ತಣ್ಣನೆಯ ಗುಟುಕು ನೀರು ಸಿಕ್ಕರೆ ಸಾಕಪ್ಪ ಎನ್ನುವಂತೆ ಕುಂಬಾರರ ಪ್ರಕೃತಿ ಪ್ರಿಡ್ಜ್ (ಮಣ್ಣಿನ ಮಡಿಕೆ) ಹೆಚ್ಚು ಸಹಕಾರಿಯಾಗಿದೆ. ಈ ಹಿಂದೆ ಬೇಸಿಗೆ ಬಂದರೆ ಎಲ್ಲರೂ ತಣ್ಣನೆ ಮಣ್ಣಿನ ಮಡಕೆ ನೀರು ಕುಡಿಯುತ್ತಿದ್ದವರೇ, ಅದು ಆರೋಗ್ಯಕ್ಕೂ ಹಿತಕರವಾಗಿತ್ತು. ಇತ್ತೀಚೆಗೆ ಆ ಮಣ್ಣಿನ ಮಡಿಕೆಗಳು ಕಡಿಮೆಯಾಗುತ್ತಾ ಪ್ಲಾಸ್ಟಿಕ್ ಬಾಟಲಿ, ಸ್ಪೀಲ್, ಅಲ್ಯೂಮಿನಿಯಂ, ಅಕ್ವಗಾರ್ಡ್ ಹಾಗೂ ಇಲೆಕ್ಟ್ರಾನಿಕ್ ಫ್ರಿಡ್ಜ್ಗಳಲ್ಲಿ ನೀರು ಸಂಗ್ರಹಿಸಿ ಕುಡಿಯುವ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಇದೀಗ ಇತ್ತೀಚಿಗೆ ಮತ್ತೆ ಮಡಿಕೆ, ಮಣ್ಣಿನ ಪಾತ್ರೆಗಳಿಗೆ ಬೇಡಿಕೆ ಹೆಚ್ಚಿದೆ. ಸಾಗಣೆ ಮತ್ತು ಉತ್ಪಾದನೆ ಕಷ್ಟ ಕಷ್ಟ! ಮಡಿಕೆಗಳೊಂದಿಗೆ ಮಣ್ಣಿನಿಂದ ಮಾಡಿದ ವಿವಿಧ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಮಣ್ಣಿನ ಮಡಿಕೆಗಳಿಗೆ ಈ ಹಿಂದೆ ಹೆಚ್ಚು ಬೇಡಿಕೆ ಇತ್ತು. ಇದೀಗ ಬೆಳೆಯುತ್ತಿರುವ ತಂತ್ರಜ್ಞಾನದಿಂದ ಎಲ್ಲರೂ ಎಲೆಕ್ಟ್ರಾನಿಕ್ ಯುಗಕ್ಕೆ…
ಕರಾವಳಿ ಟಾಪ್ ನ್ಯೂಸ್ • ಪುತ್ತೂರು: ಕ್ರೈನ್ ಢಿಕ್ಕಿಯಾಗಿ ವ್ಯಕ್ತಿ ಸಾವು • ಬೈಂದೂರು: ಲಕ್ಷಾಂತರ ರೂಪಾಯಿ ದುರುಪಯೋಗ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ • ಪುತ್ತೂರು: ಕ್ರೈನ್ ಢಿಕ್ಕಿಯಾಗಿ ವ್ಯಕ್ತಿ ಸಾವು ಪುತ್ತೂರು: ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಕ್ರೈನ್ ಢಿಕ್ಕಿ ಹೊಡೆದ ಘಟನೆ, ಮಂಗಳವಾರದಂದು ಕಲ್ಲೇರಿಯಲ್ಲಿ ನಡೆದಿದೆ. ಪರಿಣಾಮವಾಗಿ ವ್ಯಕ್ತಿಯು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಕೊಳ್ತಿಗೆ ನಿವಾಸಿ ಮಹಾಲಿಂಗಮ್ ಎಂದು ಗುರುತಿಸಲಾಗಿದೆ. ಜೋಗಿಬೆಟ್ಟುವಿನಲ್ಲಿದ್ದ ಅವರ ಮಗಳ ಮನೆಗೆ ಬಂದ ಸಂದರ್ಭದಲ್ಲಿ, ಕಲ್ಲೇರಿ ಪ್ರಯಾಣಿಕರ ತಂಗುದಾಣದಲ್ಲಿ ನಿಂತಿದ್ದರು. ಆಗ ಗುರುವಾಯನಕೆರೆಯಿಂದ ಉಪ್ಪಿನಂಗಡಿಯ ಕಡೆಗೆ ತೆರಳುತ್ತಿದ್ದ ಕ್ರೈನ್ ಮಹಾಲಿಂಗಮ್ ಅವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಮಹಾಲಿಂಗಮ್ ಅವರು ರಸ್ತೆಗೆ ಬಿದ್ದಿದ್ದು, ವೇಗವಾಗಿ ಚಲಿಸುತ್ತಿದ್ದ ಕ್ರೈನ್ ಅವರ ತಲೆಯ ಮೇಲೆ ಹರಿದುಹೋಗಿದೆ ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಪುತ್ತೂರು ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆಯನ್ನು ನಡೆಸಿ, ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. • ಬೈಂದೂರು:…



