Author: NammurEXP

ಕರಾವಳಿ ಟಾಪ್ ನ್ಯೂಸ್ • ಉಡುಪಿ: ಆರೋಪಿ ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ • ಕುಂದಾಪುರ: ಪ್ರೌಢಶಾಲಾ ವಿದ್ಯಾರ್ಥಿ ಆತ್ಮಹತ್ಯೆ ಉಡುಪಿ: ಕಳೆದ ಕೆಲವು ತಿಂಗಳುಗಳ ಹಿಂದೆ ನಡೆದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಕೋಕಾ ಕಾಯ್ದೆಯಡಿಯಲ್ಲಿ ಏಳು ಮಂದಿ ಆರೋಪಿಗಳಾದ ಸುರತ್ಕಲ್ ಕಾಟಿಪಳ್ಳದ ದೇವಿ ಪ್ರಸಾದ್ ಶೆಟ್ಟಿ, ಸುದೀಪ್, ಮಿಥುನ್ ಕೈಕಂಬ, ಕೃಷ್ಣಾಪುರದ ಶ್ರೀಶಾ ಆನಂದ ಶೆಟ್ಟಿ, ಹಿರಿಯಡ್ಕ ಅಂಜಾರು ಗ್ರಾಮದ ಸುಜಿತ್, ಕೆಮ್ಮಣ್ಣು ಗ್ರಾಮ ಪಡುಕುದ್ರುವಿನ ಸುಹಾಸ್ ಮತ್ತು ಕೆಮ್ಮಣ್ಣು ಹೂಡೆಯ ಮನೋಜ್ ವಿ ಕೊಟ್ಯಾನ್ ಅವರನ್ನು ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳಾದ ಮಂಗಳೂರಿನ ಜೋಕಟ್ಟೆಯ ಮನೋಜ್ ಕೋಡಿಕೆರೆ ಮತ್ತು ಬಂಟ್ವಾಳದ ಪಡು ರೊಟ್ಟಿಗುಡಿಯ ಚೇತನ್ ಕುಲಾಲ್ ಅವರು ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ, ಒಂದು ಮಹತ್ವದ ಕ್ರಮವನ್ನು ಕೈಗೊಂಡಿದ್ದಾರೆ. ಇಬ್ಬರು ಆರೋಪಿಗಳ ಪತ್ತೆಗಾಗಿ ಶೋಧನಾ ಕಾರ್ಯವನ್ನು ಆರಂಭಿಸಿದ್ದರೂ ಕೂಡ, ಪೊಲೀಸರು ಈ ಆರೋಪಿಗಳನ್ನು ಹುಡುಕಿಕೊಟ್ಟವರಿಗೆ 50.000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಆರೋಪಿಗಳನ್ನು ಸೆರೆಹಿಡಿಯಲು ರಾಜ್ಯದ ಕೆಲವು…

