Author: NammurEXP

ಯುದ್ಧ ಮುಗಿಯಲ್ಲ.. ಬದುಕು ಉಳಿಯಲ್ಲ..! – ಭಾರತದಲ್ಲಿ ಯುದ್ಧದ ಎಫೆಕ್ಟ್: ಉದ್ಯಮ ತಳಮಳ – ಇನ್ನು ಭಾರತ ಗಟ್ಟಿ ಆಗದಿದ್ದರೆ ಭವಿಷ್ಯ ಕತ್ತಲು! – ಲಕ್ಷ ಲಕ್ಷ ಉದ್ಯೋಗ ಕಡಿತ: ಉದ್ಯಮಗಳಿಗೆ ನಷ್ಟ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಅಮೇರಿಕಾ ಇರಾನ್ ಯುದ್ಧ ಇದೀಗ ಜಗತ್ತಿನ ಎಲ್ಲೆಡೆ ಸಮಸ್ಯೆ ತಂದಿಟ್ಟಿದೆ. ಎರಡು ಮೂರು ವಾರಗಳಲ್ಲಿ ಭೀಕರ ದಾಳಿ ಮಾಡುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಇರಾನ್ ನೊಂದಿಗಿನ ಯುದ್ಧವನ್ನು ಇನ್ನು ಕೆಲವೇ ದಿನಗಳಲ್ಲಿ ಕೊನೆಗೊಳಿಸಲಿದ್ದೇವೆ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವ ಬೆನ್ನಲ್ಲೇ, ಇನ್ನು ಎರಡು ಮೂರು ವಾರಗಳಲ್ಲಿ ಇರಾನ್ ಮೇಲೆ ಉಗ್ರ ದಾಳಿಯೊಂದನ್ನು ನಡೆಸಲಿದ್ದೇವೆ ಎಂದಿದ್ದಾರೆ. ಈಗಾಗಲೇ ಹಲವಾರು ದಿನಗಳಿಂದ ನಡೆಸಿದ ಯುದ್ಧದಲ್ಲಿ ಇರಾನ್ ನ ನೌಕಾಪಡೆ ವಾಯುಪಡೆಗಳನ್ನು ಧ್ವಂಸಗೊಳಿಸಿದ್ದೇವೆ. ಇರಾನ್ ಒಪ್ಪಂದಕ್ಕೆ ಒಪ್ಪಿದರೆ ಯುದ್ಧವನ್ನು ನಿಲ್ಲಿಸುತ್ತೇವೆ. ಇಲ್ಲವೆಂದಾದಲ್ಲಿ ಅದರ ವಿದ್ಯುತ್ ಘಟಕಗಳನ್ನು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಹಾರ್ಮಜ್ ನಿಂದ ನಮಗೆ ಇಂಧನದ…

