ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಪಂಜಾಬ್ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟ ಆರ್ಸಿಬಿ
* 2016 ರ ಬಳಿಕ ಆರ್ಸಿಬಿ ಫೈನಲ್ಗೆ,ಅಭಿಮಾನಿಗಳು ಫುಲ್ ಖುಷ್
NAMMMUR EXPRESS SPORTS NEWS
ಚಂಡೀಗಢ: ಆರ್ಸಿಬಿ ಅಭಿಮಾನಿಗಳ ನಿರೀಕ್ಷೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಗೂ ಸಾಧಿಸಿದೆ. 2016 ರ ನಂತರ ಆರ್ಸಿಬಿ ಐಪಿಎಲ್ ಫೈನಲ್ಗೆ ಲಗ್ಗೆ ಇಟ್ಟಿದೆ. ಮೊದಲ ಕ್ವಾಲಿಫೈಯರ್ನಲ್ಲಿ ಆರ್ಸಿಬಿ ಪಂಜಾಬ್ ತಂಡವನ್ನು ಸೋಲಿಸಿದೆ. ಸುಯೇಶ್ ಶರ್ಮಾ,ಜೋಶ್ ಹೇಜಲ್ವುಡ್, ಮತ್ತು ಫಿಲ್ ಸಾಲ್ಟ್ರ ಅದ್ಭುತ ಬೌಲಿಂಗ್ ಮಾಡಿ ತಲಾ 3 ವಿಕೆಟ್ ಪಡೆದರು. ಇದಾದ ನಂತರ, ಫಿಲ್ ಸಾಲ್ಟ್ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಪಂಜಾಬ್ನ ಫೈನಲ್ ತಲುಪುವ ಆಸೆಯನ್ನು ಹುಸಿಗೊಳಿಸಿದರು.
ಮೊದಲು ಬೌಲಿಂಗ್ನಲ್ಲಿ ಅಬ್ಬರಿಸಿದ ಆರ್ಸಿಬಿ ಬೌಲರ್ಸ್ ನಂತರ, ಬ್ಯಾಟ್ಸ್ಮನ್ಗಳು ಬ್ಯಾಟಿಂಗ್ನಲ್ಲಿ ಸ್ಥಿರ ಪ್ರದರ್ಶನ ನೀಡಿ ಆರ್ಭಟಿಸಿತು. ಈ ಮೂಲಕ ಆರ್ಸಿಬಿ ಐಪಿಎಲ್ 2025ರ ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ 9 ವರ್ಷಗಳ ಬಳಿಕ ಐಪಿಎಲ್ ಫೈನಲ್ಗೆ ಕ್ವಾಲಿಫೈ ಆಗಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 14.1 ಓವರ್ಗಳಲ್ಲಿ 101 ರನ್ಗಳಿಸಿ ಆಲೌಟ್ ಆಯಿತು.
ಗುರಿಯನ್ನು ಹಿಂಬಾಲಿಸಿದ ಆರ್ಸಿಬಿ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ತಂಡಕ್ಕೆ ಭರ್ಜರಿ ಆರಂಭವನ್ನು ನೀಡಿದರು. ಈ ಜೋಡಿ ಮೊದಲ ವಿಕೆಟ್ಗೆ 3.2 ಓವರ್ಗಳಲ್ಲಿ 30 ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ವಿರಾಟ್ ಕೊಹ್ಲಿ 12 ರನ್ ಗಳಿಸಿದ್ದಾಗ ಇಲ್ಲದ ಶಾಟ್ ಬಾರಿಸಿ ಔಟಾದರು.ಎರಡನೇ ವಿಕೆಟ್ಗೆ ಫಿಲ್ ಸಾಲ್ಟ್ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಭರ್ಜರಿ ಆಟವಾಡಿತು. ಈ ಜೋಡಿ 27 ಎಸೆತಗಳಲ್ಲಿ 54 ರನ್ ಸೇರಿಸಿತು. ಈ ವೇಳೆ 19 ರನ್ ಬಾರಿಸಿದ್ದ ಮಯಾಂಕ್ ಮುಶೀರ್ ಖಾನ್ ಎಸೆತದಲ್ಲಿ ಕ್ಯಾಚ್ ನೀಡಿದರು.