Read More

ಕರಾವಳಿಯಲ್ಲಿ ಬಿಸಿಲ ಧಕ್ಕೆ: ‘ಹೀಟ್ ಸ್ಟ್ರೋಕ್’ ಭೀತಿ, ಆರೋಗ್ಯ ಇಲಾಖೆ ಫುಲ್ ಅಲರ್ಟ್! – ಜಾಗ್ರತೆ! ಕರಾವಳಿಯಲ್ಲಿ ಹೆಚ್ಚುತ್ತಿದೆ ಬಿಸಿಲಿನ ತಾಪ; ಹೀಟ್ ಸ್ಟ್ರೋಕ್‌ನಿಂದ ರಕ್ಷಿಸಿಕೊಳ್ಳುವುದು ಹೇಗೆ? – ಸುಡುವ ಬಿಸಿಲಿಗೆ ಬೆಚ್ಚಿಬಿದ್ದ ಮಂಗಳೂರು: ಆರೋಗ್ಯ ಇಲಾಖೆಯ ಹೊಸ ಮಾರ್ಗಸೂಚಿಗಳೇನು? – ಬಿಸಿಲಿನಿಂದ ಅಸ್ವಸ್ಥರಾದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಮಾಹಿತಿ. ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ದಿನೇ ದಿನೇ ಸೂರ್ಯನ ಪ್ರಖರತೆ ಹೆಚ್ಚುತ್ತಿದ್ದು, ತಾಪಮಾನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಸುಡುವ ಬಿಸಿಲಿನಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದು, ಇದೀಗ ‘ಹೀಟ್ ಸ್ಟ್ರೋಕ್’ (ಬಿಸಿಲಿನ ಧಕ್ಕೆ) ಆತಂಕ ಎದುರಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಆರೋಗ್ಯ ಇಲಾಖೆಯು ಕಡಲ ನಗರಿಯ ಜನರ ಸುರಕ್ಷತೆಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ವೆನ್ಲಾಕ್‌ನಲ್ಲಿ ವಿಶೇಷ ವಾರ್ಡ್ ಸಿದ್ಧ ಬಿಸಿಲಿನ ತಾಪದಿಂದ ಅಸ್ವಸ್ಥರಾಗುವವರಿಗೆ ತುರ್ತು ಚಿಕಿತ್ಸೆ ನೀಡಲು ಸನ್ನದ್ಧವಾಗಿರುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ 4 ವಿಶೇಷ ಬೆಡ್‌ಗಳನ್ನು ಮೀಸಲಿಡಲಾಗಿದೆ. ಅಲ್ಲದೆ,…

Read More

ಫಾದರ್ ವೀರೇಶ್ ವಿಕ್ಟರ್ ಮೊರಾಸ್ ಅವರಿಗೆ ಡಾಕ್ಟರೇಟ್ – ಕುವೆಂಪು ವಿಶ್ವವಿದ್ಯಾನಿಲಯದಿಂದ ಪಿಹೆಚ್‌ಡಿ ಪದವಿ ಪ್ರದಾನ – 25 ವರ್ಷಗಳಿಂದ ಸಮಾಜ ಸೇವೆ, ಸಮುದಾಯ ಸಬಲೀಕರಣ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಶಿವಮೊಗ್ಗ/ ತೀರ್ಥಹಳ್ಳಿ: ಶಿವಮೊಗ್ಗ ಕ್ರೆಸ್ತ ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ತೀರ್ಥಹಳ್ಳಿ ಲೂರ್ದು ಮಾತೆ ಚರ್ಚ್ ನ ಧರ್ಮಗುರುಗಳಾಗಿರುವ ಫಾದರ್ ವೀರೇಶ್ ವಿಕ್ಟರ್ ಮೊರಾಸ್ ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಫಿಲಾಸಫಿ (ಪಿಹೆಚ್‌ಡಿ) ಪದವಿಯನ್ನು ಅಧಿಕೃತ ಅಧಿಸೂಚನೆಯ ಮೂಲಕ ಪ್ರದಾನ ಮಾಡಿದೆ. “ಕೊರಗ ಸಮುದಾಯದ ಸಬಲೀಕರಣದಲ್ಲಿ ಕ್ಯಾಥೊಲಿಕ್ ಚರ್ಚಿನ ಪಾತ್ರ: ಒಂದು ಸಮಾಜಶಾಸ್ತಿಯ ಅಧ್ಯಯನ” ಎಂಬ ವಿಷಯದ ಮೇಲೆ ಅವರು ತಮ್ಮ ಸಂಶೋಧನೆಯನ್ನು ನಡೆಸಿದ್ದಾರೆ. ಕರ್ನಾಟಕದ ಅತ್ಯಂತ ಹಿಂದುಳಿದ ಆದಿವಾಸಿ ಸಮುದಾಯಗಳಲ್ಲಿ ಒಂದಾದ ಕೊರಗ ಸಮುದಾಯದ ಅಭಿವೃದ್ಧಿಯಲ್ಲಿ ಚರ್ಚಿನ ಮಹತ್ವದ ಪಾತ್ರವನ್ನು ಈ ಸಂಶೋಧನೆ ಬೆಳಕಿಗೆ ತರುತ್ತದೆ. ಕುವೆಂಪು ವಿಶ್ವವಿದ್ಯಾನಿಲಯದ ಸಮಾಜಶಾಸ್ತ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ್ ಮಾರ್ಗದರ್ಶನ ನೀಡಿದ್ದರು.…