Read More

ಸತ್ಯ ಮತ್ತು ತ್ಯಾಗದ ಪ್ರತೀಕ ‘ಗುಡ್ ಫ್ರೈಡೇ’: ಏಸು ಕ್ರಿಸ್ತನ ಬಲಿದಾನದ ಸ್ಮರಣೆಯ ದಿನ – ಉಪವಾಸ, ಪ್ರಾರ್ಥನೆ ಮತ್ತು ತ್ಯಾಗ: ಕ್ರೈಸ್ತ ಬಾಂಧವರಿಂದ ಪವಿತ್ರ ‘ಗುಡ್ ಫ್ರೈಡೇ’ ಆಚರಣೆ – ಗುಡ್ ಫ್ರೈ ಡೇ ಎಲ್ಲರಲ್ಲೂ ಮಾನವೀಯತೆ ತರಲಿ ದೈವದ ಒಂದು ಅಂಶವಾಗಿ ಬಡ ತಂದೆ ತಾಯಿಗಳ ಮಗನಾಗಿ, ಗೋದಲಿಯಲ್ಲಿ ಜನ್ಮ ತಾಳಿದರು ಜೀಸಸ್. ಬದುಕಿನುದ್ದಕ್ಕೂ ಅನೇಕ ನೋವು, ಹಿಂಸೆಗಳನ್ನು ಎದುರಿಸಿದ ಸಹನಾಮೂರ್ತಿ. ತನ್ನದೇ ಆದ ತತ್ವ, ಸಂದೇಶಗಳ ಮೂಲಕ ನೂರಾರು ಅನುಯಾಯಿಗಳನ್ನು ಪಡೆದು, ಜಗತ್ತಿಗೆ ಶಾಂತಿ, ಪ್ರೀತಿ, ಕರುಣೆಯಂತಹ ಅತ್ಯಮೂಲ್ಯ ಅಂಶಗಳನ್ನು ಸಾರುವಂತೆ ಅವರನ್ನು ತಯಾರಿಸಿದ ಗುರು. ಸತ್ಯ, ತ್ಯಾಗ, ವಾತ್ಸಲ್ಯ ಎನ್ನುವ ಉತ್ತಮ ಗುಣಗಳನ್ನು ಅಳವಡಿಸಿಕೊಂಡಿದ್ದರ ಪರಿಣಾಮವಾಗಿ ಶತೃಗಳ ಕೆಂಗಣ್ಣಿಗೆ ಗುರಿಯಾದನು ಈ ಅವಧೂತ. ಫಲವಾಗಿ ಪ್ಲಸ್ ಆಕಾರದ ಮರದ ತುಂಡಿಗೆ ಮೊಳೆ ಹೊಡೆಸಿಕೊಂಡು, ಮುಳ್ಳಿನ ಕಿರೀಟವನ್ನು ಶಿರದಲ್ಲಿ ಧರಿಸಿ, ಅತ್ಯಂತ ಕ್ರೂರ ರೀತಿಯಲ್ಲಿ, ಹಿಂಸಾತ್ಮಕವಾಗಿ ತನ್ನ ಕೊನೆಯ ಕ್ಷಣವನ್ನು ಕಳೆಯಬೇಕಾದ ಸನ್ನಿವೇಶ ಎದುರಿಸುವಂತಾಯಿತು. ಅಂತಹ ಪ್ರತಿಕೂಲ…

Read More

ಶಿರೂರು ಗಣಪತಿ ದೇವಸ್ಥಾನದಲ್ಲಿ ಧಾರ್ಮಿಕ ರಂಗು! – ಶ್ರೀಮಹಾ ಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಳಶೋತ್ಸವ ಏಪ್ರಿಲ್ 2 ರಿಂದ ಆರಂಭ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೈಂದೂರು: ಶಿರೂರಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀಮಹಾಗಣಪತಿ ದೇವಾಲಯದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಳಶೋತ್ಸವವನ್ನು ಏಪ್ರಿಲ್ 2 ಗುರುವಾರದಿಂದ ಏಪ್ರಿಲ್ 14ರ ಮಂಗಳವಾರದವರೆಗೆ ಹಮ್ಮಿಕೊಳ್ಳಲಾಗಿದೆ. ಇದರ ಪ್ರಯುಕ್ತ ಏಪ್ರಿಲ್ 2ರ ಗುರುವಾರದಂದು ಬೆಳಿಗ್ಗೆ ದೇವಾಲಯದಲ್ಲಿ ವೇದಮೂರ್ತಿ ಶ್ರೀರಾಮಚಂದ್ರ ಪರಂಭಟ್ಟ ಶಿರಾಲಿ ತಂತ್ರಿವರ್ಯರ ನೇತೃತ್ವದಲ್ಲಿ ಚಪ್ಪರ ಮುಹೂರ್ತ ಹಾಗೂ ಧಾರ್ಮಿಕ ಪೂಜಾ ವಿಧಿವಿಧಾನಗಳು ನೆರವೇರಿತು. ಈ ಸಂದರ್ಭದಲ್ಲಿ ಶ್ರೀಮಹಾಗಣಪತಿ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ರಾಮ ಎನ್ ಅಳ್ವೆಗದ್ದೆ, ಶ್ರೀಮಹಾಗಣಪತಿ ದೇವಾಲಯದ ಅಧ್ಯಕ್ಷರಾದ ಗಣಪತಿ ಎಸ್ ಮೊಗವೀರ, ಶ್ರೀಬೊಬ್ಬರ್ಯ ದೇವಸ್ಥಾನದ ಅಧ್ಯಕ್ಷರಾದ ಶ್ರೀಪಾದ ಕುಮಾರ್, ಊರಿನ ಹಿರಿಯರಾದ ನಾರಾಯಣ ಟಿ ಅಳ್ವೆಗದ್ದೆ ಹಾಗೂ ಸಮಿತಿಯ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು, ಊರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.

