ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
* ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಕೋಚ್ ಗಂಭೀರ್,ನಾಯಕ ಗಿಲ್ ಸುದ್ದಿಗೋಷ್ಠಿ
* ಬೆಂಗಳೂರು ದುರಂತದ ಬಗ್ಗೆ ಗಂಭೀರ್ ಹೇಳಿದ್ದೇನು?
NAMMMUR EXPRESS SPORTS NEWS
ಮುಂಬೈ: ಐಪಿಎಲ್ ಸೀಸನ್ ಮುಗಿಯುತ್ತಿದ್ದಂತೆ, ಈಗ ಎಲ್ಲರ ಕಣ್ಣುಗಳು ಟೀಂ ಇಂಡಿಯಾದ ಇಂಗ್ಲೆಂಡ್ ಪ್ರವಾಸದ ಮೇಲೆ ಇವೆ. ಜೂನ್ 5 ಅಥವಾ 6 ರಂದು ಮಧ್ಯರಾತ್ರಿ ಭಾರತ ತಂಡ ಇಂಗ್ಲೆಂಡ್ಗೆ ತೆರಳಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ 5 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಬೇಕಾಗಿದೆ. ಆದರೆ ಜೂನ್ 20 ರಂದು ಪ್ರಾರಂಭವಾಗುವ ಈ ಸರಣಿಗೆ ಮೊದಲು, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ನೂತನ ನಾಯಕ ಶುಭ್ಮನ್ ಗಿಲ್, ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದರು. ಈ ವೇಳೆ ಗಂಭೀರ್, ಇಂಗ್ಲೆಂಡ್ನಲ್ಲಿ 1000 ರನ್ ಗಳಿಸಿದರೂ ಗೆಲುವು ಖಚಿತವಾಗುವುದಿಲ್ಲ ಎಂದು ಹೇಳಿ, ತಂಡಕ್ಕೆ ಪ್ರವಾಸಕ್ಕೂ ಮುಂಚೆಯೇ ಎಚ್ಚರಿಕೆ ನೀಡಿದ್ದಾರೆ.ಗಿಲ್ ತಮ್ಮ ನಾಯಕತ್ವ ಶೈಲಿಯಿಂದ ಹಿಡಿದು ಟೀಂ ಇಂಡಿಯಾದ ಸಿದ್ಧತೆಗಳವರೆಗೆ ಎಲ್ಲದರ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ, ಗಿಲ್ ತಮ್ಮ ನಾಯಕತ್ವ ಶೈಲಿಯಿಂದ ಹಿಡಿದು ಟೀಂ ಇಂಡಿಯಾದ ಸಿದ್ಧತೆಗಳವರೆಗೆ ಎಲ್ಲದರ ಬಗ್ಗೆ ಮಾತನಾಡಿದರು.
ಗೆಲ್ಲಲು 20 ವಿಕೆಟ್ಗಳು ಬೇಕು
ಮತ್ತೊಂದೆಡೆ, ಕೋಚ್ ಗೌತಮ್ ಗಂಭೀರ್ ಇಂಗ್ಲೆಂಡ್ನಲ್ಲಿ ಗೆಲುವು ಸಾಧಿಸುವುದು ಎಷ್ಟು ಕಷ್ಟವಾಗುತ್ತದೆ ಎಂಬುದರ ಕುರಿತು ತಮ್ಮದೇ ಆದ ಶೈಲಿಯಲ್ಲಿ ಸ್ಪಷ್ಟವಾಗಿ ಮಾತನಾಡಿದರು. ಟೀಂ ಇಂಡಿಯಾದೊಂದಿಗೆ ಆಟಗಾರನಾಗಿ 2-3 ಬಾರಿ ಇಂಗ್ಲೆಂಡ್ ಪ್ರವಾಸ ಮಾಡಿರುವ ಗೌತಮ್ ಗಂಭೀರ್, ‘ಇಂಗ್ಲೆಂಡ್ನಲ್ಲಿನ ಪರಿಸ್ಥಿತಿಗಳು ತುಂಬಾ ಕಷ್ಟಕರವಾಗಿರುತ್ತದೆ. ಅಲ್ಲಿ ಕೇವಲ ರನ್ ಗಳಿಸುವುದರಿಂದ ಗೆಲುವು ಖಚಿತವಾಗುವುದಿಲ್ಲ . ಇಂಗ್ಲೆಂಡ್ನಲ್ಲಿ, ನೆಲ ಮಾತ್ರವಲ್ಲ, ಆಕಾಶವೂ ದೊಡ್ಡ ಪಾತ್ರವನ್ನು ವಹಿಸುತ್ತದೆ. ಅಲ್ಲಿ 1000 ರನ್ ಗಳಿಸಿದರೂ ಗೆಲುವು ಖಚಿತವಾಗುವುದಿಲ್ಲ. ನೀವು 20 ವಿಕೆಟ್ಗಳನ್ನು ಪಡೆದರೆ ಮಾತ್ರ ಗೆಲ್ಲಬಹುದು’ ಎಂದು ಹೇಳಿದರು.
* ಬೆಂಗಳೂರು ಘಟನೆ ಬಗ್ಗೆ ಗಂಭೀರ್ ಹೇಳಿದ್ದೇನು ??
ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ತಂಡದ ವಿಜಯೋತ್ಸವ ಮೆರವಣಿಗೆಗೂ ಮುನ್ನ ಸಂಭವಿಸಿದ ಕಾಲ್ತುಳಿತದ ಘಟನೆ ಬಗ್ಗೆ ಮಾತನಾಡಿದ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ವಿಷಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಗಂಭೀರ್, ‘ಗೆಲುವಿನ ನಂತರ ಇಂತಹ ರೋಡ್ ಶೋಗಳು ನಡೆಯಬಾರದು ಎಂದು ಹೇಳಿದ್ದಾರೆ. ಏಕೆಂದರೆ ಆಚರಣೆಗಳಿಗಿಂತ ಜೀವಗಳು ಮುಖ್ಯ. ನನಗೆ ರೋಡ್ ಶೋಗಳಲ್ಲಿ ನಂಬಿಕೆ ಇಲ್ಲ. ನಾನು ಆಡುತ್ತಿದ್ದಾಗ ಮತ್ತು ನಾವು ಟಿ20 ವಿಶ್ವಕಪ್ ಗೆದ್ದಾಗಲೂ, ನಾನು ಈ ರೋಡ್ ಶೋಗೆ ಬೆಂಬಲ ನೀಡಿರಲಿಲ್ಲ. ಜನರ ಜೀವಗಳು ಹೆಚ್ಚು ಮುಖ್ಯ. ಬೆಂಗಳೂರಿನಲ್ಲಿ ನಡೆದದ್ದು ನೋವಿನ ಸಂಗತಿ ಎಂದರು.
ಕಾಲ್ತುಳಿತಲ್ಲಿ ಪ್ರಕರಣದಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದಾರೆ, ಸಾವನ್ನಪ್ಪಿದವರ ಕುಟುಂಬಗಳಿಗೆ ಆರ್ಸಿಬಿ ಫ್ರಾಂಚೈಸಿ ಸಹಾಯ ಹಸ್ತ ಚಾಚಿದ್ದು, 10 ಲಕ್ಷ ರೂ ಪರಿಹಾರ ಘೋಷಿಸಿದೆ. ಅಲ್ಲದೆ ಈ ವಿಚಾರವಾಗಿ ಆರ್ಸಿಬಿ ವಿರುದ್ಧ ಪ್ರಕರಣವೂ ದಾಖಲಾಗಿದೆ.