Read More

ಕಾಫಿನಾಡಿನಲ್ಲಿ ಮುಂದುವರಿದ ವರುಣನ ಆರ್ಭಟ: ಹವಾಮಾನ ಇಲಾಖೆಯಿಂದ ಹೈ ಅಲರ್ಟ್! * ಕಾಫಿನಾಡಿನಲ್ಲಿ ಮುಂದಿನ 7 ದಿನ ಮಳೆ ಮುನ್ಸೂಚನೆ. * ಗಾಳಿ ಮಳೆಗೆ ಹಲವು ಮನೆಗಳ ಹೆಂಚುಗಳು ಧರಾಶಾಹಿ. * ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಮನವಿ. ಚಿಕ್ಕಮಗಳೂರು: ಮಲೆನಾಡಿನ ಪ್ರಮುಖ ಜಿಲ್ಲೆಯಾದ ಚಿಕ್ಕಮಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕಾಫಿನಾಡಿನಲ್ಲಿ ಮುಂದಿನ ಒಂದು ವಾರಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜಿಲ್ಲೆಯ ಹಲವು ಭಾಗಗಳಲ್ಲಿ ಬೀಸುತ್ತಿರುವ ಪ್ರಬಲ ಗಾಳಿಗೆ ಮನೆಗಳ ಹೆಂಚುಗಳು ಹಾರಿಹೋಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾದ ವರದಿಗಳು ಲಭ್ಯವಾಗಿವೆ. ಅನಿರೀಕ್ಷಿತ ಗಾಳಿ-ಮಳೆಯಿಂದಾಗಿ ಸಂಕಷ್ಟಕ್ಕೀಡಾಗಿರುವ ನಿವಾಸಿಗಳು ಆತಂಕದಲ್ಲಿದ್ದಾರೆ. ಧಾರಾಕಾರ ಮಳೆ ಮುಂದುವರಿಯಲಿರುವ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳು ಮತ್ತು ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಸಂಚರಿಸುವವರು ಜಾಗರೂಕರಾಗಿರಬೇಕು ಎಂದು ಸ್ಥಳೀಯ ಆಡಳಿತ ಸೂಚನೆ ನೀಡಿದೆ.

Read More

ಡಿಟೆಕ್ಟಿವ್ ದಿವಾಕರ್ ತುಳು ಚಲನಚಿತ್ರದ ಟೀಸರ್ ಲಾಂಚ್! – ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಟೀಸರ್ ಲಾಂಚ್, ಪೋಸ್ಟರ್ ಬಿಡುಗಡೆ – ವಿಭಾ ಪ್ರೊಡಕ್ಷನ್ ಅಡಿಯಲ್ಲಿ ಕರಾವಳಿ ಕಲಾವಿದರ ನಟನೆ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಕರ್ನಾಟಕದ ಸುಂದರ ಕರಾವಳಿ ಪ್ರದೇಶವಾದ ಕಾರ್ಕಳವು ಸಾಂಸ್ಕೃತಿಕ ವೈಭವ, ಪ್ರಕೃತಿ ಸೌಂದರ್ಯ ಮತ್ತು ಶಾಂತ ವಾತಾವರಣಕ್ಕೆ ಪ್ರಸಿದ್ಧಿ. ಇದೇ ಊರಲ್ಲಿ ರಹಸ್ಯ ಸಂಚು ಮತ್ತು ಸತ್ಯದ ಹುಡುಕಾಟದಿಂದ ತುಂಬಿರುವ ಒಂದು ವಿಭಿನ್ನ ಕಥೆ ಮೂಡಿಬರುತ್ತದೆ ಅದೇ ‘ ಡಿಟೆಕ್ಟಿವ್ ದಿವಾಕರ್ ‘. ಈ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ ಮಾ.28ರ ಶನಿವಾರ ನೆರವೇರಿತು. ಕಾರ್ಯಕ್ರಮ ಅತಿಥಿಗಳಿಂದ ಜ್ಯೋತಿ ಬೆಳಗುವುದರ ಮುಖೇನ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅತಿಥಿಗಳಲ್ಲಿ ಓರ್ವರಾದ ಡಾ.ರವೀಂದ್ರ ಶೆಟ್ಟಿ ಬಜಗೋಳಿಯವರು “ನಮ್ಮ ನೆಲದ ಕಥೆಯನ್ನು ಹೇಳುವ ಈ ಚಲನಚಿತ್ರವು ಮುಂದಿನ ತಲೆಮಾರಿಗೆ ಒಂದು ಉತ್ತಮ ಸಂದೇಶವನ್ನು ನೀಡಲಿದೆ “ಎಂದು ತಿಳಿಸುತ್ತಾ ಇಡೀ…