Read More

ಕರಾವಳಿ ಟಾಪ್ ನ್ಯೂಸ್ • ಉಡುಪಿ: ಆರೋಪಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ • ಕುಂದಾಪುರ: ಪ್ರೌಢಶಾಲಾ ವಿದ್ಯಾರ್ಥಿ ಆತ್ಮಹತ್ಯೆ ಉಡುಪಿ: ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕೋಕಾ ಕಾಯ್ದೆಯಡಿಯಲ್ಲಿ ಏಳು ಮಂದಿ ಆರೋಪಿಗಳಾದ ಸುರತ್ಕಲ್ ಕಾಟಿಪಳ್ಳದ ದೇವಿ ಪ್ರಸಾದ್ ಶೆಟ್ಟಿ, ಸುದೀಪ್, ಮಿಥುನ್ ಕೈಕಂಬ, ಕೃಷ್ಣಾಪುರದ ಶ್ರೀಶಾ ಆನಂದ ಶೆಟ್ಟಿ, ಹಿರಿಯಡ್ಕ ಅಂಜಾರು ಗ್ರಾಮದ ಸುಜಿತ್, ಕೆಮ್ಮಣ್ಣು ಗ್ರಾಮ ಪಡುಕುದ್ರುವಿನ ಸುಹಾಸ್ ಮತ್ತು ಕೆಮ್ಮಣ್ಣು ಹೂಡೆಯ ಮನೋಜ್ ವಿ ಕೊಟ್ಯಾನ್ ಅವರನ್ನು ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳಾದ ಮಂಗಳೂರಿನ ಜೋಕಟ್ಟೆಯ ಮನೋಜ್ ಕೋಡಿಕೆರೆ ಮತ್ತು ಬಂಟ್ವಾಳದ ಪಡು ರೊಟ್ಟಿಗುಡಿಯ ಚೇತನ್ ಕುಲಾಲ್ ಅವರು ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ, ಒಂದು ಮಹತ್ವದ ಕ್ರಮವನ್ನು ಕೈಗೊಂಡಿದ್ದಾರೆ. ಇಬ್ಬರು ಆರೋಪಿಗಳ ಪತ್ತೆಗಾಗಿ ಶೋಧನಾ ಕಾರ್ಯವನ್ನು ಆರಂಭಿಸಿದ್ದರೂ ಕೂಡ, ಪೊಲೀಸರು ಈ ಆರೋಪಿಗಳನ್ನು ಹುಡುಕಿಕೊಟ್ಟವರಿಗೆ 50.000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಆರೋಪಿಗಳನ್ನು ಸೆರೆಹಿಡಿಯಲು ರಾಜ್ಯದ ಕೆಲವು…

Read More

ಕರಾವಳಿಯಲ್ಲಿ ಬಿಸಿಲ ಧಕ್ಕೆ: ‘ಹೀಟ್ ಸ್ಟ್ರೋಕ್’ ಭೀತಿ, ಆರೋಗ್ಯ ಇಲಾಖೆ ಫುಲ್ ಅಲರ್ಟ್! – ಜಾಗ್ರತೆ! ಕರಾವಳಿಯಲ್ಲಿ ಹೆಚ್ಚುತ್ತಿದೆ ಬಿಸಿಲಿನ ತಾಪ; ಹೀಟ್ ಸ್ಟ್ರೋಕ್‌ನಿಂದ ರಕ್ಷಿಸಿಕೊಳ್ಳುವುದು ಹೇಗೆ? – ಸುಡುವ ಬಿಸಿಲಿಗೆ ಬೆಚ್ಚಿಬಿದ್ದ ಮಂಗಳೂರು: ಆರೋಗ್ಯ ಇಲಾಖೆಯ ಹೊಸ ಮಾರ್ಗಸೂಚಿಗಳೇನು? – ಬಿಸಿಲಿನಿಂದ ಅಸ್ವಸ್ಥರಾದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಮಾಹಿತಿ. ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ದಿನೇ ದಿನೇ ಸೂರ್ಯನ ಪ್ರಖರತೆ ಹೆಚ್ಚುತ್ತಿದ್ದು, ತಾಪಮಾನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಸುಡುವ ಬಿಸಿಲಿನಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದು, ಇದೀಗ ‘ಹೀಟ್ ಸ್ಟ್ರೋಕ್’ (ಬಿಸಿಲಿನ ಧಕ್ಕೆ) ಆತಂಕ ಎದುರಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಆರೋಗ್ಯ ಇಲಾಖೆಯು ಕಡಲ ನಗರಿಯ ಜನರ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ವೆನ್ಲಾಕ್‌ನಲ್ಲಿ ವಿಶೇಷ ವಾರ್ಡ್ ಸಿದ್ಧ ಬಿಸಿಲಿನ ತಾಪದಿಂದ ಅಸ್ವಸ್ಥರಾಗುವವರಿಗೆ ತುರ್ತು ಚಿಕಿತ್ಸೆ ನೀಡಲು ಸನ್ನದ್ಧವಾಗಿರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 4 ವಿಶೇಷ ಬೆಡ್‌ಗಳನ್ನು ಮೀಸಲಿಡಲಾಗಿದೆ. ಅಲ್ಲದೆ,…