* ಆರ್ಸಿಬಿ ಫಿಲ್ ಸಾಲ್ಟ್ ಅರ್ಧಶತಕ
ಆರ್ಸಿಬಿ ತಂಡದ ಆರಂಭಿಕ ಫಿಲ್ ಸಾಲ್ಟ್ 27 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 56 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ನಾಯಕ ರಜತ್ ಪಾಟಿದಾರ್ ಅಜೇಯ 15 ರನ್ ಸಿಡಿಸಿದರು.
* ಪಂಜಾಬ್ನ ಕಳಪೆ ಆರಂಭ
ಪಂಜಾಬ್ ಕಿಂಗ್ಸ್ ತಂಡ ಪವರ್ ಪ್ಲೇನಲ್ಲಿ ಪವರ್ ಫುಲ್ ಆರಂಭವನ್ನು ಪಡೆಯುವಲ್ಲಿ ವಿಫಲವಾಯಿತು. ಆರ್ಸಿಬಿ ತಂಡದ ಸ್ಟಾರ್ ವೇಗದ ಬೌಲರ್ಗಳ ಕರಾರುವಕ್ ದಾಳಿ ನಡೆಸುವಲ್ಲಿ ಸಫಲರಾದರು. ಪವರ್ ಪ್ಲೇ ನಲ್ಲಿ ಪಂಜಾಬ್ ಕಿಂಗ್ಸ್ ತಂಡ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಪ್ರಿಯಾಂಶ್ ಆರ್ಯ (7) ಹಾಗೂ ಪ್ರಭಾಸಿಮ್ರಾನ್ ಸಿಂಗ್ (18), ಜೋಶ್ ಇಂಗ್ಲಿಸ್ (4), ಶ್ರೇಯಸ್ ಅಯ್ಯರ್ (2) ರನ್ಗಳಿಸಿ ಪವರ್ ಪ್ಲೇನಲ್ಲಿ ವಿಕೆಟ್ ಒಪ್ಪಿಸಿದರು. ಪಂಜಾಬ್ ಪರ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪವರ್ ಪ್ಲೇನಲ್ಲಿ ಪಂಜಾಬ್ 4 ವಿಕೆಟ್ ಕಳೆದುಕೊಂಡು 48 ರನ್ ಸಿಡಿಸಿತು. ಪಂಜಾಬ್ ತಂಡ 53 ರನ್ಗೆಳಿಗೆ 6 ವಿಕೆಟ್ ಕಳೆದುಕೊಂಡಿತು. ಪಂಜಾಬ್ ತಂಡದ ಪರ ಮಾರ್ಕಸ್ ಸ್ಟೋಯ್ನಿಸ್ (26) ಉತ್ತಮ ಜೊತೆಯಾಟವನ್ನು ನೀಡಿದರು.
* ಸುಯೇಶ್, ಜೋಶ್ ಕಮಾಲ್
ಆರ್ಸಿಬಿ ತಂಡದ ಸ್ಟಾರ್ ಬೌಲರ್ಗಳು ಬಿಗುವಿನ ದಾಳಿ ನಡೆಸಿದರು. ವೇಗದ ಬೌಲರ್ ಜೋಶ್ ಹೇಜಲ್ ವುಡ್ ಹಾಗೂ ಸ್ಪಿನ್ ಬೌಲರ್ ಸುಯೇಶ್ ಶರ್ಮಾ ತಲಾ ಮೂರು ವಿಕೆಟ್ ಕಬಳಿಸಿದರು. ಸುಯೇಶ್ ಶರ್ಮಾ 17 ರನ್ ನೀಡಿ 3 ವಿಕೆಟ್ ಕಬಳಿಸಿದ ಪರಿಣಾಮ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.
ಈ ಗೆಲುವಿನೊಂದಿಗೆ ಆರ್ಸಿಬಿ ನಾಲ್ಕನೇ ಬಾರಿಗೆ ಐಪಿಎಲ್ ಫೈನಲ್ಗೆ ಪ್ರವೇಶ ಪಡೆದುಕೊಂಡಿದೆ. ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಈ ಮೊದಲು 2009, 2011, 2016ರಲ್ಲಿ ಫೈನಲ್ಗೆ ಪ್ರವೇಶಿಸಿತ್ತು. 9 ವರ್ಷಗಳ ಬಳಿಕ ಆರ್ಸಿಬಿ ಮತ್ತೆ ಐಪಿಎಲ್ ಫೈನಲ್ಗೆ ಪ್ರವೇಶ ಪಡೆದಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.