Read More

ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಮೂಗುದಾರ! – ರಾಜ್ಯದಲ್ಲಿ ಸಿದ್ಧಗೊಂಡ ನಿಯಮಾವಳಿ: ಏನಿದು ನಿಯಮ? – ಮಕ್ಕಳಲ್ಲಿ ಮೊಬೈಲ್ ಚಟ ಕಡಿಮೆ ಮಾಡಲು ಮಾಸ್ಟರ್ ಪ್ಲಾನ್ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಮೊಬೈಲ್ ಚಟ ಹೆಚ್ಚಾಗಿದ್ದು, ಸಾಮಾಜಿಕ ಜಾಲತಾಣಗಳನ್ನು ಬಳಸುವಷ್ಟರ ಮಟ್ಟಿಗೆ ಪಳಗಿರುವ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಈ ಹಿಂದೆ ಕೆಲವು ನಿಯಮಾವಳಿಗಳನ್ನು ತರಲು ನಿರ್ಧರಿಸಿರುವ ಕುರಿತು ಮಾಹಿತಿ ನೀಡಿತ್ತು. ಇದೀಗ ನಿಯಮ ಮತ್ತು ಕೆಲವು ಕ್ರಮಗಳು ಸಿದ್ಧಗೊಂಡಿದೆ ಎನ್ನುವ ಮಾಹಿತಿ ಲಭಿಸಿದೆ. ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು “ಮಕ್ಕಳು ಜವಾಬ್ದಾರಿಯಿಂದ ಸಾಮಾಜಿಕ ಜಾಲತಾಣಗಳನ್ನು ಬಳಸುವಂತೆ ಮಾಡಲು ಶಿಕ್ಷಕರಿಗೆ ತರಬೇತಿ, ಪೋಷಕರಿಗೆ ತಿಳಿವಳಿಕೆ ಮತ್ತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಕರಡು ನೀತಿಯನ್ನು ಸಿದ್ಧಪಡಿಸಲಾಗಿದೆ. ಅತಿಯಾಗಿ ಜಾಲತಾಣಗಳನ್ನು ಬಳಸುವ ವಿದ್ಯಾರ್ಥಿಗಳಲ್ಲಿ ಉದ್ವೇಗ, ನಿದ್ರಾಹೀನತೆ, ಏಕಾಗ್ರತೆಯ ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳು ಕಂಡುಬರುತ್ತಿವೆ. ಪರಿಣಾಮವಾಗಿ ಸಮಾಜದಲ್ಲಿ ಪ್ರತ್ಯೇಕ ಮನೋಭಾವ ಬೆಳೆಯಲು, ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವಾಗುತ್ತಿದೆ.…