Read More

ಫಾದರ್ ವೀರೇಶ್ ವಿಕ್ಟರ್ ಮೊರಾಸ್ ಅವರಿಗೆ ಡಾಕ್ಟರೇಟ್ – ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಹೆಚ್‌ಡಿ ಪದವಿ ಪ್ರದಾನ – 25 ವರ್ಷಗಳಿಂದ ಸಮಾಜ ಸೇವೆ, ಸಮುದಾಯ ಸಬಲೀಕರಣ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಶಿವಮೊಗ್ಗ/ ತೀರ್ಥಹಳ್ಳಿ: ಶಿವಮೊಗ್ಗ ಕ್ರೆಸ್ತ ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ತೀರ್ಥಹಳ್ಳಿ ಲೂರ್ದು ಮಾತೆ ಚರ್ಚ್ ನ ಧರ್ಮಗುರುಗಳಾಗಿರುವ ಫಾದರ್ ವೀರೇಶ್ ವಿಕ್ಟರ್ ಮೊರಾಸ್ ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿಹೆಚ್‌ಡಿ) ಪದವಿಯನ್ನು ಅಧಿಕೃತ ಅಧಿಸೂಚನೆಯ ಮೂಲಕ ಪ್ರದಾನ ಮಾಡಿದೆ. “ಕೊರಗ ಸಮುದಾಯದ ಸಬಲೀಕರಣದಲ್ಲಿ ಕ್ಯಾಥೊಲಿಕ್ ಚರ್ಚಿನ ಪಾತ್ರ: ಒಂದು ಸಮಾಜಶಾಸ್ತಿಯ ಅಧ್ಯಯನ” ಎಂಬ ವಿಷಯದ ಮೇಲೆ ಅವರು ತಮ್ಮ ಸಂಶೋಧನೆಯನ್ನು ನಡೆಸಿದ್ದಾರೆ. ಕರ್ನಾಟಕದ ಅತ್ಯಂತ ಹಿಂದುಳಿದ ಆದಿವಾಸಿ ಸಮುದಾಯಗಳಲ್ಲಿ ಒಂದಾದ ಕೊರಗ ಸಮುದಾಯದ ಅಭಿವೃದ್ಧಿಯಲ್ಲಿ ಚರ್ಚಿನ ಮಹತ್ವದ ಪಾತ್ರವನ್ನು ಈ ಸಂಶೋಧನೆ ಬೆಳಕಿಗೆ ತರುತ್ತದೆ. ಕುವೆಂಪು ವಿಶ್ವವಿದ್ಯಾನಿಲಯದ ಸಮಾಜಶಾಸ್ತ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ್ ಮಾರ್ಗದರ್ಶನ ನೀಡಿದ್ದರು.…

