UAE ವಿರುದ್ಧ ಜಯಗಳಿಸಿದ ಭಾರತ ಏಷ್ಯಾಕಪ್ನಲ್ಲಿ ಶುಭಾರಂಭ
* ಅಬ್ಬರಿಸಿದ ಬೌಲರ್ಸ್ 57 ರನ್ಗೆ ಆಲೌಟ್ ಆದ UAE
* ಕುಲ್ದೀಪ್ 4,ದುಬೆ 3 ವಿಕೆಟ್,4.1 ಓವರ್ನಲ್ಲೇ ಗುರಿ ಬೆನ್ನಟ್ಟಿದ ಭಾರತ
ಏಷ್ಯಾಕಪ್ -2025
NAMMMUR EXPRESS SPORTS NEWS
ದುಬೈ: ದುಬೈನಲ್ಲಿ ನಡೆದ ಏಷ್ಯಾ ಕಪ್ ಪಂದ್ಯದಲ್ಲಿ ಭಾರತ UAE ವಿರುದ್ಧ 9 ವಿಕೆಟ್ಗಳ ಜಯಗಳಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಬೌಲರ್ಗಳು ಉತ್ತಮ ಆರಂಭ ನೀಡಿ ಆತಿಥೇಯ ತಂಡವನ್ನು 57 ರನ್ಗಳಿಗೆ ಕಟ್ಟಿಹಾಕಿದರು. ಯುಎಇ ತಂಡವು 13.1 ಓವರ್ ನಲ್ಲಿ 57 ರನ್ಗಳಿಗೆ ಸರ್ವಪತನಗೊಂಡಿತು. ಭಾರತದ ಪರ ಕುಲದೀಪ್ ಯಾದವ್ 4 ವಿಕೆಟ್ಗಳನ್ನು ಕಬಳಿಸಿದರೇ, ಶಿವಂ ದುಬೆ 3, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ 1-1 ವಿಕೆಟ್ಗಳನ್ನು ಪಡೆದಿದರು.
ಅತ್ಯಂತ ಕಡಿಮೆ ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ, ಕೇವಲ 4.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿ 9 ವಿಕೆಟ್ ಗೆಲುವು ತನ್ನದಾಗಿಸಿಕೊಂಡಿತು. ಅಭಿಷೇಕ್ ಶರ್ಮಾ 16 ಎಸೆತಗಳಲ್ಲಿ 30 ರನ್ ಗಳಿಸಿದರೆ, ಶುಭ್ ಮನ್ ಗಿಲ್ 9 ಎಸೆತಗಳಲ್ಲಿ 20 ರನ್ ಸೂರ್ಯ ಕುಮಾರ್ ಯಾದವ್ 2 ಎಸೆತಗಳಲ್ಲಿ 7 ರನ್ ಗಳಿಸಿದರು.