Read More

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ, ಕಸ ಎಸೆದರೆ ದಂಡ! – ದೆಹಲಿಯಲ್ಲಿ ಹೊಸ ನಿಯಮ: ಮುಂದೆ ಎಲ್ಲಾ ಕಡೆ ಇದೇ ನಿಯಮ ಸಾಧ್ಯತೆ – ಕರ್ಕಶ ಹಾರ್ನ್, ಶಬ್ದ ಮಾಡಿದರೂ ದಂಡ! ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನವದೆಹಲಿ: ಇನ್ನು ಮುಂದೆ ದೇಶದ ರಾಜಧಾನಿ ನವ ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ, ಕಸ ಎಸೆದರೆ 500ರೂಪಾಯಿ ದಂಡ ವಿಧಿಸುವ ಮಸೂದೆಯನ್ನು ಲೋಕಸಭೆಯು ಅಂಗೀಕರಿಸಿದೆ. ಪ್ರಸ್ತುತ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ 1957ರ ಅನ್ವಯ ಈ ರೀತಿಯ ಕೃತ್ಯಕ್ಕೆ 50 ರೂಪಾಯಿ ದಂಡ ವಿಧಿಸಲಾಗುತ್ತಿತ್ತು, ಜನ್ ವಿಶ್ವಾಸ್ ಬಿಲ್ 2025 ಕಾಯ್ದೆಯು ಜಾರಿಗೆ ಬಂದಲ್ಲಿ ಇದರ ಮೊತ್ತ 10 ಪಟ್ಟು ಹೆಚ್ಚಲಿದೆ ಎನ್ನುವ ಮಾಹಿತಿ ಲಭಿಸಿದೆ. ಜನರಲ್ಲಿ ನಾಗರಿಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಜಿತಿನ್ ಪ್ರಸಾದ್ ಅವರು ಈ ತಿದ್ದುಪಡಿಯನ್ನು ಮಂಡಿಸಿ, ಲೋಕಸಭೆಯಿಂದ ಅಂಗೀಕಾರವನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಕೇವಲ ಮೂತ್ರ ವಿಸರ್ಜನೆ ಮತ್ತು…

Read More

ವಿಶ್ವದಲ್ಲಿ ಉದ್ಯೋಗ ಕಡಿತ ಶುರುವಾಗಿದೆ! – ಒರಾಕಲ್ ಕಂಪನಿಯಿಂದ 1.6 ಲಕ್ಷ ಉದ್ಯೋಗಿಗಳ ವಜಾ – ಬೆಂಗಳೂರು ಸೇರಿ ಎಲ್ಲೆಡೆ ಉದ್ಯೋಗ ಕಡಿತ ಹೆಚ್ಚಳ ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್ ನ್ಯೂಯಾರ್ಕ್: ಪ್ರಸಿದ್ಧ ತಂತ್ರಜ್ಞಾನ ಸಂಸ್ಥೆಯಾದ ಒರಾಕಲ್ ಮಂಗಳವಾರದಂದು ದಿಢೀರ್ ಆಗಿ ಭಾರಿ ಪ್ರಮಾಣದ ಲೇಆಫ್ ಗೆ ಚಾಲನೆ ನೀಡಿದ್ದು, ಪರಿಣಾಮವಾಗಿ ಸುಮಾರು 30,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಸಂಕಷ್ಟಕ್ಕೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಒಳಗಾಗಿದ್ದಾರೆ ಎನ್ನುವುದು ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ. ಒರಾಕಲ್ ಸುಮಾರು 1.62 ಲಕ್ಷದಷ್ಟು ಸಿಬ್ಬಂದಿಗಳನ್ನು ಹೊಂದಿದ್ದು, ಶೇಕಡಾ 18ರಷ್ಟು ಉದ್ಯೋಗಿಗಳನ್ನು ಮಂಗಳವಾರದಂದು ವಜಗೊಳಿಸಿದೆ. ಇದರಲ್ಲಿ ಸುಮಾರು 12.೦೦೦ ಮಂದಿ ಭಾರತೀಯರಿದ್ದಾರೆ ಎನ್ನುವುದು ಆಘಾತಕಾರಿ ಸಂಗತಿಯಾಗಿದೆ. ಮಾರ್ಚ್ 31 ಕೊನೆಯ ಕೆಲಸದ ದಿನವಾಗಿರುವುದರಿಂದ ತಕ್ಷಣ ಕಂಪನಿಯು ಲೇಆಫ್ ಇ-ಮೇಲ್ ಕಳುಹಿಸಿದ್ದು, ಅದರಲ್ಲಿ ಕಂಪನಿಯ ಪುನರ್ವ್ಯವಸ್ಥಿಕರಣದ ಭಾಗವಾಗಿ ನಿಮ್ಮನ್ನು ಕೆಲಸದಿಂದ ವಜಾಗೊಳಿಸಿದ್ದು, ಇನ್ನು ಮುಂದೆ ನಿಮ್ಮ ಕೆಲಸದ ಅಗತ್ಯ ಕಂಪನಿಗೆ ಇಲ್ಲ ಎಂದು ತಿಳಿಸಿದೆ. ಬಳಿಕ ಲ್ಯಾಪ್ ಟಾಪ್…