Read More

ಕಾಫಿನಾಡಿನಲ್ಲಿ ಮುಂದುವರಿದ ವರುಣನ ಆರ್ಭಟ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್! * ಕಾಫಿನಾಡಿನಲ್ಲಿ ಮುಂದಿನ 7 ದಿನ ಮಳೆ ಮುನ್ಸೂಚನೆ. * ಗಾಳಿ ಮಳೆಗೆ ಹಲವು ಮನೆಗಳ ಹೆಂಚುಗಳು ಧರಾಶಾಹಿ. * ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಮನವಿ. ಚಿಕ್ಕಮಗಳೂರು: ಮಲೆನಾಡಿನ ಪ್ರಮುಖ ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕಾಫಿನಾಡಿನಲ್ಲಿ ಮುಂದಿನ ಒಂದು ವಾರಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಬೀಸುತ್ತಿರುವ ಪ್ರಬಲ ಗಾಳಿಗೆ ಮನೆಗಳ ಹೆಂಚುಗಳು ಹಾರಿಹೋಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದ ವರದಿಗಳು ಲಭ್ಯವಾಗಿವೆ. ಅನಿರೀಕ್ಷಿತ ಗಾಳಿ-ಮಳೆಯಿಂದಾಗಿ ಸಂಕಷ್ಟಕ್ಕೀಡಾಗಿರುವ ನಿವಾಸಿಗಳು ಆತಂಕದಲ್ಲಿದ್ದಾರೆ. ಧಾರಾಕಾರ ಮಳೆ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳು ಮತ್ತು ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಸಂಚರಿಸುವವರು ಜಾಗರೂಕರಾಗಿರಬೇಕು ಎಂದು ಸ್ಥಳೀಯ ಆಡಳಿತ ಸೂಚನೆ ನೀಡಿದೆ.

Read More

ಡಿಟೆಕ್ಟಿವ್ ದಿವಾಕರ್ ತುಳು ಚಲನಚಿತ್ರದ ಟೀಸರ್ ಲಾಂಚ್! – ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಟೀಸರ್ ಲಾಂಚ್, ಪೋಸ್ಟರ್ ಬಿಡುಗಡೆ – ವಿಭಾ ಪ್ರೊಡಕ್ಷನ್ ಅಡಿಯಲ್ಲಿ ಕರಾವಳಿ ಕಲಾವಿದರ ನಟನೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕರ್ನಾಟಕದ ಸುಂದರ ಕರಾವಳಿ ಪ್ರದೇಶವಾದ ಕಾರ್ಕಳವು ಸಾಂಸ್ಕೃತಿಕ ವೈಭವ, ಪ್ರಕೃತಿ ಸೌಂದರ್ಯ ಮತ್ತು ಶಾಂತ ವಾತಾವರಣಕ್ಕೆ ಪ್ರಸಿದ್ಧಿ. ಇದೇ ಊರಲ್ಲಿ ರಹಸ್ಯ ಸಂಚು ಮತ್ತು ಸತ್ಯದ ಹುಡುಕಾಟದಿಂದ ತುಂಬಿರುವ ಒಂದು ವಿಭಿನ್ನ ಕಥೆ ಮೂಡಿಬರುತ್ತದೆ ಅದೇ ‘ ಡಿಟೆಕ್ಟಿವ್ ದಿವಾಕರ್ ‘. ಈ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ ಮಾ.28ರ ಶನಿವಾರ ನೆರವೇರಿತು. ಕಾರ್ಯಕ್ರಮ ಅತಿಥಿಗಳಿಂದ ಜ್ಯೋತಿ ಬೆಳಗುವುದರ ಮುಖೇನ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅತಿಥಿಗಳಲ್ಲಿ ಓರ್ವರಾದ ಡಾ.ರವೀಂದ್ರ ಶೆಟ್ಟಿ ಬಜಗೋಳಿಯವರು “ನಮ್ಮ ನೆಲದ ಕಥೆಯನ್ನು ಹೇಳುವ ಈ ಚಲನಚಿತ್ರವು ಮುಂದಿನ ತಲೆಮಾರಿಗೆ ಒಂದು ಉತ್ತಮ ಸಂದೇಶವನ್ನು ನೀಡಲಿದೆ “ಎಂದು ತಿಳಿಸುತ್ತಾ ಇಡೀ…