Read More

ಹನುಮ ಹನುಮ.. ಹನುಮನಿಗೆ ಎಲ್ಲೆಡೆ ಪೂಜೆ! – ರಾಮನ ಬಂಟನಿಗೆ ವಿಶೇಷ ಅಲಂಕಾರ: ಹನುಮಾನ್ ಜೈ – ಸಮಸ್ತ ಜನತೆಗೆ ಹನುಮ ಜಯಂತಿ ಶುಭಾಶಯಗಳು ರಾಮ ಮತ್ತು ಸೀತೆಯರು ವನವಾಸದ ಸಂದರ್ಭದಲ್ಲಿ ಪರಸ್ಪರ ಅಗಲಿದ್ದು, ಅವರು ಮರಳಿ ಒಂದಾಗುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವನು ವಾನರ ಸೈನ್ಯದ ಮುಖ್ಯಸ್ಥ ಹನುಮಂತ. ರಾಮನ ಚೂಡಾಮಣಿಯನ್ನು ಸೀತೆಗೆ ತಂದುಕೊಡುವ ಮೂಲಕ ಸೀತೆಯು ರಾಮನು ಬಂದು ತನ್ನನ್ನು ಕರೆದೊಯ್ಯುತ್ತಾನೆ ಎನ್ನುವ ಭರವಸೆಯೊಂದಿಗೆ ನಿರಾಳವಾಗಿ, ನೆಮ್ಮದಿಯುತವಾಗಿ ಅಶೋಕವನದಲ್ಲಿ ದಿನಗಳನ್ನು ಕಳೆಯುವಂತೆ ಮಾಡಿದನು. ಉತ್ತರ ಭಾರತದಿಂದ ಲಂಕದ ನಡುವೆ ತನ್ನ ಸೇನೆಯ ಮೂಲಕ ರಾಮಸೇತುವನ್ನು ನಿರ್ಮಿಸಿ ಸೀತೆಯು ಸುರಕ್ಷಿತವಾಗಿ ರಾಮನೊಂದಿಗೆ ಮರಳಿ ಹಿಂತಿರುಗುವಂತೆ ಮಾಡುವಲ್ಲಿ ಈತನ ಪಾತ್ರ ಹಿರಿದಾದುದು. ಸಂಜೀವಿನಿ ಪರ್ವತವನ್ನು ತನ್ನ ಅಂಗೈಯಲ್ಲಿ ಎತ್ತಿ ಹಿಡಿದು ತಂದು ಯುದ್ಧದ ಸಮಯದಲ್ಲಿ ಲಕ್ಷ್ಮಣನ ಪ್ರಾಣವನ್ನು ಉಳಿಸಿದ ಮಹಾನುಭಾವ. ಅಷ್ಟು ಗಟ್ಟಿಮುಟ್ಟಾದ ದೇಹದಾರ್ಢ್ಯವನ್ನು ಹೊಂದಿ, ದೈವತ್ವಕ್ಕೇರಿದರೂ ಸಹ ಬಾಲ್ಯದಲ್ಲಿ ಕೆಂಪಾಗಿ ಸುಂದರವಾಗಿ ಕಾಣುತ್ತಿದ್ದ ಸೂರ್ಯನನ್ನು ಹಣ್ಣೆಂದು ಸವಿಯಲು ಹೋಗಿ, ಮುಖವನ್ನು ಸುಟ್ಟುಕೊಂಡ…

Read More

ಎಸ್. ಎಸ್. ಎಲ್ ಸಿ ಪಿಯುಸಿ ಮುಂದೇನು? ಡಾಕ್ಟರ್, ಇಂಜಿನಿಯರ್ ಆಗೋದು ಹೇಗೆ…? ನಿಮ್ಮ ಮುಂದಿದೆ ನೂರಾರು ಆಯ್ಕೆ.. ನೂರಾರು ಅವಕಾಶ ಕೌಶಲ್ಯ, ಜ್ಞಾನ ಇದ್ರೆ ಎಲ್ಲಾದ್ರೂ ಕೆಲಸ ಗ್ಯಾರಂಟಿ ಎಸ್ ಎಸ್ ಎಲ್ ಸಿ ಆದ ಬಳಿಕ ವಿದ್ಯಾರ್ಥಿಗಳು ತೆಗೆದುಕೊಳ್ಳುವ ನಿರ್ಧಾರಗಳು ಅವರ ಭವಿಷ್ಯವನ್ನು ರೂಪಿಸುತ್ತವೆ. ಎಸ್ ಎಸ್ ಎಲ್ ಸಿ ಬಳಿಕ ಮುಂದೇನು? ಎಂಬ ಪ್ರಶ್ನೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿರುತ್ತದೆ. ಆಸಕ್ತಿ, ತನ್ನಲ್ಲಿರುವ ಕೌಶಲ್ಯವನ್ನು ಪರಿಗಣಿಸಿ ತನಗೆ ಸೂಕ್ತ ಹೊಂದುವ ವೃತ್ತಿಯ ಕಡೆಗೆ ಸಾಗಬೇಕಾಗಿರುವುದು ಇಂದಿನ ಅನಿವಾರ್ಯತೆ, ಭಾರತದಲ್ಲಿ ಉದ್ಯೋಗಗಳ ಕೊರತೆಯಿಲ್ಲ. ಬದಲಾಗಿ ಇರುವ ಉದ್ಯೋಗಗಳಿಗೆ ಸರಿಹೊಂದುವ ಉದ್ಯೋಗಿಗಳು ಸಿಗುತ್ತಿಲ್ಲ’ ಎಂಬ ಮಾತಿದೆ. ಹಾಗಾಗಿ ಇಂದಿನ ವಿದ್ಯಾರ್ಥಿಗಳು ಬಹಳ ಜಾಗರೂಕತೆಯಿಂದ ಮುಂದಿನ ಹೆಜ್ಜೆ ಇಡಬೇಕಾಗಿದೆ. ಈಗಿನ ವಿದ್ಯಾರ್ಥಿಗಳ ಹಾಗೂ ಪೋಷಕರ ಪ್ರಮುಖ ಗುರಿ ಡಾಕ್ಟರ್, ಇಂಜಿನಿಯರ್..!. ಡಾಕ್ಟರ್ ಆಗೋದು ಹೇಗೆ? ‘ವೈದ್ಯ’ರಾಗಬೇಕೆಂಬ ಕನಸುಗಳನ್ನು ಹೊತ್ತವರು ಪಿಯುಸಿಯಲ್ಲಿ ವಿಜ್ಞಾನವನ್ನೇ ಆಯ್ಕೆಮಾಡಬೇಕು. ಅದರಲ್ಲಿ ‘ಪಿಸಿಎಂಬಿ’ ಅಂದರೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ…

Read More