Read More

ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಮೂಗುದಾರ! – ರಾಜ್ಯದಲ್ಲಿ ಸಿದ್ಧಗೊಂಡ ನಿಯಮಾವಳಿ: ಏನಿದು ನಿಯಮ? – ಮಕ್ಕಳಲ್ಲಿ ಮೊಬೈಲ್ ಚಟ ಕಡಿಮೆ ಮಾಡಲು ಮಾಸ್ಟರ್ ಪ್ಲಾನ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಚಟ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಸುವಷ್ಟರ ಮಟ್ಟಿಗೆ ಪಳಗಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಈ ಹಿಂದೆ ಕೆಲವು ನಿಯಮಾವಳಿಗಳನ್ನು ತರಲು ನಿರ್ಧರಿಸಿರುವ ಕುರಿತು ಮಾಹಿತಿ ನೀಡಿತ್ತು. ಇದೀಗ ನಿಯಮ ಮತ್ತು ಕೆಲವು ಕ್ರಮಗಳು ಸಿದ್ಧಗೊಂಡಿದೆ ಎನ್ನುವ ಮಾಹಿತಿ ಲಭಿಸಿದೆ. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು “ಮಕ್ಕಳು ಜವಾಬ್ದಾರಿಯಿಂದ ಸಾಮಾಜಿಕ ಜಾಲತಾಣಗಳನ್ನು ಬಳಸುವಂತೆ ಮಾಡಲು ಶಿಕ್ಷಕರಿಗೆ ತರಬೇತಿ, ಪೋಷಕರಿಗೆ ತಿಳಿವಳಿಕೆ ಮತ್ತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಕರಡು ನೀತಿಯನ್ನು ಸಿದ್ಧಪಡಿಸಲಾಗಿದೆ. ಅತಿಯಾಗಿ ಜಾಲತಾಣಗಳನ್ನು ಬಳಸುವ ವಿದ್ಯಾರ್ಥಿಗಳಲ್ಲಿ ಉದ್ವೇಗ, ನಿದ್ರಾಹೀನತೆ, ಏಕಾಗ್ರತೆಯ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ. ಪರಿಣಾಮವಾಗಿ ಸಮಾಜದಲ್ಲಿ ಪ್ರತ್ಯೇಕ ಮನೋಭಾವ ಬೆಳೆಯಲು, ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗುತ್ತಿದೆ.…

Read More

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ, ಕಸ ಎಸೆದರೆ ದಂಡ! – ದೆಹಲಿಯಲ್ಲಿ ಹೊಸ ನಿಯಮ: ಮುಂದೆ ಎಲ್ಲಾ ಕಡೆ ಇದೇ ನಿಯಮ ಸಾಧ್ಯತೆ – ಕರ್ಕಶ ಹಾರ್ನ್, ಶಬ್ದ ಮಾಡಿದರೂ ದಂಡ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: ಇನ್ನು ಮುಂದೆ ದೇಶದ ರಾಜಧಾನಿ ನವ ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ, ಕಸ ಎಸೆದರೆ 500ರೂಪಾಯಿ ದಂಡ ವಿಧಿಸುವ ಮಸೂದೆಯನ್ನು ಲೋಕಸಭೆಯು ಅಂಗೀಕರಿಸಿದೆ. ಪ್ರಸ್ತುತ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1957ರ ಅನ್ವಯ ಈ ರೀತಿಯ ಕೃತ್ಯಕ್ಕೆ 50 ರೂಪಾಯಿ ದಂಡ ವಿಧಿಸಲಾಗುತ್ತಿತ್ತು, ಜನ್ ವಿಶ್ವಾಸ್ ಬಿಲ್ 2025 ಕಾಯ್ದೆಯು ಜಾರಿಗೆ ಬಂದಲ್ಲಿ ಇದರ ಮೊತ್ತ 10 ಪಟ್ಟು ಹೆಚ್ಚಲಿದೆ ಎನ್ನುವ ಮಾಹಿತಿ ಲಭಿಸಿದೆ. ಜನರಲ್ಲಿ ನಾಗರಿಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಜಿತಿನ್ ಪ್ರಸಾದ್ ಅವರು ಈ ತಿದ್ದುಪಡಿಯನ್ನು ಮಂಡಿಸಿ, ಲೋಕಸಭೆಯಿಂದ ಅಂಗೀಕಾರವನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಕೇವಲ ಮೂತ್ರ ವಿಸರ್ಜನೆ ಮತ್ತು…

Read More